ಹೊಸಹಾಡು

ಅ. ಪದಗಳ ಅರ್ಥ ಬರೆಯಿರಿ. (Write the word meaning)

ಕಲಕಂಠ = ಇಂಪಾದ ಧ್ವನಿ                             ತೆರೆ = ತರಂಗ, ಅಲೆ
ತೀವ್ರ = ಹರಿತ, ರಭಸ                                  ನಭ = ಆಕಾಶ
ಪದತಳ = ಕಾಲಿನ ಕೆಳಗೆ                               ಬೆನ್ನಟ್ಟು = ಓಡಿಸಿಕೊಂಡು ಹೋಗು  
ಮಸಗು = ಹರಡು                      ಮಾರ್ದನಿ = ಪ್ರತಿಧ್ವನಿ
ಲೋಕಾಂತ = ಲೋಕಗಳನ್ನು ಮೀರಿದ             ಹಿಮಾದ್ರಿ = ಹಿಮ ಪರ್ವತ

ಆ.ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. ( Answer the followings in one sentences)

೧. ಕವಿ ಎಂತಹ ಹಾಡನ್ನು ಹಾಡಬೇಕೆಂದು ಬಯಸುವರು?
ಉ: ಕವಿ ನವಭಾವ ನವಜೀವ ನವಶಕ್ತಿ ತುಂಬಿಸುವ ಹಾಡನ್ನು ಹಾಡಬೇಕೆಂದು ಬಯಸುವರು.
೨. ವೀರಧ್ವನಿ ಹೇಗೆ ಏರಬೇಕು?
ಉ: ತೀವ್ರತರ ಗಂಭೀರ ಭಾವನೆಯ ತೆರೆ ಮಸಗಿ ವೀರಧ್ವನಿ ಏರಬೇಕು.
೩. ಕಡಿದೊಗೆಯಬೇಕಾದ ಪಾಶಗಳು ಯಾವುವು?
ಉ: ಜಾತಿ ಕುಲ ಮತ ಧರ್ಮ ಪಾಶಗಳನ್ನು ಕಡಿದೊಗೆಯಬೇಕು.
೪. ಹಾಡು ನುಡಿಗುಂಡುಗಳು ಯಾವುದರ ಬೆನ್ನಟ್ಟಬೇಕು?
ಉ: ಹಾಡು ನುಡಿಗುಂಡುಗಳು ಭಯದ ಬೆನ್ನಟ್ಟಬೇಕು.
೫. ಬಾನು ಬುವಿ ಯಾವುದರಿಂದ ಬೆಳಗಬೇಕು?
ಉ: ಜಡನಿದ್ರೆಯಿಂದ ಸಿಡಿದೆದ್ದು ವೀರ ಅಟ್ಟಹಾಸದಲ್ಲಿ ಬಾನು ಬುವಿ  ಬೆಳಗಬೇಕು.

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in three – four sentences)

೧. ಕವಿ ಎಂತಹ ಹಾಡನ್ನು ಹಾಡಿದಾಗ ವೀರಧ್ವನಿಯೇರಬೇಕು ಎಂದು ಬಯಸುತ್ತಾರೆ?
ಉ: ಬದುಕಿಗೆ ಹೊಸ ತಿರುವನ್ನು ನೀಡುವಂತಹ ಹಾಡನ್ನು ಹಾಡಬೇಕು. ಜೀವನದ ಗತಿಯನ್ನು ಬದಲಿಸುವ ಹಾಡನ್ನು ಹಾಡಬೇಕು. ಜೀವನದಲ್ಲಿ ಹೊಸ ಆಶಯವನ್ನು, ಹೊಸ ಭಾವನೆಯನ್ನು, ಹೊಸ ಶಕ್ತಿಯು ತುಂಬಿ ತುಳುಕುವ ಹಾಡನ್ನು ಹಾಡಬೇಕು. ಈ ಹಾಡನ್ನು ಗಂಭೀರವಾದ ಭಾವನೆಗಳಿಂದ ಹಾಡಬೇಕು. ಹೀಗೆ ಹಾಡು ವೀರಧ್ವನಿಯೇರಬೇಕೆಂದು ಕವಿ ಬಯಸುತ್ತಾರೆ.
೨. ಕವಿ ಎಂತಹ ಹಾಡು ಗುಡುಗಬೇಕು ಎಂದು ಆಶಿಸುತ್ತಾರೆ?
ಉ: ಹಳೆಯ ವಿಚಾರವನ್ನು ಬಿಟ್ಟು ಹೊಸ ಭಾವನೆಗಳನ್ನು ತುಂಬಿರುವ ಹೊಸ ಹಾಡನ್ನು ಹಾಡಬೇಕು. ಜಾತಿ, ಕುಲ ಮತ ಧರ್ಮದ ಪಠನಗಳನ್ನು ಕಡಿದೊಗೆಯಬೇಕು. ಸ್ವಾಭಿಮಾನ ಮತ್ತು ಆತ್ಮ ವಿಶ್ವಾಸದಿಂದ ಎದೆಯತ್ತಿ ಹಾಡನ್ನು ಹಾಡಬೇಕು. ಆ ಹಾಡು ಯುಗ-ಯುಗ ಕಳೆದು ಲೋಕಲೋಕಗಳ ಆಚೆಯೂ ಗುಡುಗಿನ ರೀತಿಯಲ್ಲಿ ಪ್ರತಿದ್ವನಿಸಬೇಕು ಎಂದು ಕವಿ ಆಶಿಸುತ್ತಾರೆ.
೩.ಈ ಹಾಡು ಹೊಸತು ಎಂದು ಕವಿ ಹೇಳಲು ಕಾರಣವೇನು?
ಉ: “ಜಯ ಜನನಿ ಶಿರವೆತ್ತಿ ವೀರಭರವಸೆಯಿಂದ ಹೊಸಹಾಡ ಕೇಳಿ ನೋಡು ; ಇದು ಮೊದಲು ಮುನಿಲ್ಲ ಮುಗಿದಾದಿಂದನ ಪಾಡು ಹೊಸ ತಿಂದು ಹೊಸತು ಹಾಡು”, ಕವಿ ವೀರಭರವಸೆಯನ್ನು ಮೂಡಿಸುವ ಹಾಡನ್ನು ಒಮ್ಮೆ ಕೇಳಿ ನೋಡಬೇಕೆಂದು ಜಗಜ್ಜನನಿಯಲ್ಲಿ ಪ್ರಾರ್ಥಿಸುತ್ತಾರೆ. ಏಕೆಂದರೆ ಹಾಡಿನಲ್ಲಿ ಅಂದಿನ ದಿನ ಮುಗಿದು ಹೊಸ ಹುರುಪಿನೊಂದಿಗೆ ಹೊಸ ಹಾಡನ್ನು ಹಾಡುತ್ತಿದ್ದಾರೆ. ಹೀಗೆ ಕವಿ ಈ ಹಾಡು ಹೊಸದು ಎಂದು ಹೇಳಿದ್ದಾರೆ.

ಇ. ಕೊಟ್ಟಿರುವ ಪ್ರಶ್ನೆಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in eight – ten sentences)

೧. ಹೊಸ ಹಾಡು ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
ಉ: ಬದುಕಿಗೆ ಹೊಸ ತಿರುವನ್ನು ನೀಡುವಂತಹ ಹಾಡನ್ನು ಹಾಡಬೇಕು. ಜೀವನದ ಗತಿಯನ್ನು ಬದಲಿಸುವ ಹಾಡನ್ನು ಹಾಡಬೇಕು. ಜೀವನದಲ್ಲಿ ಹೊಸ ಆಶಯವನ್ನು, ಹೊಸ ಭಾವನೆಯನ್ನು, ಹೊಸ ಶಕ್ತಿಯು ತುಂಬಿ ತುಳುಕುವ ಹಾಡನ್ನು ಹಾಡಬೇಕು. ಈ ಹಾಡನ್ನು ಗಂಭೀರವಾದ ಭಾವನೆಗಳಿಂದ ವೀರಧ್ವನಿಯೇರಿ ಯೇರಬೇಕು.
ಹಳೆಯ ವಿಚಾರವನ್ನು ಬಿಟ್ಟು ಹೊಸ ಭಾವನೆಗಳನ್ನು ತುಂಬಿರುವ ಹೊಸ ಹಾಡನ್ನು ಹಾಡಬೇಕು. ಜಾತಿ, ಕುಲ ಮತ ಧರ್ಮದ ಪಠನಗಳನ್ನು ಕಡಿದೊಗೆಯಬೇಕು. ಸ್ವಾಭಿಮಾನ ಮತ್ತು ಆತ್ಮ ವಿಶ್ವಾಸದಿಂದ ಎದೆಯತ್ತಿ ಹಾಡನ್ನು ಹಾಡಬೇಕು. ಆ ಹಾಡು ಯುಗ-ಯುಗ ಕಳೆದು ಲೋಕಲೋಕಗಳ ಆಚೆಯೂ ಗುಡುಗಿನ ರೀತಿಯಲ್ಲಿ ಪ್ರತಿಧ್ವನಿಸಬೇಕು.
ಈ ಹಾಡು ಎಲ್ಲರಲ್ಲೂ ಕ್ರಾಂತಿಯನ್ನು ಉಂಟು ಮಾಡಬೇಕು. ಅದರ ಮಾರ್ದನಿಗಳು ಭೂಮಿ ಆಕಾಶದಲ್ಲಿ ತುಂಬಬೇಕು. ಹೊಸ ಹಾಡು ಪ್ರಕೃತಿ ಜೀವನದ ಕಣಕಣದಲ್ಲೂ ಸಮ್ಮಿಣಿತಗೊಳ್ಳಬೇಕು. ಈ ಹೊಸ ಹಾಡು ಅತ್ಯುನ್ನತವು ಶ್ರೇಷ್ಠವೂ ಆದ ಹಿಮಾಲಯದ ಶಿಖರವನ್ನೇರಿ ಹಾಡಬೇಕು. ಇದು ಹೊಸ ಹಾಡು ಪದ್ಯದ ಸಾರಾಂಶ.

ಈ. ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ. (Answer the following with the context)

೧. ತೀವ್ರತರ ಗಂಭೀರ ಭಾವನೆಯ ತೆರೆ ಮಸಗಿ ವೀರಧ್ವನಿಯೇರಬೇಕು.
ಆಯ್ಕೆ: ಈ ವಾಕ್ಯವನ್ನು ಕಯ್ಯಾರ ಕಿಞ್ಞಣ್ಣರೈ ಅವರು ಸಂಪಾದಿಸಿರುವ “ಶತಮಾನದ ಗಾನ” ಕವನ ಸಂಕಲನದಿಂದ ಆಯ್ದ “ಹೊಸಹಾಡು” ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ: ಹೊಸಹಾಡು ನವಭಾವ, ನವಜೀವನ, ನವಶಕ್ತಿಯನ್ನು ತುಂಬಿಸುವಂತಿರಬೇಕು ಎಂದು ಹೇಳುವ ಸಂದರ್ಭದಲ್ಲಿ ಕವಿ ಹೇಳಿದ್ದಾರೆ.
ಸ್ವಾರಸ್ಯ: ಹಾಡಿಗೆ ಮನುಷ್ಯನ ಬದುಕಿಗೆ ಹೊಸ ತಿರುವನ್ನು ಕೊಡುವ ಶಕ್ತಿ ಇದೆ. ಅಂತಹ ಹಾಡನ್ನು ಗಂಭೀರವಾದ ಭಾವನೆಗಳಿಂದ ವೀರಧ್ವನಿಯೇರಿಸಿ ಹಾಡಬೇಕೆಂಬುದು ಇದರ ಸ್ವಾರಸ್ಯವಾಗಿದೆ.

೨.ಯುಗಯುಗಗಳಾಚೆಯಲ್ಲಿ ಲೋಕಲೋಕಾಂತದಲಿ ಆ ಹಾಡು ಗುಡುಗಬೇಕು.
ಆಯ್ಕೆ: ಈ ವಾಕ್ಯವನ್ನು ಕಯ್ಯಾರ ಕಿಞ್ಞಣ್ಣರೈ ಅವರು ಸಂಪಾದಿಸಿರುವ “ಶತಮಾನದ ಗಾನ” ಕವನ ಸಂಕಲನದಿಂದ ಆಯ್ದ “ಹೊಸಹಾಡು” ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ: ಜಾತಿ ಕುಲ ಮತ ಧರ್ಮಗಳ ಪಠಣಗಳನ್ನು ಕಡಿದೊಗೆದು ಹಾಡನ್ನು ಹಾಡಬೇಕು. ಈ ಹಾಡು ಯುಗಯುಗಗಳಾಚೆ ಲೋಕಗಳಾಚೆ ಕೇಳಬೇಕು ಎಂದು ಹೇಳುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ: ಸಮಾಜದಲ್ಲಿರುವ ಜಾತಿ, ಕುಲ, ಮತ, ಧರ್ಮಗಳ ಪಠನಗಳು ನಾಶವಾಗಿ ಎಲ್ಲರೂ ಒಂದೇ ಎಂಬ ಹಾಡು ಕೇಳಬೇಕು ಎಂಬುದು ಕವಿಯ ಭಾವನೆಯ ಸ್ವಾರಸ್ಯವಾಗಿದೆ.

೩.ಜಡನಿದ್ರೆ ಸಿಡಿದೆದ್ದ ವೀರಾಟ್ಟಹಾಸದಲಿ ಬಾನು ಬುವಿ ಬೆಳಗಬೇಕು.
ಆಯ್ಕೆ: ಈ ವಾಕ್ಯವನ್ನು ಕಯ್ಯಾರ ಕಿಞ್ಞಣ್ಣರೈ ಅವರು ಸಂಪಾದಿಸಿರುವ “ಶತಮಾನದ ಗಾನ” ಕವನ ಸಂಕಲನದಿಂದ ಆಯ್ದ “ಹೊಸಹಾಡು” ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ: ನಾವು ಜಡ ನಿದ್ರೆಯಿಂದ ಎಚ್ಚರಗೊಂಡು ವೀರಟ್ಟಹಾಸದಲ್ಲಿ ಬಾನು ಭುವಿ ಬೆಳಗಬೇಕು ಎಂದು ವಿವರಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ: ಸಮಾಜದಲ್ಲಿ ಬದಲಾವಣೆಯ ಗಾಡಿ ಬೀಸಬೇಕಾದರೆ ಮೊದಲು ಹಳೆಯ ಮೌಡ್ಯಗಳು ದೂರವಾಗಬೇಕು ಎಂಬುದು ಸ್ವಾರಸ್ಯವಾಗಿದೆ.

೪.ನಡೆನುಡಿಗಳೆಡೆಯಲ್ಲಿ ಪದತಾಳ ಗತಿಯಲ್ಲಿ ಕ್ರಾಂತಿಕಿಡಿ ಕೆರಳಬೇಕು.
ಆಯ್ಕೆ: ಈ ವಾಕ್ಯವನ್ನು ಕಯ್ಯಾರ ಕಿಞ್ಞಣ್ಣರೈ ಅವರು ಸಂಪಾದಿಸಿರುವ “ಶತಮಾನದ ಗಾನ” ಕವನ ಸಂಕಲನದಿಂದ ಆಯ್ದ “ಹೊಸಹಾಡು” ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ: ಹೊಸ ಹಾಡಿನ ಗತಿ, ಪ್ರಗತಿ ಯುಗಯುಗ ಕಳೆದರೂ ಲೋಕಲೋಕಗಳ ಆಚೆಯು ಗುಡುಗಿ ಪ್ರತಿಧ್ವನಿಸಬೇಕು. ಕ್ರಾಂತಿಯ ಕಿಡಿಯನ್ನು ಹೊತ್ತಿಸಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಕವಿಯು ಹೇಳಿದ್ದಾರೆ.
ಸ್ವಾರಸ್ಯ: ಹಾಡು ಕ್ರಾಂತಿಕಾರಿಯಾಗಿದ್ದರೆ ಮಾತ್ರ ಜನರ ಮನಸ್ಸಿನಲ್ಲಿ ಜಾಗೃತಿಯನ್ನು ಮೂಡಿಸಲು ಸಾಧ್ಯ ಎಂಬುದು ಸ್ವಾರಸ್ಯವಾಗಿದೆ.

೫.ಇದು ಮೊದಲು ಮುನ್ನಿಲ್ಲ – ಮುಗಿದುದಂದಿನ ಪಾಡು ಹೊಸತಿಂದು ಹೊಸತು ಹಾಡು.
ಆಯ್ಕೆ: ಈ ವಾಕ್ಯವನ್ನು ಕಯ್ಯಾರ ಕಿಞ್ಞಣ್ಣರೈ ಅವರು ಸಂಪಾದಿಸಿರುವ “ಶತಮಾನದ ಗಾನ” ಕವನ ಸಂಕಲನದಿಂದ ಆಯ್ದ “ಹೊಸಹಾಡು” ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ: ವೀರಭರವಸೆಯನ್ನು ಮೂಡಿಸುವ ಹಾಡನ್ನು ಒಮ್ಮೆ ಕೇಳಿ ನೋಡಬೇಕೆಂದು ಜಗಜ್ಜನನಿಯಲ್ಲಿ ಪ್ರಾರ್ಥಿಸುತ್ತೇನೆ. ಏಕೆಂದರೆ ಹಾಡಿನಲ್ಲಿ ಅಂದಿನ ಪಾಡು ಮುಗಿದು ಹೊಸ ಹುರುಪಿನ ಹೊಸ ಹಾಡನ್ನು ಹಾಡಬೇಕು ಎಂದು ಕವಿ ಹೇಳಿದ್ದಾರೆ.
ಸ್ವಾರಸ್ಯ: ಹಿಂದಿನ ಕಷ್ಟಗಳೆಲ್ಲ ಮುಗಿದು ಹೊಸ ಬದುಕು ಪ್ರಾರಂಭವಾಗಿದೆ ಎಂಬುದು ಸ್ವಾರಸ್ಯವಾಗಿದೆ.

ಉ. ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೇ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ. (Write the word that relates to the third word as it relates to the first two words)

೧. ಧ್ವನಿ:ದನಿ::ಯುಗ: ಜುಗ
೨. ಲೋಕಾಂತರ:ಸವರ್ಣದೀರ್ಘ ಸಂಧಿ :: ಉನ್ನತೋನ್ನತ: ಗುಣಸಂಧಿ
೩. ಬಾನು:ಆಕಾಶ::ಭಾನು: ರವಿ

ಊ. ಬಿಟ್ಟ ಸ್ಥಳ ತುಂಬಿರಿ. (Fill in the blanks)
೧. ಹೊಸ ಹಾಡು ಪದ್ಯದ ಆಕರ ಗ್ರಂಥ ಶತಮಾನದ ಗಾನ.
೨. ಹಾಡು ಪದ್ಯದ ಕವಿ ಕಯ್ಯಾರ ಕಿಞ್ಞಣ್ಣರೈ.
೩. ಉನ್ನತೋನ್ನತ ಘನ ಹಿಮಾದ್ರಿ ಶಿಖರವನ್ನೇರಿ ಹಾಡಲ್ಲಿ ಹಾಡಬೇಕು.
೪.ಜಾತಿ-ಕುಲ-ಮತ ಧರ್ಮಪಾಶಗಳ ಕಡಿದೊಗೆದು ಎದೆಹಿಗ್ಗಿ ಹಾಡಬೇಕು.

Click here to download Hosahaadu