ಅನಕ್ಷರತೆ

ವಿದ್ಯೆ ಜ್ಞಾನವನ್ನು ನೀಡುತ್ತದೆ. ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುತ್ತದೆ. ಅಕ್ಷರ ಜ್ಞಾನ ಅಥವಾ ಶಿಕ್ಷಣದ ಅರಿವು ಅಪೂರ್ಣವಾದರೆ ಅದನ್ನು ಅನಕ್ಷರಸ್ಥ ಪರಿಸ್ಥಿತಿಯೆಂದು ಕರೆಯುತ್ತೇವೆ. ಓದಲು ಮತ್ತು ಬರೆಯಲು ಸಾಧ್ಯವಾಗದವರು ಅನಕ್ಷರಸ್ಥರು. 18ನೇಯ ಶತಮಾನದಲ್ಲಿ ಅನಕ್ಷರತೆಯನ್ನು ಸಾಮಾಜಿಕ ಸಮಸ್ಯೆಯೆಂದು ಗುರುತಿಸಲಾಯಿತು. ಏಕೆಂದರೆ ಇದು ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಸೀಮಿತಗೊಳಿಸುತ್ತದೆ. ಇದರ ಪರಿಣಾಮವಾಗಿ ಮೂಲಭೂತ ಶಿಕ್ಷಣವನ್ನು ರಾಷ್ಟ್ರೀಯ ರಾಜ್ಯದ ತತ್ಯವಾಗಿ ಸ್ಥಾಪಿಸಲಾಯಿತು. ನಮ್ಮ ದೇಶದ ರಾಜ್ಯಾಂಗದಲ್ಲಿ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಜಾರಿಗೆ ತರುವಂತೆ ಸೂಚಿಸಲಾಗಿದೆ.

ಅನಕ್ಷರತೆಯ ಕಾರಣಗಳು :-
ಬಡತನ, ಅಜ್ಞಾನ, ಮೂಢ ನಂಬಿಕೆ, ಶಿಕ್ಷಣ ಸೌಲಭ್ಯದ ಕೊರತೆ, ಕುಟುಂಬ ಸಮಸ್ಯೆಗಳು, ಕಠಿಣವಾದ ಶಾಸನಗಳಿಲ್ಲದಿರುವುದು, ಅನಾರೋಗ್ಯ, ಮಕ್ಕಳ ಅನಾಸಕ್ತಿ, ದುಬಾರಿ ವೆಚ್ಚದ ಶಿಕ್ಷಣ. ಬೋಧನೆ.

ಅನಕ್ಷರತೆಯ ಪರಿಣಾಮಗಳು :-
ಅನಕ್ಷರತೆಯು ಬಡತನಕ್ಕೆ ದಾರಿಯಾಗಿದೆ. ಉತ್ತಮ ವಿದ್ಯಾಭ್ಯಾಸವಿಲ್ಲದ್ದಿದರೆ ಉತ್ತಮ ಉದ್ಯೋಗದಿಂದ ವಂಚಿತರಾಗಬೇಕಾಗುತ್ತದೆ. ಭಾರತದ ಬಹುತೇಕ ಜನಸಂಖ್ಯೆ ಹಳ್ಳಿಗಳಲ್ಲಿ ವಾಸವಾಗಿದೆ. ಸರಿಯಾದ ಶಿಕ್ಷಣದ ವ್ಯವಸ್ಥೆ ಇಲ್ಲದಿರುವ ಹಳ್ಳಿಗಳ ಬೆಳವಣಿಗೆ ಮತ್ತು ಅಭಿವೃದ್ಧಿ ಸಾಧ್ಯವಿಲ್ಲ. ಅನಕ್ಷರಸ್ಥರಿಗೆ ಜ್ಞಾನದ ಕೊರತೆಯಿಂದಾಗಿ ಉಳಿತಾಯ, ಉತ್ಪಾದನೆ, ಆರೋಗ್ಯ, ಸ್ವಚ್ಛತೆಯ ಅರಿವು ಇರುವುದಿಲ್ಲ. ಅನಕ್ಷರತೆಯು ಲಿಂಗ ತಾರತಮ್ಯಕ್ಕೂ ಕಾರಣವಾಗಿದೆ.ಇದು ದೇಶದ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುತ್ತದೆ.

ದೇಶದಾದ್ಯಂತ ಸಾಕ್ಷರತಾ ಆಂದೋಲನ ಹಮ್ಮಿಕೊಳ್ಳಲಾಗಿದೆ. ಇದರಿಂದ ಅನಕ್ಷರಸ್ಥರು ಅನುಕೂಲಕರ ಸ್ಥಳ, ಸಮಯದಲ್ಲಿ ಓದು ಬರಹ ಕಲಿಯಬಹುದು. ಓದು ಬರಹದ ಸಾಮಾಗ್ರಿಗಳನ್ನು ಉಚಿತವಾಗಿ ನೀಡಲಾಗುವುದು, ತರಬೇತಿ ಪಡೆದ ಸ್ವಯಂ ಸೇವಕರು ಕಲಿಸುವ ಜವಾಬ್ದಾರಿ ಹೊತ್ತಿದ್ದಾರೆ. ಸಾಕ್ಷರತಾ ಆಂದೋಲನದ ಮೂಲಕ ಜನರಲ್ಲಿ ಕ್ರಿಯಾಶೀಲತೆ ಬೆಳೆಸುವುದು , ಆತ್ಮವಿಶ್ವಾಸ ತುಂಬಿಸುವುದು, ನಾಗರೀಕ ಹಕ್ಕುಗಳ ಪರಿಚಯ ಮಾಡಿಕೊಡುವುದಲ್ಲಿ ಸ್ವಲ್ಪ ಮಟ್ಟಿಗೆ ಸರ್ಕಾರ ಸಫಲತೆಯನ್ನು ಪಡೆದಿದೆ. ಮುಂದಿನ ಪೀಳಿಗೆಯನ್ನು ಸಾಕ್ಷರರನ್ನಾಗಿ ಮಾಡುವುದು ನಮ್ಮ ಕರ್ತವ್ಯವಾಗಿದೆ.

ಸುಮನಾ ಶ್ರೀರಾಮ್

Click to Download Anaksharate Essay