Kannada nadu nudi kannada poem 9th grade is about Kannada poets, have praised the uniqueness of our language and land, reflecting their linguistic concern in their poetry. Sri Vijaya highlights how even illiterate folk poets excelled in poetic expression. Nayasen wished for pure Kannada without excessive Sanskrit influence. In Kannada nadu nudi poem, Nemichandra admired great Kannada poets, while Mahalingaranga praised Kannada’s simplicity and richness, equating it to Sanskrit. Kannada nadu nudi IX grade kannada poet Aandayya appreciated Karnataka’s natural beauty. This poem introduces the grandeur of Kannada’s language, culture, and heritage as described by various poets. Hence, Kannada nadu nudi teach us the beauty of our language.
ಕನ್ನಡ ನಾಡು ನುಡಿ
ಶ್ರೀವಿಜಯ
ಶ್ರೀವಿಜಯನು ಕ್ರಿ.ಶ. ಸುಮಾರು ೯ನೆಯ ಶತಮಾನದಲ್ಲಿ ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗನ ಆಸ್ಥಾನದಲ್ಲಿ ಇದ್ದನು. ಈತನು ‘ಕವಿರಾಜಮಾರ್ಗ‘ ಎಂಬ ಲಾಕ್ಷಣಿಕ ಗ್ರಂಥವನ್ನು ರಚಿಸಿದ್ದಾನೆ.
ನಯಸೇನ
ನಯಸೇನನು ಕ್ರಿ.ಶ. ಸುಮಾರು ೧೨ ನೆಯ ಶತಮಾನದಲ್ಲಿ ಧಾರವಾಡ ಜಿಲ್ಲೆಯ ಮುಳುಗುಂದದಲ್ಲಿ ಜೀವಿಸಿದ್ದನು. ಈತನು
‘ಧರ್ಮಾಮೃತ ‘ ಎಂಬ ಚಂಪೂ ಕಾವ್ಯ ಕೃತಿಯನ್ನು ರಚಿಸಿದ್ದಾನೆ. ಕನ್ನಡದಲ್ಲಿ ಕಾವ್ಯ ರಚನೆಯ ಸಮಯದಲ್ಲಿ ಸಂಸ್ಕೃತ ಶಬ್ದಗಳನ್ನು ಸೇರಿಸುವ ಬಗ್ಗೆ ನಯಸೇನನು ಆಕ್ಷೇಪವನ್ನು ವ್ಯಕ್ತಪಡಿಸುತ್ತಾನೆ.
ಕಾವ್ಯ ರಚಿಸುವುದಾದರೆ ಕನ್ನಡದಲ್ಲಿ ರಚಿಸಬೇಕು ಇಲ್ಲವೇ ಸಂಸ್ಕೃತದಲ್ಲಿ ರಚಿಸಬೇಕು . ಇವೆರಡನ್ನು ಬೆರೆಸಿ ಕಾವ್ಯ ರಚನೆ ಮಾಡಿದರೆ ಅದು ಎಣ್ಣೆ – ತುಪ್ಪಗಳ ಮಿಶ್ರಣದಂತೆ ಅಸ್ವಾದ ಆಗುತ್ತದೆ ಎಂಬುದು ಆತನ ಅಭಿಪ್ರಾಯ .
ನೇಮಿಚಂದ್ರ
ನೇಮಿಚಂದ್ರನು ಕ್ರಿ.ಶ. ಸುಮಾರು ೧೨ ನೆಯ ಶತಮಾನದಲ್ಲಿ ಜೀವಿಸಿದ್ದನು ಈತನು ಲೀಲಾವತೀ ಪ್ರಬಂಧ ಹಾಗೂ ಅರ್ಧನೇಮಿ ಪುರಾಣ ಎಂಬ ಪ್ರಸಿದ್ಧ ಕಾವ್ಯಗಳನ್ನು ರಚಿಸಿದ್ದಾನೆ. ಈತನು ಕವಿಗಳ ಕಾವ್ಯಶಕ್ತಿಯ ಹೆಗ್ಗಳಿಕೆಯನ್ನು ಬಹು ಸ್ವಾರಸ್ಯಪೂರ್ಣವಾಗಿ ವರ್ಣಿಸಿದ್ದಾನೆ.
ಮಹಲಿಂಗರಂಗ :
ಮಹಲಿಂಗರಂಗನು ಕ್ರಿ.ಶ. ಸುಮಾರು ೧೭ ನೆಯ ಶತಮಾನದಲ್ಲಿ ಜೀವಿಸಿದ್ದನು . ಈತನು ‘ ಅನುಭವಾಮೃತ ‘ ಎಂಬ ಕೃತಿಯನ್ನು ರಚಿಸಿದ್ದಾನೆ. ಇವನ ನಿಜನಾಮ ಶ್ರೀರಂಗ , ತನ್ನ ಹೆಸರಿನೊಂದಿಗೆ ತಂದೆಯ ಹೆಸರನ್ನು ಸೇರಿಸಿ ಮಹಲಿಂಗರಂಗ ಎಂದು ಕರೆದುಕೊಂಡಿದ್ದಾನೆ. ಈತನ ಆರಾಧ್ಯ ದೈವ ಶ್ರೀಶೈಲ ಮಲ್ಲಿಕಾರ್ಜುನ , ಅನುಭವಾಮೃತವು ಕನ್ನಡದಿಂದ ಸಂಸ್ಕೃತಕ್ಕೆ ಅನುವಾದಗೊಂಡ ಕೃತಿಯೆಂಬುದು ಇನ್ನೊಂದು ವಿಶೇಷ .
ಆಂಡಯ್ಯ:
ಆಂಡಯ್ಯನು ಕ್ರಿಶ ಸುಮಾರು ೧೩ ನೇ ಶತಮಾನದಲ್ಲಿ ಕದಂಬರ ದೊರೆ ಕಾಮದೇವನ ಆಶ್ರಯದಲ್ಲಿ ಇದ್ದನು. ಇವನು
‘ಕಬ್ಬಿಗರ ಕಾವ‘ ಅಥವಾ ‘ಕಬ್ಬಿಗರ ಕಾವಂ‘ ಎಂಬ ಚಂಪೂ ಕಾವ್ಯವನ್ನು ರಚಿಸಿದ್ದಾನೆ. ‘ಕನ್ನಡ ನಾಡು – ನುಡಿ‘ ಪದ್ಯದಲ್ಲಿ ಇರುವ ಎಲ್ಲಾ ಪದ್ಯಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ . ಅವರ ಸಂಪಾದಕತ್ವದಲ್ಲಿ ಪ್ರಕಟಿಸಿರುವ ‘ಕನ್ನಡ ಬಾವುಟ’ ಕೃತಿಯಿಂದ ಆರಿಸಿಕೊಳ್ಳಲಾಗಿದೆ.
ಆಶಯ ಭಾವ
ನಮ್ಮ ಕನ್ನಡ ನಾಡು ನುಡಿಯ ವಿಶಿಷ್ಟತೆಯನ್ನು ನಮ್ಮ ನಾಡಿನ ಕವಿಗಳು ಹೊಗಳಿದ್ದಾರೆ. ಅವರ ಭಾಷಾ ಕಾಳಜಿಯನ್ನು ಅವರ ಕಾವ್ಯಗಳಲ್ಲಿ ಕಾಣಬಹುದು. ಶ್ರೀ ವಿಜಯನು ನಮ್ಮ ಕನ್ನಡದ ಜನಪದರು ಅನಕ್ಷರಸ್ಥರಾದರೂ ಕಾವ್ಯ ಪ್ರಯೋಗ ಪರಿಣತರಾಗಿದ್ದರು ಎನ್ನುತ್ತಾನೆ .
ನಯಸೇನನ ಪ್ರಕಾರ ನಮ್ಮ ಕನ್ನಡದಲ್ಲಿ ಕೆಲವು ಪಂಡಿತರು ಸಂಸ್ಕೃತ ತುಂಬಾ ಉಪಯೋಗಿಸಿದ್ದಾರೆ. ಸಂಸ್ಕೃತವಿಲ್ಲದೇ ಶುದ್ಧ ಕನ್ನಡವೇ ಇರಬೇಕೆಂದು ಅವರ ಆಸೆ.
ನೇಮಿಚಂದ್ರನು ಕನ್ನಡ ನಾಡಿನ ಶ್ರೇಷ್ಠಕಾವ್ಯಗಳ ರಚನಾಕಾರರ ಬಗ್ಗೆ ಹೆಗ್ಗಳಿಕೆಯನ್ನು ವ್ಯಕ್ತಪಡಿಸಿದ್ದಾರೆ.
ಮಹಲಿಂಗರಂಗನು ನಮ್ಮ ಕನ್ನಡವು ಹೇಗೆ ಸರಳ ಸುಂದರ ಎಂದು ಹೊಗಳಿ ಸಂಸ್ಕೃತಕ್ಕಿಂತ ಯಾವುದರಲ್ಲೂ ಕಡಿಮೆಯಿಲ್ಲ ಎನ್ನುತ್ತಾನೆ.
ಆಂಡಯ್ಯನು ಕನ್ನಡನಾಡಿನ ಪ್ರಕೃತಿಯನ್ನು ಮೆಚ್ಚಿ ಹೀಗೆ ಕನ್ನಡನಾಡಿನ ಪ್ರಕೃತಿ , ಸಂಸ್ಕೃತಿ ಹಾಗೂ ಭಾಷಾ ಹಿರಿಮೆಗಳನ್ನು ವಿವಿಧ ಕವಿಗಳು ವರ್ಣಿಸಿರುವುದನ್ನು ಪರಿಚಯಿಸುವುದೇ ಪ್ರಸ್ತುತ ಪದ್ಯಪಾಠದ ಆಶಯವಾಗಿದೆ.
ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
೧. ಪದನರಿದು ನುಡಿಯುವವರು ಯಾರು ಎಂದು ಕವಿ ಹೇಳಿದ್ದಾನೆ?
ಉ: ಪದನರಿದು ನುಡಿಯುವವರು ಕನ್ನಡ ನಾಡಿನ ಜನ.
೨. ತುಪ್ಪದೊಡನೆ ಯಾವುದನ್ನು ಬೆರೆಸಬಾರದು?
ಉ: ತುಪ್ಪದೊಡನೆ ತೈಲವನ್ನು ಬೆರೆಸಬಾರದು.
೩. ಮಹಲಿಂಗರಂಗನ ಪ್ರಕಾರ ಸುಲಿದ ಬಾಳೆಯ ಹಣ್ಣಿನಂತೆ ಇರುವ ಭಾಷೆ ಯಾವುದು?
ಉ: ಮಹಲಿಂಗರಂಗರವರ ಪ್ರಕಾರ ಸುಲಿದ ಬಾಳೆಯ ಹಣ್ಣಿನಂತೆ ಇರುವ ಭಾಷೆ ಕನ್ನಡ.
ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯದಲ್ಲಿ ಉತ್ತರಿಸಿ.
೧. ಕನ್ನಡಿಗರ ವಿಶೇಷತೆಯನ್ನು ಶ್ರೀ ವಿಜಯ ಹೇಗೆ ಸಾರಿದ್ದಾನೆ?
ಉ: ಕನ್ನಡ ನಾಡಿನ ಜನತೆ ನುಡಿಯಬಲ್ಲರು. ನುಡಿದಿದ್ದನ್ನು ಅರಿತು ಪಾಲನೆ ಮಾಡಬಲ್ಲರು. ಯಾವುದೇ ಅಕ್ಷರ ಜ್ಞಾನವಿಲ್ಲದಿದ್ದರೂ ಕಾವ್ಯ ರಚಿಸುವ ಪರಿಣಿತರು. ಕನ್ನಡನಾಡಿನ ಜನತೆ ನಿಜಕ್ಕೂ ಚತುರರು, ಬುದ್ಧಿವಂತರು ಎಂದು ನಾಡಿನ ಜನರ ವಿಶೇಷತೆಯನ್ನು ಶ್ರೀ ವಿಜಯ ಸಾರಿದ್ದಾನೆ.
೨. ಕನ್ನಡ ಮತ್ತು ಸಂಸ್ಕೃತ ಭಾಷಾ ಬಳಕೆಯ ಬಗ್ಗೆ ನಯಸೇನ ಏನು ಹೇಳುತ್ತಾನೆ?
ಉ: ಕವಿ ನಯಸೇನನ ಪ್ರಕಾರ ನಮಗೆ ತುಪ್ಪವೂ ಬೇಕು,ಎಣ್ಣೆಯೂ ಬೇಕು. ಹಾಗೆ ಸಂಸ್ಕೃತವೂ ಬೇಕು, ಕನ್ನಡವೂ ಬೇಕು. ಆದರೆ ಎಣ್ಣೆ – ತುಪ್ಪದ ಮಿಶ್ರಣ ರುಚಿಯಿರುವುದಿಲ್ಲವೋ, ಹಾಗೇ ಕನ್ನಡ ಸಂಸ್ಕೃತದ ಮಿಶ್ರಣ ಬೇಡ ಎಂದಿದ್ದಾನೆ.
೩. ಕವೀಂದ್ರರ ಶ್ರೇಷ್ಠತೆಯನ್ನು ನೇಮಿಚಂದ್ರನು ಹೇಗೆ ವರ್ಣಿಸಿದ್ದಾನೆ?
ಉ: ಕವೀಂದ್ರರ ಶ್ರೇಷ್ಠತೆಯು ಕಪಿಸೈನ್ಯ ಸೇತುವೆಯನ್ನು ಕಟ್ಟಿದಂತೆ, ಅರ್ಜುನನು ಹರನ ಗಂಟಲನ್ನು ಒತ್ತಿ ಹಿಡಿದಂತೆ, ಕವಿಗಳು ಶ್ರೇಷ್ಟ ಕೃತಿಗಳನ್ನು ರಚಿಸಿದವರು ಎಂದು ಕವಿ ನೇಮಿಚಂದ್ರ ಕನ್ನಡ ಕವೀಂದ್ರರ ಶ್ರೇಷ್ಠತೆಯನ್ನು ವರ್ಣಿಸಿದ್ದಾರೆ.
೪. ಕನ್ನಡ ನುಡಿಯಲ್ಲೇ ಮೋಕ್ಷ ಸಾಧನೆ ಎಂದು ಕವಿ ಮಹಲಿಂಗರಂಗ ಹೇಗೆ ಸಾಧಿಸುತ್ತಾರೆ?
ಉ: ಕನ್ನಡ ಭಾಷೆಯು ಸುಲಿದ ಬಾಳೆಯ ಹಣ್ಣಿನಂತೆ, ಸಿಗುರು ತೆಗೆದ ಕಬ್ಬಿನಂತೆ. ಶಾಖ ಆರಿದ ಹಾಲಿನಂತೆ, ಸುಲಭವೂ ರುಚಿಯುಳ್ಳದ್ದೂ ಆಗಿದೆ. ಆದ್ದರಿಂದ ಸಂಸ್ಕೃತದಲ್ಲಿ ಏನಿದೆ? ಕನ್ನಡ ನುಡಿಯಲ್ಲೇ ಮೋಕ್ಷ ಸಾಧನೆ ಎಂದು ಕವಿ ಮಹಲಿಂಗರಂಗ ಸಾಧಿಸುತ್ತಾರೆ.
೫. ಕನ್ನಡ ನಾಡಿನ ಪಾಕೃತಿಕ ವರ್ಣನೆಯನ್ನು ಆಂಡಯ್ಯ ಕವಿ ಹೇಗೆ ಸಾರಿದ್ದಾರೆ?
ಉ: ಮಲ್ಲಿಗೆ , ಸಂಪಿಗೆ , ದಾಳಿಂಬೆ , ಚಂದದ ಮಾವು, ತೆಂಗು, ಬಾಳೆ ಹೀಗೆ ಹಲವಾರು ಗಿಡ ಮರಗಳಿಂದ ಕೂಡಿರುವ ಕನ್ನಡನಾಡು ಅತ್ಯಂತ ಅಂದವಾಗಿದೆ ಎಂದು ಕವಿ ಆಂಡಯ್ಯನವರು ಕನ್ನಡನಾಡಿನ ಪ್ರಾಕೃತಿಕ ವರ್ಣನೆಯನ್ನು ಸಾರಿದ್ದಾರೆ.
ಇ ) ಕೆಳಗಿನ ಪ್ರಶ್ನೆಗೆ ಎಂಟು ಹತ್ತು ವಾಕ್ಯದಲ್ಲಿ ಉತ್ತರಿಸಿ.
೧. ಕನ್ನಡ ನಾಡಿನ ವಿಸ್ತಾರ, ಪ್ರಾಕೃತಿಕ ಸಂಪತ್ತಿನ ಬಗ್ಗೆ ಕವಿಗಳು ಹೇಗೆ ವರ್ಣಿಸಿದ್ದಾರೆ?
ಉ: ಕನ್ನಡ ನಾಡು ನುಡಿಯ ಕುರಿತು ಪ್ರಾಚೀನ ಕಾಲದಿಂದಲೂ ಕವಿಗಳು ಮನಸಾರೆ ಬಣ್ಣಿಸಿದ್ದಾರೆ. ಕನ್ನಡದ ಸಂಸ್ಕೃತಿ, ಸೊಬಗು, ವೈಭವ, ಸೌಂದರ್ಯ ಅಪಾರವಾದುದು.
ಸಂಸ್ಕೃತದ ಪ್ರಭಾವವಿದ್ದ ಆ ಕಾಲದಲ್ಲಿ ಕನ್ನಡದ ಹಿರಿಮೆ ಹಾಗೂ ಸಂಸ್ಕೃತಿಯನ್ನು ನಮ್ಮ ಕವಿಗಳು ಮೆರೆದರು. ಅಕ್ಷರ ಜ್ಞಾನವಿಲ್ಲದಿದ್ದರೂ ಕಾವ್ಯ ರಚಿಸುವ ಪರಿಣಿತರು. ಕನ್ನಡನಾಡಿನ ಜನತೆ ನಿಜಕ್ಕೂ ಚತುರರು, ಬುದ್ಧಿವಂತರು. ಕನ್ನಡ ನಾಡಿನಲ್ಲಿ ಮಲ್ಲಿಗೆ , ಸಂಪಿಗೆಯ ಪರಿಮಳವಿದೆ.
ದಾಳಿಂಬೆ, ತೆಂಗು, ಮಾವು, ಬಾಳೆ ಹೀಗೆ ಹಲವಾರು ಗಿಡಮರಗಳಿಂದ ತುಂಬಿದ್ದು ಪ್ರಾಕೃತಿಕವಾಗಿ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ.
೨. ಕನ್ನಡ ಭಾಷೆ ಹಾಗೂ ಸಾಹಿತ್ಯದ ಬಗ್ಗೆ ಕವಿಗಳಿಗಿರುವ ಅಭಿಮಾನ ಹೇಗೆ ವ್ಯಕ್ತವಾಗಿದೆ?
ಉ: ಕನ್ನಡ ನಾಡಿನ ಜನತೆ ನುಡಿಯಬಲ್ಲರು. ನುಡಿದಿದ್ದನ್ನು ಅರಿತು ಪಾಲನೆ ಮಾಡಬಲ್ಲರು. ಯಾವುದೇ ಅಕ್ಷರ ಜ್ಞಾನವಿಲ್ಲದಿದ್ದರೂ ಕಾವ್ಯ ರಚಿಸುವ ಪರಿಣಿತರು. ಕನ್ನಡನಾಡಿನ ಜನತೆ ನಿಜಕ್ಕೂ ಚತುರರು, ಬುದ್ಧಿವಂತರು ಎಂದು ನಾಡಿನ ಜನರ ವಿಶೇಷತೆಯನ್ನು ಶ್ರೀ ವಿಜಯ ಹೇಳಿದ್ದಾನೆ.
ಕವಿ ನಯಸೇನನ ಪ್ರಕಾರ ನಮಗೆ ತುಪ್ಪವೂ ಬೇಕು,ಎಣ್ಣೆಯೂ ಬೇಕು. ಹಾಗೆ ಸಂಸ್ಕೃತವೂ ಬೇಕು, ಕನ್ನಡವೂ ಬೇಕು. ಆದರೆ ಎಣ್ಣೆ – ತುಪ್ಪದ ಮಿಶ್ರಣ ರುಚಿಯಿರುವುದಿಲ್ಲವೋ, ಹಾಗೇ ಕನ್ನಡ ಸಂಸ್ಕೃತದ ಮಿಶ್ರಣ ಬೇಡ ಎಂದಿದ್ದಾನೆ.
ಕವೀಂದ್ರರ ಶ್ರೇಷ್ಠತೆಯು ಕಪಿಸೈನ್ಯ ಸೇತುವೆಯನ್ನು ಕಟ್ಟಿದಂತೆ, ಅರ್ಜುನನು ಹರನ ಗಂಟಲನ್ನು ಒತ್ತಿ ಹಿಡಿದಂತೆ, ಕವಿಗಳು ಶ್ರೇಷ್ಟ ಕೃತಿಗಳನ್ನು ರಚಿಸಿದವರು ಎಂದು ಕವಿ ನೇಮಿಚಂದ್ರ ಕನ್ನಡ ಕವೀಂದ್ರರ ಶ್ರೇಷ್ಠತೆಯನ್ನು ವರ್ಣಿಸಿದ್ದಾರೆ.
ಕನ್ನಡ ಭಾಷೆಯು ಸುಲಿದ ಬಾಳೆಯ ಹಣ್ಣಿನಂತೆ, ಸಿಗುರು ತೆಗೆದ ಕಬ್ಬಿನಂತೆ. ಶಾಖ ಆರಿದ ಹಾಲಿನಂತೆ, ಸುಲಭವೂ ರುಚಿಯುಳ್ಳದ್ದೂ ಆಗಿದೆ. ಆದ್ದರಿಂದ ಸಂಸ್ಕೃತದಲ್ಲಿ ಏನಿದೆ? ಕನ್ನಡ ನುಡಿಯಲ್ಲೇ ಮೋಕ್ಷ ಸಾಧನೆ ಎಂದು ಕವಿ ಮಹಲಿಂಗರಂಗ ಅಭಿಮಾನದಿಂದ ನುಡಿದಿದ್ದಾರೆ.
ಈ ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
೧. ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್
ಆಯ್ಕೆ: ಈ ವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ ಅವರು ಪ್ರಕಟಿಸಿರುವ ‘ಕನ್ನಡ ಬಾವುಟʼ ಕೃತಿಯಿಂದ ಆಯ್ದ ‘ಕನ್ನಡ ನಾಡು – ನುಡಿʼ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಈ ಮಾತನ್ನು ಕವಿರಾಜ ಶ್ರೀವಿಜಯ ಕನ್ನಡ ನಾಡಿನ ಜನಪದರನ್ನು ಹೊಗಳುವ ಸಂದರ್ಭದಲ್ಲಿ ಹೇಳಿದ್ದಾನೆ. ಪ್ರಾಚೀನ ಜನಪದರಿಗೆ ಅಕ್ಷರ ಜ್ಞಾನವಿಲ್ಲದಿದ್ದರೂ ಕಾವ್ಯ ರಚಿಸುವ ಪರಿಣಿತರು. ಕನ್ನಡನಾಡಿನ ಜನತೆ ನಿಜಕ್ಕೂ ಚತುರರು, ಬುದ್ಧಿವಂತರು. ಉತ್ತಮವಾದ ಕಾವ್ಯರಚನಾ ಸಾಮರ್ಥ್ಯವನ್ನು ಹೊಂದಿದ್ದರು ಎಂದು ಹೇಳುವಾಗ ಈ ಮಾತು ಬಂದಿದೆ.
ಸ್ವಾರಸ್ಯ: ಕನ್ನಡ ನಾಡಿನ ಜನಪದರ ಸಾಹಿತ್ಯ ಶಕ್ತಿ, ಕನ್ನಡ ನಾಡು ನುಡಿ, ಜನತೆಯ ಬಗೆಗಿರುವ ಈ ಮಾತುಗಳು ಸ್ವಾರಸ್ಯಕರವಾಗಿವೆ.
೨. ತಕ್ಕುದೆ ಬೆರೆಸಲ್ಕೆ ಘೃತಮುಮಂ ತೈಲಮುಮಂ.
ಆಯ್ಕೆ: ಈ ವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ ಅವರು ಪ್ರಕಟಿಸಿರುವ ‘ಕನ್ನಡ ಬಾವುಟʼ ಕೃತಿಯಿಂದ ಆಯ್ದ ‘ಕನ್ನಡ ನಾಡು – ನುಡಿ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಅನೇಕ ಕವಿಗಳು ಕನ್ನಡದಲ್ಲಿ ಉತ್ತಮ ಕಾವ್ಯಗಳನ್ನು ರಚಿಸಿದರೂ ಸಂಸ್ಕೃತದ ಬಳಕೆ ಮಾಡಿದ್ದರು. ಇದನ್ನು ಕಂಡ ಕವಿ ನಯಸೇನ ನಮಗೆ ತುಪ್ಪವೂ ಬೇಕು,ಎಣ್ಣೆಯೂ ಬೇಕು. ಹಾಗೆ ಸಂಸ್ಕೃತವೂ ಬೇಕು, ಕನ್ನಡವೂ ಬೇಕು. ಆದರೆ ಎಣ್ಣೆ – ತುಪ್ಪದ ಮಿಶ್ರಣ ರುಚಿಯಿರುವುದಿಲ್ಲವೋ, ಹಾಗೇ ಕನ್ನಡ ಸಂಸ್ಕೃತದ ಮಿಶ್ರಣ ಬೇಡ ಎಂದು ಹೇಳುವ ಸಂದರ್ಭದಲ್ಲಿ ಕವಿ ನಯಸೇನನು ಈ ಮಾತನ್ನು ಹೇಳಿದ್ದಾನೆ.
ಸ್ವಾರಸ್ಯ: ಕನ್ನಡ ಭಾಷೆಯ ಸೊಬಗಿನ ಮೇಲಿರುವ ಅಭಿಮಾನ ಸ್ವಾರಸ್ಯಕರವಾಗಿದೆ.
೩. ಕಟ್ಟುಗೆ ಕಟ್ಟುದಿರ್ಕೆ ಕಡಲಂ ಕಪಿಸಂತತಿ.
ಆಯ್ಕೆ: ಈ ವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ ಅವರು ಪ್ರಕಟಿಸಿರುವ ‘ಕನ್ನಡ ಬಾವುಟʼ ಕೃತಿಯಿಂದ ಆಯ್ದ ‘ಕನ್ನಡ ನಾಡು – ನುಡಿ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಕವೀಂದ್ರರ ಶ್ರೇಷ್ಠತೆಯು ಕಪಿಸೈನ್ಯ ಸೇತುವೆಯನ್ನು ಕಟ್ಟಿದಂತೆ, ಅರ್ಜುನನು ಹರನ ಗಂಟಲನ್ನು ಒತ್ತಿ ಹಿಡಿದಂತೆ, ಕವಿಗಳು ಶ್ರೇಷ್ಟ ಕೃತಿಗಳನ್ನು ರಚಿಸಿ ಕವೀಂದ್ರರೇ ಆದರೆಂದು ಹೇಳುವ ಸಂದರ್ಭದಲ್ಲಿ ನೇಮಿಚಂದ್ರ ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ: ಕನ್ನಡ ನಾಡಿನ ಕವಿಗಳು ತಮ್ಮ ಕಾವ್ಯಗಳಲ್ಲಿ ಎಂತಹ ವಿಷಯಗಳನ್ನಾದರೂ ಬರೆಯುವ ಶಕ್ತಿ ಉಳ್ಳವರು ಎಂದು ಅವರ ಬಗ್ಗೆ ಇರುವ ಅಭಿಮಾನ ಸ್ವಾರಸ್ಯಕರವಾಗಿದೆ.
೪. ಕಳಿದ ಸಿಗುರಿನ ಕಬ್ಬಿನಂದದಿ
ಆಯ್ಕೆ: ಈ ವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ ಅವರು ಪ್ರಕಟಿಸಿರುವ ‘ಕನ್ನಡ ಬಾವುಟʼ ಕೃತಿಯಿಂದ ಆಯ್ದ ‘ಕನ್ನಡ ನಾಡು – ನುಡಿ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಕನ್ನಡ ಭಾಷೆಯು ಸುಲಿದ ಬಾಳೆಯ ಹಣ್ಣಿನಂತೆ, ಸಿಗುರು ತೆಗೆದ ಕಬ್ಬಿನಂತೆ. ಶಾಖ ಆರಿದ ಹಾಲಿನಂತೆ, ಸುಲಭವೂ ರುಚಿಯುಳ್ಳದ್ದೂ ಆಗಿದೆ. ಆದ್ದರಿಂದ ಸಂಸ್ಕೃತದಲ್ಲಿ ಏನಿದೆ? ಕನ್ನಡ ನುಡಿಯಲ್ಲೇ ಮೋಕ್ಷ ಸಾಧನೆ ಎಂದು ಕವಿ ಮಹಲಿಂಗರಂಗ ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ: ಕನ್ನಡ ಭಾಷೆಯನ್ನು ಕಲಿಯಲು ಸರಳವೂ , ಸುಂದರವೂ ಆದ ಭಾಷೆಯಾಗಿದೆ. ಕನ್ನಡವನ್ನು ಬೇಗ ಕಲಿತು ಮೋಕ್ಷ ಸಂಪಾದನೆ ಮಾಡಬಹುದು ಎಂಬ ಕವಿ ಕನ್ನಡಾಭಿಮಾನದ ಮಾತು ಸ್ವಾರಸ್ಯಕರವಾಗಿದೆ.
೫. ದಾಳಿಂಬಯಲ್ಲದೊಪ್ಪುವ ಚೆಂದೆಂಗಳಲ್ಲದೆ.
ಆಯ್ಕೆ: ಈ ವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ ಅವರು ಪ್ರಕಟಿಸಿರುವ ‘ಕನ್ನಡ ಬಾವುಟʼ ಕೃತಿಯಿಂದ ಆಯ್ದ ‘ಕನ್ನಡ ನಾಡು – ನುಡಿ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಕನ್ನಡ ನಾಡಿನಲ್ಲಿ ಮಲ್ಲಿಗೆ , ಸಂಪಿಗೆಯ ಪರಿಮಳವಿದೆ. ದಾಳಿಂಬೆ, ತೆಂಗು, ಮಾವು, ಬಾಳೆ ಹೀಗೆ ಹಲವಾರು ಗಿಡಮರಗಳಿಂದ ತುಂಬಿದ್ದು ಪ್ರಾಕೃತಿಕವಾಗಿ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ ಎಂದು ಕವಿ ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ: ಆಂಡಯ್ಯ ಕವಿಗೆ ಕನ್ನಡ ನಾಡು , ಕನ್ನಡ ಭಾಷೆಯ ಬಗ್ಗೆ ಇರುವ ಅಭಿಮಾನ ಸ್ವಾರಸ್ಯಕರವಾಗಿದೆ.