Kanadam poem is written by Bhagirathi Hegde. She was born in Uttara Kannada district’s Siddapur’s Tattikai village. She has written more than 12 books. ” Kannadamma” and “Gubbiya swarga” are written for the children.

ಕನ್ನಡಮ್ಮ ಕವಿತೆಯನ್ನು ಭಾಗೀರಥಿ ಹೆಗಡೆ ಬರೆದಿದ್ದಾರೆ. ಇವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ತಟ್ಟಿಕೈ ಗ್ರಾಮದಲ್ಲಿ. ಅವರು 12 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. “ಕನ್ನಡಮ್ಮ” ಮತ್ತು “ಗುಬ್ಬಿಯ ಸ್ವರ್ಗ” ಮಕ್ಕಳಿಗಾಗಿ ಬರೆಯಲಾಗಿದೆ.

The poet compares the land to the mother. The country is the support of our life. Provides rain, crops, and employment. Makes our dreams come true. Keeps us happy.

ಕವಯತ್ರಿ ನಾಡನ್ನು ತಾಯಿಗೆ ಹೋಲಿಸುತ್ತಾರೆ. ನಾಡು ನಮ್ಮ ಬದುಕಿಗೆ ಆಸರೆಯಾಗಿದೆ. ಮಳೆ, ಬೆಳೆ, ಉದ್ಯೋಗವನ್ನು ನೀಡಿ ಕಾಪಾಡುತ್ತದೆ. ನಮ್ಮ ಕನಸನ್ನು ನನಸು ಮಾಡುತ್ತದೆ. ನಮಗೆ ಸಂತಸ ನೀಡುತ್ತದೆ.

ಅ. ಪದಗಳ ಅರ್ಥ ಬರೆಯಿರಿ. (Write the word meanings in kannada)
ಊಡು = ಕುಡಿಸು                 ಒಡಲು = ಹೊಟ್ಟೆ
ಕಡಲು = ಸಮುದ್ರ                ಚಿನ್ನ = ಬಂಗಾರ, ಹೊನ್ನು
ಧರೆ = ಭೂಮಿ                    ಧಾರೆ = ಒಂದೇ ಸಮನೆ ನೀರು ಸುರಿಯುವಿಕೆ
ನಮನ = ವಂದನೆ                ನಾದ = ಮಧುರ ಧ್ವನಿ
ನಾಡದೇವಿ = ರಾಜ್ಯದ ದೇವಿ, ಭುವನೇಶ್ವರಿ
ಪೊರೆ = ರಕ್ಷಣೆ, ಸಲಹು           ಬಿಂಬ = ಪ್ರತಿರೂಪ
ಮೊರೆ = ಧ್ವನಿ ಮಾಡು, ಝೇಂಕರಿಸು
ಲಾಲಿ = ಜೋಗುಳ ಹಾಡು        ಸಲಹು = ಕಾಪಾಡು,ರಕ್ಷಿಸು
ಹರಸು = ಆಶೀರ್ವಾದ ಮಾಡು    ಹೆತ್ತು = ಜನುಮ ನೀಡಿ

ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentences)
೧. ನಮ್ಮನ್ನು ಹೊತ್ತು ಹೆತ್ತು ಸಲಹಿದವರನ್ನು ಏನೆಂದು ಕರೆಯುತ್ತಾರೆ?
ಉ: ನಮ್ಮನ್ನು ಹೊತ್ತು ಹೆತ್ತು ಸಲಹಿದವರನ್ನು ತಾಯಿ ಎಂದು ಕರೆಯುತ್ತಾರೆ.
೨. ಕವಿಯಿತ್ರಿ ಕನ್ನಡ ನಾಡನ್ನು ಯಾರಿಗೆ ಹೋಲಿಸಿದ್ದಾರೆ?
ಉ:ಕವಿಯಿತ್ರಿ ಕನ್ನಡ ನಾಡನ್ನು ತಾಯಿಗೆ ಹೋಲಿಸಿದ್ದಾರೆ.
೩. ಕನ್ನಡ ನುಡಿಯ ಸೊಬಗು ಯಾವ ರೀತಿಯದು?
ಉ:ಕನ್ನಡ ನುಡಿಯ ಸೊಬಗು ನಾದಮಯವಾಗಿದೆ.
೪. ಕನ್ನಡಮ್ಮ ಈ ನಾಡ ಮಣ್ಣಿನಲ್ಲಿ ಏನನ್ನು ಇರಿಸಿದ್ದಾಳೆ?
ಉ:ಕನ್ನಡಮ್ಮ ಈ ನಾಡ ಮಣ್ಣಿನಲ್ಲಿ ಚಿನ್ನವನ್ನು ಇರಿಸಿದ್ದಾಳೆ.
೫. ಕವಿಯಿತ್ರಿ ಕನ್ನಡ ತೆರೆಗಳ ಮೊರೆಯನ್ನು ಯಾವುದಕ್ಕೆ ಹೋಲಿಸಿದ್ದಾರೆ?
ಉ.ಕವಿಯಿತ್ರಿ ಕನ್ನಡ ತೆರೆಗಳ ಮೊರೆಯನ್ನು ತಾಯಿಯ ಲಾಲಿ ಹಾಡಿಗೆ
    ಹೋಲಿಸಿದ್ದಾರೆ.

ಇ. ಕೆಳಗಿನ ಪ್ರಶ್ನೆಗಳಿಗೆ ಎರಡು, ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.(Answer the following in two to three sentences)
೧. ನಮ್ಮ ತಾಯಿ ನಮ್ಮನ್ನು ಯಾವ ರೀತಿ ಸಾಕಿ ಸಲಹುತ್ತಾಳೆ?
ಉ:ನಮ್ಮ ತಾಯಿ ನಮ್ಮನ್ನು ಹೊತ್ತು, ಹೆತ್ತು, ತುತ್ತನಿತ್ತು, ಮುದ್ದಾಡಿ ಸಾಕಿ
    ಸಲಹುತ್ತಾಳೆ.
೨. ಕನ್ನಡಮ್ಮ ತನ್ನ ಕಂದಮ್ಮಗಳನ್ನು ಹೇಗೆ ಸಲಹಿದ್ದಾಳೆ?
ಉ:ಕನ್ನಡಮ್ಮ ತನ್ನ ಕಂದಮ್ಮಗಳನ್ನು ಹೆತ್ತಿದ್ದಾಳೆ. ಕಂದಮ್ಮಗಳನ್ನು ಹೊತ್ತಿದ್ದಾಳೆ.
    ಹೀಗೆ ಸಲಹಿದ್ದಾಳೆ.
೩. ಕನ್ನಡಮ್ಮ ನಮ್ಮನ್ನು ಯಾವ ರೀತಿ ಕಾಯುತ್ತಿದ್ದಾಳೆ?
ಉ:ಕನ್ನಡಮ್ಮ ಮಣ್ಣಿನಲ್ಲಿ ಚಿನ್ನವನ್ನು ಇರಿಸಿದ್ದಾಳೆ. ಕಣ್ಣಿನಲ್ಲಿ ಬೆಳಕನ್ನು ಬರಿಸಿದ್ದಾಳೆ.
    ಹೀಗೆ ನಮ್ಮನ್ನು ಕಾಯುತ್ತಿದ್ದಾಳೆ.
೪. ಕನ್ನಡಮ್ಮನ ಲಾಲಿ ಹಾಡು ಯಾವ ರೀತಿಯಲ್ಲಿದೆ?
ಉ:ಕನ್ನಡಮ್ಮನ ಲಾಲಿ ಹಾಡು ಮೊರೆವ ಕಡಲ ತೆರೆಗಳಲ್ಲಿದೆ ಮತ್ತು ಸುರಿವ ಮಳೆಯ
    ಹನಿಗಳಲ್ಲಿದೆ.
೫. ಕವಿಯಿತ್ರಿ ಕನ್ನಡಮ್ಮನನ್ನು ಏನೆಂದು ಪ್ರಾರ್ಥಿಸುತ್ತಾರೆ?
ಉ:ಕವಿಯಿತ್ರಿ ಕನ್ನಡಮ್ಮನನ್ನು ಕಣ್ಣನ್ನು ಬಿಟ್ಟು ನೋಡಿ ಕೈಯನ್ನು ಎತ್ತಿ ನಮ್ಮನ್ನು ಹರಸು ಎಂದು ಪ್ರಾರ್ಥಿಸುತ್ತಾರೆ.
೬. ಕವಿಯಿತ್ರಿ ಕನ್ನಡ ನಾಡನ್ನು ಹೆತ್ತ ತಾಯಿಗೆ ಏಕೆ ಹೋಲಿಸಿದ್ದಾರೆ?
ಉ: ಕನ್ನಡ ನಾಡು ನಮ್ಮನ್ನು ಹೆತ್ತ ತಾಯಿಯ ಹಾಗೆ ರಕ್ಷಿಸುತ್ತದೆ. ನಮ್ಮ ಬದುಕಿಗೆ
     ಆಸರೆಯಾಗುತ್ತದೆ. ಸಂತೋಷವನ್ನು ನೀಡುತ್ತದೆ. ಕನಸುಗಳನ್ನು ನನಸು
     ಮಾಡುತ್ತದೆ ಎಂದು ಹೋಲಿಸಿದ್ದಾರೆ.
೭. ನಮ್ಮ ಅಮ್ಮನ ಬಗ್ಗೆ ನಮಗೆ ಪ್ರೀತಿ ಏಕೆ?
ಉ:ನಮ್ಮ ಅಮ್ಮ ನಮ್ಮನ್ನು ಹೊತ್ತು ಹೆತ್ತು ಸಾಕಿ ಸಲಹುತ್ತಾಳೆ. ನಮಗೆ ತುತ್ತನ್ನು ಇತ್ತಿ ಎತ್ತಿ ಮುದ್ದಾಡುತ್ತಾಳೆ. ಅದಕ್ಕೆ ನಮ್ಮ ಅಮ್ಮನ ಬಗ್ಗೆ ನಮಗೆ ಪ್ರೀತಿ.

ಈ) ಕೆಳಗಿನ ಪ್ರಶ್ನೆಗಳಿಗೆ ನಾಲ್ಕು, ಐದು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in four to five sentences)
೧. ಕನ್ನಡ ನಾಡು ನಮ್ಮ ಬದುಕಿಗೆ ಯಾವ ರೀತಿ ಆಸರೆಯಾಗಿದೆ?
ಉ: ಕನ್ನಡ ನಾಡು ನಮ್ಮ ಬದುಕಿಗೆ ಮಳೆ, ಬೆಳೆ, ಉದ್ಯೋಗ ನೀಡಿ ನಮ್ಮನ್ನು
     ರಕ್ಷಿಸಿದೆ. ನಮ್ಮೆಲ್ಲರ ಕನಸುಗಳನ್ನು ನನಸು ಮಾಡುತ್ತದೆ. ಹೆತ್ತ ತಾಯಿಯಂತೆ
     ಸಾಕಿ ಸಲಹಿದೆ. ತನ್ನ ಮಕ್ಕಳಿಗೆ ತನ್ನಲ್ಲಿ ಚಿನ್ನವನ್ನು ಇರಿಸಿ, ಕಣ್ಣಿನಲ್ಲಿ ಬೆಳಕನ್ನು
     ಮೂಡಿಸಿ ಬದುಕಿಗೆ ಆಸರೆಯಾಗಿದೆ.
೨. ಕನ್ನಡ ನಾಡಿನ ಬಗ್ಗೆ ನಮಗೆ ಪ್ರೀತಿ ಇರಬೇಕು. ಏಕೆ?
ಉ: ಕನ್ನಡ ನಾಡು ನಮ್ಮ ತಾಯಿಯ ಹಾಗೆ ನಮ್ಮನ್ನು ಹೊತ್ತು ಹೆತ್ತು ಸಾಕಿ
     ಸಲಹುತ್ತಾಳೆ. ತುತ್ತನ್ನು ಇತ್ತಿ ಎತ್ತಿ ಮುದ್ದಾಡುತ್ತಾಳೆ. ಮೊರೆವ ಕಡಲ
     ತೆರೆಗಳಂತೆ ಮತ್ತು ಸುರಿವ ಮಳೆಯ ಹನಿಗಳಂತೆ ಲಾಲಿ ಹಾಡಿ ಕಾಪಾಡುತ್ತಾಳೆ.
     ಕನ್ನಡಮ್ಮ  ತನ್ನಲ್ಲಿ ಚಿನ್ನವನ್ನು ಇರಿಸಿ, ಕಣ್ಣಿನಲ್ಲಿ ಬೆಳಕನ್ನು ಮೂಡಿಸಿ ಬದುಕಿಗೆ
     ಆಸರೆಯಾಗಿದ್ದಾಳೆ. ಈ ಎಲ್ಲಾ ಕಾರಣಗಳಿಗೆ ನಮಗೆ ಕನ್ನಡ ನಾಡಿನ ಬಗ್ಗೆ
     ನಮಗೆ ಪ್ರೀತಿ ಇರಬೇಕು.

ಭಾಷಾಭ್ಯಾಸ

ಅ. ಪ್ರಾಸ ಪಾದಗಳನ್ನು ಬರೆಯಿರಿ.(Write the rhyming words)
    
ತಾಯಿಯಲ್ಲವೇ – ದೇವಿಯಲ್ಲವೇ
    ಹರಸಿದವಳು – ಸಲಹಿದವಳು
    ಮಣ್ಣಿನಲಿ – ಕಣ್ಣಿನಲಿ
    ತೆರೆಗಳಾಗಿ – ಹನಿಗಳಾಗಿ

ಆ. ಕೆಳಗಿನ ಪದಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಬಳಸಿರಿ.(Make your own sentences)
೧. ಕನ್ನಡಮ್ಮ: ಕನ್ನಡಮ್ಮ ನಮ್ಮನ್ನು ಸಾಕಿ ಸಲಹುತ್ತಾಳೆ.
೨. ಲಾಲಿಹಾಡು : ಅಮ್ಮ ಲಾಲಿಹಾಡು ಹಾಡಿದಾಗ ಮಗು ಮಲಗುತ್ತದೆ.
೩. ಹರಸು : ತಂದೆ ತಾಯಿ ಮಕ್ಕಳನ್ನು ಹರಸುತ್ತಾರೆ.
೪. ನಾಡದೇವಿ : ನಮ್ಮ ನಾಡದೇವಿ ಭುವನೇಶ್ವರಿ ದೇವಿ.
೫. ಸಲಹು : ತಾಯಿ ಮಕ್ಕಳನ್ನು ಸಾಕಿ ಸಲಹುತ್ತಾಳೆ

ಇ. ಪದಗಳನ್ನು ಬಿಡಿಸಿ ಬರೆಯಿರಿ.(Split the words)
೧. ಚಿನ್ನವಿರಿಸಿ = ಚಿನ್ನ + ಇರಿಸಿ
೨. ಮುದ್ದಾಡಿದವಳು = ಮುದ್ದು + ಆಡಿದವಳು
೩. ತುತ್ತನಿತ್ತು = ತುತ್ತನು + ಇತ್ತು
೪. ಒಡಲಿಗನ್ನವುಣಿಸಿದವಳು = ಒಡಲಿಗೆ + ಅನ್ನ + ಉಣಿಸಿದವಳು

Click here to download Kannadamma lesson exercise