Kannadanudi grade V poem is written by Shri A K Rameshwara. He was born in Vadanuhatti village, Vijayapura District in Karnataka. Writer worked as a teacher. Shri A K Rameshwara received Karnataka State Award and a National award. He has written, poems, stories, dramas, essays and biographies for children. Here poet describes the richness of Karnataka.
Shri A K Rameshwara writes – Heart is filled with love in Kannada words and Kannada temple. Karnataka has a milk river, sugar sand and drops of honey. Punyakoti‘s life is described in our folk art.
Sanchihonnama‘s hadibadhedharma, Sharan’s Vachana Sahitya , Kannada daasavanis teach us life lessons. Kanadanudi kannada poem grade V CBSE.
ಕನ್ನಡನುಡಿ ಕವಿತೆಯನ್ನು ಶ್ರೀ ಎ ಕೆ ರಾಮೇಶ್ವರ ಬರೆದಿದ್ದಾರೆ. ಅವರು ಕರ್ನಾಟಕದ ವಿಜಯಪುರ ಜಿಲ್ಲೆಯ ವದನುಹಟ್ಟಿ ಗ್ರಾಮದಲ್ಲಿ ಜನಿಸಿದರು. ಅವರು ಶಿಕ್ಷಕರಾಗಿ ಕೆಲಸ ಮಾಡಿದರು. ಅವರು ಕರ್ನಾಟಕ ರಾಜ್ಯ ಪ್ರಶಸ್ತಿ ಮತ್ತು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು. ಅವರು ಮಕ್ಕಳಿಗಾಗಿ ಕವನಗಳು, ಕಥೆಗಳು, ನಾಟಕಗಳು, ಪ್ರಬಂಧಗಳು ಮತ್ತು ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಇಲ್ಲಿ ಕವಿ ಕರ್ನಾಟಕದ ಶ್ರೀಮಂತಿಕೆಯನ್ನು ವಿವರಿಸುತ್ತಾರೆ. ಶ್ರೀ ಎ ಕೆ ರಾಮೇಶ್ವರವರು ತಮ್ಮ ಕವನದಲ್ಲಿ, ಕನ್ನಡ ಪದಗಳು ಮತ್ತು ಕನ್ನಡ ದೇವಾಲಯದಲ್ಲಿ ಕನ್ನಡಿಗರ ಹೃದಯವು ಪ್ರೀತಿಯಿಂದ ತುಂಬಿದೆ ಎಂದು ಬರೆದಿದ್ದಾರೆ. ಕರ್ನಾಟಕವು ಹಾಲಿನ ನದಿ, ಸಕ್ಕರೆ ಮರಳು ಮತ್ತು ಜೇನುತುಪ್ಪದ ಹನಿಗಳನ್ನು ಹೊಂದಿದೆ. ನಮ್ಮ ಜನಪದ ಕಲೆಯಲ್ಲಿ ಪುಣ್ಯಕೋಟಿಯ ಬದುಕು ವರ್ಣಿತವಾಗಿದೆ. ಸಂಚಿಹೊನ್ನಮರ ಹದಿಬಧೆಧರ್ಮ, ಶರಣರ ವಚನ ಸಾಹಿತ್ಯ, ಕನ್ನಡ ದಾಸವಾಣಿಗಳು ನಮಗೆ ಬದುಕಿನ ಪಾಠ ಕಲಿಸುತ್ತವೆ.
ಕನ್ನಡನುಡಿ
ಅ) ಪದಗಳ ಅರ್ಥ : Word Meaning
ಅರಿ – ತಿಳಿ, ಗ್ರಹಿಸು ಅಮ್ರತ – ಪವಿತ್ರವಾದುದು
ಆಲಿಸು – ಮನಸ್ಸಿಟ್ಟು ಕೇಳು ಒಲುಮೆ – ಪ್ರೀತಿ
ಕಣಜ – ಧಾನ್ಯ ಸಂಗ್ರಹಣ ಸ್ಥಳ ಗುಡಿ – ದೇವಾಲಯ
ಚಿತ್ತ – ಮನಸ್ಸು ತಾಯಿನುಡಿ – ಮಾತೃಭಾಷೆ
ತಿರುಳು – ಸತ್ವ, ಸಾರ ತೊರೆ – ಚಿಕ್ಕಹೊಳೆ
ನನ್ನಿ – ಪ್ರೀತಿ, ಸತ್ಯ ನುಡಿ – ಭಾಷೆ
ಮಳಲು – ಮರಳು
ಆ) ʼಅʼ ಪಟ್ಟಿಯಿಂದ ʼಬʼ ಪಟ್ಟಿಯೊಂದಿಗೆ ಹೊಂದಿಸಿ ಬರೆಯಿರಿ: Match the following
ʼ ಅʼ ಪಟ್ಟಿ ʼಬʼ ಪಟ್ಟಿ ಉತ್ತರ
೧. ಪುಣ್ಯಕೋಟಿ ಅ) ಕೀರ್ತನೆಗಳು ಆ) ಗೋವು
೨. ಹದಿಬದೆಯಧರ್ಮ ಆ) ಗೋವು ಈ) ಸಂಚಿಹೊನ್ನಮ್ಮ
೩. ದಾಸರು ಇ) ವಚನಗಳು ಅ) ಕೀರ್ತನೆಗಳು
೪. ಶರಣರು ಈ) ಸಂಚಿಹೊನ್ನಮ್ಮ ಇ) ವಚನಗಳು
ಉ) ಹೃದಯದ ಒಲುಮೆ
ಭಾಷಾಭ್ಯಾಸ:
ಇ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. Write answer in one sentence
೧) ಕವಿ ತನ್ನ ಮಾತುಗಳನ್ನು ಹೇಗೆ ಆಲಿಸಬೇಕೆಂದು ಮಕ್ಕಳಿಗೆ ಕರೆ ನೀಡಿದ್ದಾರೆ?
ಉ: ಕವಿ ತನ್ನ ಮಾತುಗಳನ್ನು ಚಿತ್ತವನಿಟ್ಟು ಆಲಿಸಬೇಕೆಂದು ಮಕ್ಕಳಿಗೆ ಕರೆ ನೀಡಿದ್ದಾರೆ.
೨) ಕನ್ನಡದ ನುಡಿಯಲ್ಲಿ ಏನು ತುಂಬಿದೆ?
ಉ: ಕನ್ನಡದ ನುಡಿಯಲ್ಲಿ ಹೃದಯದ ಒಲುಮೆಯು ತುಂಬಿದೆ.
೩) ಜಾನಪದದಲ್ಲಿ ಮೂಡಿದ ಸತ್ಯದ ಬದುಕಿನ ಚರಿತ್ರೆ ಯಾವುದು?
ಉ: ಜಾನಪದದಲ್ಲಿ ಮೂಡಿದ ಸತ್ಯದ ಬದುಕಿನ ಚರಿತ್ರೆ ಪುಣ್ಯಕೋಟಿಯದು.
೪) ಹದಿಬದೆಯಧರ್ಮ ಗ್ರಂಥವನ್ನು ಬರೆದವರು ಯಾರು?
ಉ: ಹದಿಬದೆಯಧರ್ಮ ಗ್ರಂಥವನ್ನು ಬರೆದವರು ಸಂಚಿಹೊನ್ನಮ್ಮ.
೫) ಶರಣರು ರಚಿಸಿದ ಸಾಹಿತ್ಯ ಯಾವುದು?
ಉ: ಶರಣರು ರಚಿಸಿದ ಸಾಹಿತ್ಯ ವಚನಗಳು.
೬) ಕನ್ನಡದೊಲುಮೆಯ ಹವಳಗಳು ಯಾವುವು?
ಉ: ಕನ್ನಡದೊಲುಮೆಯ ಹವಳಗಳು ದಾಸರ ನುಡಿಗಳು.
೭) ʼಕನ್ನಡ ನುಡಿʼ ಕವಿತೆಯನ್ನು ಬರೆದ ಕವಿಯ ಹೆಸರು ಏನು?
ಉ: ʼಕನ್ನಡ ನುಡಿʼ ಕವಿತೆಯನ್ನು ಬರೆದ ಕವಿಯ ಹೆಸರು ಎ. ಕೆ. ರಾಮೇಶ್ವರ.
ಈ) ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. Write answer in two to three sentences.
೧) ಕನ್ನಡದ ನುಡಿಯಲ್ಲಿ ಏನೇನು ಅಡಗಿದೆ?
ಉ: ಕನ್ನಡದ ನುಡಿಯಲ್ಲಿ ಹೃದಯದ ಒಲುಮೆಯು ತುಂಬಿದೆ. ಹಾಲಿನ ತೊರೆಯು, ಸಕ್ಕರೆ ಮಳಲು
ಮತ್ತು ಜೇನಿನ ಹನಿಯು ಅಡಗಿದೆ.
೨) ಪುಣ್ಯಕೋಟಿ ಕಥೆಯು ಏನನ್ನು ತಿಳಿಸುತ್ತದೆ?
ಉ: ಪುಣ್ಯಕೋಟಿ ಕಥೆಯು ಸತ್ಯದ ಬದುಕಿನ ಚರಿತೆಯನ್ನು ತಿಳಿಸುತ್ತದೆ.
೩) ಕವಿಯು ಶರಣರ ವಚನಗಳನ್ನು ಏನೆಂದು ಬಣ್ಣಿಸಿದ್ದಾರೆ?
ಉ: ಕವಿಯು ಶರಣರ ವಚನಗಳನ್ನು ಬದುಕಿನ ಅಮ್ರತ ಕಣಜಗಳು ಎಂದು ಬಣ್ಣಿಸಿದ್ದಾರೆ.
೪) ದಾಸಸಾಹಿತ್ಯವನ್ನು ಕವಿ ಯಾವ ರೀತಿ ಬಣ್ಣಿಸಿದ್ದಾರೆ?
ಉ: ದಾಸಸಾಹಿತ್ಯವನ್ನು ಕವಿ ಕನ್ನಡದೊಲುಮೆಯ ಹವಳಗಳು ಎಂದು ಬಣ್ಣಿಸಿದ್ದಾರೆ.
೫) ʼಮಕ್ಕಳೆ ಕನ್ನಡ ಕಲಿಯಿರಿʼ ಎಂದು ಕವಿ ಏಕೆ ಒತ್ತಾಯಿಸುತ್ತಾರೆ?
ಉ: ಬದುಕಿನ ತಿರುಳನು ಅರಿಯಲು ʼಮಕ್ಕಳೆ ಕನ್ನಡ ಕಲಿಯಿರಿʼ ಎಂದು ಕವಿ ಒತ್ತಾಯಿಸುತ್ತಾರೆ.
ಉ) ಈ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಉಪಯೋಗಿಸಿರಿ. Make your own sentences
೧) ಚಿತ್ತ : ನಾನು ಪಾಠವನ್ನು ಚಿತ್ತವನಿಟ್ಟು ಕೇಳುತ್ತೇನೆ.
೨) ಒಲುಮೆ: ನನಗೆ ಕನ್ನಡದ ಬಗ್ಗೆ ಒಲುಮೆ ಇದೆ.
೩) ಜನಪದ: ಯಕ್ಷಗಾನ ಕರ್ನಾಟಕದ ಜನಪದ ಕಲೆ.
೪) ಕಣಜ: ನನ್ನ ಅಜ್ಜನ ಮನೆಯಲ್ಲಿ ಕಣಜ ಕೊಠಡಿ ಇತ್ತು.
೫) ತಿರುಳು: ವಚನದಲ್ಲಿ ಬದುಕಿನ ತಿರುಳು ಇದೆ.
ಊ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದ ಬರೆಯಿರಿ.
೧) ಮೂಡು X ಮುಳುಗು
೨) ಧರ್ಮ X ಅಧರ್ಮ
೩) ಅರಳು X ಮುದುಡು / ಬಾಡು
ಋ) ಈ ನುಡಿಯಲ್ಲಿ ಗೆರೆ ಹಾಕಿದ ಪ್ರಾಸ ಪದಗಳನ್ನು ಹುಡುಕಿ ಜೋಡಿಸಿ ಬರೆಯಿರಿ.
ಕನ್ನಡ ನುಡಿಯಲಿ ಕನ್ನಡ ಗುಡಿಯಲಿ
ಹೃದಯದ ಒಲುಮೆಯು ತುಂಬಿಹುದು
ಹಾಲಿನ ತೊರೆಯು ಸಕ್ಕರೆ ಮಳಲು
ಜೇನಿನ ಹನಿಯು ಅಲ್ಲಿಹುದು
ಎ) ಕೆಳಗಿನ ವಾಕ್ಯಗಳಲ್ಲಿ ದೋಷಯುಕ್ತ ಪದಗಳನ್ನು ಸರಿಪಡಿಸಿ ಬರೆಯಿರಿ.
೧) ಕನ್ನಡ ಎಡೆಯಲಿ ಕನ್ನಡ ಗಡಿಯಲಿ ಹೃದಯದ ಒಲುಮೆ.
ಉ: ಕನ್ನಡ ನುಡಿಯಲಿ ಕನ್ನಡ ಗುಡಿಯಲಿ ಹೃದಯದ ಒಲುಮೆ.
೨) ಪಾಪಕೋಟಿಯ ಬದುಕಿನ ಚರಿತೆಯು ಜನಪದದಲ್ಲಿ ಮೂಡಿಹುದು.
ಉ: ಪುಣ್ಯಕೋಟಿಯ ಬದುಕಿನ ಚರಿತೆಯು ಜನಪದದಲ್ಲಿ ಮೂಡಿಹುದು.
೩) ಬನ್ನಿರಿ ಮಕ್ಕಳೆ ಕನ್ನಡ ಕುಡಿಯುರಿ ಬದುಕಿನ ತಿರುಳನು ಅರಿಯುತ್ತ.
ಉ: ಬನ್ನಿರಿ ಮಕ್ಕಳೆ ಕನ್ನಡ ಕಲಿಯಿರಿ ಬದುಕಿನ ತಿರುಳನು ಅರಿಯುತ್ತ.
೪) ನಮ್ಮಯ ನಾಡಿನ ಪುಣ್ಯದ ಬೀಡಿನ ನಿನ್ನಯ ಕಥೆಯನು ಬರೆಯುತ್ತ.
ಉ: ನಮ್ಮಯ ನಾಡಿನ ಪುಣ್ಯದ ಬೀಡಿನ ನನ್ನಿಯ ಕಥೆಯನು ಬರೆಯುತ್ತ.
ಏ) ಈ ಪದಗಳನ್ನು ನಕಲು ಮಾಡಿ ಬರೆಯಿರಿ.
ಚಿತ್ತ ಸಕ್ಕರೆ ಪುಣ್ಯ ಅಮೃತ ನನ್ನಿ ಹೃದಯ ಒಲುಮೆ
ಚಿತ್ತ ಸಕ್ಕರೆ ಪುಣ್ಯ ಅಮೃತ ನನ್ನಿ ಹೃದಯ ಒಲುಮೆ
ಚಿತ್ತ ಸಕ್ಕರೆ ಪುಣ್ಯ ಅಮೃತ ನನ್ನಿ ಹೃದಯ ಒಲುಮೆ
ಐ) ಈ ಪದಗಳಿಗೆ ಏಕವಚನದ ರೂಪ ಬರೆಯಿರಿ.
ಬಹುವಚನ ಏಕವಚನ
೧) ಗುಡಿಗಳು ಗುಡಿ
೨) ತೊರೆಗಳು ತೊರೆ
೩) ಶರಣರು ಶರಣ
೪) ಹವಳಗಳು ಹವಳ