“Koodi balidare swarga sukha” means living together is happiness. Proverbs are equal to the Vedas It is said that if the Vedas are false, proverbs are not untrue. Proverbs are words of the experience of elders. Yes, there is love, care and security in living together. The proverb ‘If you live together, happiness is heaven’ says that there is happiness in living together.
One should live with intimacy, without hatred, jealousy, quarrels. Living together is not only for the entire family but also in our town, country and society. Home is the first lesson school. If we live together at home, it is easy to follow the rules and discipline of living together in the society, in the town, in the country. Life is safe here.
kudi balidare swarga sukha can be further explained to live together in many castes and different heritages in the society in which we live. Festivals and rituals are also different. We should participate together in all these festivals with friendship without prejudice, it is good to live together to face all difficulties and problems, hence Koodi balidare swarga sukha.

ಕೂಡಿ ಬಾಳಿದರೆ ಸ್ವರ್ಗ ಸುಖ

ಗಾದೆಗಳು ವೇದಗಳಿಗೆ ಸಮ. ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು. ಹೌದು ಕೂಡಿ ಬಾಳುವುದರಲ್ಲಿ ಪ್ರೀತಿ, ಕಾಳಜಿ ಮತ್ತು ಭದ್ರತೆಯು ಸಿಗುತ್ತದೆ. ‘ಕೂಡಿ ಬಾಳಿದರೆ ಸ್ವರ್ಗ ಸುಖʼ ಎಂಬ ಗಾದೆ ಒಗ್ಗಟ್ಟಾಗಿ ಬಾಳುವುದರಲ್ಲಿ ಸುಖವಿದೆ ಎಂದು ಹೇಳುತ್ತದೆ.

ದ್ವೇಷ, ಅಸೂಯೆ, ಜಗಳಗಳು ಇಲ್ಲದೆ, ಅನ್ಯೋನ್ಯತೆಯಿಂದ ಜೀವಿಸಬೇಕು. ಒಟ್ಟಿಗೆ ಬಾಳುವುದು ಮನೆಯ ಒಟ್ಟು ಕುಟುಂಬಕ್ಕೆ ಅಷ್ಟೇ ಅಲ್ಲದೇ, ನಮ್ಮ ಊರಲ್ಲಿ, ದೇಶದಲ್ಲಿ, ಸಮಾಜದಲ್ಲಿ ಕೂಡ ಒಗ್ಗಟ್ಟಾಗಿರಬೇಕು. ಮನೆಯೇ ಮೊದಲ ಪಾಠ ಶಾಲೆ. ಮನೆಯಲ್ಲಿ ನಾವು ಕೂಡಿ ಬಾಳಿದರೆ ಸಮಾಜದಲ್ಲಿ, ಊರಿನಲ್ಲಿ, ದೇಶದಲ್ಲಿ ಕೂಡಿ ಬಾಳುವ ನಿಯಮ ಪಾಲನೆ, ಶಿಸ್ತು ಪಾಲಿಸಲು ಸುಲಭ. ಇಲ್ಲಿ ಬದುಕು ಸುಭದ್ರವಾಗಿರುತ್ತದೆ.

ನಾವು ವಾಸಿಸುತ್ತಿರುವ ನಮ್ಮ ಸಮಾಜದಲ್ಲಿ ಅನೇಕ ಜಾತಿಮತಗಳು, ವಿವಿಧ ಪರಂಪರೆಗಳು ಇವೆ. ಹಾಗೇ ಹಬ್ಬಗಳು ಆಚರಣೆಗಳು ಬೇರೆ ಬೇರೆಯಾಗಿವೆ. ನಾವು ಒಟ್ಟಾಗಿ ಬೇಧಭಾವಗಳಿಲ್ಲದೆ, ಈ ಎಲ್ಲಾ ಹಬ್ಬಗಳಲ್ಲಿ ಸ್ನೇಹದಿಂದ ಭಾಗವಹಿಸಿಬೇಕು, ಎಲ್ಲಾ ತೊಂದರೆ, ಸಮಸ್ಯೆಗಳನ್ನು ಎದುರಿಸಲು ಕೂಡಿ ಬಾಳುವುದೇ ಒಳ್ಳೆಯದು.

Click here to download koodi balidare swarga sukha