Lalita kalegalu means fine Arts. India is a land of art, literature, dance. People express their happiness and sorrow through art. Painting, various types of dance, weaving, playing musical instruments, sculpture are all our fine arts. Lalita kalegalu have been cultivated in our country for generations.
Every state in India has its own style of art. In every village or tribe in India, people practice their own art, which is called folk art. These arts are very simple and colorful. They speak volumes about the rich heritage of India. Indian fine arts are also in great demand internationally. The colors used in paintings and the stories in them attract people’s attention. Madhubani of Bihar, Pathyachitra of Odisha, Nirmala style of Andhra Pradesh, etc. are examples of painting styles. It also includes making pots, making items for home decoration, making ornaments, weaving clothes, etc. Dance is also a part of the fine arts. Yakshagana of Karnataka, Bhangra of Punjab, Garbha of Gujarat, Bihu of Assam, Lawan of Maharashtra are examples of fine dances. These dances are performed for entertainment, to welcome the New Year, and at weddings. Since these are our heritage, it is our responsibility to promote and protect them.
Folk art, literature, music, and dance have seen development with the help of the government and some associations. The Government of India has established the Lalit Kala Academy in Delhi to protect and promote fine arts. Every year, the Lalit Kala Academy awards the best artists of the country. Our arts are our pride and it is our responsibility to make them famous all over the world.
ಲಲಿತ ಕಲೆಗಳು
ಭಾರತವು ಕಲೆ ಸಾಹಿತ್ಯ ನೃತ್ಯಗಳ ನಾಡು. ಜನ ಸಂತೋಷ ಮತ್ತು ದುಃಖಗಳನ್ನು ಕಲೆಗಳ ಮೂಲಕ ವ್ಯಕ್ತಪಡಿಸುತ್ತಾರೆ. ಚಿತ್ರಕಲೆ, ವಿವಿಧ ಪ್ರಕಾರದ ನೃತ್ಯಗಳು, ಬಟ್ಟೆ ನೇಯುವುದು, ಸಂಗೀತ ವಾದ್ಯಗಳನ್ನು ನುಡಿಸುವುದು, ಶಿಲ್ಪಕಲೆ ಇವೆಲ್ಲವು ನಮ್ಮ ಲಲಿತ ಕಲೆಗಳಾಗಿವೆ. ಇವು ತಲತಲಾಂತರಗಳಿಂದ ನಮ್ಮ ದೇಶದಲ್ಲಿ ಬೆಳೆದು ಬಂದಿದೆ.
ಭಾರತದ ಪ್ರತಿಯೊಂದು ರಾಜ್ಯವು ತನ್ನದೇ ಆದ ಶೈಲಿಯ ಕಲೆಗಳನ್ನು ಹೊಂದಿದೆ. ಭಾರತದ ಪ್ರತಿಯೊಂದು ಹಳ್ಳಿಗಳಲ್ಲಿ ಅಥವಾ ಬುಡಕಟ್ಟು ಜನಾಂಗದ ಜನರು ತಮ್ಮದೇ ಆದ ಕಲೆಗಳನ್ನು ಅಭ್ಯಾಸ ಮಾಡುತ್ತಾರೆ, ಅದನ್ನು ಜನಪದ ಕಲೆ ಎಂದು ಕರೆಯುತ್ತಾರೆ. ಈ ಕಲೆಗಳು ಬಹಳ ಸರಳ ಮತ್ತು ವರ್ಣಮಯವಾಗಿದೆ. ಇವುಗಳು ಭಾರತದ ಸಮೃದ್ಧ ಪರಂಪರೆಯ ಬಗ್ಗೆ ಸಾರಿಸಾರಿ ಹೇಳುತ್ತವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡಾ ಭಾರತದ ಲಲಿತ ಕಲೆಗಳಿಗೆ ಬಹಳ ಬೇಡಿಕೆ ಇದೆ. ಚಿತ್ರಕಲೆಗಳಲ್ಲಿ ಉಪಯೋಗಿಸುವ ಬಣ್ಣ ಮತ್ತು ಅವುಗಳಲ್ಲಿಯ ಕಥೆಗಳು ಜನಮನ ಆಕರ್ಷಿಸುತ್ತವೆ. ಬಿಹಾರದ ಮಧುಬನಿ, ಓಡಿಸಾದ ಪಾಠ್ಯಚಿತ್ರ, ಆಂಧ್ರಪ್ರದೇಶದ ನಿರ್ಮಲ ಶೈಲಿ ಇತ್ಯಾದಿ ಚಿತ್ರಕಲಾ ಶೈಲಿಗೆ ಉದಾಹರಣೆಯಾಗಿದೆ. ಕುಂಡ ಮಾಡುವುದು, ಮನೆ ಅಲಂಕಾರಕ್ಕೆ ವಸ್ತುಗಳ ತಯಾರಿಕೆ , ಒಡವೆಗಳ ತಯಾರಿಕೆ, ಬಟ್ಟೆ ನೇಯುವುದು, ಇತ್ಯಾದಿಗಳು ಕೂಡಾ ಒಳಗೊಂಡಿದೆ. ನೃತ್ಯಕಲೆ ಕೂಡಾ ಲಲಿತ ಕಲೆಗಳ ಭಾಗವಾಗಿದೆ. ಕರ್ನಾಟಕದ ಯಕ್ಷಗಾನ, ಪಂಜಾಬಿನ ಭಾಂಗಡಾ, ಗುಜರಾತ್ ನ ಗರ್ಭಾ, ಅಸ್ಸಾಂ ನ ಬಿಹು, ಮಹಾರಾಷ್ಟ್ರದ ಲಾವಣೆ ಲಲಿತ ನೃತ್ಯಗಳಿಗೆ ಉದಾಹರಣೆಯಾಗಿದೆ. ಈ ನೃತ್ಯಗಳನ್ನು ಮನರಂಜನೆಗಾಗಿ, ಹೊಸ ವರ್ಷದ ಸ್ವಾಗತಕ್ಕಾಗಿ, ಮದುವೆಗಳಲ್ಲಿ ಪ್ರದರ್ಶಿಸುತ್ತಾರೆ. ಇವು ನಮ್ಮ ಪರಂಪರೆಯಾಗಿರುವುದರಿಂದ ಇವುಗಳನ್ನು ಬೆಳಸಿ ರಕ್ಷಿಸುವುದು ನಮ್ಮ ಹೊಣೆ.
ಜನಪದ ಕಲೆ, ಸಾಹಿತ್ಯ, ಸಂಗೀತ, ನೃತ್ಯಗಳು ಸರ್ಕಾರ ಮತ್ತು ಕೆಲವು ಸಂಘಗಳ ಸಹಾಯದಿಂದ ಅಭಿವೃದ್ಧಿಯನ್ನು ಕಂಡಿದೆ. ಲಲಿತ ಕಲೆಗಳನ್ನು ಸ೦ರಕ್ಷಿಸಿ ಬೆಳಸುವುದಕ್ಕಾಗಿ ಭಾರತ ಸರ್ಕಾರವು ಲಲಿತ ಕಲಾ ಅಕಾಡೆಮಿಯನ್ನು ದೆಹಲಿಯಲ್ಲಿ ಸ್ಥಾಪಿಸಿದೆ. ಪ್ರತಿ ವರ್ಷ ರಾಷ್ಟ್ರದ ಅತ್ಯುನ್ನತ ಕಲಾಕಾರರನ್ನು ಗುರುತಿಸಿ ಲಲಿತ ಕಲಾ ಅಕಾಡೆಮಿ ಬಹುಮಾನವನ್ನು ನೀಡುತ್ತದೆ. ನಮ್ಮ ಕಲೆಗಳು ನಮ್ಮ ಹೆಮ್ಮೆ ಇವುಗಳನ್ನು ಜಗತ್ತಿನಾದ್ಯಂತ ಪ್ರಸಿದ್ಧಿ ಪಡಿಸುವುದು ನಮ್ಮ ಹೊಣೆ.
ಸುಮನಾ ಶ್ರೀರಾಮ್
Click here to download lalitha kalegalu kannada essay for 10th grade