“Maggada Saheba” story written by Bagalodi Devaraya, is about Abdul Rahim Saheba. Maggada Saheba means the owner of weaving. Abdul Rahim Saheb’s family used to be weavers and were once wealthy, but Abdul Raheem stopped weaving for over 20 years. This was because the British brought cheap clothes to India, which caused many Indian weavers to suffer.
Ghandiji encouraged some schools to introduce a “Modern Education System,” which focused on teaching children skills. One of these skills was weaving. Abdul Rahim’s son, Karim, learned weaving very well and earned Rs 100 and a silver coin from the government for his skill. However, this made Maggada Saheba, Abdul Rahim unhappy because he wanted his son to get a government job instead.
Writer continues to write in Maggada Saheba, In a school play, Kareem acted as a female character. He took a saree and a golden necklace from his mother and ran away. After a few years, Karim returned, but his father, Abdul Rahim, did not accept him. The headmaster, Shankrappa, tried to convince Abdul Raheem, but it didn’t work. Many years later, when Abdul Rahim was unwell, he found out that his son had become successful, wealthy, and had even received the prestigious Padma Bhushan award. So he became Maggada Saheba.
ಬಾಗಲೋಡಿ ದೇವರಾಯರು ಬರೆದ “ಮಗ್ಗದ ಸಾಹೇಬ” ಕಥೆಯು ಅಬ್ದುಲ್ ರಹೀಮ್ ಸಾಹೇಬರನ್ನು ಕುರಿತದ್ದು. ಮಗ್ಗದ ಸಾಹೇಬ ಎಂದರೆ ಮಗ್ಗದ ಒಡೆಯ ಎಂದರ್ಥ. ಅಬ್ದುಲ್ ರಹೀಮ್ ಸಾಹೇಬ್ ಅವರ ಕುಟುಂಬವು ನೇಕಾರರಾಗಿದ್ದರು ಮತ್ತು ಒಂದು ಕಾಲದಲ್ಲಿ ಶ್ರೀಮಂತರಾಗಿದ್ದರು. ಆದರೆ ಅಬ್ದುಲ್ ರಹೀಮ್ ನೇಯ್ಗೆಯನ್ನು 20 ವರ್ಷಗಳಿಂದ ನಿಲ್ಲಿಸಿದರು. ಏಕೆಂದರೆ ಬ್ರಿಟಿಷರು ಭಾರತಕ್ಕೆ ಅಗ್ಗದ ಬಟ್ಟೆಗಳನ್ನು ತಂದರು. ಇದು ಅನೇಕ ಭಾರತೀಯ ನೇಕಾರರಿಗೆ ಪೆಟ್ಟು ಕೊಟ್ಟಿತು.
ಗಾಂಧೀಜಿ ಕೆಲವು ಶಾಲೆಗಳಿಗೆ “ನವೀನ ಶಿಕ್ಷಣ ವ್ಯವಸ್ಥೆ” ಯನ್ನು ಪರಿಚಯಿಸಲು ಪ್ರೋತ್ಸಾಹಿಸಿದರು, ಇದು ಮಕ್ಕಳಿಗೆ ಕರ ಕೌಶಲ್ಯಗಳನ್ನು ಕಲಿಸಲು ಕೇಂದ್ರೀಕರಿಸಿತು. ಈ ಕೌಶಲ್ಯಗಳಲ್ಲಿ ಒಂದು ನೇಯ್ಗೆ ಆಗಿತ್ತು. ಅಬ್ದುಲ್ ರಹೀಮ್ ಅವರ ಮಗ ಕರೀಂ ನೇಯ್ಗೆಯನ್ನು ಚೆನ್ನಾಗಿ ಕಲಿತು ತನ್ನ ಕೌಶಲ್ಯಕ್ಕಾಗಿ ಸರ್ಕಾರದಿಂದ 100 ರೂಪಾಯಿ ಮತ್ತು ಬೆಳ್ಳಿ ನಾಣ್ಯವನ್ನು ಗಳಿಸಿದನು. ಆದರೆ, ಇದು ಅಬ್ದುಲ್ ರಹೀಮ್‌ಗೆ ಅಸಮಾಧಾನ ತಂದಿತು. ಏಕೆಂದರೆ ಅವರ ಮಗ ಸರ್ಕಾರಿ ಉದ್ಯೋಗ ಮಾಡಬೇಕು ಎಂಬುದು ಅವರ ಆಸೆಯಾಗಿತ್ತು.
ಶಾಲೆಯ ನಾಟಕವೊಂದರಲ್ಲಿ ಕರೀಂ ಸ್ತ್ರೀ ಪಾತ್ರದಲ್ಲಿ ನಟಿಸಿದ್ದನು. ನಾಟಕ ಮುಗಿದ ಮೇಲೆ ತಾಯಿಯ ಸೀರೆ ಹಾಗೂ ಚಿನ್ನದ ಸರ ತೆಗೆದುಕೊಂಡು ಓಡಿ ಹೋದನು. ಕೆಲವು ವರ್ಷಗಳ ನಂತರ, ಕರೀಮ್ ಹಿಂತಿರುಗಿದನು, ಆದರೆ ಅವನ ತಂದೆ ಅಬ್ದುಲ್ ರಹೀಮ್ ಅವನನ್ನು ಸ್ವೀಕರಿಸಲಿಲ್ಲ. ಮುಖ್ಯಶಿಕ್ಷಕ ಶಂಕ್ರಪ್ಪ ಅಬ್ದುಲ್ ರಹೀಂ ಮನವೊಲಿಸಲು ಯತ್ನಿಸಿದರಾದರೂ ಫಲಕಾರಿಯಾಗಲಿಲ್ಲ. ಹಲವು ವರ್ಷಗಳ ನಂತರ, ಅಬ್ದುಲ್ ರಹೀಮ್ ಅಸ್ವಸ್ಥನಾಗಿದ್ದಾಗ, ತನ್ನ ಮಗ ಯಶಸ್ವಿಯಾಗಿದ್ದಾನೆ, ಶ್ರೀಮಂತನಾಗಿದ್ದಾನೆ ಮತ್ತು ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನು ಸಹ ಪಡೆದಿದ್ದಾನೆ ಎಂದು ಅವರು ಅರಿತರು. ತುಂಬಾ ಖುಷಿಪಟ್ಟರು.
ಮಗ್ಗದ ಸಾಹೇಬ
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
೧. ರಹೀಮ ಮಗ್ಗವನ್ನು ಮುಟ್ಟದೆ ಎಷ್ಟು ವರ್ಷಗಳಾಗಿತ್ತು?
ಉ: ರಹೀಮ ಮಗ್ಗವನ್ನು ಮುಟ್ಟದೆ ಇಪ್ಪತ್ತು ವರ್ಷಕ್ಕೂ ಹೆಚ್ಚಾಗಿತ್ತು.
೨. ಹುಸೇನ್ ಸಾಹೇಬರ ಮನೆತನದವರಿಗೆ ದೇವಾಲಯದಲ್ಲಿದ್ದ ಹಕ್ಕು ಯಾವುದು?
ಉ:ರಥೋತ್ಸವ ಸಮಯದಲ್ಲಿ ಹುಸೇನ್ ಸಾಹೇಬರ ಮನೆತನದವರಿಗೆ ದೇವಾಲಯದಲ್ಲಿ ಎಲ್ಲರಿಗಿಂತ ಮೊದಲು ಪ್ರಸಾದ ಪಡೆಯುವ ಹಕ್ಕಿತ್ತು.
೩. ಅಬ್ದುಲ್ ರಹೀಮನ ಹಠವೇನು?
ಉ:ತನ್ನ ಮೂವರು ಗಂಡುಮಕ್ಕಳಿಗೆ ಒಂದಿಷ್ಟಾದರೂ ವಿದ್ಯಾಭ್ಯಾಸ ಕೊಡಿಸಿ ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂಬುದು ಅಬ್ದುಲ್ ರಹೀಮನ ಹಠವಾಗಿತ್ತು.
೪. ತಂದೆಯ ಆಸೆಯನ್ನು ಮೊದಲೆರಡು ಮಕ್ಕಳು ನೆರವೇರಿಸಿದ ಬಗೆ ಹೇಗೆ?
ಉ:ತಂದೆಯ ಆಸೆಯನ್ನು ಮೊದಲೆರಡು ಮಕ್ಕಳು ಒಬ್ಬ ಸರಕಾರಿ ಕಛೇರಿಯಲ್ಲಿ ಗುಮಾಸ್ತನಾಗಿ, ಮತ್ತೊಬ್ಬ ಪೋಸ್ಟ್ ಮಾಸ್ಟರನಾಗಿ ನೆರವೇರಿಸಿದರು.
೫. ರಹೀಮ ಮಗನನ್ನು ಶಾಲೆಯಿಂದ ಬಿಡಿಸಿದ್ದೇಕೆ?
ಉ: ರಹೀಮ ಮಗ್ಗದ ಹುಚ್ಚನ್ನು ಬಿಡಿಸಲು ಮಗನನ್ನು ಶಾಲೆಯಿಂದ ಬಿಡಿಸಿದನು.
ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
೧. ಹುಸೇನ್ ಸಾಹೇಬರ ವ್ಯಕ್ತಿತ್ವವನ್ನು ವಿವರಿಸಿರಿ.
ಉ: ಹುಸೇನ್ ಸಾಹೇಬರು ಮುಸಲ್ಮಾನರು. ಆದರೆ ಅವರು ರಥೋಥ್ಸವದಲ್ಲಿ ಮೊದಲು ಪ್ರಸಾದ ತೆಗೆದುಕೊಳ್ಳುತ್ತಿದ್ದರು. ಹುಸೇನ್ ಸಾಹೇಬರು ಬರೀ ಮಸೀದಿ ಅಲ್ಲ, ದೇವಾಲಯಗಳನ್ನು ಕಟ್ಟಿದ್ದಾರೆ.
೨. ಲೇಖಕರ ಹುಟ್ಟೂರಿನಲ್ಲಿದ್ದ ಮುಸ್ಲಿಂ ಧಾರ್ಮಿಕ ಉತ್ಸವದ ಸಂಪ್ರದಾಯವೇನು?
ಉ: ಲೇಖಕರ ಊರಿನಲ್ಲಿ ʼಉರ್ಸ್ʼ ಎಂಬ ಮುಸಲ್ಮಾನ ಧಾರ್ಮಿಕ ಉತ್ಸವ ನಡೆಯುತ್ತಿತ್ತು. ಆಗ ಲೇಖಕರ ಮನೆತನದ ಪ್ರತಿನಿಧಿ ಇದ್ದೇ ಇರಬೇಕು ಎಂಬ ಸಂಪ್ರದಾಯವಿತ್ತು.
೩. ಮಿಠಾಯಿ ಕೊಟ್ಟಿದ್ದಕ್ಕೆ ಅತಿಥಿಗಳ ಆಕ್ಷೇಪವೇನು?
ಉ: ಒಂದು ಬಾರಿ ಲೇಖಕರ ತಾಯಿ ಅನಾರೋಗ್ಯದಲ್ಲಿದ್ದರು. ಆಗ ಅವರ ತಂದೆ ಅಂಗಡಿಯಿಂದ ಲಡ್ಡುಗಳನ್ನು ಖರೀದಿ ಮಾಡಿದರು. ಇದಕ್ಕೆ ಅತಿಥಿಗಳು ʼರಾಯರೇ, ನಮಗೆ ಅಂಗಡಿಯಿಂದ ಮಿಠಾಯಿ ಖರೀದಿ ಮಾಡಲು ಹಣವಿಲ್ಲವೇ?ʼ ಎಂದು ಸಿಟ್ಟು ಮಾಡಿದರು.
೪. ಕರೀಮನಿಗೆ ಶಾಲೆಯಲ್ಲಿ ಮಗ್ಗ ಕಲಿತುದರಿಂದ ಆದ ಪ್ರಯೋಜನವೇನು?
ಹುಡುಗ ಕರೀಮನು ಶಾಲೆಯಲ್ಲಿ ಮಗ್ಗದ ಕೆಲಸವನ್ನು ಕಲಿತು ನಿಪುಣನಾದನು. ಅವನು ತನ್ನ ನಿಪುಣತೆ ಮತ್ತು ಕೌಶಲ್ಯದಿಂದ ಶಾಲೆಯಲ್ಲಿ ಮಗ್ಗದಲ್ಲಿ ಪರಿವರ್ತನೆ ತಂದನು. ಇದರಿಂದ ಸರಕಾರದಿಂದ ಅವನಿಗೆ ಬೆಳ್ಳಿಯ ಪದಕವು ಮತ್ತು ನೂರು ರೂಪಾಯಿ ಬಹುಮಾನ ದೊರಕಿತು.
೫. ಶಾಲೆಯ ವಾರ್ಷಿಕೋತ್ಸವದಂದು ಕರೀಮ ಮಾಡಿದ ಕೆಲಸವೇನು?
ಉ: ಶಾಲೆಯ ವಾರ್ಷಿಕೋತ್ಸವದ ನಾಟಕದಲ್ಲಿ ಕರೀಮನದು ಸ್ತ್ರೀಪಾತ್ರ. ಅದಕ್ಕೆ ಅವನು ತಾಯಿಯ ಹಳೆಕಾಲದ ಚಿನ್ನದ ಸರ ತೆಗೆದುಕೊಂಡಿದ್ದ. ನಾಟಕ ಮುಗಿದ ನಂತರ ಅವನು ಸರವನ್ನು ತೆಗೆದುಕೊಂಡು ಮನೆಗೆ ಬರದೇ ಓಡಿಹೋದನು.
ಇ. ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು – ಐದು ವಾಕ್ಯಗಳಲ್ಲಿ ಉತ್ತರಿಸಿ.
೧. ನವೀನ ಶಿಕ್ಷಣದ ವೈಶಿಷ್ಟ್ಯತೆ ?
ಮಹಾತ್ಮ ಗಾಂದೀಜಿಯವರ ಪ್ರೇರಣೆಯಿಂದ ಶಾಲೆಯಲ್ಲಿ ನವೀನ ಶಿಕ್ಷಣ ಆರಂಭಿಸಿದರು. ಇದರಲ್ಲಿ ಹಲವು ಉದ್ಯೋಗದ ಶಿಕ್ಷಣವನ್ನು ಕೊಡುತ್ತಿದ್ದರು. ಅದರಲ್ಲಿ, ಹಸ್ತಕೌಶಲವನ್ನು ಮತ್ತು ದೇಹಶ್ರಮದ, ಗೌರವಭಾವ ಉಂಟುಮಾಡುವ ಶಿಕ್ಷಣವಿತ್ತು. ಬಡಗಿಯ ಕೆಲಸ, ಬೆತ್ತದ ಕುರ್ಚಿ ಮಾಡುವುದು, ಕೃಷಿ, ಮಗ್ಗದ ಶಿಕ್ಷಣ ಇತ್ಯಾದಿಗಳು ವೈಶಿಷ್ಟಗಳಾಗಿದ್ದವು.
೨. ಶಂಕರಪ್ಪ ಅವರು ರಹೀಮನ ಬಳಿಗೆ ಸಂಧಾನಕ್ಕೆ ಬಂದ ಪ್ರಸಂಗ ತಿಳಿಸಿ .
ಶಂಕರಪ್ಪನವರು ರಹೀಮನ ಜೊತೆ ಒಂದು ಗಂಟೆ ಗೋಗರೆದರು, ಕರೆದರು, ನಿವೇದಿಸಿದರು, ತರ್ಕಿಸಿದರು, ಚರ್ಚಿಸಿದರು. ಆದರೆ ರಹೀಮ್ ಇವರ ಒಂದು ಪದವು ಕೇಳಲಿಲ್ಲ. ”ನನ್ನ ಕೀರ್ತಿಗೆ ಮಸಿ ಹಚ್ಚಿದ್ದಾನೆ. ನೀವು ಕಲಿಸಿದ ಪಾಠದಿಂದ ಅವನು ಹಠಮಾರಿ ಆಗಿದ್ದಾನೆ. ನಮ್ಮ ವಂಶದ ಕೀರ್ತಿ ಮಣ್ಣು ಪಾಲಾಗಿದೆ. ಅವನು ತಂದಿರುವ ಹಣ, ಕಳವಿನ ಹಣವೋ? ದರೋಡೆಯ ಹಣವೋ?” ಎಂದು ಸಿಟ್ಟು ಮಾಡಿದರು. ಇದಕ್ಕೆ ಶಂಕರಪ್ಪರವರು ಮುಖ ಬಾಡಿಸಿಕೊಂಡು ಹಿಂತೆರಳಿದರು.
ಈ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
೧. ಕರೀಮ ಧನವಂತನಾದ ಬಗೆ ಹೇಗೆ? ವಿವರಿಸಿ.
ಉ: ಕರೀಮನು ಶಾಲಾ ವಾರ್ಷಿಕೋತ್ಸವದ ದಿನ ತನ್ನ ತಾಯಿಯ ಚಿನ್ನದ ಸರದೊಂದಿಗೆ ಮನೆ ಬಿಟ್ಟು ಹೋದನು. ಕರೀಮ ಸಣ್ಣ ಪ್ರಾಯದಲ್ಲೇ ಮಗ್ಗದ ಸಹಕಾರಿ ಸಂಘವೊಂದನ್ನು ಸ್ಥಾಪಿಸಿ, ಅದರ ಅಧ್ಯಕ್ಷನಾಗಿದನು. ಮಗ್ಗದ ಯಂತ್ರದ ಪ್ರಯೋಗದಲ್ಲಿ ಹೊಸಹೊಸ ಸುಧಾರಣೆ ಪರಿವರ್ತನೆಗಳನ್ನು ತಂದು ಹೆಸರು ಮಾಡಿದನು. ಇದರಿಂದಾಗಿ ಆತನು ಸಾಕಷ್ಟು ಧನವಂತನೂ,ಯಶಸ್ವಿಯೂ ಆಗಿ ಪ್ರಖ್ಯಾತನಾಗಿದ್ದನು. ಕೊನೆಗೆ ಅವನು ಭಾರತ ಸರ್ಕಾರದಿಂದ “ಪದ್ಮಭೂಷಣ” ಪ್ರಶಸ್ತಿಗೆ ಪಾತ್ರನಾದನು. ಅವನ ಭಾವಚಿತ್ರ ಪತ್ರಿಕೆಯಲ್ಲಿ ಪ್ರಕಟವಾಯಿತು.
೨. ರಹೀಮನಿಗೆ ಮಗ್ಗದ ಬಗ್ಗೆ ದ್ವೇಷ ಉಂಟಾಗಲು ಕಾರಣವೇನು?
ಉ: ಮಗ್ಗದ ಸಾಹೇಬ ಅಂದರೆ ಅಬ್ದುಲ್ ರಹೀಮ್ ಸಾಹೇಬ್. ಅವನು ಮಗ್ಗವನ್ನು ಮುಟ್ಟದೆ ಇಪ್ಪತ್ತು ವರ್ಷಕ್ಕೂ ಹೆಚ್ಚಾಗಿದ್ದರೂ ಸಹ ಊರಿನ ಜನರು ಅವನನ್ನು ಮಗ್ಗದ ಸಾಹೇಬನೆಂದೇ ಕರೆಯುತ್ತಿದ್ದರು. ಇದರಿಂದ ಅಬ್ದುಲ್ ರಹೀಮ್‌ನಿಗೆ ಬಹು ಸಿಟ್ಟು ಬರುತ್ತಿತ್ತು. ಅವನ ಅಜ್ಜನ ಕಾಲದಲ್ಲಿ ಬ್ರಿಟಿಷರು ಅಗ್ಗದ ವಿಲಾಯತಿ ಮಿಲ್ಲಿನ ಬಟ್ಟೆಗಳನ್ನು ನಮ್ಮ ದೇಶದಲ್ಲಿ ಹೇರಿಬಿಟ್ಟರು. ಒಂದು ವರ್ಷದೊಳಗೇ ಆ ಬಟ್ಟೆಗಳು ಕಳೇಬರಹಗಳಾಗಿ ಹರಕು ಚಿಂದಿಯಾಗುವುವು. ಬಣ್ಣವೋ ಒಂದೇ ತಿಂಗಳಲ್ಲಿ ಮಾಯವಾಗುತ್ತಿತ್ತು. ಆದರೆ ಅದು ಬಹು ಅಗ್ಗ. ಜನರಿಗೆ ಬೇಕಾದುದು ಅಗ್ಗದ ವಸ್ತುವಾಗಿತ್ತು. ಹಾಗಾಗಿ ಅಗ್ಗದ ಬಟ್ಟಯದೇ ಆಧಿಪತ್ಯವಾಗಿತ್ತು. ಮಗ್ಗದವರು ಭಿಕಾರಿಗಳಾದರು. ಅವರ ಅನ್ನಕ್ಕೆ ಸಂಚಕಾರವಾಯಿತು. ಅದಕ್ಕೆ ರಹೀಮನಿಗೆ ಮಗ್ಗದ ಬಗ್ಗೆ ದ್ವೇಷ ಉಂಟಾಗಲು ಕಾರಣ.
ಉ. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
೧. “ಮಗ್ಗವಲ್ಲ ಕೊರಳಿಗೆ ಹಗ್ಗ”
ಆಯ್ಕೆ: ಈ ವಾಕ್ಯವನ್ನು ಬಾಗಲೋಡಿ ದೇವರಾಯರು ರಚಿಸಿರುವ “ಸಮಗ್ರ ಕಥೆಗಳು” ಎಂಬ ಕಥಾಸಂಕಲನದಿಂದ “ಮಗ್ಗದ ಸಾಹೇಬ” ಎಂಬ ಗದ್ಯವನ್ನು ಆಯ್ದುಕೊಳ್ಳಲಾಗಿದೆ.
ಸಂದರ್ಭ: ಈ ಮೇಲಿನ ವಾಕ್ಯವನ್ನು ಅಬ್ದುಲ್ ರಹೀಮ್ ತನ್ನನ್ನು ಯಾರಾದರೂ ಮಗ್ಗದ ಸಾಹೇಬ್ ಎಂದು ಕರೆದರೆ ಸಿಟ್ಟಿನಿಂದ ಹೇಳುತ್ತಿದ್ದರು. ಮಗ್ಗದ ಕೆಲಸ ನಿಂತು, ಅದರಲ್ಲಿ ಸಂಪಾದನೆ ಇಲ್ಲದೆ, ಊಟಕ್ಕೂ ಕಷ್ಟ ಪಡಬೇಕಾಗಿ, ಎಲ್ಲರೂ ಸಾಯುವ ಸ್ಥಿತಿಗೆ ಬಂದಿದ್ದರು ಎಂಬುದು ಇಲ್ಲಿನ ಸಂದರ್ಭ.
ಸ್ವಾರಸ್ಯ: ಅಗ್ಗದ ವಿಲಾಯತಿ ಮಿಲ್ಲಿನ ಬಟ್ಟೆಗಳನ್ನು ನಮ್ಮ ದೇಶದಲ್ಲಿ ಹೇರಿಬಿಟ್ಟರು. ಅದು ಒಂದು ವರ್ಷದೊಳಗೆ ಹರಿದು ಹೋಗುತ್ತಿತ್ತು. ಆದರೆ ಇದು ಬಹು ಅಗ್ಗ. ಹಾಗಾಗಿ ಜನರು ಇದನ್ನು ತೆಗೆದುಕೊಳ್ಳುತ್ತಿದ್ದರು.ಹೀಗೆ ನಮ್ಮ ದೇಶದ ಮಗ್ಗಗಳು ಮುಚ್ಚಿದವು ಎಂಬುದು ಸ್ವಾರಸ್ಯ.
೨. “ಕಳ್ಳನಾದವನು ಮನೆ ಬಿಟ್ಟು ಓಡಿ ಹೋದವನು ಮಗನೇ ಅಲ್ಲ”
ಆಯ್ಕೆ: ಈ ವಾಕ್ಯವನ್ನು ಬಾಗಲೋಡಿ ದೇವರಾಯರು ರಚಿಸಿರುವ “ಸಮಗ್ರ ಕಥೆಗಳು” ಎಂಬ ಕಥಾಸಂಕಲನದಿಂದ “ಮಗ್ಗದ ಸಾಹೇಬ” ಎಂಬ ಗದ್ಯವನ್ನು ಆಯ್ದುಕೊಳ್ಳಲಾಗಿದೆ.
ಸಂದರ್ಭ:ಶಾಲೆಯ ವಾರ್ಷಿಕೋತ್ಸವದ ನಾಟಕದಲ್ಲಿ ಕರೀಮನದು ಸ್ತ್ರೀಪಾತ್ರ. ಅದಕ್ಕೆ ಅವನು ತಾಯಿಯ ಹಳೆಕಾಲದ ಚಿನ್ನದ ಸರ ತೆಗೆದುಕೊಂಡಿದ್ದ. ನಾಟಕ ಮುಗಿದ ನಂತರ ಅವನು ಸರವನ್ನು ತೆಗೆದುಕೊಂಡು ಮನೆಗೆ ಬರದೇ ಓಡಿಹೋದನು. ಆ ಸಂದರ್ಭದಲ್ಲಿ ರಹೀಮ್ ನು ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ: ಕರೀಮನ ಹಠ, ನಡವಳಿಕೆಯ ಬಗ್ಗೆ ಅವನ ತಂದೆಗಿದ್ದ ಸಿಟ್ಟು ಈ ಮಾತಿನಲ್ಲಿ ಸ್ವಾರಸ್ಯವಾಗಿ ಮೂಡಿ ಬಂದಿದೆ.
೩.“ನಿಮ್ಮ ಹಳೆಯ ಶಿಷ್ಯನಿಗೆ ಇದೊಂದು ಉಪಕಾರ ಮಾಡಿ”
ಆಯ್ಕೆ: ಈ ವಾಕ್ಯವನ್ನು ಬಾಗಲೋಡಿ ದೇವರಾಯರು ರಚಿಸಿರುವ “ಸಮಗ್ರ ಕಥೆಗಳು” ಎಂಬ ಕಥಾಸಂಕಲನದಿಂದ “ಮಗ್ಗದ ಸಾಹೇಬ” ಎಂಬ ಗದ್ಯವನ್ನು ಆಯ್ದುಕೊಳ್ಳಲಾಗಿದೆ.
ಸಂದರ್ಭ: ಕರಿಮನು ಹತ್ತುಸಾವಿರ ರೂಪಾಯಿ ಮತ್ತು ತಾಯಿಯ ಸರದೊಂದಿಗೆ ಮನೆಗೆ ಬಂದಾಗ ಆತನ ತಂದೆ ಅವನನ್ನು ಮನೆಗೆ ಸೇರಿಸದೆ ಬಾಗಿಲು ಮುಚ್ಚಿದರು. ಆಗ ಕರಿಮನು ಶಂಕರಪ್ಪ ಮಾಸ್ತರರ ಬಳಿ ಹೋಗಿ ತನ್ನ ತಂದೆಯೊಡನೆ ಸಂಧಾನ ಮಾಡಿಸಿರಿ ಎಂದು ಕೇಳಿಕೊಳ್ಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ: ಇಲ್ಲಿ ಕರೀಮನ ಸಾಧನೆ, ತಂದೆ ತಾಯಿಯರ ಮೇಲಿನ ಪ್ರೀತಿ, ಶಂಕರಪ್ಪ ಮಾಸ್ತರರಲ್ಲಿ ವಿನಂತಿಸಿಕೊಳ್ಳುವ ರೀತಿ ಈ ವಾಕ್ಯದಲ್ಲಿ ಸ್ವಾರಸ್ಯವಾಗಿ ಮೂಡಿಬಂದಿದೆ.
೪. “ದೇವರು ದೊಡ್ಡವನು, ದೇವರು ದಯಾಳು”
ಆಯ್ಕೆ: ಈ ವಾಕ್ಯವನ್ನು ಬಾಗಲೋಡಿ ದೇವರಾಯರು ರಚಿಸಿರುವ “ಸಮಗ್ರ ಕಥೆಗಳು” ಎಂಬ ಕಥಾಸಂಕಲನದಿಂದ “ಮಗ್ಗದ ಸಾಹೇಬ” ಎಂಬ ಗದ್ಯವನ್ನು ಆಯ್ದುಕೊಳ್ಳಲಾಗಿದೆ.
ಸಂದರ್ಭ: ಪತ್ರಿಕೆಯಲ್ಲಿ ಕರೀಮನಿಗೆ ರಾಷ್ಟ್ರಪತಿಯವರು ಪದ್ಮಭೂಷಣ ಬಿರುದನ್ನು ಕೊಟ್ಟಿರುವ ವಿಷಯವನ್ನು ಶಂಕರಪ್ಪ ಮಾಸ್ತರರು ನೋಡಿದರು. ಅವರು ಅದನ್ನು ರಹೀಮ್ ನಿಗೆ ಹೇಳಿದರು. ರಹೀಮ್ ನು ಸಂತೋಷದಿಂದ ಹೆಮ್ಮೆಪಡುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ: ರಹೀಮ್ ನು ತನ್ನ ಮಗ ಕರೀಮನ ಬಗ್ಗೆ ಕೆಟ್ಟ ಅಭಿಪ್ರಾಯ ಹೊಂದಿದ್ದನು. ತನ್ನ ಮಗನ ಸಾಧನೆಯನ್ನು ಕೇಳಿ, ಅವನ ಬಗ್ಗೆ ಹೆಮ್ಮೆ ಉಂಟಾಗಿದ್ದು ಈ ಮಾತಿನಲ್ಲಿ ಸ್ವಾರಸ್ಯ ಪೂರ್ಣವಾಗಿದೆ.
ಊ. ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ತುಂಬಿರಿ.
೧. ಅಬ್ದುಲ್ ರಹೀಮನಿಗೆ ಮಗ್ಗದ ಸಾಹೇಬ ಎಂದು ಹೇಳಿದರೆ ಬಹು ಸಿಟ್ಟು ಬರುತ್ತಿತ್ತು.
೨. ಮನೆಯಲ್ಲಿ ಊಟಕ್ಕೆ ಇದೆಯೋ ಇಲ್ಲವೋ ಎಂಬಂತಾಗಿದೆ
೩. ಹುಡುಗನ ಉತ್ಸಾಹ ಆಕಾಶಕ್ಕೇರಿತು.
೪. ಶಂಕರಪ್ಪ ಅವರು ಮುಖಬಾಡಿಸಿಕೊಂಡು ಹಿಂತೆರಳಿದರು.
೫. ನನಗೆ ಎರಡೇ ಮಕ್ಕಳು ಕಳ್ಳರ ಪರಿಚಯ ನನಗಿಲ್ಲ.
ಅಭ್ಯಾಸ ಚಟುವಟಿಕೆ
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.
೧. ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಎಷ್ಟು ಅಕ್ಷರಗಳಿವೆ? ಅವುಗಳನ್ನು ಹೇಗೆ ವರ್ಗೀಕರಿಸುವಿರಿ? ವಿವರಿಸಿ.
ಉ: ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳೆಂದರೆ ೪೯. ಅವುಗಳನ್ನು ‘ಸ್ವರ, ಯೋಗವಾಹಕ ಮತ್ತು ವ್ಯಂಜನ’ ಎಂಬ ಮೂರು ಭಾಗಳಾಗಿ ವರ್ಗೀಕರಿಸಬಹುದು.
೨. ಕನ್ನಡ ವರ್ಣಮಾಲೆಯಲ್ಲಿರುವ ಹ್ರಸ್ವ ಹಾಗೂ ದೀರ್ಘ ಸ್ವರಗಳನ್ನು ಬರೆಯಿರಿ.
ಉ: ಹ್ರಸ್ವಸ್ವರಗಳು – ಅ, ಇ, ಉ, ಋ, ಎ, ಒ
ಧೀರ್ಘಸ್ವರಗಳು – ಆ, ಈ, ಊ, ಏ, ಐ, ಓ, ಔ
೩. ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣ ಅಕ್ಷರಗಳನ್ನು ಬರೆಯಿರಿ.
ಉ: ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣ ಅಕ್ಷರಗಳು – ಖ, ಘ, ಛ, ಝ, ಠ, ಢ, ಥ,ಧ, ಫ, ಭ
೪. ಕನ್ನಡ ವರ್ಣಮಾಲೆಯಲ್ಲಿರುವ ವರ್ಗೀಯ ಅಕ್ಷರಗಳನ್ನು ತಿಳಿಸಿ.
ಉ: ‘ಕ’ ವರ್ಗ – ಕ, ಖ, ಗ, ಘ, ಙ
‘ಚ’ ವರ್ಗ – ಚ, ಛ , ಜ, ಝ , ಞ
‘ಟ’ ವರ್ಗ – ಟ, ಠ, ಡ, ಢ, ಣ
‘ತ’ ವರ್ಗ – ತ, ಥ, ದ, ಧ, ನ
‘ಪ’ ವರ್ಗ – ಪ, ಫ, ಬ, ಭ, ಮ
೫. ಕನ್ನಡ ವರ್ಣಮಾಲೆಯಲ್ಲಿರುವ ಅನುನಾಸಿಕಗಳನ್ನು ಪಟ್ಟಿಮಾಡಿ.
ಉ: ಙ, ಞ, ಣ , ನ, ಮ
ಆ. ಕೊಟ್ಟಿರುವ ಪದಗಳಲ್ಲಿರುವ ಸ್ವರಾಕ್ಷರಗಳನ್ನು ಪ್ರತ್ಯೇಕಿಸಿ ಬರೆಯಿರಿ.
ಅಬ್ದುಲ್ ( ಅ ) ಅವನು ( ಅ ) ಇಪ್ಪತ್ತು ( ಇ )
ಆದರೂ ಆ ) ಅವನನ್ನು ( ಅ ) ಇತ್ಯಾದಿ ( ಇ )
ಇರಲಿ ( ಇ ) ಏಕೆಂದರೆ ( ಏ ) ಓಡಿಹೋದ ( ಓ)
ಈಗ ( ಈ ) ಏನೂ ( ಏ )
ಇ. ಕೊಟ್ಟಿರುವ ಪದಗಳಲ್ಲಿರುವ ಮಹಾಪ್ರಾಣಾಕ್ಷರಗಳನ್ನು ಬರೆಯಿರಿ.
ಧನವಂತ ( ಧ ) ರಥ ( ಥ ) ಘನತೆ ( ಘ )
ಧರ್ಮ ( ಧ ) ಮುಖ್ಯ ( ಖ್ಯ ) ಭಕ್ಶ್ಯ ( ಭ )
ಹಠ ( ಠ ) ಪಾಠ ( ಠ ) ಹಸನ್ಮುಖ ( ಖ )
ಫಲ ( ಫ )
ಈ. ಕೊಟ್ಟಿರುವ ಪದಗಳಲ್ಲಿರುವ ಅವರ್ಗೀಯ ವ್ಯಂಜನಗಳನ್ನು ಬರೆಯಿರಿ.
ಅವನ ( ವ ) ಇಂತಹ ( ಹ )
ಅದರ ( ರ ) ಒಳಗೆ ( ಳ )
ಕುಶಲ ( ಶ ) ಹಬ್ಬ ( ಹ )
ಬಹಳ ( ಳ ) ತಲ ( ಲ )
ಸಮಯ ( ಸ, ಯ) ಕಾಲ ( ಲ )