Introduction: Mahakumbh Mela is one of the holiest and most important religious fairs in India. Kumbh Mela is held in Haridwar, Prayagraj, Nashik and Ujjain. This fair provides religious and spiritual awareness to the devotees. It is attended by crores of people. Mahakumbh Mela is celebrated once in 144 years. Mahakumbh Mela started on January 13, 2025. It is in Prayagraj, Uttar Pradesh till February 26, 2025. 45 crore devotees participate in it. Devotees come to take a dip in the Triveni Sangam, i.e. the confluence of Ganges, Yamuna and Saraswati, and perform meritorious deeds.
Synopsis: According to the religious story behind this fair, gods and demons fought a war to protect the pot of nectar found in the Samudramanthan. It is believed that drops of nectar fell at these four holy places. Devotees believe that bathing in these places will bring them merit and salvation.
Naga Sadhus are one of the main attractions of the Kumbh Mela. These Sadhus symbolize their lifestyle, courage, hard work, and devotion. Meanwhile, religious activities, discussions of mythological stories, bhajans, and teachings of ascetics take place at the Mela.
Conclusion: The Maha Kumbh Mela is a symbol of Indian heritage, culture, and religion. It emphasizes the spirituality of life as well as the importance of the beauty and purity of nature.
ಮಹಾಕುಂಭ
ಪೀಠಿಕೆ: ಮಹಾಕುಂಭಮೇಳವು ಭಾರತದ ಅತ್ಯಂತ ಪವಿತ್ರ ಮತ್ತು ಪ್ರಮುಖ ಧಾರ್ಮಿಕ ಮೇಳಗಳಲ್ಲಿ ಒಂದು. ಕುಂಭಮೇಳವು ಹರಿದ್ವಾರ, ಪ್ರಯಾಗರಾಜ, ನಾಸಿಕ್ ಮತ್ತು ಉಜ್ಜಯಿನಿಯಲ್ಲಿ ನಡೆಯುತ್ತದೆ. ಈ ಮೇಳವು ಭಕ್ತರಿಗೆ ಧಾರ್ಮಿಕ ಮತ್ತು ಆಧ್ಯಾತ್ಮಿಕದ ಬಗ್ಗೆ ಹೆಚ್ಚು ಅರಿವು ಮೂಡಿಸುತ್ತದೆ. ಇದರಲ್ಲಿ ಕೋಟ್ಯಾಂತರ ಜನರು ಭಾಗವಹಿಸುತ್ತಾರೆ. ೧೪೪ ವರ್ಷಗಳಿಗೊಮ್ಮೆ ಮಹಾಮಹಾಕುಂಭಮೇಳವನ್ನು ಆಚರಿಸಲಾಗುತ್ತದೆ. ಜನವರಿ ೧೩, ೨೦೨೫ ರಂದು ಮಹಾಕುಂಭಮೇಳವು ಆರಂಭವಾಯಿತು. ಇದು ಫೆಬ್ರವರಿ ೨೬, ೨೦೨೫ರವರೆಗೆ ಉತ್ತರಪ್ರದೇಶದ ಪ್ರಯಾಗರಾಜಲ್ಲಿ ನಡೆಯುತ್ತದೆ. ೪೫ ಕೋಟಿ ಭಕ್ತರು ಇದರಲ್ಲಿ ಭಾಗವಹಿಸುತ್ತಾರೆ. ಭಕ್ತರು ಇಲ್ಲಿಯ ತ್ರಿವೇಣಿ ಸಂಗಮದಲ್ಲಿ, ಅಂದರೆ ಗಂಗೆ, ಯಮುನೆ ಮತ್ತು ಸರಸ್ವತಿ ಸಂಗಮದಲ್ಲಿ ಸ್ನಾನ ಮಾಡಿ ಪುಣ್ಯಗಳಿಸಲು ಬರುತ್ತಾರೆ.
ವಿಷಯ ನಿರೂಪಣೆ: ಈ ಮೇಳದ ಹಿಂದಿರುವ ಧಾರ್ಮಿಕ ಕಥೆ ಪ್ರಕಾರ, ಸಮುದ್ರಮಂಥನದಲ್ಲಿ ದೊರಕಿದ ಅಮೃತಕಲಶವನ್ನು ರಕ್ಷಣೆಯ ಸಲುವಾಗಿ ದೇವತೆಗಳು ಮತ್ತು ರಾಕ್ಷಸರು ಯುದ್ಧ ಮಾಡಿದರು. ಆಗ ಅಮೃತದ ಹನಿಗಳು ಈ ನಾಲ್ಕು ಪವಿತ್ರ ಸ್ಥಳಗಳಲ್ಲಿ ಬಿದ್ದವು ಎಂದು ನಂಬಲಾಗಿದೆ. ಈ ಸ್ಥಳಗಳಲ್ಲಿ ಸ್ನಾನ ಮಾಡುವುದರಿಂದ ಪುಣ್ಯ ಮತ್ತು ಮೋಕ್ಷ ಸಿಗುವುದು ಎಂಬುದು ಭಕ್ತರ ನಂಬಿಕೆ.
ನಾಗಾಸಾಧುಗಳು ಕುಂಭಮೇಳದ ಮುಖ್ಯ ಆಕರ್ಷಣೆಗಳಲ್ಲಿ ಒಂದು. ಈ ಸಾಧುಗಳ ಜೀವನಶೈಲಿ, ಧೈರ್ಯ, ಶ್ರಮ, ಮತ್ತು ಶ್ರದ್ಧೆಯ ಪ್ರತೀಕ. ಇದೇ ವೇಳೆ, ಧಾರ್ಮಿಕ ಚಟುವಟಿಕೆಗಳು, ಪುರಾಣ ಕಥೆಗಳ ಚರ್ಚೆ, ಭಜನೆಗಳು, ಮತ್ತು ತಪಸ್ವಿಗಳ ಉಪದೇಶಗಳು ಮೇಳದಲ್ಲಿ ನಡೆಯುತ್ತದೆ.
ಉಪಸಂಹಾರ: ಮಹಾಕುಂಭಮೇಳವು ಭಾರತೀಯ ಪರಂಪರೆ, ಸಂಸ್ಕೃತಿ, ಮತ್ತು ಧರ್ಮಗಳ ಪ್ರತೀಕವಾಗಿದೆ. ಇದು ಜೀವನದ ಆಧ್ಯಾತ್ಮಿಕತೆಯನ್ನು ಬಲಪಡಿಸುವುದರ ಜೊತೆಗೆ ಪ್ರಕೃತಿಯ ಸೌಂದರ್ಯ ಮತ್ತು ಶುದ್ಧತೆಯ ಮಹತ್ವವನ್ನು ವ್ಯಕ್ತಪಡಿಸುತ್ತದೆ.