Naavu Samanaru Kannada grade IV lesson about different trees boasting about themselves. Naavu Samanaru means We Are All Equal.

This is a story about a few trees—Mango, Jackfruit, Banana, Banyan, Coconut, and Hibiscus—planted in a park. One day, the Mango tree proudly declared that it was the most valuable because its fruit was delicious.

In response, the Jackfruit tree said, “A single mango may not satisfy hunger, but one jackfruit can feed four people!”

Hearing this, the Coconut tree remarked, “Jackfruit, you may be big, but you are covered in thorns and filled with wax! In contrast, I am widely used—from pujas to cooking sambar. My dry fruit is used for oil extraction, and even my leaves serve a purpose as broomsticks.”

The Banyan tree then spoke up, “Coconut tree, don’t boast! The shade I provide is unmatched. I not only shelter people but also produce oxygen for everyone.”

The Banana tree joined in, saying, “Unlike all of you, I bear fruit throughout the year. My stem and flower are used in cooking, and my leaves serve as plates for meals.”

Finally, the Hibiscus plant gently reminded them, “Each of us has unique qualities, which is why this park is filled with diversity. That’s what makes it special!”

Realizing the truth in Hibiscus’ words, all the trees agreed—embracing their differences and celebrating their unity and said Naavu Samanaru.

ನಾವು ಸಮಾನರು

ಉದ್ಯಾನವನ = ಕೈತೋಟ, (Park)
ಆಕರ್ಷಣೆ = ಸೆಳೆತ,( attraction)
ಉಪಯೋಗ = ಬಳಕೆ,(Use)   
ಆಮ್ಲಜನಕ = Oxygen
ಉಸಿರಾಟ = Breathing        
ತೆಂಗಿನಮರ =Coconut tree
ದಾಸವಾಳ ಗಿಡ = Hibiscus plant   
ಉತ್ಪಾದಿಸುವ = Produce
ಕೃತಜ್ಞತೆ = gratitude     
ಹಿರಿಮಾವ = Big Uncle
ಮೇಣ =   Wax  
ಸ್ವಚ್ಛಗೊಳಿಸುವ = clean
ಬಾಳೆಗಿಡ = Banana tree      
ಹಲಸಿನಮರ = Jackfruit tree
ಆಲದಮರ =  Baniyan tree.

ಅ) ಬಿಟ್ಟಸ್ಥಳ ತುಂಬಿರಿ. (Fill in the blanks)

೧. ನಾನು ನಿಮ್ಮೆಲ್ಲರ ಹಿರಿಮಾವ (ಕಿರಿಮಾವ, ಅಳಿಯ, ಹಿರಿಮಾವ)
೨. ನಾನು ಮಾನವರಿಗೆ ಕಲ್ಪವೃಕ್ಷ (ಕಾಮಧೇನು, ಕಲ್ಪವೃಕ್ಷ, ಐರಾವತ)
೩. ನಾನು ನನ್ನ ರೆಂಬೆ ಕೊಂಬೆಗಳನ್ನು ಚಾಚಿ ಹೆಚ್ಚು ನೆರಳು ಕೊಡುತ್ತೇನೆ. (ಬೆಳಕು, ಕತ್ತಲು, ನೆರಳು)
೪. ನಾನು ವರ್ಷದ ಹನ್ನೆರಡು ತಿಂಗಳು ಹಣ್ಣು ಬಿಡುತ್ತೇನೆ. (ಮೂರು, ಹನ್ನೆರಡು, ಆರು)

ಆ) ಈ ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು. (Who told whom)

೧. “ಎಲ್ಲರೂ ನನ್ನ ಹಣ್ಣಿಗಾಗಿ ಮುಗಿ ಬೀಳುತ್ತಾರೆ”
ಯಾರು ಹೇಳಿದರು? ಮಾವಿನ ಮರ ಹೇಳಿತು.
ಯಾರಿಗೆ ಹೇಳಿದರು? ಎಲ್ಲ ಗಿಡಮರಗಳಿಗೆ ಹೇಳಿತು.
೨. “ನಾನು ಕೊಡುವ ಹಣ್ಣು ನಾಲ್ಕಾರು ಜನರಿಗೆ ಸಾಕು”
ಯಾರು ಹೇಳಿದರು? ಹಲಸಿನ ಮರ ಹೇಳಿತು.
ಯಾರಿಗೆ ಹೇಳಿದರು? ಮಾವಿನ ಮರಕ್ಕೆ ಹೇಳಿತು.
೩. “ಛೀ ಬಿಡು! ನಿನ್ನ ಹಣ್ಣೋ ಮುಟ್ಟಿದರೆ ಮುಳ್ಳು”
ಯಾರು ಹೇಳಿದರು? ತೆಂಗಿನ ಮರ ಹೇಳಿತು.
ಯಾರಿಗೆ ಹೇಳಿದರು? ಹಲಸಿನ ಮರಕ್ಕೆ ಹೇಳಿತು.

ಇ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)
೧. ಉದ್ಯಾನದಲ್ಲಿನ ಗಿಡಮರಗಳು ಏನೆಂದು ಮಾತಾಡಿಕೊಂಡವು?
ಉ: ಉದ್ಯಾನದಲ್ಲಿನ ಗಿಡಮರಗಳು ತಮ್ಮಿಂದಲೇ ಅಂದ ಹೆಚ್ಚಿದೆ ಎಂದು ಮಾತಾಡಿಕೊಂಡವು.
೨. ಯಾವ ಹಣ್ಣನ್ನು ತಿಂದರೆ ಒಬ್ಬರ ಹೊಟ್ಟೆಯೂ ತುಂಬೊಲ್ಲ?
ಉ: ಮಾವಿನ ಹಣ್ಣನ್ನು ತಿಂದರೆ ಒಬ್ಬರ ಹೊಟ್ಟೆಯೂ ತುಂಬೊಲ್ಲ.
೩. ಕೊಬ್ಬರಿ ಎಣ್ಣೆ ಯಾವುದರಿಂದ ಮಾಡುತ್ತಾರೆ?
ಉ: ಕೊಬ್ಬರಿ ಎಣ್ಣೆ ತೆಂಗಿನಕಾಯಿಯಿಂದ ಮಾಡುತ್ತಾರೆ.
೪. ಬಾಳೆಯ ಎಲೆ ಯಾವುದಕ್ಕೆ ಉಪಯೋಗ?
ಉ: ಬಾಳೆಯ ಎಲೆ ಊಟ ಮಾಡಲು ಉಪಯೋಗ.

ಈ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in 2-3 sentences)

೧. ತೆಂಗಿನ ಮರ ಕಲ್ಪವೃಕ್ಷ ಹೇಗೆ?
ಉ: ತೆಂಗಿನ ಮರದ ಎಳೆಕಾಯಿಯನ್ನು ಎಳನೀರಿಗಾಗಿ, ಬಲಿತ ಕಾಯಿಯನ್ನು ಸಾಂಬಾರಿಗೆ, ದೇವರ ಪೂಜೆಗೆ ಉಪಯೋಗಿಸುತ್ತಾರೆ. ಒಣಗಿದರೆ ಕೊಬ್ಬರಿ ಎಣ್ಣೆಗೆ, ಗರಿಗಳು ಚಪ್ಪರಕ್ಕೆ, ಕಡ್ಡಿಗಳು ಪೊರಕೆಗೆ ಮತ್ತು ಮನೆಯ ಪಕ್ಕಾಸಿಗೆ ಉಪಯೋಗಿಸುತ್ತಾರೆ.
೨. ಬಾಳೆಯ ಉಪಯೋಗಗಳನ್ನು ಪಟ್ಟಿ ಮಾಡಿರಿ?
ಉ: ಬಾಳೆಯ ಎಲೆಯಲ್ಲಿ ಊಟ ಮಾಡುತ್ತಾರೆ. ಹೂವಿನಿಂದ, ದಿಂಡಿನಿಂದ ಅಡುಗೆ ಮಾಡುತ್ತಾರೆ. ಹಣ್ಣನ್ನು ತಿನ್ನುತ್ತಾರೆ.
೩. ದಾಸವಾಳ ಗಿಡಮರಗಳಿಗೆ ಏನೆಂದು ಬುದ್ಧಿವಾದ ಹೇಳಿತು?
ಉ: ದಾಸವಾಳ ಗಿಡಮರಗಳಿಗೆ ಜಗಳವಾಡಬಾರದೆಂದು ಹೇಳಿತು. ಎಲ್ಲರೂ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಉಪಯೋಗಕಾರಿ ಎಂದಿತು.

ಉ) ತಪ್ಪನ್ನು ಸರಿಪಡಿಸಿರಿ. (Correct the error in the sentence)

೧.ಅಲಸಿನ ಹಣ್ಣು ತಿನ್ನಲು ರುಛಿಯಾಗಿರುತ್ತದೆ.
ಉ: ಹಲಸಿನ ಹಣ್ಣು ತಿನ್ನಲು ರುಚಿಯಾಗಿರುತ್ತದೆ.
೨.ನಾನು ಮನುಷ್ಯರಿಗೆ ಕಲ್ಪಋಕ್ಷ.
ಉ: ನಾನು ಮನುಷ್ಯರಿಗೆ ಕಲ್ಪವೃಕ್ಷ.
೩.ಪ್ರಾಣಿಗಳ ಹುಸಿರಾಟಕ್ಕೆ ಅಮ್ಲಜನಕ ಬೇಕು.
ಉ: ಪ್ರಾಣಿಗಳ ಉಸಿರಾಟಕ್ಕೆ ಆಮ್ಲಜನಕ ಬೇಕು
೪.ನಾವು ಮನುಷ್ಯರಿಗೆ ಕೃತಘ್ನರಾಗಿರೋಣ.
ಉ: ನಾವು ಮನುಷ್ಯರಿಗೆ ಕೃತಜ್ಞರಾಗಿರೋಣ.

ಊ) ಮಧ್ಯದ ಅಕ್ಷರವನ್ನು ಬದಲಾಯಿಸಿ ಹೊಸ ಪದಗಳನ್ನು ಮಾಡಿರಿ. (Change the letter in the centre)

೧.ಹವಳ (ತಿನ್ನಲು ಕರ್ರಂ ಕರ್ರಂ) ಹಪ್ಪಳ
೨.ಸತ್ತರೆ (ಸಿಹಿಯನ್ನು ಕೊಡುವುದು) ಸಕ್ಕರೆ
೩.ಕರಡಿ (ಮುಖವನ್ನು ನೋಡಿಕೊಳ್ಳುತ್ತೇವೆ) ಕನ್ನಡಿ
೪.ಕಟ್ಟಡ (ಕರ್ನಾಟಕದ ಭಾಷೆ) ಕನ್ನಡ

Click here to download navu samanaru grade IV