Namura kere kannada poem written by Chidananda Sali. In the poem “Namura kere”, water is an essential element of life, our water is being depleted due to the rush of modern technology. The lakes of the town are being damaged due to the establishment of factories in lush green areas. To control this, the factories should be established outside the town, the use of plastic should be said goodbye and the lake should be protected. The poet is giving the message that we should keep our environment beautiful. Nammora kere is an inspirational poem.

ನಮ್ಮೂರ ಕೆರೆ

ಅ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. (Answer the following in one sentence)
೧. ಕೆರೆಯ ಏರಿಯ ಸುತ್ತ ಯಾವುದರ ಕಾವಲಿತ್ತು?
ಉ: ಕೆರೆಯ ಏರಿಯ ಸುತ್ತ ಮರಗಳ ಸಾಲಿನ ಕಾವಲಿತ್ತು.
೨. ಕೆರೆಯ ಉಳಿವಿಗೆ ಊರಿನ ಜನ ಯಾವುದಕ್ಕೆ ವಿದಾಯ ಹೇಳಿದರು?
ಉ: ಕೆರೆಯ ಉಳಿವಿಗೆ ಊರಿನ ಜನ ಪ್ಲಾಸ್ಟಿಕ್ ಗೆ ವಿದಾಯ ಹೇಳಿದರು.
೩. ಭೂಮಿ ಒಳಗಿನ ನೀರಸೆಲೆ ಬತ್ತಿಹುದು ಏಕೆ?
ಉ: ಭೂಮಿಯ ತುಂಬಾ ಕೊಳವೆ ಬಾಯಿ ಕೊರೆದುದರಿಂದ ನೀರಸೆಲೆ ಬತ್ತಿಹುದು.
೪. ನಮ್ಮೂರ ಕೆರೆ ಈಗ ಯಾವುದರ ಆಗರವಾಗಿದೆ ಎಂದು ಕವಿ ಹೇಳುತ್ತಾರೆ?
ಉ. ನಮ್ಮೂರ ಕೆರೆ ಈಗ ಜಲ ನಿಧಿಯ ಆಗರವಾಗಿದೆ ಎಂದು ಕವಿ ಹೇಳುತ್ತಾರೆ.

ಆ. ಕೆಳಗಿನ ಪ್ರಶ್ನೆಗಳಿಗೆ ಎರಡು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in two- three sentence)
೧.ನಮ್ಮೂರ ಕೆರೆ ಪದ್ಯದಲ್ಲಿ ಕವಿ ಕೆರೆಯ ದಾರಿಯನ್ನು ಯಾವ ರೀತಿ ವರ್ಣಿಸಿದ್ದಾರೆ?
ಉ: ಕೆರೆಯ ದಾರಿಯಲ್ಲಿ ತಂಪು ತಂಬೆಲರುಗಳು. ಎರಿಯ ಸುತ್ತೆಲ್ಲ ಕಾವಲಿನ ಮರಸಾಲುಗಳು. ಒಂದೊಂದು ಮರದಲ್ಲೂ ಹತ್ತಾರು ಟೊಂಗೆಗಳು. ಆ ಟೊಂಗೆಗಳಲ್ಲಿ ನೂರಾರು ಹಕ್ಕಿಗಳು ತುಂಬಿವೆ ಎಂದು ನಮ್ಮೂರ ಕೆರೆ ಪದ್ಯದಲ್ಲಿ ಕವಿ ವರ್ಣಿಸಿದ್ದಾರೆ.

೨. ನಮ್ಮೂರ ಕೆರೆ ಪದ್ಯದಲ್ಲಿ ಕವಿ ಕೆರೆಯ ಸೊಬಗನ್ನು ಯಾವ ರೀತಿ ಬಣ್ಣಿಸಿದ್ದಾರೆ?
ಉ: ನಮ್ಮೂರ ಕೆರೆ ಬೆಳ್ಳಿ ತಟ್ಟೆಯ ಹಾಗೆ ಹೊಳಯುವ ನೀರಿನಿಂದ ಕೂಡಿದೆ. ಮಿಂಚು ಬಳ್ಳಿಯಂತೆ ತಳ ತಳ ಹೊಳೆಯುವ ಮೀನುಗಳು ಇವೆ. ಕಪ್ಪೆಗಳ ವಟ ವಟದ ಶಬ್ದವಿದೆ. ಕೆರೆಯ ಸುತ್ತಮುತ್ತ ಟಗರುಗಳು ಇವೆ. ಹುಡುಗನ ಹಾಡಿಗೆ ತಲೆದೂಗುವ ಪೈರುಗಳಿಂದಾಗಿ ನಮ್ಮೂರ ಕೆರೆ ಸುಂದರವಾಗಿದೆ ಎಂದು ಕವಿ ಬಣ್ಣಿಸಿದ್ದಾರೆ.

೩. ಕೆರೆಯ ಒಡಲು ಬತ್ತಿ ಹೋಗಲು ಕಾರಣವೇನು?
ಉ: ಕಾರ್ಖಾನೆಗಳು ಬಂದು ಜನಸಂಖ್ಯೆ ಬೆಳೆದು ಮೋರಿಯ ಕೊಳೆ ಕೆರೆಯೊಳಗೆ ಬೆರೆತಿದೆ. ಭೂತಾಯಿಯ ಎದೆ ತುಂಬಾ ಕೊಳವೆ ಬಾವಿಯ ಕೊರೆದ ಕಾರಣದಿಂದಾಗಿ ಕೆರೆಯೊಡಲು ಬತ್ತು ಹೋಗಿದೆ.

೪. ಕೆರೆಯ ಉಳಿವಿಗೆ ಊರ ಜನರು ಕೈಗೊಂಡ ಕ್ರಮಗಳಾವುವು?
ಉ: ಊರ ಜನರು ಕೆರೆಯ ಉಳಿವಿಗೆ ಸಭೆಯನ್ನು ಸೇರಿ ಕಾರ್ಖಾನೆಯನ್ನು ಊರಿನ ಆಚೆ ಇಟ್ಟರು. ಮನೆಗಳಿಗೆ ಎರಡು ಮರ ಮತ್ತು ಕೆರೆ ಸುತ್ತಲೂ ಮರನೆಟ್ಟು ಪ್ಲಾಸ್ಟಿಕ್ ನ ಬಳಕೆಯನ್ನು ವಿದಾಯ ಮಾಡಿ ಕೆರೆಯ ಉಳಿವಿಗೆ ಕ್ರಮಗಳನ್ನು ಕೈಗೊಂಡರು.

೫. ನಮ್ಮೂರ ಕೆರೆ ಈಗ ಯಾವ ಬದಲಾವಣೆ ಕಂಡಿದೆ ಎಂದು ಕವಿ ಚಿದಾನಂದ ಸಾಲಿ ಹೇಳುತ್ತಾರೆ?
ಉ: ಪದ್ಯದಲ್ಲಿ ಕವಿ ನಮ್ಮೂರ ಕೆರೆ ಈಗ ಜಲ ನಿಧಿಯ ಆಗರವಾಗಿದೆ. ಮರಗಳಲ್ಲಿ ಈಗ ಮತ್ತೆ ಹಸಿರು ಹಕ್ಕಿಗಳು ಹಾಡನ್ನು ಹಾಡುತ್ತಿದೆ ಎಂದು ಹೇಳುತ್ತಾರೆ.

೬. “ನಮ್ಮೂರ ಕೆರೆ” ಪದ್ಯದಲ್ಲಿ ಕವಿ ನೀಡುವ ಸಂದೇಶವೇನು?
ಉ: “ನಮ್ಮೂರ ಕೆರೆ” ಪದ್ಯದಲ್ಲಿ ನೀರು ಜೀವನದ ಅತ್ಯವಶ್ಯಕವಾದ ಅಂಶ, ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಸಿಲುಕಿ ನಮ್ಮ ಜಲ ನಲುಗುತ್ತಿದೆ. ಹಚ್ಚ ಹಸಿರು ಪ್ರದೇಶದಲ್ಲಿ ಕಾರ್ಖಾನೆಗಳು ಸ್ಥಾಪನೆಯಾಗಿದ್ದರಿಂದ ಊರಿನ ಕೆರೆಗಳು ಹಾಳಾಗುತ್ತಿವೆ. ಇದನ್ನು ನಿಯಂತ್ರಿಸಲು ಕಾರ್ಖಾನೆಗಳನ್ನು ಊರಿನ ಆಚೆ ಸ್ಥಾಪಿಸಿ ಪ್ಲಾಸ್ಟಿಕ್ ಬಳಕೆಗೆ ವಿದಾಯ ಹೇಳಿ ಕೆರೆಯನ್ನು ಕಾಪಾಡಬೇಕು. ನಮ್ಮ ಪರಿಸರವನ್ನು ಸೊಗಸಾಗಿ ಇಡಬೇಕು ಎಂಬ ಸಂದೇಶವನ್ನು ಕವಿ ನೀಡುತ್ತಿದ್ದಾರೆ.

ಇ. ಕೆಳಗಿನ ಪದಗಳಲ್ಲಿ ಲಿಂಗ ಗುರುತಿಸಿ. (Identify the gender)

ಪುಲ್ಲಿಂಗಸ್ತ್ರೀಲಿಂಗನಪುಸಂಕಲಿಂಗ
ರಾಜಇವಳುಪುಸ್ತಕ
ಶಿಕ್ಷಕಶಿಕ್ಷಕಿನಾಯಿ
ಗಣೇಶ ಕಲ್ಲು
ಅವನು ಶಾಲೆ
ಹುಡುಗ  

ಈ.ಕೆಳಗಿನ ಗಾದೆ ಮಾತುಗಳನ್ನು ಪೂರ್ಣಗೊಳಿಸಿರಿ.(Complete the proverbs)
೧. ಉಪ್ಪು ತಿಂದವ ನೀರು ಕುಡಿಯಬೇಕು.
೨. ಮನೆಗೊಂದು ಮರ ಊರಿಗೊಂದು ಕೆರೆ.
೩. ಹಸಿರೇ ಉಸಿರು.
೪.ಮರದಿಂದ ಮಳೆ, ಮಳೆಯಿಂದ ಬೆಳೆ.

ಉ) ಈ ಪದಗಳನ್ನು ಬಿಡಿಸಿ ಬರೆಯಿರಿ. (Split the words)
ತ್ತೂರು = ಹತ್ತು + ಊರು               ನಮ್ಮೂರು = ನಮ್ಮ+ ಊರು
ಮನೆಗೆರಡು = ಮನೆಗೆ + ಎರಡು          ಕೇಳಿರೆಲ್ಲ = ಕೇಳಿರಿ + ಎಲ್ಲ
ಒಂದೊಂದು = ಒಂದು + ಒಂದು          ನೂರಾರು = ನೂರು + ಆರು
ಮತ್ತೀಗ = ಮತ್ತೆ + ಈಗ                  ಊರಾಚೆ =  ಊರು + ಆಚೆ
ನೆಲವೀಗ = ನೆಲವು + ಈಗ

ಊ) ಕೆಳಗಿನ ಪದಗಳಿಗೆ ವಿರುದ್ಧ ಪದ ಬರೆಯಿರಿ. (Write the opposite word)
ನೆಡು X ಕೀಳು                ತಂಪು X ಬಿಸಿ          ಬತ್ತು X ತುಂಬು
ತಪ್ಪು X ಸರಿ                 ಏರಿ X ಇಳಿ             ಉಳಿವು X ಅಳಿವು

Click here to download Namura kere lesson exercises