“Nanna Desa Nanna Jana” in this chapter explains our beautiful country, Bharat, also known as India, Hindustan, and Bharatha Khanda. This chapter explores the diversity of Bharat, including its various religions, castes, languages, and traditional attire, highlighting how we all live together in harmony. Our nation is home to magnificent wildlife like tigers, lions, deer, leopards, and elephants. Bharat is blessed with rivers such as the Ganga, Yamuna, Kaveri, Sindhu, Krishna, and Godavari. In the south, we have the Eastern Ghats and Western Ghats, rich states, and a vast coastline. “Jana Gana Mana,” our national anthem, was written by Rabindranath Tagore. “Nanna Desa Nanna Jana,” meaning “My Country My People,” reflects our unity in diversity in this great land of Bharat.

“ನನ್ನ ದೇಶ ನನ್ನ ಜನ” ಈ ಅಧ್ಯಾಯದಲ್ಲಿ ನಮ್ಮ ಸುಂದರ ದೇಶವಾದ ಭಾರತವನ್ನು ಭಾರತ, ಹಿಂದೂಸ್ತಾನ್ ಮತ್ತು ಭರತ ಖಂಡ ಎಂದೂ ಕರೆಯುತ್ತಾರೆ. ಈ ಅಧ್ಯಾಯವು ಅದರ ವಿವಿಧ ಧರ್ಮಗಳು, ಜಾತಿಗಳು, ಭಾಷೆಗಳು ಮತ್ತು ಸಾಂಪ್ರದಾಯಿಕ ಉಡುಗೆಗಳನ್ನು ಒಳಗೊಂಡಂತೆ ಭಾರತದ ವೈವಿಧ್ಯತೆಯನ್ನು ಪರಿಶೋಧಿಸುತ್ತದೆ. ನಾವೆಲ್ಲರೂ ಹೇಗೆ ಸಾಮರಸ್ಯದಿಂದ ಒಟ್ಟಿಗೆ ಬದುಕುತ್ತೇವೆ ಎಂಬುದನ್ನು ಎತ್ತಿ ತೋರಿಸುತ್ತದೆ. ನಮ್ಮ ರಾಷ್ಟ್ರವು ಹುಲಿಗಳು, ಸಿಂಹಗಳು, ಜಿಂಕೆಗಳು, ಚಿರತೆಗಳು ಮತ್ತು ಆನೆಗಳಂತಹ ಭವ್ಯವಾದ ವನ್ಯಜೀವಿಗಳಿಗೆ ನೆಲೆಯಾಗಿದೆ. ಭಾರತವು ಗಂಗಾ, ಯಮುನಾ, ಕಾವೇರಿ, ಸಿಂಧು, ಕೃಷ್ಣ ಮತ್ತು ಗೋದಾವರಿ ಮುಂತಾದ ನದಿಗಳಿಂದ ಆಶೀರ್ವದಿಸಲ್ಪಟ್ಟಿದೆ. ದಕ್ಷಿಣದಲ್ಲಿ, ನಾವು ಪೂರ್ವ ಘಟ್ಟಗಳು ಮತ್ತು ಪಶ್ಚಿಮ ಘಟ್ಟಗಳು, ಶ್ರೀಮಂತ ರಾಜ್ಯಗಳು ಮತ್ತು ವಿಶಾಲವಾದ ಕರಾವಳಿಯನ್ನು ಹೊಂದಿದ್ದೇವೆ. “ಜನ ಗಣ ಮನ” ನಮ್ಮ ರಾಷ್ಟ್ರಗೀತೆಯನ್ನು ರವೀಂದ್ರನಾಥ ಟ್ಯಾಗೋರ್ ಬರೆದಿದ್ದಾರೆ. ಈ ಭರತ ಭೂಮಿಯಲ್ಲಿ ವಿವಿಧತೆಯಲ್ಲಿ ನಮ್ಮ ಏಕತೆಯನ್ನು ಪ್ರತಿಬಿಂಬಿಸುತ್ತದೆ.

ನನ್ನ ದೇಶ ನನ್ನ ಜನ

ಅ. ಪದಗಳ ಅರ್ಥ ಬರೆಯಿರಿ. (Write the word meaning)

ಕರಾವಳಿ = ಸಮುದ್ರದಂಡೆ                        ಕೋರು = ವಿನಂತಿಸು
ಘಟ್ಟ = ಬೆಟ್ಟಗಳ ಸಾಲು                          ನಾಡು = ದೇಶ
ಪರ್ವತ = ದೊಡ್ಡಬೆಟ್ಟ                            ಪುರಾತನ = ಹಳೆಯ
ಫಲವತ್ತಾದ = ಸಾರವತ್ತಾದ                      ಪ್ರತೀಕ = ಪ್ರತಿರೂಪ,ಚಿಹ್ನೆ
ಬಲಿದಾನ = ಆಹುತಿ                             ಬಣ್ಣಿಸು = ಹೊಗಳು
ಬಹು =   ಅಧಿಕ, ಅನೇಕ                         ಬಾವುಟ = ಪತಾಕೆ, ಧ್ವಜ
ಬೀಡು = ನೆಲೆ, ಮನೆ                             ಮನೋಭಾವ= ಮನಸ್ಸಿನ ಭಾವನೆ
ಮೀರಿದ = ದಾಟಿದ                               ವಿಶಾಲ=ವಿಸ್ತಾರವಾದ,ಅಗಲವಾದ
ಸಂಕೇತ = ಗುರುತು                              ಸುಳಿವು=ಸುಳುಹು,ಕುರುಹು, ಜಾಡು
ಹಬ್ಬು = ಹರಡು

ಆ. ಬಿಟ್ಟ ಸ್ಥಳ ತುಂಬಿರಿ. (Fill in the blanks)

೧. ಹಸಿರು ಬಣ್ಣದ ಸೂಚಕ ಸಮೃದ್ಧಿ.

೨. ಕೇಸರಿ ಬಣ್ಣದ ಪ್ರತೀಕ ತ್ಯಾಗ.

೩. ಬಿಳಿಯ ಬಣ್ಣದ ಪ್ರತೀಕ ಶಾಂತಿ .

೪. ನಮ್ಮ ರಾಷ್ತ್ರಧ್ವಜವು ಮೂರು ಬಣ್ಣಗಳಿಂದ ಕೂಡಿದೆ.

ಇ. ಒಂದು ವಾಕ್ಯದಲ್ಲಿ ಉತ್ತರಿಸಿ. (Answer the following in one sentence)

೧. ನಮ್ಮ ದೇಶ ಯಾವುದು?
ಉ:ನಮ್ಮ ದೇಶ ಭಾರತ.
೨. ಭಾರತವನ್ನು ಯಾವ ಯಾವ ಹೆಸರುಗಳಿಂದ ಕರೆಯುತ್ತಾರೆ?
ಉ:ಭಾರತವನ್ನು ಭರತ ಖಂಡ, ಇಂಡಿಯಾ, ಹಿಂದೂಸ್ಥಾನ ಎಂಬ ಹೆಸರುಗಳಿಂದ
    ಕರೆಯುತ್ತಾರೆ.
೩. ಭಾರತದಲ್ಲಿ ಹರಿಯುವ ಪ್ರಮುಖ ನದಿಗಳು ಯಾವುವು?
ಉ:ಭಾರತದಲ್ಲಿ ಹರಿಯುವ ಪ್ರಮುಖ ನದಿಗಳು ಗಂಗಾ, ಯಮುನಾ, ಸಿಂಧೂ,
    ಕಾವೇರಿ, ಕೃಷ್ಣೆ, ಗೋದಾವರಿ ಮುಂತಾದವು.

೪. ಭಾರತದಲ್ಲಿ ಕಂಡುಬರುವ ಪ್ರಮುಖ ಕಾಡು ಪ್ರಾಣಿಗಳಾವುವು?
ಉ:ಭಾರತದಲ್ಲಿ ಕಂಡುಬರುವ ಪ್ರಮುಖ ಕಾಡು ಪ್ರಾಣಿಗಳು ಹುಲಿ, ಸಿಂಹ, ಆನೆ, ಜಿಂಕೆ, ಚಿರತೆ ಮುಂತಾದವು.

೫. ನಮ್ಮ ರಾಷ್ಟ್ರಗೀತೆ ಯಾವುದು? ಅದನ್ನು ರಚಿಸಿದ ಕವಿ ಯಾರು?
ಉ:ನಮ್ಮ ರಾಷ್ಟ್ರಗೀತೆ ʼಜನಗಣಮನʼ. ಅದನ್ನು ರಚಿಸಿದ ಕವಿ ರವಿಂದ್ರನಾಥ
‌     ಟಾಗೋರ್.
೬. “ವಂದೇ ಮಾತರಂ” ಗೀತೆಯನ್ನು ರಚಿಸಿದವರು ಯಾರು?
ಉ:“ವಂದೇ ಮಾತರಂ” ಗೀತೆಯನ್ನು ರಚಿಸಿದವರು ಬಂಕಿಮಚಂದ್ರ ಚಟರ್ಜಿ.

೭. ನಮ್ಮ ರಾಷ್ಟ್ರಧ್ವಜದಲ್ಲಿರುವ ಮೂರು ಬಣ್ಣಗಳಾವುವು?
ಉ:ನಮ್ಮ ರಾಷ್ಟ್ರಧ್ವಜದಲ್ಲಿರುವ ಮೂರು ಬಣ್ಣಗಳು ಕೇಸರಿ, ಬಿಳಿ ಮತ್ತು ಹಸಿರು.

ಈ. ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ. (Answer the following in two – three sentences)
೧. ಭಾರತದಲ್ಲಿ ಯಾವ ಯಾವ ಧರ್ಮದವರಿದ್ದಾರೆ?
ಉ: ಭಾರತದಲ್ಲಿ ಹಿಂದೂ, ಜೈನ, ಕ್ರೈಸ್ತ, ಬೌದ್ಧ ಧರ್ಮದವರಿದ್ದಾರೆ.
೨. ಭಾರತದಲ್ಲಿನ ಜನ ಯಾವ ಯಾವ ಭಾಷೆಗಳನ್ನಾಡುತ್ತಾರೆ?
ಉ: ಭಾರತದಲ್ಲಿನ ಜನ ಕನ್ನಡ, ಹಿಂದಿ, ಬಂಗಾಳಿ, ಪಂಜಾಬಿ, ಮರಾಠಿ, ತೆಲುಗು,
     ತಮಿಳು, ಮಲಯಾಳಿ ಭಾಷೆಗಳನ್ನಾಡುತ್ತಾರೆ.
೩. ಭಾರತೀಯರಲ್ಲಿ ಎಂತಹ ಗುಣ ಸ್ವಭಾವಗಳಿವೆ?
ಉ:ಭಾರತೀಯರು ಶಾಂತಿಪ್ರಿಯರು. ವಿಶಾಲ ಮನೋಭಾವದವರು. ಜಾತಿ-ಮತ-
    ಭಾಷೆ ಮೀರಿದವರು.
೪. ನಮ್ಮ ರಾಷ್ಟ್ರಧ್ವಜದ ವಿಶೇಷತೆಗಳೇನು?
ಉ:ನಮ್ಮ ರಾಷ್ಟ್ರಧ್ವಜದಲ್ಲಿರುವ ʼಕೇಸರಿʼ ಬಣ್ಣ ತ್ಯಾಗದ ಸಂಕೇತ. ʼಬಿಳಿʼ ಶಾಂತಿಯ    
    ಸಂಕೇತ ಮತ್ತು ʼಹಸಿರುʼ ಸಮೃದ್ಧಿಯ ಸಂಕೇತ. ನಡುವೆ ಇರುವ ʼನೀಲಿʼ ಬಣ್ಣದ
    ಚಕ್ರ ಧರ್ಮಚಕ್ರ.
೫. ದೇಶದ ರಕ್ಷಣೆಗಾಗಿ ಮಡಿದ ವೀರಯೋಧರ ಹೆಸರುಗಳನ್ನು ಬರೆಯಿರಿ.
ಉ:ದೇಶದ ರಕ್ಷಣೆಗಾಗಿ ಮಡಿದ ವೀರಯೋಧರ ಹೆಸರುಗಳು ಕಿತ್ತೂರು ಚೆನ್ನಮ್ಮ,
    ರಾಣಿ ಲಕ್ಷ್ಮಿಬಾಯಿ, ಟಿಪ್ಪು ಸುಲ್ತಾನ, ಭಗತ್ ಸಿಂಗ್‌,ಚಂದ್ರಶೇಖರ ಆಜಾದ
    ಮುಂತಾದವರು.
೬. ದೇಶದ ಪ್ರಮುಖ ಕವಿಗಳು ಹಾಗೂ ಮಹಾತ್ಮರ ಹೆಸರುಗಳನ್ನು ಪಟ್ಟಿಮಾಡಿ.
ಉ:ದೇಶದ ಪ್ರಮುಖ ಕವಿಗಳು ಹಾಗೂ ಮಹಾತ್ಮರ ಹೆಸರುಗಳು ವಾಲ್ಮೀಕಿ,
    ರಾಘವಾಂಕ, ವ್ಯಾಸ, ಪಂಪ, ಹರಿಹರ, ಬಸವ, ಅಲ್ಲಮ, ಗಾಂಧೀಜಿ, ಅಂಬೇಡ್ಕರ್
‌    ಮುಂತಾದವರು.

ಉ. ಹೊಂದಿಸಿ ಬರೆಯಿರಿ. (Match the following)

                ಅ                                     ಬ
ಅ) ಹಿಮಾಲಯ                         ೧) ಸಮುದ್ರ               ಪರ್ವತ     
ಆ) ಕನ್ನಡ                               ೨) ಕವಿ                    ಭಾಷೆ
ಇ) ಕಾವೇರಿ                             ೩) ಪರ್ವತ                ನದಿ
ಈ) ಪಂಪ                               ೪) ಧರ್ಮ                 ಕವಿ
ಉ) ಕ್ರೈಸ್ತ                               ೫)ಭಾಷೆ                   ಧರ್ಮ
                                         ೬) ನದಿ

ಊ. ಸ್ವಂತ ವಾಕ್ಯ ರಚಿಸಿರಿ. (Make your own sentence)
೧. ಪುರಾತನ:  ಆ ದೇವಸ್ಥಾನ ಪುರಾತನ ಕಾಲದ್ದು.
೨. ಸುತ್ತುವರೆ: ಕೋಟೆಯನ್ನು ಸೈನಿಕರು ಸುತ್ತುವರೆದರು.
೩. ಹಚ್ಚಹಸಿರು: ಕಬಿನಿ ಕಾಡು ಹಚ್ಚಹಸಿರಾಗಿದೆ.
೪. ಬಲಿದಾನ: ಸೈನಿಕರ ಬಲಿದಾನ ದೊಡ್ಡದು.
೫. ಬೀಡು : ಸೈನಿಕರು ಮೈದಾನದಲ್ಲಿ ಬೀಡು ಬಿಟ್ಟಿದ್ದರು.

ಋ. ಕೆಳಗಿನ ವಾಕ್ಯಗಳನ್ನು ಸರಿಪಡಿಸಿರಿ. (Correct the following sentence)
೧. ದಕ್ಷಿಣಪೀಠ ಭೂಮಿಯನ್ನು ಸಮುದ್ರಗಳು ಸುತ್ತುವರಿದಿವೆ.
ಉ: ದಕ್ಷಿಣಪೀಠ ಭೂಮಿಯನ್ನು ಪಶ್ಚಿಮ ಘಟ್ಟಗಳು ಮತ್ತು ಪೂರ್ವ ಘಟ್ಟಗಳು ಸುತ್ತುವರಿದಿವೆ.
೨. ಭಾರತ ದೇಶದ ದಕ್ಷಿಣಕ್ಕೆ ಹಿಮಾಲಯ ಪರ್ವತ ಇದೆ.
ಉ:ಭಾರತ ದೇಶದ ಉತ್ತರಕ್ಕೆ ಹಿಮಾಲಯ ಪರ್ವತ ಇದೆ.
೩. ನಮ್ಮದು ಬಹುಭಾಷೆ ಹೊಂದಿರುವ ಸಣ್ಣ ದೇಶ.
ಉ: ನಮ್ಮದು ಬಹುಭಾಷೆ ಹೊಂದಿರುವ ದೊಡ್ಡ ದೇಶ.

Click here to download nanna desa nanna jana exercises