Nannase Kannada grade IX poem written by Indumati Lamani. In Nannase the poet wants to become a wick that gives light. To become a tree that gives shade to the virtuous. To become an ever-flowing spring that quenches the thirst of the thirsty. To become the voice of a mother’s voice to make a crying child laugh. To become a book in the hands of the Goddess Saraswati to dispel human ignorance. To become a crutch for the poor who are groaning without direction. To become the end of oneself before falling to the ground and becoming a burden are the desires of the poetess in the poem ‘Nannase’. Nanase kannada poem 9th grade is one of the beautiful poem written by Indumati Lamani.
ನನ್ನಾಸೆ
೧. ಅಜ್ಞಾನ ತೊಲಗಿಸಲು ಕವಯಿತ್ರಿ ಏನಾಗ ಬಯಸಿದ್ದಾರೆ ?
ಉ: ಅಜ್ಞಾನ ತೊಲಗಿಸಲು ಕವಯಿತ್ರಿ ವಾಗ್ದೇವಿಯ ಕೈಯಲ್ಲಿಯ ಗ್ರಂಥವಾಗಲು ಬಯಸಿದ್ದಾರೆ.
೨. ಸದಾ ಚಿಮ್ಮುವ ಚಿಲುಮೆಯಾಗಬೇಕು , ಏಕೆ ?
ಉ: ದಾಹಗೊಂಡವರ ತನುವ ತಣಿಸಲು ಸದಾ ಚಿಮ್ಮುತ್ತಲಿರುವ ಚಿಲುಮೆಯಾಗಬೇಕು.
೩. ನನ್ನಾಸೆ ಕವನದಲ್ಲಿ ಕವಯಿತ್ರಿಯವರ ಆಸೆಗಳೇನು ?
ಉ: ಬೆಳಕು ನೀಡುವ ಬತ್ತಿಯಾಗುವುದು. ಮರವಾಗಿ ಪುಣ್ಯವಂತರಿಗೆ ನೆರಳಾಗಬೇಕು. ದಾಹಗೊಂಡವರ ತನುವ ತಣಿಸುವ ಸದಾ ಚಿಮ್ಮುತ್ತಲಿರುವ ಚಿಲುಮೆಯಾಗಬೇಕು.ಅಳುವ ಕಂದನ ನಗಿಸಲು ಅಮ್ಮನ ಕಂಠದ ಜೋಗುಳವಾಗಬೇಕು. ಮಾನವನ ಅಜ್ಞಾನತೆ ತೊಲಗಿಸಲು ವಾಗ್ದೇವಿಯ ಕೈಯಲ್ಲಿಯ ಗ್ರಂಥವಾಗಬೇಕು. ದಿಕ್ಕಿಲ್ಲದೆ ನರಳಾಡುವ ದೀನರ ಊರುಗೋಲಾಗಬೇಕು. ನೆಲಕ್ಕೆ ಬಿದ್ದು ಹೊರೆಯಾಗುವ ಮುನ್ನ ಅಂತ್ಯ ತನ್ನದಾಗಬೇಕೆಂಬುದು ʼನನ್ನಾಸೆʼ ಕವನದಲ್ಲಿ ಕವಯಿತ್ರಿಯವರ ಆಸೆಗಳು.