Neeru Kodadha Naadinalli chapter written by Nemichandra, the author, who has traveled the world, is struck by a surprising cultural difference in Western countries. In “Neeru Kodadha Naadinalli” she writes that water is not offered in America and Europe in restaurants. Instead, you must purchase it, and cola is commonly served in food joints. In contrast, in India, whether it’s a Darshini, Dhaba, or a five-star hotel, water is immediately placed on the table as soon as customers arrive. In North India, it’s common to find water stations on the streets for passersby. Water tanks are even provided for animals in many places. In Indian homes, offering water is first done when someone visits. So in “Neeru Kodadha Naadinalli” means the place where water is not offered.

ಜಗತ್ತನ್ನು ಸುತ್ತಿದ ಲೇಖಕಿ ನೇಮಿಚಂದ್ರ ಬರೆದ “ನೀರು ಕೊಡದ ನಾಡಿನಲ್ಲಿ” ಅಧ್ಯಾಯವು ಪಾಶ್ಚಾತ್ಯ ದೇಶಗಳಲ್ಲಿ ಆಶ್ಚರ್ಯಕರವಾದ ಸಾಂಸ್ಕೃತಿಕ ವ್ಯತ್ಯಾಸವನ್ನು ತೋರಿಸುತ್ತದೆ. “ನೀರು ಕೊಡದ ನಾಡಿನಲ್ಲಿ” ಅಮೆರಿಕಾ ಮತ್ತು ಯುರೋಪ್ನಲ್ಲಿ ರೆಸ್ಟೋರೆಂಟ್ಗಳಲ್ಲಿ ನೀರನ್ನು ನೀಡುವುದಿಲ್ಲ ಎಂದು ಬರೆದಿದ್ದಾರೆ. ಬದಲಾಗಿ, ನೀವು ಅದನ್ನು ಖರೀದಿಸಬೇಕು ಮತ್ತು ಕೋಲಾ ಸಾಮಾನ್ಯವಾಗಿ ಎಲ್ಲ ಆಹಾರದ ಅಂಗಡಿಗಳಲ್ಲಿ ಸಿಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಭಾರತದಲ್ಲಿ, ಅದು ದರ್ಶಿನಿ, ಧಾಬಾ ಅಥವಾ ಪಂಚತಾರಾ ಹೋಟೆಲ್ ಆಗಿರಲಿ, ಗ್ರಾಹಕರು ಬಂದ ತಕ್ಷಣ ನೀರನ್ನು ಮೇಜಿನ ಮೇಲೆ ಇಡಲಾಗುತ್ತದೆ. ಉತ್ತರ ಭಾರತದಲ್ಲಿ, ದಾರಿಹೋಕರಿಗಾಗಿ ಬೀದಿಗಳಲ್ಲಿ ನೀರಿನ್ನು ಇಡುವುದು ಸಾಮಾನ್ಯವಾಗಿದೆ. ಹಲವೆಡೆ ಪ್ರಾಣಿಗಳಿಗೆ ನೀರಿನ ತೊಟ್ಟಿಗಳನ್ನು ಒದಗಿಸಲಾಗಿದೆ. ಭಾರತೀಯ ಮನೆಗಳಲ್ಲಿ, ಯಾರಾದರೂ ಭೇಟಿ ನೀಡಿದಾಗ ಮೊದಲು ನೀರನ್ನು ಕೊಡಲಾಗುತ್ತದೆ. ಹಾಗಾಗಿ “ನೀರು ಕೊಡದ ನಾಡಿನಲ್ಲಿ” ಎಂದರೆ ನೀರು ಕೊಡದ ಸ್ಥಳ.

ನೀರು ಕೊಡದ ನಾಡಿನಲ್ಲಿ

ಅ. ಪದಗಳ ಅರ್ಥ ಬರೆಯಿರಿ. (Write the word meaning)

ಅಗ್ಗ = ಕಡಿಮೆ ಬೆಲೆ            ಅಲೆ = ಸುತ್ತಾಡು     ಅಸ್ತ್ರ = ಆಯುಧ
ಜನಪ್ರಿಯ =  ಪ್ರಸಿದ್ಧ, ಖ್ಯಾತಿ ಪಡೆದ       ಪರಾಕಾಷ್ಠೆ = ಕೊನೆಯ ಗಡಿ
ಪುಕ್ಕಟೆ =  ಉಚಿತ   ಬುನಾದಿ =   ತಳಹದಿ       ಭಂಗಿ =  ವ್ಯಂಗ್ಯ, ಕುಟಿಲತೆ          
ಮಣ = ಹೆಚ್ಚು ತೂಕವಾದ           ಮರಳು =  ಹುಚ್ಚುತನ      
ಮಾಲೀಕ =   ಯಜಮಾನ            ಹರಡು =  ಪಸರಿಸು, ಕೆದರು
ಹಿಂಜರಿಕೆ =   ಹಿಂದೆ ಸರಿ             ಹುನ್ನಾರ =  ಸಂಚು     ಹೊಕ್ಕು = ಒಳಗೆ ಹೋಗು

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. (Answer the following in one sentence)

೧. ಎಲ್ಲೆಲ್ಲಿ ನೀರು ಕೊಡುವ ಸಂಪ್ರದಾಯವಿಲ್ಲ?
ಉ: ಯುರೋಪಿನಲ್ಲಿ ಮತ್ತು ಅಮೆರಿಕಾದಲ್ಲಿ ನೀರು ಕೊಡುವ ಸಂಪ್ರದಾಯವಿಲ್ಲ.
೨. ಮನೆಗೆ ಬಂದವರನ್ನು ಹೇಗೆ ಸತ್ಕರಿಸುವ ಸಂಪ್ರದಾಯ ನಮ್ಮಲ್ಲಿದೆ?
ಉ: ಮನೆಗೆ ಬಂದವರನ್ನು ಮೊದಲು ನೀರು ಕೊಟ್ಟು ಸತ್ಕರಿಸುವ ಸಂಪ್ರದಾಯ ನಮ್ಮಲ್ಲಿದೆ.
೩. ವಿದೇಶಗಳಲ್ಲಿ ನೀರಿಗಿಂತ ಅಗ್ಗವಾಗಿ ಸಿಗುವುದೇನು?
ಉ: ವಿದೇಶಗಳಲ್ಲಿ ನೀರಿಗಿಂತ ಅಗ್ಗವಾಗಿ ಕೋಲಾ ಸಿಗುತ್ತದೆ.
೪. ಭಾರತದಲ್ಲಿ ಇತ್ತೀಚೆಗೆ ಯಾವ ಹುನ್ನಾರ ನಡೆದಿದೆ ?
ಉ: ಭಾರತದಲ್ಲಿ ಇತ್ತೀಚೆಗೆ ಶುದ್ಧ ನೀರನ್ನು ಬಾಟಲಿಯಲ್ಲಿ ಕೊಂಡುಕೊಳ್ಳುವ ಹುನ್ನಾರ ನಡೆದಿದೆ.
೫. ಸರ್ವರಿಗೂ ವೇದ್ಯವಾಗಿರುವ ಅಂಶಗಳಾವುವು?
ಉ: ‘ಗಿಫ್ಟ್’, ‘ಗ್ರೀಟಿಂಗ್ ಕಾರ್ಡ್’ ಮಾರುವ ಹೊಸ ಹುನ್ನಾರಗಳು ಸರ್ವರಿಗೂ ವೇದ್ಯವಾಗಿರುವ ಅಂಶಗಳು.
೬. ಲೇಖಕಿಗೆ ಹೋಟೆಲ್ ನಲ್ಲಿ ನಾಲ್ಕು ಲೋಟ ನೀರು ತಂದಿಟ್ಟಾಗ ಆದ ಅನುಭವವೇನು?
ಉ: ಲೇಖಕಿಗೆ ಹೋಟೆಲ್ ನಲ್ಲಿ ನಾಲ್ಕು ಲೋಟ ನೀರು ತಂದಿಟ್ಟಾಗ ಬರೀ ಬಾಯಲ್ಲ ಮನಸ್ಸು ತಂಪಾಯಿತು.

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ. (Answer the following in two-three sentences)

೧. ವಿದೇಶಗಳಲ್ಲಿ ಬಾಯಾರಿಕೆಗೆ ಧಾರಾಳವಾಗಿ ಏನೇನು ದೊರೆಯುವವು?
ಉ: ವಿದೇಶಗಳಲ್ಲಿ ಬಾಯಾರಿಕೆಗೆ ಧಾರಾಳವಾಗಿ ಕೋಲಾಗಳು, ಫ್ರೆಂಚ್ ವೈನ್, ಬಿಯರ್ ಸಿಗುತ್ತವೆ. ವೈನ್ ಅಷ್ಟೇ ಅಲ್ಲದೆ ಬಾಟಲಿಯಲ್ಲಿ ಹಣ್ಣಿನ ಧಾರಾಳವಾಗಿ ರಸ ದೊರೆಯುತ್ತವೆ.
೨. ಗುರುದ್ವಾರಗಳ ಬಳಿ ಸ್ವಯಂಸೇವಕರು ಏನು ಮಾಡುತ್ತಿದ್ದರು?
ಉ: ಗುರುದ್ವಾರಗಳ ಬಳಿ ಸ್ವಯಂ ಸೇವಕರು ನೀರಿನ ದೊಡ್ಡ ಕೊಳಾಯಿ ಹಿಡಿದಿಟ್ಟುಕೊಳ್ಳುತ್ತಿದ್ದರು. ಅವರು ನಿಲ್ಲಿಸಿದ ಆಟೋ, ಬಸ್ಸು ಹಾಗೂ ದಾರಿಹೋಕರಿಗೆಲ್ಲ ನೀರು ತುಂಬಿ ಕೊಡುತ್ತಿದ್ದರು.
೩. ಕೋಲಾಗಳ ಆಸೆಯಿಂದ ನಾವು ಏನೆಲ್ಲವನ್ನು ತೊರೆಯುತ್ತಿದ್ದೇವೆ?
ಉ: ಕೋಲಾಗಳ ಆಸೆಯಿಂದ ನಾವು ಎಳನೀರು, ಮಜ್ಜಿಗೆ ಮತ್ತು ಪಾನಕವನ್ನು ತೊರೆಯುತ್ತಿದ್ದೇವೆ. ಅಷ್ಟೇ ಅಲ್ಲದೆ ತಾಜಾ ಹಣ್ಣಿನ ರಸ ಮತ್ತು ಕಬ್ಬಿನ ಹಾಲನ್ನು ತೊರೆಯುತ್ತಿದ್ದೇವೆ.
೪. ನಾಗರೀಕತೆಯ ದೊಡ್ಡ ಅನಾಹುತಗಳಾಗಿ ಕಾಣಿಸಿಕೊಳ್ಳುತ್ತಿರುವ ಆಚರಣೆಗಳಾವುವು?
ಉ:ಮದರ್ಸ್ ಡೇ, ಫಾದರ್ಸ್ ಡೇ, ವ್ಯಾಲೆಂಟೈನ್ ಡೇ ಈ ಎಲ್ಲಾ ಆಚರಣೆಗಳು ನಾಗರೀಕತೆಯ ದೊಡ್ಡ ಅನಾಹುತಗಳಾಗಿ ಕಾಣಿಸಿಕೊಳ್ಳುತ್ತಿವೆ. ಈ ಆಚರಣೆಗಳು ನಮ್ಮ ಸಂಸ್ಕೃತಿಯ ಮೇಲೆ ದಾಳಿಯಾಗಿದೆ.
೫. ಜನಪ್ರಿಯ ಹೋಟೆಲಿನ ಮಾಲೀಕನಿಗೆ ತಂಪು ಪಾನೀಯ ಕಂಪನಿ ಹೇಳಿದ್ದೇನು?
ಉ: ಜನಪ್ರಿಯ ಹೋಟೆಲಿನ ಮಾಲೀಕನಿಗೆ ತಂಪು ಪಾನೀಯ ಕಂಪನಿ ‘ನೀವು ಗ್ರಾಹಕರಿಗೆ ಬಂದೊಡನೆ ನೀರು ಕೊಡುವುದನ್ನು ನಿಲ್ಲಿಸಿದರೆ ಇಷ್ಟು ಹಣ ಕೊಡುವ ದಾಗಿ’ ಹೇಳಿತ್ತು.

ಇ. ಕೊಟ್ಟಿರುವ ಪ್ರಶ್ನೆಗಳಿಗೆ ಐದು-ಆರು ವಾಕ್ಯಗಳಲ್ಲಿ ಉತ್ತರಿಸಿ. (Answer the following in five – six sentence)

೧.ದುಡ್ಡಿಲ್ಲದೆ ಕುಡಿಯಬಲ್ಲ ನೀರು ಸಿಗುತ್ತಿದ್ದ ಕಾಲದ ಬಗ್ಗೆ ಲೇಖಕರ ಅಭಿಪ್ರಾಯವೇನು?
ಉ: ನಮ್ಮ ದೇಶದಲ್ಲಿ ರೈಲು, ಬಸ್ಸು, ವಿಮಾನ ನಿಲ್ದಾಣಗಳಲ್ಲಿ ದುಡ್ಡಿಲ್ಲದೆ ಕುಡಿಯಬಲ್ಲ ನೀರನ್ನು ಇರಿಸುತ್ತಾರೆ. ನಮ್ಮಲ್ಲಿ ಬಾಯಾರಿದಾಗ ಹೋಟೆಲ್ ಒಂದಕ್ಕೆ ಹೋದರೆ ನೀರು ಮಾತ್ರ ಕುಡಿದು ಹೊರಬರಬಹುದು. ಮನೆಯ ಹೊರಗೆ ಕಾಂಪೌಂಡ್ ಗೋಡೆಗೆ ಸಣ್ಣ ತೊಟ್ಟಿ ಕಟ್ಟಿ ದನಕರುಗಳು ಕುಡಿದು ಹೋಗಲು ನೀರನ್ನು ತುಂಬಿಡುತ್ತಿದ್ದರು. ದಿಲ್ಲಿಯಲ್ಲಿ ದೊಡ್ಡ ಮಣ್ಣಿನ ಮಡಿಕೆಗಳಲ್ಲಿ ನೀರು ತುಂಬಿರುತ್ತಿದ್ದರು. ಅನೇಕ ಗುರುದ್ವಾರಗಳ ಬಳಿ ಸ್ವಯಂಸೇವಕರು ನೀರಿನ ದೊಡ್ಡ ಕೊಳಾಯಿ ಹಿಡಿದು ನಿಲ್ಲಿಸಿದ ಆಟೋ, ಬಸ್ಸು ಹಾಗೂ ದಾರಿಹೋಕರಿಗರೆಲ್ಲ ನೀರನ್ನು ತುಂಬಿ ಕೊಡುತ್ತಾ ಇದ್ದರು. ಡಾಬಾ, ದರ್ಶಿನಿ, ಪಂಚತಾರಾ ಹೋಟೆಲ್ಗಳಲ್ಲಿ ಮೊದಲು ನೀರನ್ನು ಮೇಜಿನ ಮೇಲೆ ಇಡುತ್ತಾರೆ. ಇದು ದುಡ್ಡಿಲ್ಲದೆ ಕುಡಿಯಬಲ್ಲ ನೀರು ಸಿಗುತ್ತಿದ್ದ ಕಾಲದ ಬಗ್ಗೆ ಲೇಖಕರ ಅಭಿಪ್ರಾಯ.

೨. ಕಂಪನಿಗಳು ಅಪ್ಪಟ ಅಗತ್ಯದ ವಸ್ತುಗಳನ್ನು ʼಇವಿಲ್ಲದೆ ಬದುಕಿಲ್ಲʼ ಎಂಬಂತೆ ಹೇಗೆ ಬಿಂಬಿಸುತ್ತಿವೆ?
ಕೊಳ್ಳುಬಾಕತನ ನಮ್ಮ ಭಾರತೀಯ ಸಂಸ್ಕೃತಿಯ ಬುನಾದಿಯನ್ನು, ಜೀವನಶೈಲಿಯನ್ನು, ನಂಬಿಕೆಗಳನ್ನು, ಮೌಲ್ಯಗಳನ್ನು ಅಲುಗಿಸುತ್ತಿವೆ. ‘ಅಗತ್ಯ’ಗಳಲ್ಲಿ ನಡೆದು ಹೋಗುತ್ತಿದ್ದ ಬದುಕನ್ನು ‘ಬೇಕು’ಗಳ ಬಲೆಗೆ ಬೀಳಿಸಿದೆ. ಕಂಪನಿಗಳು ‘ಬೇಕು’ಗಳನ್ನು ‘ಅಗತ್ಯ’ ಹಾಗೂ ‘ಅತ್ಯಗತ್ಯ’ಗಳಾಗಿ ಜಾಣತನದಿಂದ ಜಾಹೀರಾತುಗಳನ್ನು ಮಾಡಿ ಬಿತ್ತರಿಸುತ್ತವೆ. ಆರಾಮ, ಐಷಾರಾಮದ ಅಪ್ಪಟ ಅನಗತ್ಯ ವಸ್ತುಗಳನ್ನು ‘ಇವಿಲ್ಲದೆ ಬದುಕಿಲ್ಲ’ ಎಂಬಂತೆ ಬಿತ್ತರಿಸುತ್ತಿದ್ದಾರೆ. ಡಿಯೋಡ್ರೆಂಟ್ ಹಾಕಿಕೊಳ್ಳದೆ ಇದ್ದರೆ ‘ತಾನು ನಾಥ ಬಡಿಯುತ್ತೇನೆ’ ಎಂಬಷ್ಟು ಕೀಳರಿಮೆಯನ್ನು ಹುಟ್ಟಿಸುತ್ತಿದ್ದಾರೆ. ಹೀಗೆ ನಮಗೆ ಎಲ್ಲವನ್ನು ಕೊಳ್ಳುವಂತೆ ಪ್ರೇರೇಪಿಸುತ್ತವೆ.

೩. ಲೇಖಕಿಗೆ ಬೆಂಗಳೂರಿನಲ್ಲಿ ನೀರು ಕೊಡದ ಸಂಸ್ಕೃತಿಯ ಬಗ್ಗೆ ಆದ ಅನುಭವವನ್ನು ಬರೆಯಿರಿ.
ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯ ‘ಬಾಂಬೆ ಬಜಾರ್’ ಎದುರಿನ ಪುಟ್ಟ ಜಾಯಿಂಟ್ನಲ್ಲಿ ಲೇಖಕಿ ಮತ್ತು ಅವರ ಮಗಳು ಕುಳಿತಿದ್ದರು. ಇಲ್ಲಿ ನೀರು ತಂದಿಡಲಿಲ್ಲ. ಐಸ್ ಕ್ರೀಮ್ ತಿಂದ ಮೇಲೆ ‘ನೀರು ಬೇಕು’ ಎಂದು ಕೇಳಿದರು. ‘ಮಿನರಲ್ ವಾಟರ್’ ಎಂದು ವೇಟರ್ ಪ್ರಶ್ನಿಸಿದ. ಇಲ್ಲಪ್ಪ ಸಾಮಾನ್ಯ ನೀರು ಎಂದು ಲೇಖಕೆ ಹೇಳಿದರು. ವೇಟರ್ ಬರಲೇ ಇಲ್ಲ. ಕಾದು ಸುಸ್ತಾಗಿ ಬಿಲ್ಲುಕೊಟ್ಟು ಲೇಖಕಿ ಮಗಳ ಜೊತೆ ಹೊರಗೆ ಬಂದರು. ಆದರೆ ಅದೇ ವೇಟರ್ ಪುಟ್ಟ ಬಾಟಲಿಗಳಲ್ಲಿ ಮಿನರಲ್ ವಾಟರ್ ಗಳನ್ನು ಬೇರೆ ಬೇರೆ ಮೇಜಿನ ಮೇಲೆ ಇಡುತ್ತಿದ್ದನು. ಹಾಗೆಯೇ ಅವರ ಗೆಳತಿ ಮಾಲತಿಯೊಡನೆ ಬೆಂಗಳೂರಿನ ಇಂದಿರಾ ನಗರದ ಪುಟ್ಟ ಜಾಯಿಂಟ್ಗೆ ಐಸ್ ಕ್ರೀಮ್ ತಿನ್ನಲು ಹೋದಾಗ ಇದೇ ತರಹದ ಪರಿಸ್ಥಿತಿಯನ್ನು ಎದುರಿಸಿದರು.

ಈ. ಖಾಲಿ ಬಿಟ್ಟ ಜಾಗಗಳನ್ನು ಸೂಕ್ತ ಉತ್ತರಗಳಿಂದ ಭರ್ತಿ ಮಾಡಿರಿ. (Fill in the blanks)

೧. ಭಾರತದಿಂದ ಹೊರಗೆ ಕಾಲಿಟ್ಟರೆ ಉಳಿದೆಲ್ಲವೂ ನೀರು ಕೊಡದ ನಾಡುಗಳು.
೨. ಈ ದೇಶಗಳಲ್ಲಿ ಮನೆಯ ನಲ್ಲಿಯಲ್ಲಿ ಬರುವ ನೀರನ್ನು ಕುಡಿಯುವುದಿಲ್ಲ.
೩. ಗ್ರೀಟಿಂಗ್ಸ್ ಕಾರ್ಡ್ ಮಾರುವ ಹೊಸ ಹುನ್ನಾರಗಳೆಂದು ಸರ್ವರಿಗೂ ವೇದ್ಯವಾಗಿದೆ.
೪. ಸ್ಯಾಂಡ್ವಿಚ್ ಬರ್ಗರ್ ಜೊತೆಗೆ ದೊಡ್ಡ ಗಾತ್ರದ ಕೋಲಾ ನೀಡುತ್ತಾರೆ.

ಅಭ್ಯಾಸ ಚಟುವಟಿಕೆ

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ. (Answer the following)

೧. ಗುಣಿತಾಕ್ಷರ ಎಂದರೇನು?
ಉ: ವ್ಯಂಜನಕ್ಕೆ ಸ್ವರ ಸೇರಿದಾಗ ಗುಣಿತಾಕ್ಷರವಾಗುವುದು.
೨. ಸಂಯುಕ್ತಾಕ್ಷರ ಎಂದರೇನು? ಉದಾಹರಣೆ ನೀಡಿ.
ಉ: ಒಂದಕ್ಕಿಂತ ಹೆಚ್ಚು ಸಹಜ ವ್ಯಂಜನಗಳು ಸೇರಿ ಆನಂತರ ಸ್ವರಾಕ್ಷರ ಸೇರಿದಾಗ ಸಂಯುಕ್ತಾಕ್ಷರವಾಗುತ್ತದೆ.
೩. ದೇಶ್ಯ ಮತ್ತು ಅನ್ಯ ದೇಶ್ಯ ಪದಗಳನ್ನು ಪಟ್ಟಿ ಮಾಡಿ.
ಉ: ದೇಶೀಯ ಪದ – ಮಣ್ಣು, ಪಾನಕ, ಸಣ್ಣ, ದೊಡ್ಡ
       ಅನ್ಯದೇಶೀಯ ಪದ – ಬಸ್ಸು, ಬರ್ಗರ್, ವಾಟರ್

ಆ. ಪ್ರಾಯೋಗಿಕ ಭಾಷಾಭ್ಯಾಸ

೧. ಕೊಟ್ಟಿರುವ ಪದಗಳಲ್ಲಿರುವ ಗುಣಿತಾಕ್ಷರಗಳನ್ನು ಪ್ರತ್ಯೇಕಿಸಿ ಬರೆಯಿರಿ.
ಹೋಟೆಲ್ = ಹ್+ಓ+ಟ್+ಎ+ಲ್
ಮಾಲೀಕ =‌ ಮ್+ಆ+ಲ್+ಈ+ಕ್+ಅ
ರಸ್ತೆ = ರ್+ಅ+ಸ್+ತ್+ಎ
ಗ್ರಾಹಕ = ಗ್+ರ್+ಆ+ಹ್+ಅ+ಕ್+ಅ
ಗಾಂಧೀಜಿ = ಗ್+ಆ+ಅಂ+ಧ್+ಈ+ಜ+ಇ
ಇವರು = ಇ+ವ್+ಅ+ರ್+ಉ
ಪುಣ್ಯಾತ್ಮ = ಪ್+ಉ+ಣ್+ಯ್+ಆ+ತ್+ಮ್+ಅ

೨. ಕೊಟ್ಟಿರುವ ಪದಗಳಲ್ಲಿರುವ ಸಜಾತಿಯ ಮತ್ತು ವಿಜಾತಿಯ ಸಂಯುಕ್ತಾಕ್ಷರಗಳನ್ನು ಆರಿಸಿ ಬರೆಯಿರಿ.

ಸಜಾತಿಯ ಸಂಯುಕ್ತಾಕ್ಷರವಿಜಾತಿಯ ಸಂಯುಕ್ತಾಕ್ಷರ
ಅಮ್ಮದಿನಪತ್ರಿಕೆ
ಪುಕ್ಕಟ್ಟೆಅಗತ್ಯ
ಹಣ್ಣಿನ ರಸವಸ್ತು
ಮಣ್ಣುನಿಲ್ದಾಣ
ಅಗ್ಗಸಂಪ್ರದಾಯ
ಹುನ್ನಾರಶುದ್ಧ
 ಸಂಸ್ಕೃತಿ
 ಪ್ರವಾಸ
 ಶಕ್ತಿ

೩. ಕೊಟ್ಟಿರುವ ಪದಗಳ ತದ್ಭವ ರೂಪ ಬರೆಯಿರಿ.
ವರ್ಷ = ವರುಸ            ಪ್ರಾಣ = ಹರಣ             ಶಕ್ತಿ =  ಶಕುತಿ   
ಪುಣ್ಯ = ಹೂನ್ಯ

೪. ಕೊಟ್ಟಿರುವ ಪದಗಳಲ್ಲಿರುವ ದೇಶೀಯ ಮತ್ತು ಅನ್ಯ ದೇಶೀಯ ಪದಗಳನ್ನು ಆರಿಸಿ ಬರೆಯಿರಿ.

Click here to download neeru kodhadha naadinalli exercise