Niiru Kodadha Nadinali, author Nemichandra, a globetrotter, explores a striking cultural difference between Western countries and India. She notes that in America and Europe, water is rarely offered for free in restaurants; instead, diners must purchase it, while cola is often the default beverage. In contrast, India has a distinct approach to water service. Whether in a Darshini, Dhaba, or five-star hotel, water is promptly provided upon a customer’s arrival. North India features public water stations for passersby, and water tanks are often set up for animals. Offering water is also a customary gesture in Indian homes when guests visit. Thus, “Niiru Kodadha Nadinali,” which translates to “a place where water is not offered,” aptly describes regions where the provision of water is not as ingrained in the dining experience as it is in India. So Niiru Kodadha Nadinali chapter enhances the importance of water.
ನೀರು ಕೊಡದ ನಾಡಿನಲ್ಲಿ
ಅ. ಪದಗಳ ಅರ್ಥ ಬರೆಯಿರಿ. (Write the word meaning)
ಅಗ್ಗ, ಪರಾಕಾಷ್ಠೆ, ಪುಕ್ಕಟೆ, ಬುನಾದಿ, ಅಲೆ, ಅಸ್ತ್ರ, ಜನಪ್ರಿಯ, ಭಂಗಿ, ಮಣ, ಮರಳು, ಮಾಲೀಕ, ಹೊಕ್ಕು, ಹರಡು, ಹಿಂಜರಿಕೆ, ಹುನ್ನಾರ
ಆ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. (Answer the following in one sentence)
೧. ವಿದೇಶಗಳಲ್ಲಿ ನೀರಿಗಿಂತ ಅಗ್ಗವಾಗಿ ಸಿಗುವುದೇನು?
೨. ಮನೆಗೆ ಬಂದವರನ್ನು ಹೇಗೆ ಸತ್ಕರಿಸುವ ಸಂಪ್ರದಾಯ ನಮ್ಮಲ್ಲಿದೆ?
೩. ಎಲ್ಲೆಲ್ಲಿ ನೀರು ಕೊಡುವ ಸಂಪ್ರದಾಯವಿಲ್ಲ?
೪. ಲೇಖಕಿಗೆ ಹೋಟೆಲ್ ನಲ್ಲಿ ನಾಲ್ಕು ಲೋಟ ನೀರು ತಂದಿಟ್ಟಾಗ ಆದ ಅನುಭವವೇನು?
೫. ಸರ್ವರಿಗೂ ವೇದ್ಯವಾಗಿರುವ ಅಂಶಗಳಾವುವು?
೬. ಭಾರತದಲ್ಲಿ ಇತ್ತೀಚೆಗೆ ಯಾವ ಹುನ್ನಾರ ನಡೆದಿದೆ ?
ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ. (Answer the following in two-three sentences)
೧. ಗುರುದ್ವಾರಗಳ ಬಳಿ ಸ್ವಯಂಸೇವಕರು ಏನು ಮಾಡುತ್ತಿದ್ದರು?
೨. ವಿದೇಶಗಳಲ್ಲಿ ಬಾಯಾರಿಕೆಗೆ ಧಾರಾಳವಾಗಿ ಏನೇನು ದೊರೆಯುವವು?
೩. ಕೋಲಾಗಳ ಆಸೆಯಿಂದ ನಾವು ಏನೆಲ್ಲವನ್ನು ತೊರೆಯುತ್ತಿದ್ದೇವೆ?
೪. ಜನಪ್ರಿಯ ಹೋಟೆಲಿನ ಮಾಲೀಕನಿಗೆ ತಂಪು ಪಾನೀಯ ಕಂಪನಿ ಹೇಳಿದ್ದೇನು?
೫. ನಾಗರೀಕತೆಯ ದೊಡ್ಡ ಅನಾಹುತಗಳಾಗಿ ಕಾಣಿಸಿಕೊಳ್ಳುತ್ತಿರುವ ಆಚರಣೆಗಳಾವುವು?
ಇ. ಕೊಟ್ಟಿರುವ ಪ್ರಶ್ನೆಗಳಿಗೆ ಐದು-ಆರು ವಾಕ್ಯಗಳಲ್ಲಿ ಉತ್ತರಿಸಿ. (Answer the following in five – six sentence)
೧. ಕಂಪನಿಗಳು ಅಪ್ಪಟ ಅಗತ್ಯದ ವಸ್ತುಗಳನ್ನು ʼಇವಿಲ್ಲದೆ ಬದುಕಿಲ್ಲʼ ಎಂಬಂತೆ ಹೇಗೆ ಬಿಂಬಿಸುತ್ತಿವೆ?
೨. ದುಡ್ಡಿಲ್ಲದೆ ಕುಡಿಯಬಲ್ಲ ನೀರು ಸಿಗುತ್ತಿದ್ದ ಕಾಲದ ಬಗ್ಗೆ ಲೇಖಕರ ಅಭಿಪ್ರಾಯವೇನು?
೩. ಲೇಖಕಿಗೆ ಬೆಂಗಳೂರಿನಲ್ಲಿ ನೀರು ಕೊಡದ ಸಂಸ್ಕೃತಿಯ ಬಗ್ಗೆ ಆದ ಅನುಭವವನ್ನು ಬರೆಯಿರಿ.
ಈ. ಖಾಲಿ ಬಿಟ್ಟ ಜಾಗಗಳನ್ನು ಸೂಕ್ತ ಉತ್ತರಗಳಿಂದ ಭರ್ತಿ ಮಾಡಿರಿ. (Fill in the blanks)
೧. ಭಾರತದಿಂದ ಹೊರಗೆ ಕಾಲಿಟ್ಟರೆ ಉಳಿದೆಲ್ಲವೂ ………………..
೨. ಗ್ರೀಟಿಂಗ್ಸ್ ಕಾರ್ಡ್ ಮಾರುವ ಹೊಸ ……………………..ಗಳೆಂದು ಸರ್ವರಿಗೂ ವೇದ್ಯವಾಗಿದೆ.
೩. ಈ ದೇಶಗಳಲ್ಲಿ ಮನೆಯ …………………. ಯಲ್ಲಿ ಬರುವ ನೀರನ್ನು ಕುಡಿಯುವುದಿಲ್ಲ.
೪. ಸ್ಯಾಂಡ್ವಿಚ್ ಬರ್ಗರ್ ಜೊತೆಗೆ ದೊಡ್ಡ ಗಾತ್ರದ ………………… ನೀಡುತ್ತಾರೆ.
ಅಭ್ಯಾಸ ಚಟುವಟಿಕೆ
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ. (Answer the following)
೧. ಗುಣಿತಾಕ್ಷರ ಎಂದರೇನು?
೨. ಸಂಯುಕ್ತಾಕ್ಷರ ಎಂದರೇನು? ಉದಾಹರಣೆ ನೀಡಿ.
೩. ದೇಶ್ಯ ಮತ್ತು ಅನ್ಯ ದೇಶ್ಯ ಪದಗಳನ್ನು ಪಟ್ಟಿ ಮಾಡಿ.
೪. ಕನ್ನಡದಲ್ಲಿರುವ ಯಾವುದಾದರೂ ಐದು ತದ್ಭವ ಪದಗಳನ್ನು ಪಟ್ಟಿ ಮಾಡಿ
ಆ. ಪ್ರಾಯೋಗಿಕ ಭಾಷಾಭ್ಯಾಸ
೧. ಕೊಟ್ಟಿರುವ ಪದಗಳಲ್ಲಿರುವ ಗುಣಿತಾಕ್ಷರಗಳನ್ನು ಪ್ರತ್ಯೇಕಿಸಿ ಬರೆಯಿರಿ.
ಹೋಟೆಲ್, ಗಾಂಧೀಜಿ, ಇವರು, ಪುಣ್ಯಾತ್ಮ, ಮಾಲೀಕ, ರಸ್ತೆ, ಗ್ರಾಹಕ
೨. ಕೊಟ್ಟಿರುವ ಪದಗಳಲ್ಲಿರುವ ಸಜಾತಿಯ ಮತ್ತು ವಿಜಾತಿಯ ಸಂಯುಕ್ತಾಕ್ಷರಗಳನ್ನು ಆರಿಸಿ ಬರೆಯಿರಿ.
ಪುಕ್ಕಟ್ಟೆ, ಶುದ್ಧ, ಅಗ್ಗ, ಸಂಸ್ಕೃತಿ, ಪ್ರವಾಸ, ಶಕ್ತಿ, ಹುನ್ನಾರ, ದಿನಪತ್ರಿಕೆ, ಅಗತ್ಯ, ಅಮ್ಮ, ವಸ್ತು, ಹಣ್ಣಿನ ರಸ, ನಿಲ್ದಾಣ, ಮಣ್ಣು, ಸಂಪ್ರದಾಯ
೩. ಕೊಟ್ಟಿರುವ ಪದಗಳ ತದ್ಭವ ರೂಪ ಬರೆಯಿರಿ.
ಪುಣ್ಯ ,ವರ್ಷ, ಪ್ರಾಣ, ಶಕ್ತಿ
೪. ಕೊಟ್ಟಿರುವ ಪದಗಳಲ್ಲಿರುವ ದೇಶೀಯ ಮತ್ತು ಅನ್ಯ ದೇಶೀಯ ಪದಗಳನ್ನು ಆರಿಸಿ ಬರೆಯಿರಿ.
ಬರ್ಗರ್, ಪಾನಕ, ದೊಡ್ಡದು, ಬಸ್ಸು, ವಾಟರ್, ಸಣ್ಣ, ಹುನ್ನಾರ