Ninna mutinasatigeyanitu salahu Kannada lesson grade 9. Ninna mutinasatigeyanitu salahu IX grade lesson about Raja Harishchandra. In the poem “Ninna Muttina Sattigeyannittu Salahu” from Raghavanka’s “Harishchandra Kavya,” Sage Vishwamitra tests the truthfulness of the righteous King Harishchandra by sending celestial singers to him. They captivate the king with their songs and dances. Pleased, the king offers them his pearl necklace as a gift. However, the singers decline the gift, stating, “Ninna muttina sattigeyannittu salahu,” which means, “Offering an elephant to a poor man is useless; similarly, your ornaments are of no use to us; instead, give us your royal umbrella.” This poem highlights Harishchandra’s commitment to truth and generosity.
ಕೃತಿಕಾರರ ಪರಿಚಯ
ರಾಘವಾಂಕ ನಡುಗನ್ನಡದ ಅಗ್ರಮಾನ್ಯ ಕವಿಗಳಲ್ಲಿ ಒಬ್ಬ ( ಕ್ರಿಸ್ತ ಶಕ ಸುಮಾರು ೧೨೨೫). ಹಂಪಿ ಕ್ಷೇತ್ರದವನು. ಪಂಪಾಪತಿ ವಿರೂಪಾಕ್ಷನ ಪರಮಭಕ್ತ. ರಗಳೆ ಕವಿಯೆಂದೆನಿಸಿದ ಹರಿಹರನ ಸೋದರಳಿಯ ಮತ್ತು ಶಿಷ್ಯ. ಹರಿಶ್ಚಂದ್ರಕಾವ್ಯ, ಸಿದ್ಧರಾಮಚಾರಿತ್ರ, ವೀರೇಶ್ವರಚರಿತೆ , ಸೋಮನಾಥಚರಿತೆ , ಶರಭಚಾರಿತ್ರ , ಹರಿಹರ ಮಹತ್ವ ಮುಂತಾದ ಕಾವ್ಯಗಳನ್ನು ಷಟ್ಪದಿ ಛಂದಸ್ಸುಗಳಲ್ಲಿ ರಚಿಸಿದ್ದಾನೆ. ಉಭಯಕವಿ ಕಮಲ ರವಿ , ಕವಿ ಶರಭ ಭೇರುಂಡ , ಷಟ್ಪದಿ ಬ್ರಹ್ಮ ಅಭಿದಾನಗಳನ್ನು ಹೊಂದಿದ್ದು ಷಟ್ಟದಿ ಕಾವ್ಯದ ನಿರ್ಮಾಪಕನೆಂಬ ಅಗ್ಗಳಿಕೆಗೆ ಪಾತ್ರವಾದ ಕವಿ, ರಾಘವಾಂಕ ಕವಿ ವಿರಚಿತವಾದ ಪ್ರಸ್ತುತ ಪದ್ಯಭಾಗವನ್ನು ಶ್ರೀ ಟಿ . ಎಸ್ . ವೆಂಕಣ್ಣಯ್ಯ ಅವರು ಸಂಪಾದಿಸಿರುವ ‘ ಹರಿಶ್ಚಂದ್ರ ಕಾವ್ಯ ಸಂಗ್ರಹʼ ಗ್ರಂಥದ ‘ ವಿಶ್ವಾಮಿತ್ರಾಶ್ರಮ ಪ್ರವೇಶ ‘ ಭಾಗದಿಂದ ( ಪದ್ಯ ೨೬ ರಿಂದ ೩೪) ನಿಗದಿಪಡಿಸಲಾಗಿದೆ.
ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
೧. ಗಾನರಾಣಿಯರು ಅವನೀಶನನ್ನು ನೋಡಲು ಬಂದದ್ದನ್ನು ಕವಿಯು ಯಾವುದಕ್ಕೆ ಹೋಲಿಸಿದ್ದಾನೆ ?
ಉ: ಗಾನರಾಣಿಯರು ಅವನೀಶನನ್ನು ನೋಡಲು ಬಂದದ್ದನ್ನು ಕವಿಯು ಕಾಳರಾತ್ರಿಯ ಕನ್ನೆಯರು ಹಗಲನ್ನು ನೋಡುವುದಕ್ಕೆಂದು ಬಂದಂತೆ ಎಂದು ಹೋಲಿಸಿದ್ದಾರೆ.
೨. ಗಾನರಾಣಿಯರಿಗೆ ಹರಿಶ್ಚಂದ್ರನು ಯಾವ ಬಹುಮಾನವನ್ನು ಕೊಟ್ಟನು?
ಉ: ಗಾನ ರಾಣಿಯರಿಗೆ ಹರಿಶ್ಚಂದ್ರನು ಮುತ್ತಿನಹಾರ ( ಸರ್ವಾಭರಣ ) ವನ್ನು ಬಹುಮಾನವಾಗಿ ಕೊಟ್ಟನು .
೩. ಗಾನರಾಣಿಯರು ಹರಿಶ್ಚಂದ್ರನನನ್ನು ಏನನ್ನು ಕೊಡು ಎಂದು ಕೇಳಿದರು ?
ಉ: ಗಾನರಾಣಿಯರು ಹರಿಶಂದ್ರನನ್ನು ಮುತ್ತಿನ ಸತ್ತಿಗೆಯನ್ನು ಕೊಡು ಎಂದು ಹೇಳಿದರು .
೪. ಸತ್ತಿಗೆಯು ಯಾವಾಗ ದೈವ ಸ್ವರೂಪ ಎಂದು ಹರಿಶ್ಚಂದ್ರನು ಹೇಳುತ್ತಾನೆ ?
ಉ: ರಾಜರಿಗೆ ಪಟ್ಟ ಕಟ್ಟುವಾಗ ಸತ್ತಿಗೆಯು ದೈವ ಸ್ವರೂಪವಾಗುತ್ತದೆ ಎಂದು ಹರಿಶಂದ್ರನು ಹೇಳುತ್ತಾನೆ.
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
೧. ವಿಶ್ವಾಮಿತ್ರನ ತಪೋಬಲದಿಂದ ಜನಿಸಿದ ಕನ್ನೆಯರ ರೂಪಲಾವಣ್ಯ ಹೇಗಿತ್ತು ? ವಿವರಿಸಿ.
ಉ: ಕಾಳರಾತ್ರಿಯ ಕನ್ನೆಯರು ಹಗಲನ್ನು ನೋಡುವುದಕ್ಕೆಂದು ಬಂದರೋ! ಸುರ ಮತ್ತು ಅಸುರರು ಸಮುದ್ರ ಮಂಥನ ಮಾಡಿದಾಗ ಹೊರಹೊಮ್ಮಿದ ಹೊಸ ವಿಷದ ಹೊಗೆ ಬಂದು ಕಪ್ಪಾಗಿ ಮನುಷ್ಯರಾದರೋ! ಬ್ರಹ್ಮನು ಮಾಡಿದ ನೀಲಿ ಬಣ್ಣದ ಗೊಂಬೆಗಳು ಜೀವವನ್ನು ಪಡೆದವೋ! ಎಂಬ ಹಾಗೆ ವಿಶ್ವಾಮಿತ್ರನ ತಪೋಬಲದಿಂದ ಜನಿಸಿದ ಕನ್ನೆಯರ ರೂಪಲಾವಣ್ಯವನ್ನು ವರ್ಣಿಸಿದ್ದಾರೆ .
೨. ಗಾನರಾಣಿಯರು ಏನೆಂದು ಹರಿಶ್ಚಂದ್ರನನ್ನು ಕೀರ್ತಿಸಿ ಹಾಡಿದರು ? ವಿವರಿಸಿ.
ಉ: ಗಾನರಾಣಿಯರು ಹರಿಶ್ಚಂದ್ರನನ್ನು “ ಧೀರ , ವೀರ, ರಾಯರರಾಯ, ರಾಯಜಗಜಟ್ಟಿ , ಭಾಪು , ಅದಟರಾಯ , ಮಝೇರೇ ರಾಯ , ರಾಯಭುಜಬಲಭೀಮ , ರಾಯಮರ್ಧನ , ರಾಯಕಂಟಕ ಎಂದು ಕೊಂಡಾಡುತ್ತಾ “ಚಿರಂಜೀವಿಯಾಗಿರು” ಎಂದು ಕೀರ್ತಿಸಿ ಹಾಡಿದರು.
೩. ಹರಿಶ್ಚಂದ್ರನು ಮುತ್ತಿನ ಸತ್ತಿಗೆಯನ್ನು ಏಕೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದನು ?
ಉ: ಹರಿಶ್ಚಂದ್ರನು ಗಾನರಾಣಿಯರಿಗೆ “ಸೂರ್ಯವಂಶದ ಪರಂಪರೆಯಲ್ಲಿ ಹುಟ್ಟಿದ ರಾಜರಿಗೆ ಪಟ್ಟವನ್ನು ಕಟ್ಟುವ ಸಮಯದಲ್ಲಿ ಸತ್ತಿಗೆಯು ಇಲ್ಲದಿದ್ದರೆ ದೊರೆತನವು ದೊರೆಯುವುದಿಲ್ಲ. ಯುದ್ಧದಲ್ಲಿ ಸತ್ತಿಗೆಯನ್ನು ಕಂಡ ಶತ್ರುಗಳು ನಿಲ್ಲುವುದಿಲ್ಲ. ಸತ್ತಿಗೆಯ ನೆರಳಲ್ಲಿ ಇದ್ದವರಿಗೆ ವಿಪತ್ತುಗಳು, ಕಷ್ಟಗಳು, ಬಡತನ , ರೋಗ, ಅಪಕೀರ್ತಿ, ಸೋಲಿನ ಭಯವು ಇರುವುದಿಲ್ಲ” ಆದ್ದರಿಂದ ಈ ಮುತ್ತಿನ ಸತ್ತಿಗೆಯನ್ನು ಕೊಡಲು ಸಾಧ್ಯವಿಲ್ಲ ಎಂದು ಹೇಳಿದನು.
೪. ಮುತ್ತಿನ ಸತ್ತಿಗೆಯ ವಿಶೇಷತೆ ಕುರಿತು ಹರಿಶ್ಚಂದ್ರನು ಏನು ಹೇಳುತ್ತಾನೆ ?
ಉ: ಹರಿಶ್ಚಂದ್ರನು ಗಾನರಾಣಿಯರಿಗೆ “ಈ ಸತ್ತಿಗೆಯನ್ನು ಸಾಮಾನ್ಯ ಜನರಿಗೆ ಕೊಡಬಾರದು. ವಂಶಪರಂಪರೆಯಿಂದ ಬಂದಿದ್ದರಿಂದ ತಂದೆಯು, ಪಟ್ಟವನ್ನು ಕಟ್ಟುವ ಸಮಯದಲ್ಲಿ ಇದನ್ನು ಪೂಜಿಸಿವುದರಿಂದ ಇದು ದೇವರು. ಎಲ್ಲರಿಗೂ ನೆರಳನ್ನು ನೀಡುವ ತಾಯಿ. ಯುದ್ಧದಲ್ಲಿ ಶತ್ರುಗಳನ್ನು ನಡುಗಿಸುವ ಇದು ಚದುರಂಗಬಲಕ್ಕೆ ಸಮಾನ” ಎಂದು ಹರಿಶ್ಚಂದ್ರನು ಮುತ್ತಿನ ಸತ್ತಿಗೆಯ ವಿಶೇಷತೆಯನ್ನು ಹೇಳಿದನು.
ಇ ) ಕೊಟ್ಟಿರುವ ಪ್ರಶ್ನೆಗಳಿಗೆ ಸುಮಾರು ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
೧. ಹರಿಶ್ಚಂದ್ರನು ನೀಡಿದ ಬಹುಮಾನವನ್ನು ತಿರಸ್ಕರಿಸಿ ಗಾನರಾಣಿಯರು ಹೇಳಿದ ಮಾತುಗಳನ್ನು ತಿಳಿಸಿ.
ಉ: ಹರಿಶ್ಚಂದ್ರನು ನೀಡಿದ ಬಹುಮಾನವನ್ನು ತಿರಸ್ಕರಿಸಿ ಗಾನರಾಣಿಯರು “ಬಡತನವಿದ್ದಾಗ ಆನೆ ದೊರಕಿ ಫಲವೇನು? ಬಾಯಾರಿಕೆಯ ಸಮಯದಲ್ಲಿ ತುಪ್ಪ ದೊರಕಿ ಫಲವೇನು? ರೋಗಿಗೆ ರಂಭೆ ದೊರಕಿ ಫಲವೇನು? ಸಾವಿನ ಸಮಯದಲ್ಲಿ ಭೂಮಿಯ ಒಡೆತನ ದೊರಕಿ ಫಲವೇನು? ಕಡುಬಿಸಿಲಿನಲ್ಲಿ ಬಳಲಿ ಬೆಂಡಾದ ಸಮಯದಲ್ಲಿ ನೀನು ನಮಗೆ ಒಡವೆಗಳನ್ನು ಕೊಟ್ಟು ಫಲವೇನು ? ಎಂದರು. ಅದರ ಬದಲು “ಸಮುದ್ರದಲ್ಲಿ ಮುಳುಗುವವನಿಗೆ ತೆಪ್ಪವನ್ನು, ಬಡತನವಿರುವವನಿಗೆ ನಿಧಿಯನ್ನು, ರೋಗಿಗೆ ಅಮೃತವನ್ನು ಕೊಟ್ಟರೆ ಅವರು ಸಂತೋಷ ಪಡುತ್ತಾರೆ. ಈ ಸುಡುವ ಬಿಸಿಲಿನಲ್ಲಿ ಇರುವ ನಮಗೆ ನಿಮ್ಮ ಮುತ್ತಿನ ಸತ್ತಿಗೆಯನ್ನು ಕೊಟ್ಟು ಸಲಹು” ಎಂದು ಹರಿಶ್ಚಂದ್ರನನ್ನು ಕೇಳುತ್ತಾರೆ.
೨. ಹರಿಶ್ಚಂದ್ರ ಮತ್ತು ಗಾನರಾಣಿಯರ ನಡುವೆ ನಡೆದ ಸಂವಾದವನ್ನು ಸಂಗ್ರಹಿಸಿ ಬರೆಯಿರಿ.
ಉ: ಹರಿಶ್ಚಂದ್ರನ ಮನಸ್ಸಿಗೆ ಸಂತೋಷವನ್ನು ಮೂಡಿಸಿದ ಗಾನರಾಣಿಯರಿಗೆ ಮುತ್ತಿನಹಾರವನ್ನು ಬಹುಮಾನವಾಗಿ ಕೊಡುತ್ತಾನೆ. ಆಗ ಗಾನರಾಣಿಯರು “ಬಡತನವಿದ್ದಾಗ ಆನೆ ದೊರಕಿ ಫಲವೇನು? ಬಾಯಾರಿಕೆಯ ಸಮಯದಲ್ಲಿ ತುಪ್ಪ ದೊರಕಿ ಫಲವೇನು? ರೋಗಿಗೆ ರಂಭೆ ದೊರಕಿ ಫಲವೇನು? ಸಾವಿನ ಸಮಯದಲ್ಲಿ ಭೂಮಿಯ ಒಡೆತನ ದೊರಕಿ ಫಲವೇನು? ಕಡುಬಿಸಿಲಿನಲ್ಲಿ ಬಳಲಿ ಬೆಂಡಾದ ಸಮಯದಲ್ಲಿ ನೀನು ನಮಗೆ ಒಡವೆಗಳನ್ನು ಕೊಟ್ಟು ಫಲವೇನು ? ಅದರ ಬದಲು “ಸಮುದ್ರದಲ್ಲಿ ಮುಳುಗುವವನಿಗೆ ತೆಪ್ಪವನ್ನು, ಬಡತನವಿರುವವನಿಗೆ ನಿಧಿಯನ್ನು, ರೋಗಿಗೆ ಅಮೃತವನ್ನು ಕೊಟ್ಟರೆ ಅವರು ಸಂತೋಷ ಪಡುತ್ತಾರೆ. ಈ ಸುಡುವ ಬಿಸಿಲಿನಲ್ಲಿ ಇರುವ ನಮಗೆ ನಿಮ್ಮ ಮುತ್ತಿನ ಸತ್ತಿಗೆಯನ್ನು ಕೊಟ್ಟು ಸಲಹು”ಎಂದರು.
ಅದಕ್ಕೆ ಹರಿಶ್ಚಂದ್ರನು “ಈ ಸತ್ತಿಗೆಯನ್ನು ಸಾಮಾನ್ಯ ಜನರಿಗೆ ಕೊಡಬಾರದು. ವಂಶಪರಂಪರೆಯಿಂದ ಬಂದಿದ್ದರಿಂದ ತಂದೆಯು, ಪಟ್ಟವನ್ನು ಕಟ್ಟುವ ಸಮಯದಲ್ಲಿ ಇದನ್ನು ಪೂಜಿಸಿವುದರಿಂದ ಇದು ದೇವರು. ಎಲ್ಲರಿಗೂ ನೆರಳನ್ನು ನೀಡುವ ತಾಯಿ. ಯುದ್ಧದಲ್ಲಿ ಶತ್ರುಗಳನ್ನು ನಡುಗಿಸುವ ಇದು ಚದುರಂಗಬಲಕ್ಕೆ ಸಮಾನ” ಎಂದು ಹೇಳುತ್ತಾನೆ.
ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .
೧. “ಸಂದ ಕಾರಿರುಳು ಕನ್ನೆಯರು ಹಗಲಂ ನೋಡಲೆಂದು ಬಂದರೊ”
ಆಯ್ಕೆ: ಈ ವಾಕ್ಯವನ್ನು ರಾಘವಾಂಕ ಕವಿಯು ರಚಿಸಿರುವ ʼಹರಿಶ್ಚಂದ್ರಕಾವ್ಯʼ ಗ್ರಂಥದ ‘ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹುʼ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಹರಿಶ್ಚಂದ್ರನ ಮನಸ್ಸನ್ನು ಸಂತೋಷ ಪಡಿಸಲು ಬಂದ ಗಾನ ರಾಣಿಯರ ರೂಪವನ್ನು ವರ್ಣಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ. ಕಾಳರಾತ್ರಿಯ ಕನ್ನೆಯರು ಹಗಲನ್ನು ನೋಡುವುದಕ್ಕೆಂದು ಬಂದರೋ ಎಂದು ವರ್ಣಿಸಿದ್ದಾರೆ.
ಸ್ವಾರಸ್ಯ : ಗಾನ ರಾಣಿಯರನ್ನು ಕವಿ ಕಾಳರಾತ್ರಿಗೆ ಹೋಲಿಸಿ ಹರಿಶ್ಚಂದ್ರನನ್ನು ಹಗಲಿಗೆ ಹೋಲಿಸುವುದು ಇಲ್ಲಿ ಸ್ವಾರಸ್ಯಕರವಾಗಿದೆ.
೨. “ ಬಡತನದ ಹೊತ್ತಾನೆ ದೊರಕಿ ಫಲವೇನು ”
ಆಯ್ಕೆ: ಈ ವಾಕ್ಯವನ್ನು ರಾಘವಾಂಕ ಕವಿಯು ರಚಿಸಿರುವ
ʼಹರಿಶ್ಚಂದ್ರಕಾವ್ಯʼ ಗ್ರಂಥದ ‘ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹುʼ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಗಾನರಾಣಿಯರ ಹಾಡು ಮತ್ತು ನೃತ್ಯಕ್ಕೆ ಮೆಚ್ಚಿದ ಹರಿಶ್ಚಂದ್ರನು ತನ್ನ ಕೊರಳಲ್ಲಿದ್ದ ಮುತ್ತಿನ ಹಾರವನ್ನು ಬಹುಮಾನವನ್ನಾಗಿ ಕೊಟ್ಟಾಗ ಅದನ್ನು ತಿರಸ್ಕರಿದ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ: ಬಡತನದಲ್ಲಿರುವವನಿಗೆ ಆನೆ ಕೊಟ್ಟರೆ ಏನು ಫಲ ಎಂಬುದು ಸ್ವಾರಸ್ಯವಾಗಿದೆ.
೩. “ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಭೂಭುಜಯೆಂದರು ”
ಆಯ್ಕೆ: ಈ ವಾಕ್ಯವನ್ನು ರಾಘವಾಂಕ ಕವಿಯು ರಚಿಸಿರುವ ʼಹರಿಶ್ಚಂದ್ರಕಾವ್ಯʼ ಗ್ರಂಥದ ‘ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹುʼ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಗಾನರಾಣಿಯರ ಹಾಡು ಮತ್ತು ನೃತ್ಯಕ್ಕೆ ಮೆಚ್ಚಿದ ಹರಿಶ್ಚಂದ್ರನು ತನ್ನ ಕೊರಳಲ್ಲಿದ್ದ ಮುತ್ತಿನ ಹಾರವನ್ನು ಬಹುಮಾನವನ್ನಾಗಿ ಕೊಟ್ಟಾಗ ಅದನ್ನು ತಿರಸ್ಕರಿದ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ. ನಮಗೆ ಮುತ್ತಿನ ಸತ್ತಿಗೆಯನ್ನು ಕೊಟ್ಟು ಸಲಹು ಎಂದು ಕೇಳುತ್ತಾರೆ.
ಸ್ವಾರಸ್ಯ : ಗಾನರಾಣಿಯರು ಬಿಸಿಲ ಬೇಗೆಯನ್ನು ಹೋಗಲಾಡಿಸಲು ಹರಿಶ್ಚಂದ್ರನ ವಂಶ ಪಾರಂಪರ್ಯದ ಮುತ್ತಿನ ಸತ್ತಿಗೆಯನ್ನೇ ಬಹುಮಾನ ಕೇಳಿರುವುದು ಸ್ವಾರಸ್ಯಕರವಾಗಿದೆ.
೪. “ ಅನುನಯದೊಳೆಲ್ಲವಂ ಕೊಡಬಹುದು ಬಿಡಬಹುದು ”
ಆಯ್ಕೆ: ಈ ವಾಕ್ಯವನ್ನು ರಾಘವಾಂಕ ಕವಿಯು ರಚಿಸಿರುವ ʼಹರಿಶ್ಚಂದ್ರಕಾವ್ಯʼ ಗ್ರಂಥದ ‘ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹುʼ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಗಾನ ರಾಣಿಯರು ಹರಿಶ್ಚಂದ್ರನನ್ನು ಮುತ್ತಿನ ಸತ್ತಿಗೆಯನ್ನು ಬಹುಮಾನವಾಗಿ ಕೊಡು ಎಂದು ಕೇಳಿದ ಸಂದರ್ಭದಲ್ಲಿ ಪ್ರೀತಿಯಿಂದ ಎಲ್ಲವನ್ನು ಕೊಡಬಹುದು. ಆದರೆ ತಾಯಿ, ತಂದೆ, ಸತಿ, ಪರಿವಾರವನ್ನು ಕೊಡಲು ಸಾಧ್ಯವೇ ಎಂದು ಹರಿಶ್ಚಂದ್ರನು ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ: ತಾಯಿ, ತಂದೆ, ಸತಿ, ಪರಿವಾರವನ್ನು ಬಿಟ್ಟುಕೊಡದೇ ಕಾಪಾಡುವುದು ಕರ್ತವ್ಯ ಎಂಬುದು ಸ್ವಾರಸ್ಯವಾಗಿದೆ.
Click here to download 9th grade nina mutinasatigeyitu salahu