This poem is written by Shri. K S Nisar Ahmed. Karnataka’s beauty is very well expressed by the poet. He writes about Karnataka as”Beautiful jog falls, free flowing of Tunga river, minerals of Sahyadri hills, Green thick forest “. This is the solved exercise of the Poem Nityotsava.

Click here to download nityotsava solved paper

ನಿತ್ಯೋತ್ಸವ

ಅ. ಪದಗಳ ಅರ್ಥ ಬರೆಯಿರಿ: ( Write the meanings in both English and Kannada)
ತರು = ಮರ (Tree)                     ಅದಿರು = ಖನಿಜ          
ಗತ = ಹಿಂದೆ ನಡೆದದ್ದು (Past)        ತೊರೆ = ನದಿ (River)
ಶಾಸನ = ಕಲ್ಲಿನ ಮೇಲಿನ ಬರಹ (Sculpture)
ಗರಿಮೆ = ಹಿರಿಮೆ                        ಸೀಮೆ = ನಾಡು, ಸ್ಥಳ, ಪ್ರದೇಶ (Place)
ಶೀಲ = ನಡತೆ, ಚಾರಿತ್ಯ                ವನ = ಅರಣ್ಯ, ಬನ, ಕಾಡು (Forest)
ನಿತ್ಯ = ಪ್ರತಿದಿನ (Every Day)

ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. ( Answer the following questions in one sentences)
೧. ಜೋಗದ ಸಿರಿ ಯಾವುದು?
ಉ: ಜೋಗದ ಸಿರಿ ಬೆಳಕಿನಲ್ಲಿದೆ.
೨. ತುಂಗಾ ನದಿ ಹೇಗೆ ಹರಿದು ಬರುತ್ತದೆ?
ಉ: ತುಂಗಾ ನದಿ ತೆನೆಯ ನಡುವೆ ಬಳುಕುತ್ತಾ ಹರಿದು ಬರುತ್ತದೆ.
೩. ಹರಿದ್ವರ್ಣ ಕಾಡುಗಳಲ್ಲಿ ಯಾವ ಜಾತಿಯ ಮರಗಳಿವೆ?
ಉ: ಹರಿದ್ವರ್ಣ ಕಾಡುಗಳಲ್ಲಿ ತೇಗ ಮತ್ತು ಗಂಧ ಜಾತಿಯ ಮರಗಳಿವೆ.
೪. ಶಾಸನಗಳು ಏನನ್ನು ಸಾರುತ್ತದೆ?
ಉ: ಶಾಸನಗಳು ಗತಕಾಲದ ಸಾಹಸಗಳನ್ನು ಸಾರುತ್ತದೆ.
೫. ಕನ್ನಡ ಸೀಮೆಯ ಜನರ ಮನಸ್ಸು ಎಂತಹದ್ದು?
ಉ: ಕನ್ನಡ ಸೀಮೆಯ ಜನರ ಮನಸ್ಸು “ ನಾವೆಲ್ಲರೂ ಒಂದೇ” ಎಂಬ
     ಮನೋಭಾವದ್ದು.
೬. ಕನ್ನಡ ಸೀಮೆಯ ಜನರ ನುಡಿ ಯಾವ ರೀತಿಯದು?
ಉ: ಕನ್ನಡ ಸೀಮೆಯ ಜನರ ನುಡಿ ಅದ್ಭುತದ ರೀತಿಯದು.

ಇ.  ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ. (Answer the questions in two – three sentences)
೧. ಕನ್ನಡ ನಾಡಿನ ಪ್ರಕೃತಿಯ ನಿತ್ಯೋತ್ಸವವನ್ನು ಕವಿ ಏನೆಂದು ವರ್ಣಿಸಿದ್ದಾರೆ?
ಉ: ಕನ್ನಡ ನಾಡಿನ ಪ್ರಕೃತಿಯ ನಿತ್ಯೋತ್ಸವವನ್ನು ಕವಿ ಜೋಗದ ಜಲಪಾತ,
     ಬಳುಕುವ ತುಂಗೆಯ ಸಂಪತ್ತಿಗೆ ಹೋಲಿಸಿ ವರ್ಣಿಸಿದ್ದಾರೆ.
೨. ನಾಡಿನ ಇತಿಹಾಸ ನಿತ್ಯೋತ್ಸವವನ್ನು ಎಲ್ಲೆಲ್ಲಿ ಕಾಣಬಹುದಾಗಿದೆ?
ಉ: ನಾಡಿನ ಇತಿಹಾಸ ನಿತ್ಯೋತ್ಸವವನ್ನು ಕರ್ನಾಟಕವನ್ನು ಆಳಿದ  ವೀರ ಅರಸರ
     ಶಾಸನಗಳಲ್ಲಿ, ಗೋಡೆಯ ಚಿತ್ರಗಳಲ್ಲಿ ಹಾಗೂ ಕವಿಗಳು ರಚಿಸಿದ ಓಲೆಗರಿಗಳಲ್ಲಿ
     ಕಾಣಬಹುದಾಗಿದೆ.

ಈ. ಕೆಳಗಿನ ಪದಗಳಿಗೆ ನಾನಾರ್ಥ ಪದಗಳನ್ನು ಬರೆಯಿರಿ. (Write many meanings)
೧. ತೊರೆ – ನದಿ , ಬಿಡು
೨. ವರ್ಣ – ಬಣ್ಣ , ಜಾತಿ
೩. ಹತ್ತು – ಸಂಖ್ಯೆ , ಏರು

ಉ. ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ. ( Split the words)
೧. ನಿತ್ಯೋತ್ಸವ : ನಿತ್ಯ + ಉತ್ಸವ
೨. ಲೋಕಾಮೃತ : ಲೋಕ + ಅಮ್ರತ
೩. ಸಿಂಹಾಸನ : ಸಿಂಹ + ಆಸನ

ಊ. ಸ್ವಂತ ವಾಕ್ಯದಲ್ಲಿ ಬರೆಯಿರಿ. (Make your own sentences)
೧. ಉತ್ತುಂಗ : ಹಿಮಾಲಯ ಪರ್ವತ ಉತ್ತುಂಗದಲ್ಲಿ ಇದೆ.
೨. ಇತಿಹಾಸ: ನನಗೆ ಇತಿಹಾಸ ಇಷ್ಟ ಇಲ್ಲ.
೩. ಹಿರಿಮೆ: ಕರ್ನಾಟಕದ ಬಗ್ಗೆ ನಮಗೆ ಹಿರಿಮೆ ಇದೆ.

ಋ. ಕೆಳಗಿನ ಪದಗಳನ್ನು ಬಹುವಚನ ಬರೆಯಿರಿ. (Write the plural)
೧. ಓಲೆ – ಓಲೆಗಳು              ೨. ಸಿಂಹಾಸನ – ಸಿಂಹಾಸನಗಳು
೩. ತಾಯಿ – ತಾಯಿಯರು       ೪. ಜಲಪಾತ – ಜಲಪಾತಗಳು