Truth Always Triumphs – ಗಾದೆ ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿ ಮುತ್ತುಗಳು. ಸತ್ಯ ಸದಾ ಜೀವಂತವಾದುದು. ಸುಳ್ಳು ಎಂದು ಸಂಖವನ್ನು ಕೊಡಲಾರದು ಎನ್ನುವುದು ಈ ಗಾದೆಯ ಅರ್ಥ. ಸತ್ಯ ಶಾಶ್ವತವಾದುದು. ಆದ್ದರಿಂದ ನಮ್ಮ ರಾಷ್ಟ್ರೀಯ ಲಾಂಛನದಲ್ಲಿ ‘ಸತ್ಯಮೇವ ಜಯತೇ’ ಎಂಬ ಬರೆಹವಿದೆ. ಸತ್ಯಕ್ಕೆ ಜಯ ಎಂದು ಎಲ್ಲಾ ಧರ್ಮಗಳು ಸಾರುತ್ತವೆ. ರಾಜ ಸತ್ಯ ಹರಿಶ್ವಂದ್ರ ಜೀವನವೆಲ್ಲ ಸತ್ಯಕ್ಕಾಗಿ ಹೋರಾಡಿದನು. ಗಾಂಧೀಜಿ , ಸ್ವಾಮಿ ವಿವೇಕಾನಂದ ಮೊದಲಾದ ಮಹಾತ್ಮರು ಸತ್ಯ ಜೀವನವನ್ನು ನಡೆಸಿದರು. ಸುಳ್ಳಿಗೆ ಸುಬವಿಲ್ಲ. ಸುಳ್ಳು ಹೇಳುವವನನ್ನು ಯಾರು ನಂಬುವುದಿಲ್ಲ. ಸುಳ್ಳು ಒಂದು ಬಲೆ ಇದ್ದ ಹಾಗೆ ಅದರಲ್ಲಿ ಸಿಕ್ಕಿಬಿದ್ದರೆ ಹೊರ ಬರುವುದು ಕಷ್ಟ.
ಸತ್ಯವೇ ಬೆಳಕು, ಸುಳ್ಳೆ ಕತ್ತಲು. ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ ಎಂಬ ಮಾತನ್ನು ಎಂದಿಗೂ ಯಾರು ಮರೆಯಬಾರದು.
ಸುಮನಾ ಶ್ರೀರಾಮ್
There is no spice with better taste than salt and there are no relations which are superior than a mother and her child.
ಗಾದೆ ವೇದಕ್ಕೆ ಸಮಾನ, ವೇದ ಸುಳ್ಳಾದರೂ, ಗಾದೆ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ಸಾರ.
ಊಟದಲ್ಲಿ ನಾಲ್ಕು ಪ್ರಧಾನ ರುಚಿಗಳಿವೆ. ಉಪ್ಪು, ಹುಳಿ, ಖಾರ ಮತ್ತು ಸಿಹಿ. ಎಲ್ಲಾ ಅಡುಗೆಗಳಲ್ಲಿ ಉಪ್ಪು ತನ್ನ ಪಾತ್ರ ವಹಿಸುತ್ತದೆ. ಸಿಹಿರುಚಿಯನ್ನು ಹೆಚ್ಚಿಸಲು ಕೂಡಾ ಉಪ್ಪನ್ನು ಬಳಸುತ್ತಾರೆ. ಅದೇ ರೀತಿ ಸಂಭಂದಗಳಲ್ಲಿ ತಾಯಿ ಪಾತ್ರ ಪ್ರಧಾನ. ಒಂದು ಹೆಣ್ಣು ಮಗುವಿಗೆ ಜನ್ಮ ಕೊಟ್ಟಾಗ ಅವಳು ತಾಯಿ ಎನಿಸಿ ಪುರ್ನರ ಜನ್ಮ ಪಡೆಯುತ್ತಾಳೆ. ತಾಯಿ ದೇವರು ಕೊಟ್ಟ ವರ. ಬೇರೆಲ್ಲ ಸಂಭಂದ ಬಿಟ್ಟು ಹೋದರು ತಾಯಿಯ ಸಂಭಂದ ಶಾಶ್ವತ.
ಸುಮನಾ ಶ್ರೀರಾಮ್
Stress is not good for health
ಗಾದೆ ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ. ಗಾದೆ ಹಿರಿಯರ ಅನುಭವದ ಸಾರ. ಚಿಂತೆ ಯು ಆಯುಷ್ಯವನ್ನು ತಿನ್ನುತ್ತದೆ ಎನ್ನುವ ಮಾತಿನಂತೆ, ಮಾನಸಿಕ ಚಿಂತೆ ಮನುಷ್ಯನಿಗೆ ಅಕಾಲದ ಮುಪ್ಪನ್ನು ತರುತ್ತದೆ. ಚಿಂತೆಗೂ ಚಿತೆಗೂ ವ್ಯತ್ಯಾಸ ಒಂದು ಸೊನ್ನೆ ಆದರೆ ಚಿಂತೆ ಬದುಕಿದವನನ್ನು ಸುಟ್ಟರೆ ಚಿತೆ ನಿರ್ಜೀವ ವಸ್ತುವನ್ನು ಸುಡುತ್ತದೆ. ಚಿಂತೆಯು ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡುತ್ತದೆ. ಮನುಷ್ಯನನ್ನು ನಿರುತ್ಸಾಹಿಯಾಗಿ ಮಾಡುತ್ತದೆ. ನೆಮ್ಮದಿ ಸಂತೋಷ ಆಯುಷ್ಯ ಹೆಚ್ಚಿಸಿದರೆ, ಚಿಂತೆ ವಿರೋಧವಾಗಿ ಕೆಲಸ ಮಾಡುತ್ತದೆ. ಜೀವನದಲ್ಲಿ ಎಂದೂ ಬದುಕಬೇಕು, ಸಾಧಿಸಬೇಕು ಮತ್ತು ಗೆಲ್ಲಬೇಕು.
ಸುಮನಾ ಶ್ರೀರಾಮ್
Control your anger –
“ಕೋಪದಿಂದ ಮೂಗು ಕೊಯ್ದರೆ ಮೂಗು ಮತ್ತೆ ಬರುವದೇ?” ಎಂಬ ಗಾದೆಯು ಕೋಪ ಮತ್ತು ಆಕ್ರೋಶದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಆಗುವ ನಷ್ಟವನ್ನು ಸೂಚಿಸುತ್ತದೆ. ಈ ಗಾದೆಯು ಸೂಚಿಸುವಂತೆ, ನಾವು ಕೋಪದಿಂದ ಮಾಡುವ ಯಾವುದೇ ಕಾರ್ಯ ಅಥವಾ ನಿರ್ಧಾರಗಳು, ಎಷ್ಟು ದೊಡ್ಡ ಹಾನಿಯನ್ನುಂಟುಮಾಡಬಹುದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮೂಗು ಕೊಯ್ದು ಹಾಕಿದರೆ, ಅದನ್ನು ಮತ್ತೆ ಹಿಂದಿರುಗಿಸುವುದು ಹೇಗೆ ಅಸಾಧ್ಯವೋ, ಹಾಗೆಯೇ ಕೋಪದಿಂದ ಮಾಡಿದ ಅನಾಹುತವನ್ನು ಕೂಡ ಸುಲಭವಾಗಿ ಸರಿಪಡಿಸಲು ಸಾಧ್ಯವಿಲ್ಲ ಎಂಬುದು ಇದರ ಅರ್ಥ. ಹಠಾತ್ ಕೋಪಕ್ಕೆ ದಾಸರಾಗುವುದು, ತಕ್ಷಣದ ಆಕ್ರೋಶದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ತಪ್ಪು. ಇದು ತೀವ್ರ ನಷ್ಟಕ್ಕೆ ಕಾರಣವಾಗುತ್ತದೆ. ಕೋಪವು ಪ್ರಾಯಶಃ ತಾತ್ಕಾಲಿಕವಾದುದು, ಆದರೆ ಅದರ ಪರಿಣಾಮಗಳು ಬಹಳ ತೀವ್ರವಾಗಿರಬಹುದು. ಆದ್ದರಿಂದ, ನಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಂಡು, ಶಾಂತ ಮನಸ್ಸಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಅಷ್ಟೇ ಅಲ್ಲದೆ ಅದರಿಂದ ನಮ್ಮ ಜೀವನದಲ್ಲಿ ಶಾಶ್ವತ ಹಾನಿಯನ್ನು ತಡೆಯಬಹುದು.
ಗಾದೆ ವೇದಕ್ಕೆ ಸಮಾನ. ಇದು ಗ್ರಾಮೀಣ ಜನರ ಉಪನಿಷತ್ತು. ಇವು ಸಾಮಾನ್ಯವಾಗಿ ಲೋ ಕೋಕ್ತಿ, ಸುಭಾಷಿತ ,ಕವಿ ಸೂಕ್ತಿಗಳಂತೆ ಅಡಕವಾದ ಮಾತುಗಳಲ್ಲಿ ಇರುತ್ತವೆ.
ಆರೋಗ್ಯದ ಬಗೆಗೆ ಎಚ್ಚರ ವಹಿಸುವವರು, ಆಹಾರದ ಬಗೆಗೂ ಜಾಗೃತರಾಗಿರಬೇಕು. ಈ ಗಾದೆಯ ಅರ್ಥ ಆರೋಗ್ಯವೇ ಭಾಗ್ಯ. ಸರಿಯಾದ ಸಮಯಕ್ಕೆ, ಸರಿಯಾದ ಪ್ರಮಾಣದಲ್ಲಿ ಸರಿಯಾದ ಆಹಾರ ಸೇವಿಸುವುದರಿಂದ ಆರೋಗ್ಯ ಮತ್ತು ಸದೃಢ ದೇಹ ಪಡೆಯಬಹುದು. ನಾವು ಸೇವಿಸುವ ಆಹಾರ ಹಿತ ಮಿತ ಮತ್ತು ಶುದ್ಧವಾಗಿರಬೇಕು.
ಅದೇ ರೀತಿ ಮಾತು ಮಿತವಾಗಿರಬೇಕು. ಮಾತಿನಲ್ಲಿ ಚುರುಕುತನ, ಜಾಣತನ, ಸಮಯೋಚಿತ , ಸಂದಭೋ೯ಚಿತವಾದ ನಡತೆಯೊಂದಿಗೆ ಮಾತು ಆಡಿದಾಗ ಜಗಳಕ್ಕಾಗಲಿ, ಮನಸ್ತಾಪಕ್ಕಾಗಲಿ, ಆಸ್ಪದ ಇರುವುದಿಲ್ಲ.
ಸುಮನಾ ಶ್ರೀರಾಮ್
Intelligence is superior than power.
ಗಾದೆ ವೇದಕ್ಕೆ ಸಮಾನ. ಇದು ಗ್ರಾಮೀಣ ಜನರ ಉಪನಿಷತ್ತು. ಇವು ಸಾಮಾನ್ಯವಾಗಿ ಲೋ ಕೋಕ್ತಿ, ಸುಭಾಷಿತ ,ಕವಿ ಸೂಕ್ತಿಗಳಂತೆ ಅಡಕವಾದ ಮಾತುಗಳಲ್ಲಿ ಇರುತ್ತವೆ.
ದೈಹಿಕ ಬಲಕ್ಕಿಂತ ಸಮಯೋಚಿತ ಬುದ್ಧಿ ಮಿಗಿಲಾದುದು ಎಂಬುದು ಈ ಗಾದೆಯ ಅರ್ಥ. ಕೃಷ್ಣನ ಶೇಷ್ಠ ಬುದ್ಧಿ ಪಾಂಡವರು ಕುರು ಕ್ಷೇತ್ರದ ಯುದ್ಧ ಗೆಲ್ಲಲು ಸಹಾಯ ಮಾಡಿತು. ಅದೇ ರೀತಿ ಪಂಚತಂತ್ರದ ಕಥೆಗಳಲ್ಲಿ ಬರುವ ಹುಲಿ ಮತ್ತು ಇಲಿಯ ಕಥೆಯಲ್ಲಿ ಬಲೆಯಲ್ಲಿ ಸಿಕ್ಕಿಕೊಂಡ ಬಲಶಾಲಿ ಹುಲಿ ನಿಸ್ಸಹಾಯವಾದಾಗ ಬುದ್ಧಿಯಲ್ಲಿ ಚುರುಕು ಇಲಿಯ ಸಹಾಯ ಪಡೆಯಿತು. ಶಕ್ತಿ ಮನುಷ್ಯನ ದೈಹಿಕ ಸಾಮರ್ಥ್ಯವಾದರೆ, ಯುಕ್ತಿ ಬೌದ್ಧಿಕ ಸಾಮರ್ಥ್ಯ. ಶಕ್ತಿ ಶಾಲಿಯಾದವರಿಗಿಂತ ಯುಕ್ತಿಯನ್ನು ಉಪಯೋಗಿಸುವವರೆ ಜಯಶಾಲಿಗಳಾಗುತ್ತಾರೆ
ಸುಮನಾ ಶ್ರೀರಾಮ್
Joy for cat, trouble for rat
ಗಾದೆ ವೇದಕ್ಕೆ ಸಮಾನ. ಇದು ಗ್ರಾಮೀಣ ಜನರ ಉಪನಿಷತ್ತು. ಇವು ಸಾಮಾನ್ಯವಾಗಿ ಲೋ ಕೋಕ್ತಿ, ಸುಭಾಷಿತ ,ಕವಿ ಸೂಕ್ತಿಗಳಂತೆ ಅಡಕವಾದ ಮಾತುಗಳಲ್ಲಿ ಇರುತ್ತವೆ.
ಗಾದೆಗಳು ಅರ್ಥದಲ್ಲಿ ತ್ರಿವಿಕ್ರಮ ನಿದ್ದಂತೆ
ಬೆಕ್ಕಿಗೆ ಆಹಾರ ಇಲಿ. ಬೆಕ್ಕು ಇಲಿಯನ್ನು ಬೇಟೆಯಾಡಿ ತಕ್ಷಣ ತಿನ್ನದೆ ಅದನ್ನು ಚೆನ್ನಾಗಿ ಆಟ ಆಡಿಸಿ, ಚಿತ್ರಹಿಂಸೆ ನೀಡಿ ಸಾಯಿಸಿ ನಂತರ ತಿನ್ನುತ್ತದೆ. ಹಾಗೆಯೇ ಕೆಲವು ಮನುಷ್ಯರು ಬಡವರ ಬಲಹೀನರ ಮೇಲೆ ದೌರ್ಜನ್ಯ ಮಾಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಾರೆ. ಬಡವರು, ಬಲಹೀನರು ಸಾಯಲೂ ಬಾರದು ಬದುಕಲೂ ಬಾರದು ಎನ್ನುವಂತೆ ಮಾಡುತ್ತಾರೆ. ಬಲಶಾಲಿ, ಶ್ರೀಮಂತರಾದವರು ಲೋಕಹಿತದ ಕಾರ್ಯ ಮಾಡಿದಾಗ, ಎಲ್ಲರನ್ನು ಸಮಾನರು ಎಂದು ತಿಳಿದಾಗ ಮಾತ್ರ ಭೂಮಿ ಮೇಲೆ ಯಾರು ಯಾರಿಗೂ ನೋವು ಮಾಡದೆ ಸುಃಖವಾಗಿರಬಹುದು.
ಸುಮನಾ ಶ್ರೀರಾಮ್
Correction should happen at very young age
ಗಾದೆ ವೇದಕ್ಕೆ ಸಮಾನ. ಇದು ಗ್ರಾಮೀಣ ಜನರ ಉಪನಿಷತ್ತು. ಇವು ಸಾಮಾನ್ಯವಾಗಿ ಲೋ ಕೋಕ್ತಿ, ಸುಭಾಷಿತ ,ಕವಿ ಸೂಕ್ತಿಗಳಂತೆ ಅಡಕವಾದ ಮಾತುಗಳಲ್ಲಿ ಇರುತ್ತವೆ.
ಗಾದೆಗಳು ಅರ್ಥದಲ್ಲಿ ತ್ರಿವಿಕ್ರಮನಿದ್ದಂತೆ.
ಗಿಡ ಸಸಿಯಾಗಿರುವಾಗ ಅದನ್ನು ಸರಿಯಾಗಿ ಪೋಷಿಸಿ . ಬಗ್ಗಿಸಿ ಬೆಳೆಸಿದರೆ ಮಾತ್ರ ಅದು ಒಂದು ಉತ್ತಮ ಮರವಾಗಿ ಬೆಳೆಯುತ್ತದೆ. ಅದೇ ರೀತಿ ಮಕ್ಕಳಿಗೆ ಜೀವನದ ಸರಿತಪ್ಪುಗಳನ್ನು ಸರಿಯಾದ ವಯಸ್ಸಿನಲ್ಲಿ ಹೇಳಿಕೊಡಬೇಕು ಮಕ್ಕಳಿಗೆ ಹೆಚ್ಚಿನ ಸ್ವಾತಂತ್ರ್ಯ ಕೊಟ್ಟಾಗ, ಅದರ ಮಹತ್ವವನ್ನು ತಿಳಿಸಬೇಕು. ಕೆಟ್ಟ ಚಟಗಳಿಗೆ ಒಳಗಾಗದಂತೆ ನೋಡಿಕೊಳ್ಳಬೇಕು. ನಮ್ಮ ಸಂಸ್ಕೃತಿ, ರೀತಿ ನೀತಿಗಳ ಮೇಲೆ ಅಭಿಮಾನ ಬೆಳಸಬೇಕು. ಎಳೆ ವಯಸ್ಸಿನಲ್ಲಿಯೇ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕೆಂಬುದೇ ಈ ಗಾದೆಯ ಸಂದೇಶ.
ಸುಮನಾ ಶ್ರೀರಾಮ್
Greed leads to disappointment
ಗಾದೆ ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿ ಮುತ್ತುಗಳು .
ಮನುಷ್ಯನಿಗೆ ಆಸೆ ಇರಬೇಕು. ಆಸೆ ಇಲ್ಲದವ ಬದುಕಲಾರ. ಆದರೆ ಆಸೆ ಹಿತಮಿತವಾಗಿರಬೇಕು. ಅತಿಯಾದ ಆಸೆ ದುಃಖಕ್ಕೆ ಮೂಲ ಎಂದು ಬುದ್ಧ ಹೇಳಿದ್ದಾನೆ. ಪ್ರತಿ ದಿನ ಚಿನ್ನದ ಮೊಟ್ಟೆ ಇಡುತ್ತಿದ್ದ ಕೋಳಿಯನ್ನು ಪಡೆದ ರೈತನೊಬ್ಬನು ಒಂದೇ ಬಾರಿಗೆ ಶ್ರೀಮಂತನಾಗಬೇಕೆಂಬ ಅತಿ ಆಸೆಯಿಂದ ಕೋಳಿಯ ಹೊಟ್ಟೆಯನ್ನು ಸೀಳಿ ಒಂದು ಸಿಗದೆ ನಿರಾಶನಾದನು.
ಅತಿ ಆಸೆ ಯಾರಿಗೂ ಎಂದಿಗೂ ಒಳ್ಳೆಯದಲ್ಲ. ಆದ್ದರಿಂದ ಅತಿ ಆಸೆ ಪಡಬಾರದು. ಅತಿ ಆಸೆ ಗತಿ ಕೇಡಿಸುತ್ತದೆ.
ಸುಮನಾ ಶ್ರೀರಾಮ್
Moral life leads to Heaven, immoral life leads to the Hell
ಗಾದೆ ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿ ಮುತ್ತುಗಳು .
“ಆಚಾರವೇ ಸ್ವರ್ಗ, ಅನಾಚಾರವೇ ನರಕ” ಎಂಬ ಗಾದೆಯು ಶಿಸ್ತಿನ ಜೀವನ ಮತ್ತು ಶ್ರದ್ಧೆಯ ಮೂಲಕ ಮನಸ್ಸು, ದೇಹ, ಮತ್ತು ಆತ್ಮದಲ್ಲಿ ಶಾಂತಿ ಮತ್ತು ಸಂತೋಷವನ್ನು ಅನುಭವಿಸಲು ಸಾಧ್ಯ ಎಂದು ತಿಳಿಸುತ್ತದೆ. “ಆಚಾರ” ಎಂದರೆ ಸತ್ಕರ್ಮ, ಸಜ್ಜನತೆ ಮತ್ತು ಸರಿಯಾದ ನಡೆ-ನುಡಿಗಳನ್ನು ಅನುಸರಿಸುವುದು. ಅಂತಹ ಆಚಾರವಿರುವ ಜೀವನವು ನಮ್ಮ ಆಂತರಿಕ ಶಾಂತಿಯನ್ನು ಕಾಪಾಡುತ್ತದೆ. ನಮ್ಮ ಚಿಂತನೆ ಹಾಗೂ ಸಜ್ಜನಿಕೆಯನ್ನು ಹಂಚಿಕೊಳ್ಳುತ್ತವೆ. ಈ ದಾರಿಯಲ್ಲಿ ನಡೆದರೆ, ಜೀವನವು ಸ್ವರ್ಗದಂತಹ ಅನುಭವವನ್ನು ನೀಡುತ್ತದೆ.
ಅದಕ್ಕೆ ವಿರುದ್ಧವಾಗಿ, “ಅನಾಚಾರ” ಎಂದರೆ ದುರಾಚರಣೆ, ಅಕ್ರಮ ಮತ್ತು ನೈತಿಕತೆಯ ಅಭಾವ. ಅನಾಚಾರವನ್ನು ಅನುಸರಿಸುವುದು ದುಃಖ, ನೋವು, ಮತ್ತು ಖೇದಕ್ಕೆ ಕಾರಣವಾಗುತ್ತದೆ. ಏಕೆಂದರೆ ಅದು ನಮ್ಮೊಳಗಿನ ಶಾಂತಿಯನ್ನು ನಾಶ ಮಾಡುತ್ತದೆ. ನಮ್ಮ ಸಂಬಂಧಗಳು ಹಾಗೂ ಸಮಾಜದಲ್ಲಿ ಕಷ್ಟಗಳನ್ನು ಉಂಟುಮಾಡುತ್ತದೆ. ಈ ಜೀವನವು ನರಕದಂತಾಗಬಹುದು. ಹೀಗಾಗಿ, ಆಚಾರವನ್ನು ಅನುಸರಿಸಬೇಕೆಂಬ ಸಂದೇಶವನ್ನು ಈ ಗಾದೆ ಪ್ರಸ್ತಾಪಿಸುತ್ತದೆ. ಆಚಾರವು ನಮ್ಮ ಜೀವನವನ್ನು ಶ್ರೇಷ್ಠ ಮತ್ತು ಧನ್ಯವಾಗಿಸುತ್ತದೆ.
No value for medicine available in the backyard
ವೇದ ಸುಳ್ಳಾದರು ಗಾದೆ ಸುಳ್ಳಾಗದು. ಗಾದೆಗಳು ವೇದಗಳಿಗೆ ಸಮ. ಇವು ನಮ್ಮ ಹಿರಿಯರ ಅನುಭವದ ಮಾತುಗಳು. ಅಂತಹ ಅನುಭವದ ಮಾತುಗಳಲ್ಲಿ ಇದೂ ಒಂದು.
ನಮ್ಮ ಮನೆಯಲ್ಲಿರುವ, ಅಕ್ಕಪಕ್ಕದಲ್ಲಿರುವ ಒಳ್ಳೆಯ ಗುಣ, ಕಲೆ, ಪ್ರತಿಭೆಗಳನ್ನು ನಾವು ಯಾವಾಗಲೂ ಗುರುತಿಸುವದಿಲ್ಲ, ಅವರನ್ನು ಗೌರವಿಸುವುದಿಲ್ಲ. ಯಾರೋ ಬೇರೆಯವರು ಹೇಳಿದಾಗಲೇ ನಮಗೆ ಅರ್ಥವಾಗುತ್ತದೆ.
ಹಾಗೇ ನಮ್ಮ ಮನೆಯ ಹಿತ್ತಲಲ್ಲಿ ಇರುವ ಎಷ್ಟೋ ಗಿಡಗಳು ಆಯುರ್ವೇದದ ಗುಣಗಳನ್ನು ಹೊಂದಿದೆ. ಅದು ಎಷ್ಟೋ ರೋಗಗಳಿಗೆ ಮದ್ದು. ನಾವು ಅದನ್ನು ಉಪಯೋಗಿಸದೇ ಬೇರೆ ಕಡೆ ಸಿಗುವ ಔಷಧಗಳನ್ನು ಉಪಯೋಗಿಸುತ್ತೇವೆ. ನಮ್ಮ ಮನೆಯ ಹಿತ್ತಲಲ್ಲಿಯ ಗಿಡ ಮದ್ದಲ್ಲ ಎಂಬುದು ನಮ್ಮ ಅನಿಸಿಕೆ. ಯಾರಾದರೂ ಬೇರೆಯವರು ಹೇಳಿದಾಗ ಅದರ ಬೆಲೆ ಅರ್ಥವಾಗುತ್ತದೆ. ಹಾಗಾಗಿ ನಮ್ಮ ಮನೆಯವರನ್ನು ಸುತ್ತಮುತ್ತಲು ಇರುವವರನ್ನು ಗೌರವಿಸೋಣ.
A pot that is full does not spill over
ವೇದ ಸುಳ್ಳಾದರು ಗಾದೆ ಸುಳ್ಳಾಗದು. ಗಾದೆಗಳು ವೇದಗಳಿಗೆ ಸಮ. ಇವು ನಮ್ಮ ಹಿರಿಯರ ಅನುಭವದ ಮಾತುಗಳು. ಅಂತಹ ಅನುಭವದ ಮಾತುಗಳಲ್ಲಿ ಇದೂ ಒಂದು.
ಪೂರ್ಣ ಜ್ಞಾನ ಹೊಂದಿರುವ ವ್ಯಕ್ತಿಗಳು ತಮ್ಮ ಜ್ಞಾನವನ್ನು ಪ್ರದರ್ಶಿಸುವುದಿಲ್ಲ. ಅಹಂಕಾರ ಮಾಡುವುದಿಲ್ಲ. ಅವರು ಶಾಂತವಾಗಿರುತ್ತಾರೆ. ಆದರೆ ಅರ್ಧಜ್ಞಾನ ಹೊಂದಿರುವವರು ತಮ್ಮ ಅಲ್ಪ ಜ್ಞಾನವನ್ನು ಪ್ರದರ್ಶಿಸಲು ಪ್ರಯತ್ನಿಸುತ್ತಾರೆ. ಇದು ಅಹಂಕಾರ ಮತ್ತು ಅಜ್ಞಾನವನ್ನು ತೋರಿಸುತ್ತದೆ. ಹಾಗಾಗಿ ತುಂಬಿದ ಕೊಡ ತುಳುಕುವುದಿಲ್ಲ.
He who can be a servant can be a king
ಗಾದೆ ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿ ಮುತ್ತುಗಳು.
‘ಆಳು’ ಎಂದರೆ ಕೆಲಸ ಮಾಡುವವನು, ದುಡಿಯುವವನು ಎಂಬ ಅರ್ಥ. ಅಂಥವನು ಅರಸಾಗಬಲ್ಲ ಎಂದರೆ ‘ಒಡೆಯ’ ಅಥವಾ ಯಜಮಾನನಾಗಬಹುದು ಎಂದು ಈ ಗಾದೆ ಸೂಚಿಸುತ್ತದೆ. ಕೃಷಿ, ಕೈಗಾರಿಕೆ, ವಿದ್ಯಾಸಂಸ್ಥೆ, ಉದ್ಯಮಗಳು ಮುಂತಾದವುಗಳ ಮುಖ್ಯಸ್ಥರಾಗುವವರಿಗೆ ಆಯಾ ವಿಷಯಗಳ ವಿಚಾರಗಳ ಅರಿವು ಅಗತ್ಯವಾಗಿ ಬೇಕು. ಹಾಗಿದ್ದಾಗ ಮಾತ್ರ ಅಲ್ಲಿಯ ಕೆಲಸಗಳು ವ್ಯವಸ್ಥಿತವಾಗಿ ನಡೆಯುತ್ತವೆ. ಕಾಲಕಾಲಕ್ಕೆ ನಡೆಯಬೇಕಾದ ಕಾರ್ಯಗಳನ್ನು ಕೆಲಸಗಾರರಿಂದ ಸಮರ್ಥವಾಗಿ ನಿರ್ವಹಿಸುವಂತೆ ಮಾಡಲು ಅವನಿಗೆ ಸಾಧ್ಯವಾಗುತ್ತದೆ. ಯಜಮಾನನಿಗೆ ಕೆಲಸದ ಅನುಭವವಿದೆ ಎಂದು ಗೊತ್ತಾದಾಗ, ಅವನ ಮಾತಿಗೆ ಕೆಲಸಗಾರರು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಗೌರವದಿಂದ ಪಾಲಿಸುತ್ತಾರೆ.. ಹೇಳಿದ ಕೆಲಸವನ್ನು ಸರಿಯಾಗಿ ಮಾಡುತ್ತಾರೆ. ಅದಿಲ್ಲವಾದರೆ ತಮಗೆ ತಿಳಿದಂತೆ ಮಾಡಿ ಕೆಲಸವನ್ನು ಕೆಡಿಸುತ್ತಾರೆ. ಆದ್ದರಿಂದ ಆಳಾಗಿ ದುಡಿದು ಅನುಭವ ಪಡೆದವನು ಅರಸನಾಗಿ ಯಶಸ್ವಿಯಾಗಬಲ್ಲ ಎಂದು ಈ ಗಾದೆ ತಿಳಿಸಿ ಹೇಳುತ್ತದೆ.
Grass is always green on the other side
ವೇದ ಸುಳ್ಳಾದರು ಗಾದೆ ಸುಳ್ಳಾಗದು. ಗಾದೆಗಳು ವೇದಗಳಿಗೆ ಸಮ. ಇವು ನಮ್ಮ ಹಿರಿಯರ ಅನುಭವದ ಮಾತುಗಳು. ಅಂತಹ ಅನುಭವದ ಮಾತುಗಳಲ್ಲಿ ಇದೂ ಒಂದು.
“ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ” ಅಂದರೆ, ಒಂದು ಬೆಟ್ಟವನ್ನು ದೂರದಿಂದ ನೋಡಿದಾಗ ಅದು ತುಂಬಾ ಅಂದವಾಗಿ ಕಾಣುತ್ತದೆ. ಅದನ್ನು ಹತ್ತುವುದು ತುಂಬಾ ಸುಲಭ ಎಂದು ಅನಿಸುತ್ತದೆ. ಆದರೆ ಅದನ್ನು ಹತ್ತಲು ಶುರು ಮಾಡಿದಾಗ ಅಲ್ಲಿರುವ ಕಲ್ಲು, ಮುಳ್ಳುಗಳು, ಗಿಡಗಳು, ಮರಗಳು, ಕೀಟಗಳನ್ನು ನೋಡಿದಾಗ ಅದನ್ನು ದಾಟುವ ಕಷ್ಟ ನಮಗೆ ಅರ್ಥವಾಗುತ್ತದೆ.
ಹಾಗೆಯೇ ಒಬ್ಬರನ್ನು ನೋಡಿದ ಕೂಡಲೇ ಅವರು ಹೇಗೆ ಎಂದು ತಿಳಿಯಲು ಆಗುವುದಿಲ್ಲ. ಅವರು ಒಳ್ಳೆಯವರು ಎಂದುಕೊಳ್ಳುತ್ತೇವೆ. ಅವರ ಜೊತೆ ಸೇರಿ ಸಮಯ ಕಳೆದು, ಅವರ ಜೊತೆ ಓಡಾಡಿದಾಗಲೇ ಅವರ ಗುಣಗಳು ಅರ್ಥವಾಗುತ್ತದೆ. ಬೇರೆಯವರ ಜೀವನ ಅವರ ಕೆಲಸ ನಮಗೆ ಅಂದವಾಗಿ ಕಾಣುತ್ತದೆ. ಆದರೆ ಅವರವರ ಕಷ್ಟ ಅವರವರಿಗೆ ತಿಳಿದಿರುತ್ತದೆ. ಹಾಗಾಗಿ “ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ”.
Work hard to eat curd
ಗಾದೆಗಳು ವೇದಗಳಿಗೆ ಸಮ. ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು.
ಕೈ ಕೆಸರಾದರೆ ಬಾಯಿ ಮೊಸರು ಎಂಬ ಗಾದೆ ಒಂದು ಜನಪ್ರಿಯ ಕನ್ನಡ ಗಾದೆಮಾತು. ಇದು ದುಡಿಮೆ ಮಾಡಿದರೆ ಮಾತ್ರ ಫಲವನ್ನು ಪಡೆಯಬಹುದು ಎಂದು ಹೇಳುತ್ತದೆ. ” ಕೈ ಕೆಸರಾದರೆ ” ಎಂದರೆ ಶ್ರಮ ಮತ್ತು ದುಡಿಮೆ ಎಂದರ್ಥ. “ಮೊಸರು” ಎಂಬುದು ಫಲಿತಾಂಶ ಅಥವಾ ಸಾರ್ಥಕತೆಯನ್ನು ಸೂಚಿಸುತ್ತದೆ. ಶ್ರಮದಿಂದಲೇ ಯಶಸ್ಸು ಸಾಧ್ಯ. ಈ ಗಾದೆಯು ದುಡಿಯುವ ಮಹತ್ವವನ್ನು ಮತ್ತು ಪರಿಶ್ರಮದಿಂದಲೇ ಜೀವನದಲ್ಲಿ ಸುಖ ಮತ್ತು ಸಮೃದ್ಧಿಯನ್ನು ಪಡೆಯುವ ತತ್ವವನ್ನು ಹೇಳುತ್ತದೆ.
To make a pot it takes years but to break it takes one minute
ಗಾದೆಗಳು ವೇದಗಳಿಗೆ ಸಮ. ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು.
ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಗಾದೆಮಾತು ಕೆಲಸದ ಬಗ್ಗೆ ಹೇಳುತ್ತದೆ. ಕುಂಬಾರನು ಮಡಕೆಗಳನ್ನು ಮಾಡಲು ತುಂಬಾ ಸಮಯ, ಸಹನೆ ಮತ್ತು ಕೌಶಲ್ಯ ಬೇಕು.ಇದು ವರುಷದಷ್ಟು ಶ್ರಮ. ಆದರೆ, ಆ ಮಡಕೆಯನ್ನು ಒಡೆಯಲು ದೊಣ್ಣೆಗೆ ಒಂದು ನಿಮಿಷವೇ ಸಾಕಾಗುತ್ತದೆ. ಅರ್ಥಾತ್, ಯಾವುದಾದರೂ ಕೆಲಸವನ್ನು ಮಾಡಲು ಹೆಚ್ಚಿನ ಸಮಯ ಮತ್ತು ಪರಿಶ್ರಮ ಬೇಕಾದರೂ, ಅದನ್ನು ನಾಶಮಾಡಲು ತಕ್ಷಣವೇ ಸಾಧ್ಯ. ಈ ಗಾದೆ ಕಾರ್ಯ ನಿರ್ವಹಿಸುವ ಮಹತ್ವವನ್ನು ಮತ್ತು ಶ್ರಮದಿಂದ ಮಾಡಿದ್ದನ್ನು ಕಾಪಾಡುವ ಅಗತ್ಯವನ್ನು ವಿವರಿಸುತ್ತದೆ.
ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ To make a pot it takes years but to break it takes one minute
Not everything that’s white is milk
ಗಾದೆಗಳು ವೇದಗಳಿಗೆ ಸಮ. ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು.
ಹೊರಗೆ ಸುಂದರವಾಗಿ ಕಾಣುವ ಪ್ರತಿಯೊಂದು ವಸ್ತುವೂ ಒಳಗೆ ಉತ್ತಮ ಗುಣಮಟ್ಟದ್ದಾಗಿರುವುದಿಲ್ಲ. ವ್ಯಕ್ತಿಗಳೂ ಒಳ್ಳೆಯವರಂತೆ ಕಂಡರೂ ಒಳ್ಳೆಯವರಾಗಿರದಿರಬಹುದು. ಆದ್ದರಿಂದ, ವ್ಯಕ್ತಿಗಳ ಅಥವಾ ವಸ್ತುಗಳನ್ನು ಅರ್ಥಮಾಡಿಕೊಳ್ಳಲು ಅವರ ಅಥವಾ ಅದರ ಗುಣಗಳನ್ನು ಪರಿಶೀಲಿಸುವುದು ಮುಖ್ಯ. ಈ ಗಾದೆ ನಮ್ಮನ್ನು ಜಾಗ್ರತೆಯಿಂದ ಮತ್ತು ವಿವೇಕದಿಂದ ನಿರ್ಣಯಗಳನ್ನು ಕೈಗೊಳ್ಳಲು ಪ್ರೇರೇಪಿಸುತ್ತದೆ.
What is given is yours; what is hoarded is others
ಗಾದೆಗಳು ವೇದಗಳಿಗೆ ಸಮ. ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು.
“ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ” ಎಂಬ ಗಾದೆ ಮಾತು ದಾನದ ಮಹತ್ವವನ್ನು ಒತ್ತಿಹೇಳುತ್ತದೆ. ಇದು, ನಾವು ಮಾಡಿದ ದಾನ ನಮ್ಮ ಜೀವನದಲ್ಲಿ ಒಳ್ಳೆಯ ಫಲವನ್ನು ತರುತ್ತದೆ ಎಂಬುದನ್ನು ಸೂಚಿಸುತ್ತದೆ. ಇದಕ್ಕೆ ವಿರುದ್ಧವಾಗಿ, ನಾವು ಬಚ್ಚಿಟ್ಟುಕೊಂಡ ಸಂಪತ್ತು ನಮ್ಮ ನಂತರ ಬೇರೆಯವರು ಉಪಯೋಗಿಸುತ್ತಾರೆ ಅಥವಾ ಯಾರಾದರು ತೆಗೆದುಕೊಂಡು ಹೋಗುತ್ತಾರೆ. ಆದ್ದರಿಂದ ದಾನವನ್ನು ಮಾಡಬೇಕು.
Health is wealth
ಗಾದೆ ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿ ಮುತ್ತುಗಳು. “ಆರೋಗ್ಯವೇ ಭಾಗ್ಯ” ಎಂಬ ಗಾದೆ ಮಾತು ಉತ್ತಮ ಆರೋಗ್ಯವು ನಿಜವಾದ ಸಂಪತ್ತು ಎಂಬುದನ್ನು ಸೂಚಿಸುತ್ತದೆ. ಆರೋಗ್ಯವಿಲ್ಲದೆ ಏನನ್ನೂ ಮಾಡಲು ಆಗುವುದಿಲ್ಲ. ರೋಗಗಳು ವ್ಯಕ್ತಿಗಳನ್ನು ಜೀವನದ ಆನಂದದಿಂದ ದೂರವಿರಿಸುತ್ತದೆ. ಆದ್ದರಿಂದ, ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ.
“There’s no use worrying after the mistake is made.”
ಗಾದೆಗಳು ವೇದಗಳಿಗೆ ಸಮ.ವೇದ ಸುಳ್ಳಾದರು ಗಾದೆ ಸುಳ್ಳಾಗದುಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು
“ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ” ಎಂಬ ಗಾದೆ ಮಾತು, ಸಂಭವಿಸಿದ ಘಟನೆಗಳ ಬಗ್ಗೆ ನಂತರ ಚಿಂತನೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಸೂಚಿಸುತ್ತದೆ. ಅವುಗಳಿಂದ ಪಾಠಗಳನ್ನು ಕಲಿತು, ಜಾಗ್ರತೆಯಿಂದ ಇದ್ದು, ಭವಿಷ್ಯದಲ್ಲಿ ತಪ್ಪುಗಳನ್ನು ಮಾಡಬಾರದು. ಹೀಗಾಗಿ, ಮಾಡಿದ ತಪ್ಪುಗಳ ಬಗ್ಗೆ ಚಿಂತಿಸದೇ, ಮುಂದಿನ ಕಾರ್ಯಗಳಲ್ಲಿ ಎಚ್ಚರಿಕೆಯಿಂದ ಇರಬೇಕು.
Falling into a pit that was already noticed in the dark, even during daylight
ಗಾದೆಗಳು ವೇದಗಳಿಗೆ ಸಮ.ವೇದ ಸುಳ್ಳಾದರು ಗಾದೆ ಸುಳ್ಳಾಗದುಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು.
“ಇರುಳು ಕಂಡ ಬಾವಿಗೆ ಹಗಲು ಬಿದ್ದಂತೆ” ಎಂದರೆ ರಾತ್ರಿ ನೋಡಿರುವ ಬಾವಿಗೆ ಹಗಲು ಹೋಗಿ ಬಿದ್ದಂತೆ. ಸರಿಯಾಗಿ ಗಮನಕೊಡದೆ, ಗೊತ್ತಿರುವ ತಪ್ಪುಗಳನ್ನು ಪುನಃ ಮಾಡುವುದನ್ನು ಈ ಗಾದೆಮಾತು ಹೇಳುತ್ತದೆ. ನಮ್ಮ ಅನುಭವಗಳಿಂದ ಪಾಠ ಕಲಿತು, ಅನಗತ್ಯ ತೊಂದರೆಗಳಿಂದ ತಪ್ಪಿಸಿಕೊಂಡು, ಎಚ್ಚರಿಕೆಯಿಂದ ಇರಬೇಕೆಂದು ನೆನಪಿಸುತ್ತದೆ. ಸದಾ ಎಚ್ಚರಿಕೆಯಿಂದಿದ್ದು, ಸರಿಯಾದ ದಾರಿಯಲ್ಲಿ ನಡೆಯುವುದು ಉತ್ತಮ ಜೀವನ ಎಂಬ ಸಂದೇಶವನ್ನು ನೀಡುತ್ತದೆ.
Watch your words
ಗಾದೆಗಳು ವೇದಗಳಿಗೆ ಸಮ ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು.
ಮಾತಾನಾಡುವಾಗ ನಮ್ಮ ನಾಲಿಗೆಯ ಮೇಲೆ ಹಿಡಿತ ಇರಬೇಕು. ಏಕೆಂದರೆ ನಾವು ಎಚ್ಚರ ತಪ್ಪಿ ಆಡುವ ಮಾತು ಕೆಲವರ ಮನಸ್ಸಿಗೆ ನೋವು ತರಬಹುದು. ಅದರಿಂದ ಇಬ್ಬರ ನಡುವಿನ ಸಂಭಂದಗಳು ಮುರಿಯಬಹುದು. ಎಷ್ಟೋ ಸಮಯ ಆಡುವ ಮಾತು ಎದುರಿಗಿರುವ ವ್ಯಕ್ತಿಗೆ ಕೋಪ ತರಿಸಿ, ಅವನು ದಾಳಿ ಮಾಡಿ, ಸಾವು ಕೂಡ ಸಂಭವಿಸಿದೆ.
ಹಾಗೇ ಆಡುವ ಮಾತು ಮುತ್ತಿನಂತೆ ಇದ್ದರೆ ಸಂಭಂದಗಳು ಉಳಿಯುತ್ತದೆ ಮತ್ತು ಬೆಳೆಯುತ್ತದೆ. ಜನರ ಪ್ರೀತಿ, ವಿಶ್ವಾಸ, ಗೌರವ ಗೆಲ್ಲಲು ಮತ್ತು ಉಳಿಸಿಕೊಳ್ಳಲು ಮಾತು ಮುತ್ತಿನ ಹಾಗೆ ಇರಬೇಕು.
Patience is the Key
ಗಾದೆಗಳು ವೇದಗಳಿಗೆ ಸಮ.ವೇದ ಸುಳ್ಳಾದರು ಗಾದೆ ಸುಳ್ಳಾಗದುಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು.
“ತಾಳುವಿಕೆಗಿಂತ ತಪವು ಇಲ್ಲ” ಎನ್ನುವುದು ದಾಸರ ಉಪದೇಶ. ಯಾವುದೇ ಸಂದರ್ಭದಲ್ಲಿ ತಾಳ್ಮೆಯನ್ನು ಕಳೆದುಕೊಳ್ಳಬಾರದು. ಅಂತವರಿಗೆ ಮುಂದೆ ಒಳ್ಳೆಯ ಬದುಕು ದೊರೆಯಬಹುದು ಎಂದು ಈ ಗಾದೆ ತಿಳಿಸುತ್ತದೆ. ಮನುಷ್ಯನ ಜೀವನದಲ್ಲಿ ಸುಖ ದುಃಖಗಳು ಬಂದು ಹೋಗುತ್ತಿರುತ್ತವೆ. ಕಲ್ಲು ಮುಳ್ಳುಗಳು ಇರದಿರುವ ದಾರಿಯೇ ಇಲ್ಲ. ಸುಖದುಃಖ ಲಾಭನಷ್ಟಗಳನ್ನು ಸಮಾನವಾಗಿ ಭಾವಿಸು ಎಂದು ಭಗವದ್ಗೀತೆ ಹೇಳುತ್ತದೆ. ಸುಖ ಬಂದಾಗ ಹಿಗ್ಗದೆ ಇರಬೇಕು. ಕಷ್ಟ ಬಂದಾಗ ಸಹನೆಯಿಂದ ಇರಬೇಕು. ಆತುರದ ನಿರ್ಧಾರ ಮಾಡಬಾರದು. ಕಷ್ಟವನ್ನು ತಾಳ್ಮೆಯಿಂದ ಎದುರಿಸಿದರೆ ಮುಂದೆ ಸುಖದ ದಿನಗಳು ಬಂದೇ ಬರುತ್ತವೆ. ಸಮತಟ್ಟಾದ ಮೈದಾನದ ಹಾದಿಯೂ ಇರುತ್ತದೆ. ಮನುಷ್ಯನ ಬದುಕು ಹಾಗೆ ಸಹನೆಯಿಂದ ತಾಳ್ಮೆಯಿಂದ ಎಚ್ಚರಿಕೆಯಿಂದ ಸಾಗಿದರೆ ಸುಖದ ದಾರಿ ಸಿಕ್ಕಿಯೇ ಸಿಗುತ್ತದೆ. ತಾಳಿದವನು ಬಾಳಿಯಾನು ಎಂಬುದು ಕನ್ನಡದ ಗಾದೆ ಮಾತು.
Where there is a will there is a way
ಗಾದೆಗಳು ವೇದಗಳಿಗೆ ಸಮ ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು.
ಮಾತಾನಾಡುವಾಗ ನಮ್ಮ ನಾಲಿಗೆಯ ಮೇಲೆ ಹಿಡಿತ ಇರಬೇಕು. ಏಕೆಂದರೆ ನಾವು ಎಚ್ಚರ ತಪ್ಪಿ ಆಡುವ ಮಾತು ಕೆಲವರ ಮನಸ್ಸಿಗೆ ನೋವು ತರಬಹುದು. ಅದರಿಂದ ಇಬ್ಬರ ನಡುವಿನ ಸಂಭಂದಗಳು ಮುರಿಯಬಹುದು. ಎಷ್ಟೋ ಸಮಯ ಆಡುವ ಮಾತು ಎದುರಿಗಿರುವ ವ್ಯಕ್ತಿಗೆ ಕೋಪ ತರಿಸಿ, ಅವನು ದಾಳಿ ಮಾಡಿ, ಸಾವು ಕೂಡ ಸಂಭವಿಸಿದೆ.
ಹಾಗೇ ಆಡುವ ಮಾತು ಮುತ್ತಿನಂತೆ ಇದ್ದರೆ ಸಂಭಂದಗಳು ಉಳಿಯುತ್ತದೆ ಮತ್ತು ಬೆಳೆಯುತ್ತದೆ. ಜನರ ಪ್ರೀತಿ, ವಿಶ್ವಾಸ, ಗೌರವ ಗೆಲ್ಲಲು ಮತ್ತು ಉಳಿಸಿಕೊಳ್ಳಲು ಮಾತು ಮುತ್ತಿನ ಹಾಗೆ ಇರಬೇಕು.ಯಾವುದೇ ಸಾಧನೆಯನ್ನು ಸಾಧಿಸಬೇಕಾದರೆ ಮನಸ್ಸು ಬೇಕು. ಸಾಧಿಸುತ್ತೇನೆ ಎಂಬ ಛಲವು ಇರಬೇಕು. ಆಗ ಪ್ರಯತ್ನದ ಹಾದಿ ತೋರುತ್ತದೆ. ಒಂದು ಚಿತ್ರಗೀತೆಯ ಸಾಲು ಹೀಗಿದೆ. “ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ”. ನನ್ನ ಕೈಯಲ್ಲಿ ಆಗುವದಿಲ್ಲ ಎಂದು ಯೋಚಿಸುವುದರಿಂದ ಯಾವ ಕೆಲಸವೂ ಸಾಧ್ಯವಿಲ್ಲ. ಮಾಡಬಲ್ಲೆ ಎಂಬ ಮನಸ್ಸು ಮಾಡುವವನು ಎಂತ ಕೆಲಸವನ್ನಾದರೂ ಮಾಡಬಲ್ಲ. ಅಸಾಧ್ಯ ಎನ್ನುವ ಪದವನ್ನು ತೆಗೆದುಹಾಕಿ ಎಂದು ನೆಪೋಲಿಯನ್ ಬೋನಾಪಾರ್ಟೆ ಹೇಳುತ್ತಿದ್ದನಂತೆ. ಉದ್ದೇಶ ದೊಡ್ಡದಾಗಿರಬೇಕು. ಗುರಿಯನ್ನು ಸಾಧಿಸುವ ಮನಸ್ಸು ಇರಬೇಕು. ಪ್ರಯತ್ನ ಪಡಬೇಕು. ಗೌರಿಶಂಕರ ಶಿಖರವನ್ನೇ ಏರಬೇಕೆಂಬ ಗುರಿ ಇರಿಸಿಕೊಂಡು ಪ್ರತಿದಿನ ಚಿಕ್ಕ ಬೆಟ್ಟ ಹತ್ತಿ ಪ್ರಯತ್ನಿಸಿದರೆ ಕೊನೆಗೊಂದು ದಿನ ಗೌರಿ ಶಿಖರವನ್ನು ಏರಬಹುದು. ಇದಕ್ಕೆ ಉದಾಹರಣೆ ಛಲಬಿಡದ ತೇನ್ ಸಿಂಗ್. ಅವರು ಎವರೆಸ್ಟ್ ಶಿಖರವನ್ನು ಏರಿ ತಮ್ಮ ಮನಸ್ಸಿನಲ್ಲಿರುವ ಮಾರ್ಗವನ್ನು ತಮ್ಮ ಪ್ರಯತ್ನದಿಂದಲೇ ಸಾಧಿಸಿದರು. ವಿದ್ಯಾರ್ಥಿಯಾದವನು ಯಶಸ್ಸು ಗಳಿಸಲು ಮನಸ್ಸು ಮಾಡಬೇಕು. ಪ್ರಯತ್ನ ಪಡಬೇಕು. ಮನಸ್ಸಿಟ್ಟು ಪ್ರಯತ್ನಿಸಿದರೆ ಎಲ್ಲವೂ ಸಾಧ್ಯ. ಮನಸ್ಸಿದ್ದರೆ ಮಾರ್ಗ ಕನ್ನಡದ ಗಾದೆ ಮಾತು
Living together is happiness
ಗಾದೆಗಳು ವೇದಗಳಿಗೆ ಸಮ. ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು.
ಹೌದು ಕೂಡಿ ಬಾಳುವುದರಲ್ಲಿ ಪ್ರೀತಿ, ಕಾಳಜಿ ಮತ್ತು ಭದ್ರತೆಯು ಸಿಗುತ್ತದೆ. ‘ಕೂಡಿ ಬಾಳಿದರೆ ಸ್ವರ್ಗ ಸುಖʼ ಎಂಬ ಗಾದೆ ಒಗ್ಗಟ್ಟಾಗಿ ಬಾಳುವುದರಲ್ಲಿ ಸುಖವಿದೆ ಎಂದು ಹೇಳುತ್ತದೆ.
ದ್ವೇಷ, ಅಸೂಯೆ, ಜಗಳಗಳು ಇಲ್ಲದೆ, ಅನ್ಯೋನ್ಯತೆಯಿಂದ ಜೀವಿಸಬೇಕು. ಒಟ್ಟಿಗೆ ಬಾಳುವುದು ಮನೆಯ ಒಟ್ಟು ಕುಟುಂಬಕ್ಕೆ ಅಷ್ಟೇ ಅಲ್ಲದೇ, ನಮ್ಮ ಊರಲ್ಲಿ, ದೇಶದಲ್ಲಿ, ಸಮಾಜದಲ್ಲಿ ಕೂಡ ಒಗ್ಗಟ್ಟಾಗಿರಬೇಕು. ಮನೆಯೇ ಮೊದಲ ಪಾಠ ಶಾಲೆ. ಮನೆಯಲ್ಲಿ ನಾವು ಕೂಡಿ ಬಾಳಿದರೆ ಸಮಾಜದಲ್ಲಿ, ಊರಿನಲ್ಲಿ, ದೇಶದಲ್ಲಿ ಕೂಡಿ ಬಾಳುವ ನಿಯಮ ಪಾಲನೆ, ಶಿಸ್ತು ಪಾಲಿಸಲು ಸುಲಭ. ಇಲ್ಲಿ ಬದುಕು ಸುಭದ್ರವಾಗಿರುತ್ತದೆ.
building is difficult, and destroying is easy
ಗಾದೆಗಳು ವೇದಗಳಿಗೆ ಸಮ ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು.
ಕಟ್ಟುವುದು ಕಠಿಣ ಕೆಡಹುವುದು ಸುಲಭ ಎಂದರೆ ಯಾವುದಾದರೂ ಕಾರ್ಯವನ್ನು ನಿರ್ಮಿಸಲು ಅಥವಾ ಸಾಧಿಸಲು ಶ್ರಮ, ಧೈರ್ಯ ಮತ್ತು ಸಮಯ ಬೇಕಾಗುತ್ತದೆ. ಏನನ್ನಾದರೂ ನಿರ್ಮಾಣ ಮಾಡುವುದು ಬಹಳ ಕಷ್ಟ. ಆದರೆ ಅದನ್ನು ನಾಶಮಾಡುವುದು ಅಥವಾ ಹಾಳುಮಾಡುವುದು ಅತ್ಯಂತ ಸುಲಭವಾಗಿರುತ್ತದೆ. ಈ ಗಾದೆಮಾತು ನಮ್ಮೆಲ್ಲ ಕಾರ್ಯದಲ್ಲಿರುವ ಜವಾಬ್ದಾರಿ ಮತ್ತು ಶ್ರದ್ಧೆಯ ಮಹತ್ವವನ್ನು ವಿವರಿಸುತ್ತದೆ.
A loving mother and one’s homeland are greater than heaven
ಗಾದೆಗಳು ವೇದಗಳಿಗೆ ಸಮ. ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು.
” ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು” ಎಂದರೆ ತಾಯಿಯ ಮಮತೆ ಮತ್ತು ಸ್ವಂತ ನಾಡಿನ ಪ್ರೀತಿ ಎರಡೂ ಅತ್ಯಮೂಲ್ಯ. ತಾಯಿ ತನ್ನ ಮಕ್ಕಳಿಗೆ ನೀಡುವ ಪ್ರೀತಿ ಜಗತ್ತಿನಲ್ಲಿ ಯಾರಿಂದಲೂ ದೊರೆಯಲು ಸಾಧ್ಯವಿಲ್ಲ. ಹಾಗೆಯೇ, ತಾಯ್ನಾಡಿನ ಸಂಸ್ಕೃತಿ, ನೆನೆಪುಗಳು ಮತ್ತು ಭಾವನೆಗಳು ಮನುಷ್ಯನಿಗೆ ಅಮೂಲ್ಯವಾದ ಶಾಂತಿ ಮತ್ತು ತೃಪ್ತಿಯನ್ನು ನೀಡುತ್ತವೆ. ಹಾಗಾಗಿ ತಾಯಿಯು ಮತ್ತು ನಾಡು ಜೀವನದಲ್ಲಿ ದೊಡ್ಡ ಸ್ಥಾನವನ್ನು ಹೊಂದಿವೆ ಎಂಬುದು ಈ ಗಾದೆಮಾತು ಸಾರುತ್ತದೆ.
One Eye Gets Butter, the Other Gets Lime
ಗಾದೆಗಳು ವೇದಗಳಿಗೆ ಸಮ ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು.
ಈ ಗಾದೆಯು ಜನರ ಭೇದಭಾವವನ್ನು, ಪಕ್ಷಪಾತವನ್ನು ಅಥವಾ ದ್ವಂದ್ವ ನಡವಳಿಕೆಯನ್ನು ಸೂಚಿಸುತ್ತದೆ. ಯಾರಿಗೋ ಅತಿಯಾಗಿ ಪ್ರಾಮುಖ್ಯತೆ ನೀಡಿ ಬೆನ್ನು ತಟ್ಟುವುದರ ಜೊತೆಗೆ, ಇನ್ನೊಬ್ಬರನ್ನು ಕಡೆಗಣಿಸುವ ಅಲ್ಪ ಸ್ವಭಾವವನ್ನು ಈ ಹೇಳಿಕೆ ಪ್ರತಿಬಿಂಬಿಸುತ್ತದೆ.
ಉದಾಹರಣೆಗೆ, ಕೆಲವರಿಗೆ ಅತ್ಯಂತ ವಿಶೇಷ ಸೌಲಭ್ಯಗಳನ್ನು ನೀಡುವುದರ ಜೊತೆಗೆ, ಇತರರನ್ನು ಸಂಪೂರ್ಣವಾಗಿ ತಳ್ಳಿಹಾಕುವಂತಹ ಸಮಾಜದ ಅಥವಾ ವ್ಯಕ್ತಿಯ ನಡವಳಿಕೆಯನ್ನು ವಿವರಿಸಲು ಈ ಪ್ರವಾದವನ್ನು ಬಳಸಲಾಗುತ್ತದೆ. ಇದು ನ್ಯಾಯ ಮತ್ತು ಸಮಾನತೆಯ ಮಹತ್ವವನ್ನು ಒತ್ತಿ ಹೇಳುವ ಸಲುವಾಗಿ ಉಪಯೋಗಿಸುವತ್ತ ಪ್ರಮುಖವಾಗಿದೆ.
ನಾವು ಭೇದಭಾವವ ಮಾಡುವುದನ್ನು ತ್ಯಜಿಸಿ, ಎಲ್ಲರಿಗೂ ಸಮಾನತೆ, ಗೌರವ ಮತ್ತು ಪ್ರಾಮುಖ್ಯತೆಯನ್ನು ನೀಡಬೇಕು ಎಂಬುದನ್ನು ತಿಳಿಸುತ್ತದೆ.