Sabari worksheet is a geeta nataka for X grade. This drama is written by Pu. Ti. Narasimachar. Shabari lesson 10th grade is added from CBSE board. Sabari worksheet given here has additional questions for practise purpose.
ಶಬರಿ ಪಾಠ 10 ನೇ ತರಗತಿಯನ್ನು CBSE ಮಂಡಳಿಯಿಂದ ಸೇರಿಸಲಾಗಿದೆ.
ಶಬರಿ ಪ್ರಶ್ನೆ ಪತ್ರಿಕೆ
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. (Answer the following in one sentence)
೧. ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು?
೨. ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದ್ದಳು?
೩. ಶ್ರೀರಾಮನ ತಂದೆಯ ಹೆಸರೇನು?
೪. ಶಬರಿ ಗೀತ ನಾಟಕದ ಕರ್ತೃ ಯಾರು?
೫. ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು?
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ. (Answer the following in two – three sentences)
೧. ಲಕ್ಷ್ಮಣನು ಅಣ್ಣನನ್ನು ಹೇಗೆ ಸಂತೈಸಿದನು?
೨. ರಾಮನು ಗಿರಿವನವನ್ನು ಏನೆಂದು ಪ್ರಾರ್ಥಿಸಿದನು?
೩. ರಾಮನ ಸ್ವಾಗತಕ್ಕಾಗಿ ಶಬರಿ ಮಾಡಿಕೊಂಡಿದ್ದ ಸಿದ್ಧತೆಗಳೇನು?
೪. ಆತಿಥ್ಯ ಸ್ವೀಕರಿಸಿದ ರಾಮ ಲಕ್ಷ್ಮಣರು ಶಬರಿಗೆ ಏನು ಹೇಳಿದರು?
೫. ಶಬರಿಯು ರಾಮ ಲಕ್ಷ್ಮಣರನ್ನು ಉಪಚರಿಸಿದ ರೀತಿಯನ್ನು ವಿವರಿಸಿ.
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ. (Answer the following in eight – ten sentences)
೧. ಶಬರಿಯ ಸಡಗರ, ಸಂತೋಷ ಮೇಳದವರ ಹಾಡಿನಲ್ಲಿ ಹೇಗೆ ವರ್ಣಿತವಾಗಿದೆ?
೨. ಶಬರಿಯ ಚಿಂತೆ ಹಿಂಗಿ ಹೋದ ಸಂದರ್ಭದ ಸ್ವಾರಸ್ಯವನ್ನು ವಿವರಿಸಿ.
೩. ನಂಬಿ ಕೆಟ್ಟವರಿಲ್ಲ ಎಂಬ ಮಾತು ಶಬರಿಯ ಪಾಲಿಗೆ ಹೇಗೆ ನಿಜವಾಗಿದೆ?
ಈ) ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ. (Explain the context)
೧. “ನಾಚುತಿಹೆನೀ ಪೂಜ್ಯೆಯೀ ನಲುಮೆಯಿಂದ “
೨. “ಆವುದೀ ಮರುಳು? ನಮ್ಮೆಡೆಗೆ ಬರುತ್ತಿಹುದು”
೩. “ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು”
೪. “ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ!”
೫. “ತಾಯಿ ದಾರಿಗರಿಗೆ ಬೀಡಿಲ್ಲಿ ದೊರೆಯುವುದೇ”
ಉ) ಹೊಂದಿಸಿ ಬರೆಯಿರಿ (Match the following)
ಅ ಬ
ಮಾತಂಗ ಸೀತೆ
ಆಶ್ರಮ ಪುತಿನ
ದಶರಥ ಮೇಲುಕೋಟೆ
ಚಿತ್ರಕೂಟ ಪರ್ವತ
ಭೂಮಿಜಾತೆ ರಾಮ
ಅರಣ್ಯ
ಊ) ಕೊಟ್ಟಿರುವ ಗಾದೆಗಳ ಅರ್ಥವನ್ನು ವಿವರಿಸಿ ಬರೆಯಿರಿ. (Explain the proverbs)
೧. ತಾಳಿದವನು ಬಾಳಿಯಾನು
೨. ಮನಸ್ಸಿದ್ದರೆ ಮಾರ್ಗ
ಭಾಷಾ ಚಟುವಟಿಕೆ
೧. ಕೊಟ್ಟಿರುವ ಪದಗಳಲ್ಲಿ ವಿಜಾತೀಯ ಸಂಯುಕ್ತಾಕ್ಷರಗಳನ್ನು ಆರಿಸಿ ಬರೆಯಿರಿ. (Identify the Vijatiya Sayukthakshara from the following words)
ಇಲ್ಲ, ಕಾರ್ಯ, ಶಸ್ತ್ರ, ಅದ್ಭುತ, ಎಚ್ಚರ, ಕಣ್ಣಿಗೆ, ಬಟ್ಟೆ, ಕತ್ತಲೆ
೨. ನೀಡಿರುವ ಪದಗಳಲ್ಲಿ ಅವರ್ಗೀಯ ವ್ಯಂಜನಾಕ್ಷರಗಳನ್ನು ಆರಿಸಿ ಬರೆಯಿರಿ. (Identify the avargiya vyanjanagalu from the following words and write)
ಸಮನಾಗಿ, ಮನೆಯ, ಬಳಿಕ, ದೇಶ, ಮನುಷ್ಯ, ನೆಲ, ಮದುವೆ, ಹೊತ್ತು, ಒಳಗೆ
೩. ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಹೊಂದುವ ನಾಲ್ಕನೆಯ ಪದವನ್ನು ಬರೆಯಿರಿ.(Write the 4th word related to the 3rd word)
ಅ) ಆ, ಈ, ಊ : ದೀರ್ಘ ಸ್ವರಗಳು : : ಅ, ಇ, ಉ, ಋ : _______________________
ಆ) ವರ್ಗೀಯ ವ್ಯಂಜನಾಕ್ಷರಗಳು : ೨೫ : : ಅವರ್ಗೀಯ ವ್ಯಂಜನಾಕ್ಷರಗಳು : ________________
ಇ) ಕ್, ಗ್ : ಅಲ್ಪಪ್ರಾಣಾಕ್ಷರಗಳು : : ಛ್ , ಝ್ : _______________
ಈ) ಸ್ವರಗಳು : ೧೩ : : ಯೋಗವಾಹಗಳು : ______________________
೪. ಕೊಟ್ಟಿರುವ ವಿಷಯಗಳನ್ನು ಕುರಿತು ಪ್ರಬಂಧ ಬರೆಯಿರಿ. (Write essays for the following topics)
೧. ರಾಷ್ಟ್ರೀಯ ಹಬ್ಬಗಳ ಮಹತ್ವ
೨. ಗ್ರಂಥಾಲಯಗಳ ಮಹತ್ವ
೩. ಸಾಮಾಜಿಕ ಪಿಡುಗುಗಳು