Sankalpageete is a poem written by Shri. G S Shivrudrappa. G S Sivrudrappa in his Sankalpageete simply stated that with firm determination anything can be achieved. Today, many cross walls, like upper-lower and poor-rich walls, should be removed between people. The lamp of love must be lit to dispel the darkness of hatred around us. The ship of life caught in a storm in the ocean of samsara should be steered with caution. We must take the weak by the hand and give them new hope. It should be stated that the policy of all caste votes is the same. We must overcome fear and doubt and resolve to sow a new dream.

ದೃಢ ಸಂಕಲ್ಪದಿಂದ ಏನನ್ನಾದರೂ ಸಾಧಿಸಬಹುದೆಂದು ಜಿ ಎಸ್ ಶಿವರುದ್ರಪ್ಪನವರು ತಮ್ಮ ಸಂಕಲ್ಪ ಗೀತೆಯಲ್ಲಿ ಸರಳವಾಗಿ ಹೇಳಿದ್ದಾರೆ. ಇಂದು ಮನುಷ್ಯರ ನಡುವೆ ಇರುವ ಮೇಲು-ಕೀಳು, ಬಡವ-ಶ್ರೀಮಂತ ಎಂಬ ಅನೇಕ ಅಡ್ಡ ಗೋಡೆಗಳನ್ನು ತೊಡೆದು ಹಾಕಬೇಕು. ನಮ್ಮ ಸುತ್ತಲೂ ಇರುವ ದ್ವೇಷದ ಕತ್ತಲೆಯನ್ನು ಕಳೆಯಲು ಪ್ರೀತಿಯ ದೀಪವನ್ನು ಹಚ್ಚಬೇಕು. ಸಂಸಾರ ಸಾಗರದಲ್ಲಿ ಬಿರುಗಾಳಿಗೆ ಸಿಲುಕಿರುವ ಬದುಕಿನ ಹಡಗನ್ನು ಎಚ್ಚರದಲ್ಲಿ ಮುನ್ನಡೆಸಬೇಕು. ದುರ್ಬಲರನ್ನು ಕೈಹಿಡಿದು ಹೊಸ ಭರವಸೆಯನ್ನು ಅವರಿಗೆ ನೀಡಬೇಕು. ಎಲ್ಲಾ ಜಾತಿ ಮತಗಳ ನೀತಿ ಒಂದೇ ಎಂಬುದನ್ನು ತಿಳಿಸಬೇಕು. ಭಯ, ಸಂಶಯವನ್ನು ನಿವಾರಿಸಿ ಹೊಸ ಕನಸನ್ನು ಬಿತ್ತುವ ಸಂಕಲ್ಪವನ್ನು ನಾವು ಮಾಡಬೇಕು.

ಸಂಕಲ್ಪಗೀತೆ

೧. ಪದಗಳ ಅರ್ಥ ಬರೆಯಿರಿ. (Write the word meaning)

ಕಂದಿದ, ಹಡಗು, ಪಥ, ಹಣತೆ, ವಸಂತ, ಕಲುಷಿತ, ಬರಡು

ಅಭ್ಯಾಸ

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿ. (Answer the following in one sentence)

೧. ನದಿ ಜಲಗಳು ಏನಾಗಿವೆ?
೨. ಯಾವುದನ್ನು ಎಚ್ಚರದಲ್ಲಿ ಮುನ್ನಡೆಸಬೇಕು?
೩. ಕಾಡು ಮೇಡುಗಳ ಸ್ಥಿತಿ ಹೇಗಿದೆ?
೪. ಯಾವ ಎಚ್ಚರದೊಳು ಬದುಕಬೇಕಿದೆ?
೫. ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು?

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in two – three sentences)

೧. ಹಡಗನ್ನು ಯಾವುದರ ಬೆಳಕಿನಲ್ಲಿ ಮುನ್ನಡೆಸಬೇಕಿದೆ?
೨. ಹೊಸ ಭರವಸೆಗಳನ್ನು ಮೂಡಿಸಿ ಯಾವುದರ ನಡುವೆ ಸೇತುವೆ ಆಗಬೇಕಿದೆ?
೩. ಕಾಡುಗಳಿಗೆ ಹೇಗೆ ಮುಟ್ಟಬೇಕಿದೆ?
೪. ನಾಡಿನ ಕನಸನ್ನು ಬಿತ್ತಬೇಕಾದರೆ ನಾವು ಹೇಗೆ ಬದುಕಬೇಕು?

ಇ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ. (Answer the following in eight – ten sentences)

೧. ಸಂಕಲ್ಪ ಮತ್ತು ಅನುಷ್ಠಾನದ ಕುರಿತು ಕವಿ ಶಿವರುದ್ರಪ್ಪನವರ ಅಭಿಪ್ರಾಯವನ್ನು ವಿವರಿಸಿ.
೨. ನಾವು ಯಾವ ಸಂಕಲ್ಪ ಕೈಗೊಳ್ಳಬೇಕೆಂಬುದು ಕವಿ ಶಿವರುದ್ರಪ್ಪನವರ ಆಶಯ?

ಈ. ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ. ( Explain with context)

೧. “ಹೊಸ ಭರವಸೆಗಳ ಕಟ್ಟೋಣ”
೨. “ಮುಂಗಾರಿನ ಮಳೆಯಾಗೋಣ”
೩. “ಹೊಸ ಎಚ್ಚರದೊಳು ಬದುಕೋಣ”
೪. “ಪ್ರೀತಿಯ ಹಣತೆಯ ಹಚ್ಚೋಣ”

ಉ. ಬಿಟ್ಟ ಜಾಗಗಳನ್ನು ಸೂಕ್ತ ಪದಗಳಿಂದ ತುಂಬಿರಿ. (Fill in the blanks with appropriate word)

೧. ಕತ್ತಲೆಯೊಳಗೆ ಪ್ರೀತಿಯ ………………… ಹಚ್ಚೋಣ.
೨. ಸಂಕಲ್ಪ ಗೀತೆ ಪದ್ಯವನ್ನು ………………………… ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.
೩. ಜಿ ಎಸ್ ಶಿವರುದ್ರಪ್ಪನವರು …………………………… ಯಲ್ಲಿ ಸಮಾವೇಶಗೊಂಡ  ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಭಾಷಾ ಚಟುವಟಿಕೆ

೧. ಕೊಟ್ಟಿರುವ ಪದಗಳ ಧಾತುಗಳನ್ನು ಗುರುತಿಸಿ ಬರೆಯಿರಿ.

ನಿಲ್ಲಿಸು, ಮುಟ್ಟೋಣ, ಕಟ್ಟುವುದು, ನಡೆಸು, ಹಚ್ಚುವುದು, ಆಗೋಣ

೨. ಕೊಟ್ಟಿರುವ ಪದಗಳಲ್ಲಿರುವ ವಿಭಕ್ತಿ ಪ್ರತ್ಯಯಗಳನ್ನು ಪ್ರತ್ಯೇಕಿಸಿ ಬರೆಯಿರಿ.

ಪ್ರೀತಿಯ, ಬಿದ್ದುದನ್ನು, ಭರವಸೆಗಳ, ಬಿರುಗಾಳಿಗೆ, ಜಲಕ್ಕೆ

೩. ಕೊಟ್ಟಿರುವ ಪದಗಳಲ್ಲಿರುವ ವಿಭಕ್ತಿಯನ್ನು ಹೆಸರಿಸಿರಿ.

ಮರದತ್ತಣಿಂ, ರಾಯಂಗೆ, ಸಂಶಯದೊಳ್, ಜಲದಿಂ

೪. ಕೊಟ್ಟಿರುವ ಧಾತುಗಳಿಗೆ ವಿದ್ಯರ್ಥಕ, ನಿಷೇಧಾರ್ಥಕ ಮತ್ತು ಸಂಭವನಾರ್ಥಕ ರೂಪಗಳನ್ನು ಬರೆಯಿರಿ.

 ಹಾಡು, ಬರೆ, ನೋಡು, ಓದು

Click here to download sankalpageete worksheet

One Response