Sarutide srusti, poet Siddhayya Puranik celebrates the beauty of nature. He vividly describes how nature’s splendor is reflected in fruits, butter, curd, milk, roots, honey, sugarcane, bananas, tender coconuts, and grains. The poet also highlights the beauty of the stars, moon, sun, precious stones, copper, lightning, pearls, lamps, eyes, and the vibrant colors of the morning sun’s rays. Nature expresses its brilliance and beauty through these elements, enchanting us with its sounds and meanings, bringing joy and light to life. The poem, Sarutide srusti inspires everyone to connect with their inner poet and appreciate the wonders of nature. Overall Sarutide srusti is a poem about the nature.
“ಸಾರುತಿದೆ ಸೃಷ್ಟಿ” ಎಂದು ಕವಿ ಸಿದ್ಧಯ್ಯ ಪುರಾಣಿಕ್ ಪ್ರಕೃತಿಯ ಸೌಂದರ್ಯವನ್ನು ಕೊಂಡಾಡುತ್ತಾರೆ. ಹಣ್ಣುಗಳು, ಬೆಣ್ಣೆ, ಮೊಸರು, ಹಾಲು, ಬೇರುಗಳು, ಜೇನುತುಪ್ಪ, ಕಬ್ಬು, ಬಾಳೆಹಣ್ಣುಗಳು, ತೆಂಗಿನಕಾಯಿಗಳು ಮತ್ತು ಧಾನ್ಯಗಳಲ್ಲಿ ಪ್ರಕೃತಿಯ ವೈಭವವು ಹೇಗೆ ಪ್ರತಿಫಲಿಸುತ್ತದೆ ಎಂಬುದನ್ನು ಅವರು ಸ್ಪಷ್ಟವಾಗಿ ವಿವರಿಸುತ್ತಾರೆ. ನಕ್ಷತ್ರಗಳು, ಚಂದ್ರ, ಸೂರ್ಯ, ಅಮೂಲ್ಯ ಕಲ್ಲುಗಳು, ತಾಮ್ರ, ಮಿಂಚು, ಮುತ್ತುಗಳು, ದೀಪಗಳು, ಕಣ್ಣುಗಳು ಮತ್ತು ಬೆಳಗಿನ ಸೂರ್ಯನ ಕಿರಣಗಳ ರೋಮಾಂಚಕ ಬಣ್ಣಗಳ ಸೌಂದರ್ಯವನ್ನು ಕವಿ ಎತ್ತಿ ತೋರಿಸುತ್ತಾನೆ. ಪ್ರಕೃತಿಯು ತನ್ನ ತೇಜಸ್ಸು ಮತ್ತು ಸೌಂದರ್ಯವನ್ನು ಈ ಅಂಶಗಳ ಮೂಲಕ ವ್ಯಕ್ತಪಡಿಸುತ್ತದೆ, ಅದರ ಶಬ್ದಗಳು ಮತ್ತು ಅರ್ಥಗಳೊಂದಿಗೆ ನಮ್ಮನ್ನು ಮೋಡಿಮಾಡುತ್ತದೆ, ಜೀವನಕ್ಕೆ ಸಂತೋಷ ಮತ್ತು ಬೆಳಕನ್ನು ತರುತ್ತದೆ. ಸಾರುತಿದೆ ಸೃಷ್ಟಿ ಎಂಬ ಕವಿತೆಯು ಪ್ರತಿಯೊಬ್ಬರನ್ನು ತಮ್ಮ ಒಳಗಿನ ಕವಿಯೊಂದಿಗೆ ಸಂಪರ್ಕಿಸಲು ಮತ್ತು ಪ್ರಕೃತಿಯ ಅದ್ಭುತಗಳನ್ನು ಪ್ರಶಂಸಿಸಲು ಪ್ರೇರೇಪಿಸುತ್ತದೆ.
ಸಾರುತಿದೆ ಸೃಷ್ಟಿ
I.ಪದಗಳ ಅರ್ಥ ಬರೆಯಿರಿ. (Write the word meaning)
ಉಷೆ = ಅರುಣೋದಯ, ಕೆನೆಮೊಸರು = ಕೆನೆ ಸಹಿತ ಮೊಸರು,
ಜ್ಯೋತಿ = ಬೆಳಕು,ದೀಪ ನಯನ = ಕಣ್ಣು, ಅಕ್ಷಿ, ನೇತ್ರ
ರಸಗಬ್ಬು = ರಸಪೂರಿತವಾದ ಕಬ್ಬು, ಸವಿ = ರುಚಿ, ಸಿಹಿ,
ಸಾರು = ಘೋಷಿಸು, ಹೇಳು, ಪ್ರಕಟ ಪಡಿಸು, ಹೊಂಬಣ್ಣ = ಬಂಗಾರದ ಬಣ್ಣ,
ಕಂದ = ಗಡ್ಡೆ, ಛವಿ = ಹೊಳಪು, ಕಾಂತಿ, ಬಣ್ಣ, ತಾರೆ = ನಕ್ಷತ್ರ
ಭವ್ಯ = ಉನ್ನತವಾದ, ರನ್ನ = ರತ್ನ, ಸೃಷ್ಟಿ = ಪ್ರಕೃತಿ, ರಚನೆ,
ಹಾಲ್ದೆನೆ = ಎಳೆ ಕಾಳುಗಳಿರುವ ತೆನೆ
II.ಪ್ರಶ್ನೆಗಳು
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)
೧. ಕವಿಯು ಸೃಷ್ಟಿಯು ಯಾವ ಯಾವ ವಸ್ತುಗಳಲ್ಲಿ ಸವಿಯಿದೆ ಎನ್ನುತ್ತಾರೆ?
ಉ: ಹಣ್ಣಿನಲಿ, ಬೆಣ್ಣೆಯಲಿ, ಕೆನೆಮೊಸರು ಹಾಲಿನಲಿ, ಕಂದದಲಿ, ಜೇನಿನಲಿ, ರಸಗಬ್ಬು, ಬಾಳೆಯಲಿ, ಎಳನೀರು, ಹೊಳೆನೀರು, ಹಾಲ್ದೆನೆಯ ಕಾಳಿನಲ್ಲಿ ಈ ಎಲ್ಲಾ ವಸ್ತುಗಳಲ್ಲಿ ಸವಿಯಿದೆ ಎಂದು ಕವಿ ಎನ್ನುತ್ತಾರೆ.
೨. ಯಾವ ಯಾವ ವಸ್ತುಗಳಲ್ಲಿ ಪ್ರಕೃತಿ ಛವಿಯಾಗಿ ನಿಂತಿದೆ?
ಉ: ತಾರೆಯಲಿ, ಚಂದ್ರನಲಿ, ಸೂರ್ಯನಲಿ, ಕಂಚಿನಲಿ, ಮಿಂಚಿನಲಿ, ಮುತ್ತಿನಲಿ, ಚಿನ್ನದಲಿ, ಜ್ಯೋತಿಯಲಿ, ನಯನದಲಿ, ಉಷೆಯ ಹೊಂಬಣ್ಣದಲ್ಲಿ ಪ್ರಕೃತಿ ಛವಿಯಾಗಿ ನಿಂತಿದೆ.
೩. ಕಾವ್ಯದಲ್ಲಿ ಶಬ್ದ ಮತ್ತು ಅರ್ಥಗಳು ಹೇಗಿರಬೇಕೆಂದು ಕವಿ ಹೇಳುತ್ತಾರೆ?
ಉ: ಕಾವ್ಯದಲ್ಲಿ ಶಬ್ದ ಸವಿಯಾಗಿ ಮತ್ತು ಅರ್ಥಗಳು ಬೆಳಕಾಗಿರಬೇಕು ಎಂದು ಕವಿ ಹೇಳುತ್ತಾರೆ.
೪. ಬಾಳುವೆಯ ಸವಿ ಬೆಳಕನ್ನು ಎಲ್ಲಿ ಕಾಣಬೇಕು ?
ಉ:ಬಾಳುವೆಯ ಸವಿ ಬೆಳಕನ್ನು ಬರೆಯುವವರಲ್ಲಿ ಕಾಣಬೇಕು.
ಆ) ಕೆಳಗಿನ ಪ್ರಶ್ನೆಗಳಿಗೆ 3-4 ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in two – three sentence)
೧. ಕವಿ ನಮ್ಮ ಬದುಕು ಯಾವ ರೀತಿ ಸವಿಯಾಗಬೇಕೆಂದು ಬಯಸುತ್ತಾರೆ?
ಉ:ಹಣ್ಣಿನಲಿ, ಜೇನಿನಲಿ, ಕಂದದಲಿ, ರಸಗಬ್ಬು, ಬಾಳೆಯಲಿ, ಇರುವ ಸಿಹಿಯಂತೆ ಬೆಣ್ಣೆಯಲ್ಲಿರುವ ತುಪ್ಪದಂತೆ ಹಾಲಿನಲ್ಲಿರುವ ಕೆನೆ ಮೊಸರಿನಂತೆ ನಮ್ಮ ಬದುಕು ಸವಿಯಾಗಬೇಕೆಂದು ಕವಿ ಬಯಸುತ್ತಾರೆ.
೨. ಬದುಕು ಛವಿಯಾಗಬೇಕು ಎಂಬುದಕ್ಕೆ ಕವಿ ಕೊಡುವ ಉದಾಹರಣೆಗಳಾವುವು?
ಉ:ನಕ್ಷತ್ರದಲ್ಲಿ, ಚಂದ್ರನಲ್ಲಿ, ಸೂರ್ಯನಲ್ಲಿ, ರತ್ನದಲಿ, ಜ್ಯೋತಿಯಲ್ಲಿ, ನಯನದಲಿ, ಉಷೆಯ ಹೊಂಬಣ್ಣದಲ್ಲಿ, ಕಂಚು ಮಿಂಚಿನಲ್ಲಿ ಮತ್ತು ಚಿನ್ನದಲಿ ಈ ಎಲ್ಲದರಲ್ಲಿ ಇರುವ ಹೊಳಪಿನಂತೆ ಬದುಕು ಛವಿಯಾಗಬೇಕೆಂಬುದಕ್ಕೆ ಕವಿ ನೀಡುವ ಉದಾಹರಣೆಗಳಾಗಿವೆ.
೩. ಸಿದ್ದಯ್ಯ ಪುರಾಣಿಕರು ಯಾವ ರೀತಿಯ ಕವಿ ಆಗಬೇಕೆಂದು ಹೇಳುತ್ತಾರೆ?
ಉ: ಶಬ್ದದಲ್ಲಿ ಸವಿಯಾಗಿ, ಅರ್ಥದಲ್ಲಿ ಬೆಳಕಾಗಿ, ಬಾಳ ಭವ್ಯತೆಯ ಬೆಳಕಾಗಿ, ಸವಿಯಾದ ಗುಣಗಳನ್ನು ರೂಢಿಸಿಕೊಂಡು ಅರ್ಥಪೂರ್ಣ ಕವಿಯಾಗಬೇಕೆಂದು ಹೇಳುತ್ತಾರೆ.
ಇ) ಈ ಪದ್ಯ ಭಾಗವನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿರಿ. (Complete the poem)
ಹಣ್ಣಿನಲಿ ಬೆಣ್ಣೆಯಲಿ ಕೆನೆ ಮೊಸರು ಹಾಲಿನಲಿ
ಕಂದದಲಿ ಜೇನಿನಲಿ ರಸಗಬ್ಬು ಬಾಳೆಯಲಿ
ಎಳೆನೀರು ಹೊಳೆನೀರು ಹಾಲ್ದೆನೆಯ ಕಾಳಿನಲಿ
ಸಾರುತಿದೆ ಸೃಷ್ಟಿ ಇದು ಸವಿಯಾಗಿ ನಿಂದು
ಸವಿಯಾಗಿ ಸವಿಯಾಗಿ ಸವಿಯಾಗಿ! ಎಂದು.
ಈ) ಬಿಟ್ಟ ಸ್ಥಳಗಳನ್ನು ತುಂಬಿರಿ.(Fill in the blanks)
೧. ಸವಿ ಇರುವುದು ಇವುಗಳಲ್ಲಿ ಹಣ್ಣಿನಲ್ಲಿ ಬೆಣ್ಣೆಯಲಿ.
೨. ಎಳೆನೀರು ಹೊಳೆನೀರು ಹಾಲ್ದೆನೆಯ ಕಾಳಿನಲ್ಲಿ ಸಾರುತಿದೆ ಸೃಷ್ಟಿ ಸವಿಯಾಗಿ ನಿಂದು.
೩. ಛವಿ ಇರುವುದು ಇವುಗಳಲ್ಲಿ ತಾರೆಯಲಿ ಚಂದ್ರನಲಿ.
೪. ಕಾವ್ಯದಲ್ಲಿ ಶಬ್ದ ಸವಿಯಾಗಿ, ಅರ್ಥ ಬೆಳಕಾಗಿ ಇರಬೇಕೆಂದು ಕವಿ ಹೇಳುವನು.
೫. ಬಾಳುವೆಯ ಸವಿ ಬೆಳಕ ಬರೆಯುವವ ಬೇಕಾಗಿದೆ.
III. ಭಾಷಾಭ್ಯಾಸ
ಅ) ಈ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ. (Make your own sentence)
೧. ಸಾರು: ಗಾಂಧೀಜಿಯವರು ಸತ್ಯವನ್ನು ಸಾರಿದರು.
೨. ಸೃಷ್ಟಿ: ದೇವರ ಸೃಷ್ಟಿ ಅದ್ಬುತವಾಗಿದೆ.
೩. ಸವಿ: ಮೈಸೂರ್ ಪಾಕ್ ಸವಿಯಲು ಚಂದ.
೪. ಹೊಂಬಣ್ಣ: ಸೂರ್ಯನ ಕಿರಣಗಳ ಹೊಂಬಣ್ಣ ಸುಂದರ.
೫. ಛವಿ: ನಮ್ಮ ಸೃಷ್ಟಿಯು ಛವಿಯಾಗಿದೆ.
ಆ) “ಸಾರುತಿದೆ ಸೃಷ್ಟಿ” ಕವಿತೆಯಲ್ಲಿ ಬಳಕೆಯಾಗಿರುವ ಪ್ರಾಸ ಪದಗಳನ್ನು ಬರೆಯಿರಿ. Write the Rhyming words from the poem “Saaruthidhe Srushti”
ಎಳನೀರು – ಕಾಳಿನಲಿ ಕಂಚು – ಮಿಂಚು
ಸವಿ – ಛವಿ ರನ್ನ – ಚಿನ್ನ