Shabari Gita Drama Based on the epic Ramayana. Shabari yearns for Sri Rama in Matanga Rishi Ashram. Feeling that she will be ecstatic at the sight of her beloved lord. After Sitaparana, Rama and Lakshman enter the Matanga Ashram as instructed by Dhanu in search of Sita, where Sabari finds Rama and is treated with Madhuparka. Shabari’s innocence and Sri Rama’s simple nobility and Lakshmana’s humility are beautifully expressed in this song drama.

ಶಬರಿ ಗೀತ ನಾಟಕ ರಾಮಾಯಣ ಮಹಾಕಾವ್ಯವನ್ನು ಆಧರಿಸಿದೆ. ತನ್ನ ಆರಾಧ್ಯ ಪುರುಷನ ದರ್ಶನದಿಂದ ಕ್ರತಾರ್ಥಳಾಗುವಳೆಂಬ ಭಾವದಿಂದ ಮತಂಗ ಋಷಿ ಆಶ್ರಮದಲ್ಲಿ ಶಬರಿ ಶ್ರೀ ರಾಮನಿಗೆ ಹಂಬಲಿಸಿ ಕಾತರಿಸುತ್ತಾಳೆ. ಸೀತಾಪರಣದ ಬಳಿಕ ಸೀತೆಯನ್ನು ಹುಡುಕಿಕೊಂಡು ರಾಮಲಕ್ಷ್ಮಣರು ದನು ಋಷಿಯ ಸೂಚನೆಯಂತೆ ಮತಂಗ ಆಶ್ರಮವನ್ನು ಪ್ರವೇಶಿಸುತ್ತಾರೆ. ಅಲ್ಲಿ ಶಬರಿ ರಾಮನನ್ನು ಕಂಡು ಮಧುಪರ್ಕದಿಂದ ಉಪಚರಿಸಿ ಧನ್ಯತೆಯ ಭಾವವನ್ನು ಪಡೆಯುತ್ತಾಳೆ. ತನ್ನ ಬಾಳಿನ ಹಂಬಲ ತೀರಿದ ನಂತರ ಬಾಳು ಅರ್ಥಹೀನ ವೆಂದು ಭಾವಿಸಿ ಮುಕ್ತಿಗಾಗಿ ಶ್ರೀರಾಮನಲ್ಲಿ ಕೇಳುತ್ತಾಳೆ. ಒಲ್ಲದ ಮನಸ್ಸಿನಿಂದ ರಾಮ ಶಬರಿಗೆ ಮುಕ್ತಿಯನ್ನು ಕೊಡುತ್ತಾನೆ. ಶಬರಿ ಅಗ್ನಿಯಲ್ಲಿ ತನ್ನ ಪ್ರಾಣವನ್ನು ಬಿಡುತ್ತಾಳೆ. ಶಬರಿಯ ಮುಗ್ಧತೆ. ಶ್ರೀ ರಾಮನ ಸರಳತೆ, ಲಕ್ಷ್ಮಣನ ವಿನಯ ಈ ಗೀತ ನಾಟಕದಲ್ಲಿ ಸುಂದರವಾಗಿ ವ್ಯಕ್ತವಾಗಿದೆ.

About PuTiNa

Purohita Thirunarayanaiyengar Narasimhachar (17 March 1905 – 23 October 1998), commonly known as PuTiNa, was a playwright and poet in the Kannada language.  He was awarded the Padma Shri by the Government of India in 1991.He was a Sahitya Akademi fellow and the winner of the Pampa Award, awarded by the Government of Karnataka in 1991.

ಪು.ತಿ. ನರಸಿಂಹಾಚಾರ್ : – ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ,ಗೀತನಾಟಕಕಾರರು, ಜಿಜ್ಞಾಸೆಯ ಕವಿ .ಪು.ತಿ.ನರಸಿಂಹಾಚಾರ್ ಅವರದು ಕನ್ನಡ ಸಾಹಿತ್ಯದಲ್ಲಿ ಬಲು ದೊಡ್ಡ ಹೆಸರು. ಜೀವನ ಹಾಗೂ ಸಾಹಿತ್ಯದಲ್ಲಿ ತುಂಬೊಲವನ್ನು ಹರಿಸಿದ, ಬದುಕು ಭಗವಂತನ ಕೃಪೆಯಿಂದ ಆದುದು ಎಂದು ಭಾವಿಸಿದ ಕವಿ. ನವೋದಯ ಸಾಹಿತ್ಯದ ಮೊದಲ ತಲೆಮಾರು ಕಂಡ ಹಲವು ಹಿರಿಯ ಕವಿಗಳ ಸಾಲಿಗೆ ಸೇರಿದ ಹಿರಿದಾದ ಚೇತನ. 

ಶಬರಿ

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.  (Answer the following in one sentence).

೧. ಶ್ರೀರಾಮನ ತಂದೆಯ ಹೆಸರೇನು?
ಉ. ಶ್ರೀರಾಮನ ತಂದೆಯ ಹೆಸರು ದಶರಥ.
೨. ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದ್ದಳು?
ಉ. ಶ್ರೀರಾಮನಿಗೆ ಸಮರ್ಪಿಸಲು ಶಬರಿ ಪರಿಮಳದ ಹೂವು, ಮಧುಪರ್ಕ ಮತ್ತು ರುಚಿಕರ ಹಣ್ಣು ಹಂಪಲುಗಳನ್ನುಸಂಗ್ರಹಿಸಿದ್ದಳು.
೩. ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು?
ಉ: ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಶಬರಿ.
೪. ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು?
ಉ. ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಕಬಂಧ ಎಂಬ ರಾಕ್ಷಸ.
೫. ಶಬರಿ ಗೀತ ನಾಟಕದ ಕರ್ತೃ ಯಾರು?
ಉ. ಶಬರಿ ಗೀತ ನಾಟಕದ ಕರ್ತೃ ಪು.ತಿ. ನರಸಿಂಹಾಚಾರ್.

ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ. (Answer the following in two to three sentences)

೧. ರಾಮನು ಗಿರಿವನವನ್ನು ಏನೆಂದು ಪ್ರಾರ್ಥಿಸಿದನು?
ಉ: ರಾಮನು ಗಿರಿವನಗಳನ್ನು ಕುರಿತು “ಗಿರಿವನಗಳೇ ನಾನು ನಿಮ್ಮನ್ನು ಬೇಡಿಕೊಳ್ಳುವೆನು. ಹೇಳಿ, ಪ್ರೀತಿಯ ರಾಣಿ ಸೀತೆಯು ನನಗೆ ಸಿಗುವಳೇ? ಅವಳು ಇರುವ ಸ್ಥಳವನ್ನು ನೀವು ತಿಳಿದಿರುವರೇ? ನನ್ನ ಹೃದಯದ ಈ ದುಃಖವು ನಾಶವಾಗುತ್ತಿಲ್ಲವಲ್ಲ” ಎಂದು ಪ್ರಾರ್ಥಿಸಿದನು.
೨. ಲಕ್ಷ್ಮಣನು ಅಣ್ಣನನ್ನು ಹೇಗೆ ಸಂತೈಸಿದನು?
ಉ: ಲಕ್ಷ್ಮಣನು ಸೀತೆಗಾಗಿ ಪರಿತಪಿಸುತ್ತಿದ್ದ ಅಣ್ಣ ರಾಮನನ್ನು ಕುರಿತು, “ತಾಳಿಕೋ ಅಣ್ಣ, ತಾಳಿಕೋ. ಸೂರ್ಯನೆ ತೇಜ ಗೆಡಲು ಕಾಂತಿಯನ್ನು ನೀಡುವವರು ಯಾರು? ಲೋಕಕ್ಕೆ ಧೈರ್ಯ ನೀಡುವವರು ಯಾರು? ಎಂದು ಸಂತೈಸಿದನು.
೩. ರಾಮನ ಸ್ವಾಗತಕ್ಕಾಗಿ ಶಬರಿ ಮಾಡಿಕೊಂಡಿದ್ದ ಸಿದ್ಧತೆಗಳೇನು?
ಉ: ರಾಮನ ಸ್ವಾಗತಕ್ಕಾಗಿ ಶಬರಿಯು ಸವಿಯಾದ ಬಗೆ ಬಗೆಯ ಹಣ್ಣುಗಳನ್ನು, ಜೇನುತುಪ್ಪ ಅಧಿಕವಾಗಿರುವ ಮಧುಪರ್ಕ ಪಾನೀಯವನ್ನು, ಸುವಾಸನೆಯಿಂದ ಕೂಡಿದ ಹೂವುಗಳನ್ನು ಸಂಗ್ರಹಿಸಿ ಸಿದ್ಧಮಾಡಿಕೊಂಡಿದ್ದಳು.
೪. ಶಬರಿಯು ರಾಮಲಕ್ಷ್ಮಣರನ್ನು ಉಪಚರಿಸಿದ ರೀತಿಯನ್ನು ವಿವರಿಸಿ.
ಉ: ಶಬರಿಯು ರಾಮಲಕ್ಷ್ಮಣರನ್ನು ಕಂಡು, ಹತ್ತಿರಕ್ಕೆ ಬಂದು ಮೈಯನ್ನು ಮುಟ್ಟಿ, ಕಾಲಿಗೆ ಬಿದ್ದು ನಮಸ್ಕರಿಸಿ, ಕೈ ಕಣ್ಣುಗೊತ್ತಿಕೊಂಡಳು. ಬಗೆ ಬಗೆಯ ಸುವಾಸನೆಯುಳ್ಳ ಹೂಮಾಲೆಯನ್ನು ಕೊರಳಿಗೆ ಹಾಕಿದಳು. ಜಗದಲ್ಲಿ ಇದಕ್ಕಿಂತ ರುಚಿಯಾದ ಹಣ್ಣೇ ಇಲ್ಲ. ನಿಮಗೆಂದೇ ತಂದೆನು ಎಂದು ಹೇಳುತ್ತಾ ಸವಿಯಾದ ಹಣ್ಣುಗಳನ್ನು ನೀಡಿ ಉಪಚರಿಸಿದಳು.
೫. ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣರು ಶಬರಿಗೆ ಏನು ಹೇಳಿದರು?
ಉ: ಆಥಿತ್ಯ ಸ್ವೀಕರಿಸಿದ ರಾಮಲಕ್ಷ್ಮಣರು ಶಬರಿಗೆ ನಾವು ನಿನ್ನ ಪ್ರೀತಿಯ ಸ್ವಾಗತದಿಂದ ಸಂತಸ ಗೊಂಡೆವು. ನಿನ್ನ ಸುಖದಲ್ಲಿ ನಮ್ಮ ಸುಖ ಇದೆ. ಕಣ್ಣಿಗೆ ಕಾಣದ ಆನಂದವನ್ನು ಅನುಭವಿಸುವ ಪುಣ್ಯ ನಮ್ಮದಾಯಿತು. ನಾವು ನಿನಗೆ ಋಣಿಗಳು ಎಂದು ಹೇಳಿದರು.

ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ. (Answer the following in eight – ten sentences)

೧. ಶಬರಿಯ ಚಿಂತೆ ಹಿಂಗಿ ಹೋದ ಸಂದರ್ಭದ ಸ್ವಾರಸ್ಯವನ್ನು ವಿವರಿಸಿ.
ಉ: ಶಬರಿಯು ರಾಮಲಕ್ಷ್ಮಣರನ್ನು ಕಂಡು ಹಿಗ್ಗಿ ಸಂತಸ ಪಡುತ್ತಾಳೆ. ಹತ್ತಿರಕ್ಕೆ ಬಂದು ಮೈಯನ್ನು ಮುಟ್ಟಿ, ಕಾಲಿಗೆ ಬಿದ್ದು ನಮಸ್ಕರಿಸಿ, ಕೈ ಕಣ್ಣುಗೊತ್ತಿಕೊಂಡಳು. ಬಗೆ ಬಗೆಯ ಸುವಾಸನೆಯುಳ್ಳ ಹೂಮಾಲೆಯನ್ನು ಕೊರಳಿಗೆ ಹಾಕುತ್ತಾಳೆ. ಸವಿಯಾದ ಹಣ್ಣುಗಳನ್ನು ನೀಡಿ ಸತ್ಕರಿಸುತ್ತಾಳೆ. ರಾಮನನ್ನು ಕಂಡ ತಾನು ಪರಮಸುಖಿ ಎಂದು ನರ್ತಿಸುತ್ತಾಳೆ. ರಾಮನೂ ಕೂಡ ನಿನ್ನ ಸುಖದಲ್ಲಿ ನಮ್ಮ ಸುಖ ಇದೆ. ಕಣ್ಣಿಗೆ ಕಾಣದ ಆನಂದವನ್ನು ಅನುಭವಿಸುವ ಪುಣ್ಯ ನಮ್ಮದಾಯಿತು. ನಾವು ನಿನಗೆ ಋಣಿಗಳು ಎಂದು ಹೇಳುತ್ತಾನೆ. ಶಬರಿಯು ಕಣ್ಣೀರು ತುಂಬಿಕೊಂಡು ನನ್ನನ್ನು ಹುಡುಕಿ ಬಂದು ಸಂತಸ ನೀಡಿದಿರಿ, “ಹಸಿವು ತೃಷೆ ಹಿಂಗಿತೇ? ನಾನೊಬ್ಬಳು ಬಡವಿ, ನನ್ನ ಮೇಲೆ ಮರುಕ ತೋರಿದಿರಾ” ಎನ್ನುತ್ತಾಳೆ. ಶ್ರೀರಾಮುನು “ನಿನ್ನ ಆತಿತ್ಯದಲ್ಲಿ ಸ್ವಲ್ಪವೂ ಕೊರತೆ ಇಲ್ಲ. ನಮ್ಮ ಅರಮನೆಗಿಂತ ನಿನ್ನ ಆಶ್ರಮವೇ ಚಂದ. ನಿನ್ನ ಮನೆಯೇ ನಮ್ಮ ಮನೆ. ನೀನೇ ತಾಯಿಯಂತೆ ಎನ್ನುತ್ತಾನೆ”. ಶಬರಿಯು “ನಿನ್ನ ರೂಪದಂತೆ ನಿನ್ನ ಮಾತು ಸುಂದರ ಹಾಗೂ ಉದಾರ. ನಾನು ಧನ್ಯ. ಗುರು ಮತಂಗರ ವರ ನನಗೆ ಫಲಿಸಿತು. ನಿಮ್ಮನ್ನು ಕಂಡು ಪುಣ್ಯವು ತುಂಬಿತು. ಗುರು ಪೂಜೆಯನ್ನು ಮಾಡಿದ ಪುಣ್ಯ ನನಗೆ ಇಂದು ಸೇರಿತು. ನನ್ನ ಚಿಂತೆಯಲ್ಲ ಹಿಂಗಿ ಹೋಯಿತು” ಎನ್ನುತ್ತಾಳೆ.
೨. ಶಬರಿಯ ಸಡಗರ, ಸಂತೋಷ ಮೇಳದವರ ಹಾಡಿನಲ್ಲಿ ಹೇಗೆ ವರ್ಣಿತವಾಗಿದೆ?
ಉ. ರಾಮನು ಆಶ್ರಮದಲ್ಲಿ ನಿಂತಿರುವುದನ್ನು ನೋಡಿ ಶಬರಿ ಆಶ್ಚರ್ಯಪಟ್ಟಳು. ರಾಮನ ಹತ್ತಿರ ಬಂದು ಅವನನ್ನು ಮುಟ್ಟಿ, ಪಾದಕ್ಕೆ ನಮಸ್ಕರಿಸಿದಳು. ಕೈಯನ್ನು ಕಣ್ಣಿಗೆ ಒತ್ತುಕೊಂಡು ಕಣ್ಣೀರು ಸುರಿಸಿದಳು. ಗದ್ಗದ ಸ್ವರದಿಂದ “ಬನ್ನಿರಿ” ಎಂದು ಆಹ್ವಾನಿಸಿದಳು. “ಸಿದ್ಧತೆ ಇಲ್ಲವಲ್ಲ” ಎಂದು ಹಂಬಲಿಸಿದಳು. ಮನಸ್ಸಿನ ಬಯಕೆಯಂತೆ ಬಗೆ ಬಗೆಯ ಪರಿಮಳದ ಹೂವುಗಳಿಂದ ಮಾಲೆಯನ್ನು ಮಾಡಿ ರಾಮನ ಕೊರಳಿಗೆ ಹಾಕಿದಳು. ಜಗತ್ತಿನಲ್ಲಿ ಇಂತಹ ರುಚಿಕರವಾದ ಹಣ್ಣು ಇಲ್ಲವೆಂದು ಹೇಳುತ್ತಾ ಹಣ್ಣುಗಳನ್ನು ರಾಮನ ಕೈಗೆ ಇಟ್ಟಳು. ಶಬರಿಯ ಈ ಸೇವೆಯಿಂದ ರಾಮನು ಪ್ರಸನ್ನನಾದನು. ರಾಮಲಕ್ಷ್ಮಣರು ಧನ್ಯತಾಭಾವದಿಂದ ಮಂದಹಾಸ ಬೀರಿದರು. ಹೀಗೆ ಶಬರಿಯ ಸಡಗರ ಸಂತೋಷ ಮೇಳದವರ ಹಾಡಿನಲ್ಲಿ ವರ್ಣಿತವಾಗಿದೆ.
೩. ನಂಬಿ ಕೆಟ್ಟವರಿಲ್ಲ ಎಂಬ ಮಾತು ಶಬರಿಯ ಪಾಲಿಗೆ ಹೇಗೆ ನಿಜವಾಗಿದೆ?
ಉ. ಶಬರಿ ಮತಂಗ ಋಷಿ ಆಶ್ರಮದಲ್ಲಿ ಇರುತ್ತಾಳೆ. ಸಿದ್ದರಾದ ಮತಂಗ ಋಷಿಗಳು ಶಬರಿಯ ಮನದಾಸೆಯನ್ನು ತಿಳಿದವರಾಗಿದ್ದು, ರಾಮಲಕ್ಷ್ಮಣರು ಆಶ್ರಮಕ್ಕೆ ಬಂದೇ ಬರುತ್ತಾರೆ ಎಂದು ಶಬರಿಗೆ ಹೇಳಿದ್ದರು. ಅವರು ಹೇಳಿದಂತೆ ಶಬರಿಗೆ ರಾಮನ ದರ್ಶನವಾಯಿತು. ಶಬರಿಯು ರಾಮಲಕ್ಷ್ಮಣರನ್ನು ಕಂಡು ಹಿಗ್ಗಿ ಸಂತಸಪಟ್ಟಳು. ಹತ್ತಿರಕ್ಕೆ ಬಂದು ಮೈಯನ್ನು ಮುಟ್ಟಿ, ಕಾಲಿಗೆ ಬಿದ್ದು ನಮಸ್ಕರಿಸಿ, ಕೈ ಕಣ್ಣುಗೊತ್ತಿಕೊಂಡಳು. ಬಗೆ ಬಗೆಯ ಸುವಾಸನೆಯುಳ್ಳ ಹೂಮಾಲೆಯನ್ನು ಕೊರಳಿಗೆ ಹಾಕಿದಳು. ಸವಿಯಾದ ಹಣ್ಣುಗಳನ್ನು ನೀಡಿ ಸತ್ಕರಿಸಿದಳು. ರಾಮನನ್ನು ಕಂಡ ತಾನು ಪರಮಸುಖಿ ಎಂದು ನರ್ತಿಸಿದಳು. ಮತಂಗ ಋಷಿಯ ಮಾತನ್ನು ನಂಬಿ ಹಲವಾರು ವರ್ಷಗಳು ರಾಮನ ದರ್ಶನಕ್ಕಾಗಿ ಕಾದಳು. ಎದುರು ನೋಡುತ್ತಿದ್ದ ಶಬರಿಗೆ ರಾಮನ ದರ್ಶನವಾಯಿತು. ಮನದಾಸೆ ಈಡೇರಿತು. ಹಾಗಾಗಿ ನಂಬಿಕೆಟ್ಟವರಿಲ್ಲ ಎಂಬ ಮಾತು ಶಬರಿಯ ಪಾಲಿಗೆ ನಿಜವಾಯಿತು.

ಈ) ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ. (Explain the context)

೧. “ಆವುದೀ ಮರುಳು? ನಮ್ಮೆಡೆಗೆ ಬರುತ್ತಿಹುದು”
ಆಯ್ಕೆ: ಪುತಿನ ರಚಿಸಿದ ಏಕಾಂತ ನಾಟಕಗಳು ಎಂಬ ಕೃತಿಯಿಂದ ಶಬರಿ ಗೀತನಾಟಕವನ್ನು ಆರಿಸಲಾಗಿದೆ.
ಸಂದರ್ಭ: ಸೀತಾಪರಣದ ನಂತರ ರಾಮಲಕ್ಷ್ಮಣರು ಸೀತೆಯನ್ನು ಹುಡುಕುತ್ತಾ ತಪಸ್ವಿ ಧನುವಿನ ಸೂಚನೆಯಂತೆ ಮತಂಗಾಶ್ರಮವನ್ನು ಪ್ರವೇಶಿಸುವ ಸಂದರ್ಭದಲ್ಲಿ ಎದುರಿಗೆ ಬರುತ್ತಿದ್ದ ಶಬರಿಯನ್ನು ಕಂಡು ರಾಮನು ಈ ಮಾತನ್ನು ಲಕ್ಷ್ಮಣನಿಗೆ ಹೇಳುತ್ತಾನೆ.
ಸ್ವಾರಸ್ಯ: ಶ್ರೀರಾಮನ ಬರುವಿಕೆಗಾಗಿ ಕಾದು ಮರುಳಳಂತೆ ಆಗಿದ್ದ ಶಬರಿಯನ್ನು ಕಂಡು ರಾಮ ಲಕ್ಷ್ಮಣರು ಭಯಗೊಂಡದ್ದನ್ನು ಈ ಮಾತಿನಲ್ಲಿ ಸ್ವಾರಸ್ಯವಾಗಿ ವರ್ಣಿಸಲಾಗಿದೆ.
೨. “ನಾಚುತಿಹೆನೀ ಪೂಜ್ಯೆಯೀ  ನಲುಮೆಯಿಂದ “
ಆಯ್ಕೆ: ಪುತಿನ ರಚಿಸಿದ ಏಕಾಂತ ನಾಟಕಗಳು ಎಂಬ ಕೃತಿಯಿಂದ ಶಬರಿ ಗೀತನಾಟಕವನ್ನು ಆರಿಸಲಾಗಿದೆ.
ಸಂದರ್ಭ: ತನ್ನಿಂದ ಯಾವ ಉಪಕಾರವಿಲ್ಲದಿದ್ದರೂ ತನ್ನನ್ನು ಪ್ರೀತಿಯಿಂದ ನೆನೆಯುತ್ತಾ ಹಂಬಲಿಸುತ್ತಿರುವ ವೃದ್ಧೆ ಶಬರಿಯನ್ನು ಕಂಡ ಸಂದರ್ಭದಲ್ಲಿ ರಾಮನು ಲಕ್ಷ್ಮಣನಿಗೆ ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ: ಪೂಜ್ಯೆಯಾದ ಶಬರಿಯು ತನ್ನನ್ನು ಪ್ರೀತಿಯಿಂದ ನೆನೆಯುತ್ತಾ ಬರುವಿಕೆಗಾಗಿ ಭಕ್ತಿಯಿಂದ ಕಾಯುತ್ತಾ ಇರುವ ದೃಶ್ಯವನ್ನು ನೋಡಿ ರಾಮನು “ಅವಳ ಅನುರಾಗವನ್ನು ಕಂಡು ನಾಚಿದನು” ಎಂಬುದು ಇಲ್ಲಿಯ ಸ್ವಾರಸ್ಯವಾಗಿದೆ.
೩. “ತಾಯಿ ದಾರಿಗರಿಗೆ ಬೀಡಿಲ್ಲಿ ದೊರೆಯುವುದೇ”
ಆಯ್ಕೆ: ಪುತಿನ ರಚಿಸಿದ ಏಕಾಂತ ನಾಟಕಗಳು ಎಂಬ ಕೃತಿಯಿಂದ ಶಬರಿ ಗೀತನಾಟಕವನ್ನು ಆರಿಸಲಾಗಿದೆ.
ಸಂದರ್ಭ: ಮತಂಗಾಆಶ್ರಮವನ್ನು ಪ್ರವೇಶಿಸಿದ ಸಂದರ್ಭದಲ್ಲಿ “ಎಂದು ಕಾಣುವೇನು ಶ್ರೀರಾಮನನ್ನು ಸನ್ಮಂಗಳ ಮೂರ್ತಿಯನ್ನು” ಎಂದು ಹಾಡುತ್ತಾ ತನಗಾಗಿ ಹಂಬಲಿಸುತ್ತಿರುವ ಶಬರಿಯನ್ನು ಕಂಡು ರಾಮನು ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ: ತನಗಾಗಿ ಹಂಬಲಿಸುತ್ತಿರುವ ಶಬರಿಯನ್ನು ಕುರಿತು ರಾಮನು ಏನು ಅರಿಯದಂತೆ ದಾರಿಗರಾದ ನಮಗೆ ಇಲ್ಲಿ ಉಳಿದುಕೊಳ್ಳಲು ಸ್ಥಳ ದೊರೆಯುವುದೇ ಎಂದು ಕೇಳುವುದು ಸ್ವಾರಸ್ಯವಾಗಿದೆ.
೪. “ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ!”
ಆಯ್ಕೆ: ಪುತಿನ ರಚಿಸಿದ ಏಕಾಂತ ನಾಟಕಗಳು ಎಂಬ ಕೃತಿಯಿಂದ ಶಬರಿ ಗೀತನಾಟಕವನ್ನು ಆರಿಸಲಾಗಿದೆ.
ಸಂದರ್ಭ: ರಾಮನು ಶಬರಿಯ ಅತಿಥಿ ಸತ್ಕಾರವನ್ನು ಕುರಿತು “ನಿನ್ನ ಆತಿಥ್ಯದ ಸವಿಯು ಅಯೋಧ್ಯೆಯ ಅರಮನೆಗಿಂತ ಮಿಗಿಲಾದದು. ಇಷ್ಟು ಪ್ರೀತಿಯನ್ನು ತೋರುವ ನಿನ್ನನ್ನು ತಾಯಿ ಎಂದು ತಿಳಿಯುವೆವು” ಎಂಬ ಸಂದರ್ಭದಲ್ಲಿ ಶಬರಿಯು ಈ ಮಾತನ್ನು ಹೇಳುತ್ತಾಳೆ.
ಸ್ವಾರಸ್ಯ: ರಾಮನ ಪ್ರೀತಿಯ ಮಾತುಗಳು ಅವನ ರೂಪದಂತೆ ಮಧುರವಾಗಿದೆ ಎಂದು ಹೇಳುವ ಮೂಲಕ ಶಬರಿಯು ರಾಮನ ವ್ಯಕ್ತಿತ್ವವನ್ನು ಸ್ವಾರಸ್ಯ ಪೂರ್ಣವಾಗಿ ವರ್ಣಿಸುತ್ತಾಳೆ.
೫. “ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು”
ಆಯ್ಕೆ: ಪುತಿನ ರಚಿಸಿದ ಏಕಾಂತ ನಾಟಕಗಳು ಎಂಬ ಕೃತಿಯಿಂದ ಶಬರಿ ಗೀತನಾಟಕವನ್ನು ಆರಿಸಲಾಗಿದೆ.
ಸಂದರ್ಭ: ರಾಮನ ದರ್ಶನ ಭಾಗ್ಯದಿಂದ ಸಂತಸಳಾದ ಶಬರಿಯು ಮುಕ್ತಿಯನ್ನು ಪಡೆಯುವದಕ್ಕಾಗಿ ಅಗ್ನಿ ಪ್ರವೇಶಿಸುವ ಸಂದರ್ಭದಲ್ಲಿ ರಾಮನು “ಬೆಳಕಿಗೆ ಒಲಿದವರು ಉರಿವ ಬತ್ತಿಯ ಕಪ್ಪನ್ನು ನೋಡುವುದಿಲ್ಲ” ಹೇಳುತ್ತಾನೆ.
ಸ್ವಾರಸ್ಯ: “ಬೆಳಕನ್ನು ಇಷ್ಟಪಡುವವರು ಉರಿಯುವ ಬತ್ತಿಯ ಕಪ್ಪನ್ನು ನೋಡುವುದಿಲ್ಲ.” ಎಂಬ ಮಾತು ಶಬರಿಯ ರಾಮಭಕ್ತಿಯನ್ನು ಬಹು ಸ್ವಾರಸ್ಯಪೂರ್ಣವಾಗಿ ವರ್ಣಿಸುತ್ತದೆ.

ಉ) ಹೊಂದಿಸಿ ಬರೆಯಿರಿ (Match the following)
    ಅ                    ಬ

ಮತಂಗ               ಸೀತೆ                  ಆಶ್ರಮ
ಪುತಿನ                 ಆಶ್ರಮ                ಮೇಲುಕೋಟೆ
ದಶರಥ                ಮೇಲುಕೋಟೆ         ರಾಮ
ಚಿತ್ರಕೂಟ             ಪರ್ವತ                ಪರ್ವತ
ಭೂಮಿಜಾತೆ           ರಾಮ                  ಸೀತೆ
                         ಅರಣ್ಯ

ಊ) ಕೊಟ್ಟಿರುವ ಗಾದೆಗಳ ಅರ್ಥವನ್ನು ವಿವರಿಸಿ ಬರೆಯಿರಿ. (Explain the proverbs)

೧. ತಾಳಿದವನು ಬಾಳಿಯಾನು (Click to open the link)
೨. ಮನಸ್ಸಿದ್ದರೆ ಮಾರ್ಗ (Click to open the link)

ಭಾಷಾ ಚಟುವಟಿಕೆ

೧. ಕೊಟ್ಟಿರುವ ಪದಗಳಲ್ಲಿ ವಿಜಾತೀಯ ಸಂಯುಕ್ತಾಕ್ಷರಗಳನ್ನು ಆರಿಸಿ ಬರೆಯಿರಿ. (Identify the Vijatiya Sayukthakshara from the following words)

ಕಾರ್ಯ, ಕತ್ತಲೆ, ಇಲ್ಲ, ಶಸ್ತ್ರ, ಎಚ್ಚರ, ಕಣ್ಣಿಗೆ, ಅದ್ಭುತ, ಬಟ್ಟೆ

೨. ನೀಡಿರುವ ಪದಗಳಲ್ಲಿ ಅವರ್ಗೀಯ ವ್ಯಂಜನಾಕ್ಷರಗಳನ್ನು ಆರಿಸಿ ಬರೆಯಿರಿ. (Identify the avargiya vyanjanagalu from the following words and write)

ನಾಗಿ, ದೇ, ನೆ, ಬಳಿಕ, ನೆ, ದುವೆ, ಮನುಷ್ಯ, ಹೊತ್ತು, ಒಗೆ

೩. ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಹೊಂದುವ ನಾಲ್ಕನೆಯ ಪದವನ್ನು ಬರೆಯಿರಿ.(Write the 4th word related to the 3rd word)

ಅ) ಕ್‌, ಗ್‌ : ಅಲ್ಪಪ್ರಾಣಾಕ್ಷರಗಳು : : ಛ್‌ , ಝ್‌ : ಮಹಾಪ್ರಾಣಾಕ್ಷರಗಳು
ಆ) ವರ್ಗೀಯ ವ್ಯಂಜನಾಕ್ಷರಗಳು : ೨೫ : : ಅವರ್ಗೀಯ ವ್ಯಂಜನಾಕ್ಷರಗಳು :
ಇ) ಆ, ಈ, ಊ : ದೀರ್ಘ ಸ್ವರಗಳು : : ಅ, ಇ, ಉ, ಋ : ಹ್ರಸ್ವ ಸ್ವರಗಳು
ಈ) ಸ್ವರಗಳು : ೧೩ : : ಯೋಗವಾಹಗಳು :

೪. ಕೊಟ್ಟಿರುವ ವಿಷಯಗಳನ್ನು ಕುರಿತು ಪ್ರಬಂಧ ಬರೆಯಿರಿ. (Write essays for the following topics)

೧. ರಾಷ್ಟ್ರೀಯ ಹಬ್ಬಗಳ ಮಹತ್ವ (Click to open the link)
೨. ಗ್ರಂಥಾಲಯಗಳ ಮಹತ್ವ (Click to open the link)
೩. ಸಾಮಾಜಿಕ ಪಿಡುಗುಗಳು (Click to open the link)

Click here to download shabari exercises