Shravanakumara kannada lesson grade V. Shravanakumara grade 6th lesson teach us to care our parents. Sravanakumara was a devoted son known for his unwavering love and obedience toward his blind parents. According to the Ramayana, he carried them in baskets on his shoulders and traveled to holy places to fulfill their wishes. One day, while fetching water from a river, King Dasharatha mistakenly shot him, believing he was an animal. As Shravanakumara lay dying, he requested the king to take water to his thirsty parents. When they learned of his death, they cursed Dasharatha, foretelling that he too would die grieving his son. His story is a timeless example of devotion, sacrifice, and duty.

ಶ್ರವಣಕುಮಾರ

I. ಪದಗಳ ಅರ್ಥ ಬರೆಯಿರಿ. (Write the word meaning)

ಅನರ್ಥ =  ಅರ್ಥವಲ್ಲದ. ಕೇಡು
ಕಾವಡಿ = ಅಡ್ಡೆ. ಹೆಗಲ ಮೇಲೆ ಹೊತ್ತು ತರುವ ಬಿದಿರಿನ ದಬ್ಬೆ
ಕುಟೀರ = ಗುಡಿಸಲು
ಗಾಬರಿ = ಹೆದರಿಕೆ, ಭಯ
ಗೋಗರೆ = ದೈನ್ಯದಿಂದ ಬೇಡಿಕೊಳ್ಳು
ತತ್ರಾಣಿ = ನೀರು ಕುಡಿಯಲು ಬಳಸುವ ಚಪ್ಪಟೆಯಾದ ಮಣ್ಣಿನ ಪಾತ್ರೆ ತೀರ್ಥಯಾತ್ರೆ =  ಪುಣ್ಯಕ್ಷೇತ್ರಗಳಿಗೆ ಹೋಗಿಬರುವದು
ದಾಪುಗಾಲು = ದೊಡ್ಡ ಹೆಜ್ಜೆ
ಮಡು = ನದಿ, ಹೊಳೆ
ರೋಧಿಸು = ಅಳು, ಗೋಳಾಡು
ವೇಧಿ = ತಿಳಿದವನು, ಜ್ಞಾನಿ
ಶಬ್ದವೇಧಿ = ಶಬ್ದ ಗ್ರಹಣ ಮಾತ್ರದಿಂದ ಗುರಿ ಹಿಡಿದು ಬಾಣಪ್ರಯೋಗಿಸುವ ವಿದ್ಯೆ

II. ಪ್ರಶ್ನೆಗಳು  

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)

೧. ಶ್ರವಣಕುಮಾರನ ತಂದೆಯ ಹೆಸರೇನು?
ಉ: ಶ್ರವಣಕುಮಾರನ ತಂದೆಯ ಹೆಸರು ತಾಂಡವ ಋಷಿ.
೨. ಶ್ರವಣಕುಮಾರನ ತಂದೆ ತಾಯಿ ಮುಪ್ಪಿನ ಕಾಲದಲ್ಲಿ ಯಾವುದಕ್ಕೆ ಚಡಪಡಿಸಿದರು?
ಉ: ಶ್ರವಣಕುಮಾರನ ತಂದೆ ತಾಯಿ ಮುಪ್ಪಿನ ಕಾಲದಲ್ಲಿ ತೀರ್ಥಸ್ನಾನ ಮಾಡಲು ಚಡಪಡಿಸಿದರು.
೩. ದಶರಥನು ಎಲ್ಲಿ ಯಾವ ನಗರದಲ್ಲಿ ನೆಲೆಸಿದ್ದನು?
ಉ: ದಶರಥನು ಅಯೋಧ್ಯೆಯಲ್ಲಿ ನೆಲೆಸಿದ್ದನು.
೪. ದಶರಥನು ಶ್ರವಣಕುಮಾರನ ಬಳಿ ಏನೆಂದು ಗೋಗರೆದನು?
ಉ: ದಶರಥನು ಶ್ರವಣಕುಮಾರನ ಬಳಿ ತಾನು ಕಾಡುಪ್ರಾಣಿ ಎಂದು ಬಾಣ ಬಿಟ್ಟಿದ್ದು ತಪ್ಪಾಯಿತು, ಕ್ಷಮಿಸಬೇಕೆಂದು ಗೋಗರೆದನು.
೫. ದಶರಥನು ಶ್ರವಣಕುಮಾರನಿಗೆ ಏನೆಂದು ಭರವಸೆ ನೀಡಿದನು?
ಉ: ದಶರಥನು ಶ್ರವಣಕುಮಾರನಿಗೆ ಅವನ ತಂದೆ ತಾಯಿಗಳ ಆಸೆಯನ್ನು ಪೂರೈಸುವದಾಗಿ ಭರವಸೆ ನೀಡಿದನು.

ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in two – three sentences)
೧. ಶ್ರವಣಕುಮಾರನು ತನ್ನ ತಂದೆ ತಾಯಿಗಳನ್ನು ತೀರ್ಥಯಾತ್ರೆಗೆ ಹೇಗೆ ಕರೆದೊಯ್ದನು?
ಉ: ಶ್ರವಣ ಕಮಾರನು ಉದ್ದನೆಯ ಗಟ್ಟಿ ಬಿದಿರು ತಂದನು. ಎರಡೂ ಬದಿಯಲ್ಲಿ ತಕ್ಕಡಿಯಂತೆ ಬುಟ್ಟಿಗಳನ್ನು ಕಟ್ಟಿ, ಕಾವಡಿ ಮಾಡಿದನು. ಆ ಕಾವಡಿಯಲ್ಲಿ ತಂದೆ ತಾಯಿಗಳನ್ನು ಹೊತ್ತುಕೊಂಡು ತೀರ್ಥಯಾತ್ರೆಗೆ
ಕರೆದೊಯ್ದನು.
೨. ತೀರ್ಥಯಾತ್ರೆಯ ಸಮಯದಲ್ಲಿ ಶ್ರವಣಕುಮಾರನು ತನ್ನ ತಂದೆ ತಾಯಿಗಳನ್ನು ಹೇಗೆ ಉಪಚರಿಸಿದನು?
ಉ: ಶ್ರವಣಕುಮಾರನು ತಂದೆ ತಾಯಿಗಳಿಗೆ ಹಣ್ಣುಗಳನ್ನು ತಂದು ಕೊಡುತ್ತಿದ್ದನು. ಬಾಯಾರಿದರೆ ನೀರನ್ನು ತರುತ್ತಿದ್ದನು. ಮಿಶ್ರಮಿಸಲು ವ್ಯವಸ್ಥೆ ಮಾಡುತ್ತಿದ್ದನು.
೩. ಶ್ರವಣಕುಮಾರನು ದಶರಥನ ಬಳಿ ಏನೆಂದು ರೋಧಿಸಿದನು?
ಉ: “ನನ್ನ ಮುಪ್ಪಿನ ತಂದೆ ತಾಯಿಗಳಿಗೆ ಇನ್ನಾರು ಗತಿ? ಅವರ ತೀರ್ಥಯಾತ್ರೆಯನ್ನು ಇನ್ನಾರು ನಡೆಸಿಕೊಡುವರು? ಯಾವ ತಪ್ಪಿಗೆ ನನಗೀ ಶಿಕ್ಷೆ?” ಎಂದು ಶ್ರವಣಕುಮಾರನು ದಶರಥನ ಬಳಿ ರೋಧಿಸಿದನು.
೪. ಶ್ರವಣಕುಮಾರನು ದಶರಥನ ಬಾಣಕ್ಕೆ ಹೇಗೆ ಬಲಿಯಾದನು?
ಉ: ಅಯೋಧ್ಯೆಯ ದಶರಥ ಮಹಾರಾಜನು ಕಾಡಿಗೆ ಬೇಟೆಗಾಗಿ ಬಂದಿದ್ದನು. ಬುಳು ಬುಳು ಎಂಬ ಶಬ್ದ ಕೇಳಿ ಶಬ್ದವೇಧಿ ಬಾಣವನ್ನು ಬಿಟ್ಟನು. ಆ ಬಾಣಕ್ಕೆ ಶ್ರವಣಕುಮಾರನು ಬಲಿಯಾದನು.

ಇ) ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು ತಿಳಿಸಿರಿ. (who told whom)
೧. “ಮಗು ಹತ್ತಿರದಲ್ಲಿ ಎಲ್ಲಿಯಾದರೂ ನೀರಿದೆಯಾ ನೋಡು”
ಉ: ಶ್ರವಣಕುಮಾರನ ತಂದೆ ತಾಯಿಗಳು ಶ್ರವಣಕುಮಾರನಿಗೆ ಹೇಳಿದರು.
೨. “ ಅಯ್ಯೋ! ಅಮ್ಮ! ನಾನು ಸತ್ತೆ”
ಉ: ಶ್ರವಣಕುಮಾರನು ಜೋರಾಗಿ ಕೂಗಿದನು.
೩. “ನನ್ನ ಮುಪ್ಪಿನ ತಂದೆ – ತಾಯಿಗಳಿಗೆ ಇನ್ನಾರು ಗತಿ?”
ಉ: ಶ್ರವಣಕುಮಾರನು ದಶರಥನಿಗೆ ಹೇಳಿದನು.

ಈ) ಬಿಟ್ಟ ಸ್ಥಳಗಳನ್ನು ತುಂಬಿರಿ. (Fill in the blanks)
೧. ಶ್ರವಣಕುಮಾರನ ತಂದೆ ತಾಯಿಗಳು ಕುರುಡರು ಆಗಿದ್ದರು.
೨. ದಶರಥನು ಶಬ್ದವೇಧಿ ವಿದ್ಯೆಯಲ್ಲಿ ಪರಿಣಿತನಾಗಿದ್ದನು.
೩. ಶ್ರವಣಕುಮಾರನು ತನ್ನ ತಂದೆ ತಾಯಿಗಳನ್ನು ತೀರ್ಥಯಾತ್ರೆಗೆ ಕರೆದೊಯ್ದನು.
೪. ಶ್ರವಣಕುಮಾರನು ತಂದೆ ತಾಯಿಗಳನ್ನು ಪುಣ್ಯಕ್ಷೇತ್ರಗಳಿಗೆ ಹೆಗಲಲ್ಲಿ ಹೊತ್ತು ಕರೆದೊಯ್ದನು.

III. ಭಾಷಾಭ್ಯಾಸ
ಅ) ಈ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿರಿ. (Make your own sentence)
೧. ಚಡಪಡಿಸು: ನಾನು ಶಾಲೆಗೆ ಹೋಗಲು ಚಡಪಡಿಸುತ್ತಿದ್ದೆ
೨. ಅಭಿಮಾನ: ನನಗೆ ನನ್ನ ಶಾಲೆಯ ಬಗ್ಗೆ ತುಂಬಾ ಅಭಿಮಾನ.
೩. ರೋಧಿಸು: ರಮೇಶನು ಶಾಲೆಯಲ್ಲಿ ಜೋರಾಗಿ ರೋಧಿಸುತ್ತಿದ್ದನು.
೪. ಭರವಸೆ: ನನಗೆ ನನ್ನ ಅಣ್ಣನ ಮೇಲೆ ಭರವಸೆ ಇದೆ.
೫. ಭಾವಿಸು: ನಾನು ಬೇಗ ಮನೆಗೆ ಹೋಗುತ್ತೇನೆಂದು ಭಾವಿಸಿದ್ದೇನೆ.

ಆ) ಈ ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ. (Write the opposite words)

ಸಮಾಧಾನ X ಅಸಮಾಧಾನ                    ಆಸೆ X ನಿರಾಸೆ
ಉಪಾಯ X ನಿರುಪಾಯ                            ಅಭಿಮಾನ X ದುರಾಭಿಮಾನ
ತಪ್ಪು X ಸರಿ                                               ಅನರ್ಥ X ಅರ್ಥ
ಪುಣ್ಯ X ಪಾಪ                                             ಶಬ್ದ X ನಿಶ್ಶಬ್ದ

ಇ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ. (Split the words)
೧. ಆಸೆಯನ್ನು = ಆಸೆ + ಅನ್ನು
೨. ಆಯಾಸವರಿತು = ಆಯಾಸ + ಅರಿತು
೩. ಕರೆದೊಯ್ದನು = ಕರೆದು + ಒಯ್ದನು
೪. ದಾಪುಗಾಲು = ದಾಪು + ಕಾಲು

Click here to download sravankumar 6th grade lesson exercise