Wolf Came Wolf is a story about a shepherd, how he started to have fun ignoring others’ time and how he gets into trouble.

A shepherd, who watched a flock of sheep in a village, started to scream “Wolf! Wolf! Save me !” brought out the villagers. When his neighbors came to help him, he laughed at them and made them feel like fools. He repeated this three to four times. At last, the Wolf did truly come. Boy screamed for help and no one turned up. The wolf ate the sheep.

The moral of the story: No one believes the liars, Too much playfulness brings trouble.

ತೋಳ ಬಂತು ತೋಳ ಕುರುಬನೊಬ್ಬನ ಕಥೆಯಾಗಿದೆ, ಅವನು ಇತರರ ಸಮಯವನ್ನು ನಿರ್ಲಕ್ಷಿಸಿ ಮೋಜು ಮಾಡಲು ಪ್ರಾರಂಭಿಸುತ್ತಾನೆ ಮತ್ತು ಅವನು ತೊಂದರೆಗೆ ಸಿಲುಕುತ್ತಾನೆ.

ಒಂದು ಹಳ್ಳಿಯಲ್ಲಿ ಕುರಿಗಳ ಹಿಂಡನ್ನು ಕಾಯುವ ಕುರುಬ ಹುಡುಗ, “ತೋಳ ಬಂತು ತೋಳ! ನನ್ನನ್ನು ಉಳಿಸಿ!” ಎಂದು ಕಿರುಚಲು ಪ್ರಾರಂಭಿಸುತ್ತಾನೆ. ನೆರೆಹೊರೆಯವರು ಸಹಾಯಕ್ಕೆ ಬಂದಾಗ ಅವರನ್ನು ನೋಡಿ ನಗುತ್ತಾನೆ. ತಾನು ಅವರನ್ನು ಮೂರ್ಖರನ್ನಾಗಿಸಿದ್ದೇನೆ ಎಂದು ಭಾವಿಸಿ ನಗುತ್ತಿದ್ದನು. ಅವನು ಇದನ್ನು ಮೂರ್ನಾಲ್ಕು ಬಾರಿ ಪುನರಾವರ್ತಿಸಿದರು. ಅಂತಿಮವಾಗಿ, ತೋಳ ನಿಜವಾಗಿಯೂ ಬಂದಿತು. ಬಾಲಕ ಸಹಾಯಕ್ಕಾಗಿ ಕಿರುಚಿದನು ಮತ್ತು ಯಾರೂ ತಿರುಗಲಿಲ್ಲ. ತೋಳ ಕುರಿಗಳನ್ನು ತಿಂದಿತು.

ಕಥೆಯ ನೀತಿ: ಅತಿಯಾದ ಹುಡುಗಾಟ ತರುವುದು ಸಂಕಟ

ಅ. ಪದಗಳ ಅರ್ಥ ಬರೆಯಿರಿ. (Write word meaning in Kannada)
           
ಅಧೋಗತಿ = ಅವನತಿ, ಮೋಜು = ತಮಾಷೆ, ಗೊಣಗು = ಆಕ್ಷೇಪ, ಗುಗ್ಗು = ದಡ್ಡ
            ನಸುನಗು = ಹುಸಿನಗು

ಆ. ಬಹುವಚನ ಬರೆಯಿರಿ. (Write plural form)
           
ತೋಳ = ತೋಳಗಳು, ಕುರಿ = ಕುರಿಗಳು, ಮನೆ = ಮನೆಗಳು, ತಂದೆ = ತಂದೆಯಂದಿರು
            ಹುಡುಗ = ಹುಡುಗರು, ಇದು = ಇವು

ಇ. ಬಿಡಿಸಿ ಬರೆಯಿರಿ. (Split the word)

            ಬಯಲಲ್ಲಿ = ಬಯಲು + ಅಲ್ಲಿ     ಜನರನ್ನು = ಜನರು + ಅನ್ನು     ನಿಜವಾದ = ನಿಜ + ಆದ
            ಇದೊಂದು = ಇದು + ಒಂದು

ಈ. ಸ್ವಂತ ವಾಕ್ಯದಲ್ಲಿ ಬರೆಯಿರಿ. (Make your own sentences)

            ತಮಾಷೆ : ನನ್ನ ಗೆಳತಿ ತುಂಬಾ ತಮಾಷೆ ಮಾಡುತ್ತಾಳೆ.
            ಧಾವಿಸು:  ನಾನು ಮನೆಗೆ ಬೇಗ ಧಾವಿಸಿದೆನು.

ಉ. ಯಾರು ಯಾರಿಗೆ ಹೇಳಿದರು? (Who told whom)
೧. ತೋಳ ಬಂತು ……. ತೋಳ ಬಂತು ಕಾಪಾಡಿ
ಉ. ಈ ಮಾತನ್ನು ಹುಡುಗ ಜನರಿಗೆ ಹೇಳಿದನು.

೨. ನಮ್ಮನ್ನು ಗುಗ್ಗು ಮಾಡಲು ಅರಚುತ್ತಿದ್ದಾನೆ.
ಉ. ಈ ಮಾತನ್ನು ಜನರು ತಮ್ಮ ತಮ್ಮಲ್ಲೇ ಹೇಳಿಕೊಂಡರು.

ಊ. ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer in one sentence)
೧. ಹುಡುಗನು ಕುರಿಗಳನ್ನು ಮೇಯಿಸಲು ಎಲ್ಲಿಗೆ ಹೋಗುತ್ತಿದ್ದನು?
ಉ. ಹುಡುಗನು ಕುರಿಗಳನ್ನು ಮೇಯಿಸಲು ಕಾಡಿಗೆ ಹೋಗುತ್ತಿದ್ದನು.

೨. ಹುಡುಗನು ಕುರಿಗಳನ್ನು ಮೇಯಲು ಬಿಟ್ಟು ಏನು ಮಾಡುತ್ತಿದ್ದನು?
ಉ. ಹುಡುಗನು ಕುರಿಗಳನ್ನು ಮೇಯಲು ಬಿಟ್ಟು ಆಟ ಆಡುತ್ತಿದ್ದನು.

೩. ಜನರು ಕುರಿ ಕಾಯುವ ಹುಡುಗನ ಬಳಿ ಏಕೆ ಓಡಿ ಬಂದರು?
ಉ. ಜನರು ಕುರಿ ಕಾಯುವ ಹುಡುಗನ ಬಳಿ ಸಹಾಯ ಮಾಡಲು ಓಡಿ ಬಂದರು.

೪. ನಿಜವಾದ ತೋಳ ಬಂದರೂ ಜನರು ಹುಡುಗನ ಸಹಾಯಕ್ಕೆ ಏಕೆ ಬರಲಿಲ್ಲ?
ಉ: ನಿಜವಾದ ತೋಳ ಬಂದರೂ ಜನರು ಹುಡುಗ ಸುಳ್ಳು ಹೇಳಿ ಗುಗ್ಗು ಮಾಡುತ್ತಿದ್ದಾನೆ ಎಂದು
      ಸಹಾಯಕ್ಕೆ ಬರಲಿಲ್ಲ.

ಋ. ಎರಡು, ಮೂರು ವಾಕ್ಯದಲ್ಲಿ ಬರೆಯಿರಿ. ( Answer in two, three sentences)
೧. ಕುರಿ ಕಾಯುವ ಹುಡುಗ ತಮಾಷೆಗಾಗಿ ಜನರಿಗೆ ಕೇಳುವಂತೆ ಏನೆಂದು ಕೂಗಿಕೊಂಡನು?
ಉ. ಕುರಿ ಕಾಯುವ ಹುಡುಗ ತಮಾಷೆಗಾಗಿ ಜನರಿಗೆ ಕೇಳುವಂತೆ ಜೋರಾಗಿ ತೋಳ ಬಂತು
      ತೋಳ, ಯಾರಾದರೂ ಬನ್ನಿ, ಕಾಪಾಡಿ ಎಂದು ಕೂಗಿಕೊಂಡನು.
೨. ನಿಜವಾದ ತೋಳ ಬಂದರೂ ಜನರು ಹುಡುಗನ ಸಹಾಯಕ್ಕೆ ಏಕೆ ಬರಲಿಲ್ಲ?
ಉ. ಜನರು ಹುಡುಗನ ಕೂಗನ್ನು ಕೇಳಿ ಸುಳ್ಳು ಹೇಳುತ್ತಿದ್ದಾನೆ, ನಮ್ಮನ್ನು ಗುಗ್ಗು ಮಾಡುತ್ತಿದ್ದಾನೆ
       ಎಂದು ತಿಳಿದು ನಿಜವಾದ ತೋಳ ಬಂದರೂ ಜನರು ಸಹಾಯಕ್ಕೆ ಬರಲಿಲ್ಲ.

೩. ʼತೋಳ ಬಂತು ತೋಳʼ ಕಥೆಯ ನೀತಿ ಏನು?
ಉ. ಅತಿಯಾದ ಹುಡುಗಾಟ ತರುವುದು ಸಂಕಟ ಎಂಬುದು ʼತೋಳ ಬಂತು ತೋಳʼ ಕಥೆಯ
       ನೀತಿಯಾಗಿದೆ.

ಎ. ಹೊಂದಿಸಿ ಬರೆಯಿರಿ. (Match the following)

                        ಅ                                             ಬ

            ೧) ಹುಡುಗ                                    ತಮಾಷೆ                           
            ೨) ಜನ                                         ಸಹಾಯ
            ೩) ತೋಳ                                     ಕುರಿ
            ೪) ಗದ್ದೆ                                        ಕೆಲಸ

ಏ. ಗುಂಪಿಗೆ ಸೇರದ ಪದ ಬರೆಯಿರಿ. (Remove the odd one out)

೧. ತೋಳ, ಕುರಿ, ಬಯಲು, ಹಸು – ಬಯಲು
೨. ಅರಚು, ಜನ, ಗದ್ದೆ, ಕೆಲಸ – ಅರಚು
೩. ಆಟ, ಮೋಜು, ವಿನೋದ, ಅಳು – ಅಳು

ಐ. ವಿರುದ್ಧ ಪದ ಬರೆಯಿರಿ. (Write the opposite words)
           
ದೂರ X ಹತ್ತಿರ                         ಧೈರ್ಯ X ಅಧೈರ್ಯ               ನಿಜ X ಸುಳ್ಳು
            ಒಳಗೆ X ಹೊರಗೆ                      ನಗು X ಅಳು

ಒ.  ಪದಗಳನ್ನು ಕೂಡಿಸಿ ಬರೆಯಿರಿ.
          
  ೧. ಇದು + ಒಂದು = ಇದೊಂದು           ೨. ಆಟ + ಆಡು = ಆಟವಾಡು
            ೩. ಒಳಗೆ + ಒಳಗೆ = ಒಳಗೊಳಗೆ        ೪. ಕುರಿ + ಅನ್ನು = ಕುರಿಯನ್ನು

ಓ. ಲಿಂಗ ಬದಲಿಸಿ ಬರೆಯಿರಿ.

            ೧. ಹುಡುಗ: ಹುಡುಗಿ                ೩. ಮಹಿಳೆ: ಪುರುಷ
            ೨. ಅವನು:
ಅವಳು                  ೪. ಲೇಖಕ: ಲೇಖಕಿ

ಔ. ಕೆಳಗಿನ ವಾಕ್ಯಗಳಲ್ಲಿ ಸರಿ ಅಥವಾ ತಪ್ಪು ಗುರುತಿಸಿ.
೧. ಹುಡುಗ ತೋಳಗಳನ್ನು ಮೇಯಿಸುತ್ತಿದ್ದನು.    ಸರಿ
೨. ಜನರು ಹುಡುಗನ ಅಳು ಕೇಳಿ ಓಡೋಡಿ ಬಂದರು. ಸರಿ
೩. ತೋಳ ಜನರನ್ನು ತಿಂದು ಹೊಟ್ಟೆ ತುಂಬಿಸಿಕೊಂಡಿತು. ತಪ್ಪು             

Click here to download toLa bantu toLa lesson