Udatha chintanegalu grade X chapter is about 3 famous personalities, Dr Ambedkar, Gandhiji and Swami Vivekananda. Udatha chintanegalu chapter explains view points and thought process of three personalties.
Dr. B R Ambedkar mentioned about Freedom action as follows: Freedom of action means that a person is free to do what they like. In which work there is no exploitation, in which work there is respect, in which there is no fear of losing home, food, that is true freedom of action. He further added, All power to politicians comes from the people. They can manage their private and public life. Politics is for individuals to create laws and governments in the right to be in its discharges. Government exists to provide people with life, liberty and the pursuit of happiness. Political freedom is the principle of human personality and equality.
Mahatma Gandhiji: Until Gandhiji went to England, he thought that good handwriting was not essential to education. After that, when he went to South Africa. He saw the beautiful writing that seemed to be cherished by well-educated youths and lawyers. Gandiji felt ashamed and regretted it. Realized that bad handwriting is a sign of incomplete education. He tried to correct his writing. But by then it was too late to add clay to a burnt pot. He said that by his example, every young man and woman should know that good writing is an essential part of a good education.
Swami Vivekananda said if people are given feelings in the language of the country, they can understand the content. But they need culture. Until it is given to them, they cannot progress. Only culture can withstand shock. Knowledge alone has no power to deal with it. Vivekananda’s vision is that the country can progress with cultured people.
ಉದಾತ್ತ ಚಿಂತನೆಗಳು
೧. ಕ್ರಿಯಾ ಸ್ವಾತಂತ್ರ್ಯ ಎಂದರೇನು ?
ಉ: ಕ್ರಿಯಾ ಸ್ವಾತಂತ್ರ್ಯವೆಂದರೆ, ತಮಗೆ ಇಷ್ಟ ಬಂದ ಕೆಲಸ ಮಾಡಲು ವ್ಯಕ್ತಿಗೆ ಸ್ವಾತಂತ್ರ್ಯವಿರುವುದು. ಯಾವ ಕೆಲಸದಲ್ಲಿ ಶೋಷಣೆ ಇಲ್ಲವೋ, ಯಾವ ಕೆಲಸದಲ್ಲಿ ಗೌರವವಿದೆಯೋ, ಯಾವ ಕೆಲಸದಲ್ಲಿ ಮನೆ, ಆಹಾರ ಕಳೆದುಕೊಳ್ಳುವ ಭಯವಿರುವದಿಲ್ಲವೋ ಅದು ನಿಜವಾದ ಕ್ರಿಯಾ ಸ್ವಾತಂತ್ರ್ಯವಾಗಿದೆ.
೨. ರಾಜಕೀಯ ಸ್ವಾತಂತ್ರ್ಯದ ಮಹತ್ವವೇನು ?
ಉ: ರಾಜಕೀಯದವರಿಗೆ ಸಮಸ್ತ ಅಧಿಕಾರವು ಜನರಿಂದ ಬರುತ್ತದೆ. ತಮ್ಮ ಖಾಸಗಿ ಜೀವನ ಹಾಗೂ ಸಾರ್ವಜನಿಕ ಜೀವನ ಅವರೇ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಸ್ವಾತಂತ್ರ್ಯವಿರುವುದು ವ್ಯಕ್ತಿಗೆ ಶಾಸನಗಳನ್ನು ಮತ್ತು ಸರ್ಕಾರಗಳನ್ನು ರಚಿಸುವುದರಲ್ಲಿ. ಅದರ ವಿಸರ್ಜನೆಗಳಲ್ಲಿ ಇರುವ ಹಕ್ಕಿನಲ್ಲಿ . ಜನರಿಗೆ ಜೀವನ, ಸ್ವಾತಂತ್ರ್ಯ, ಸಂತೋಷಾನ್ವೇಷಣೆಗಳನ್ನು ಒದಗಿಸಿಕೊಡುವ ಸಲುವಾಗಿ ಸರಕಾರವು ಇರುವುದು. ವಾಸ್ತವವಾಗಿ ರಾಜಕೀಯ ಸ್ವಾತಂತ್ರ್ಯ ಎನ್ನುವದು ಮಾನವ ವ್ಯಕ್ತಿತ್ವ ಮತ್ತು ಸಮಾನತೆಗಳ ತತ್ವದಿಂದ ಅನುಗಮನ ಮಾಡಿದ ತತ್ತ.
೩. ಅಂದವಾದ ಬರೆವಣಿಗೆಯ ಬಗ್ಗೆ ಗಾಂಧೀಜಿಯವರ ಅಭಿಪ್ರಾಯವೇನು ?
ಉ : ಗಾಂಧೀಜಿಯವರು ಇಂಗ್ಲೆಂಡ್ ಗೆ ಹೋಗುವವರೆಗೂ ಅಂದವಾದ ಅಕ್ಷರ, ಒಳ್ಳೆಯ ಬರವಣಿಗೆ ಶಿಕ್ಷಣದ ಅವಶ್ಯಕ ಅಂಶವಲ್ಲವೆಂದು ಭಾವಿಸಿದ್ದರು. ಅನಂತರ ದಕ್ಷಿಣ ಆಫ್ರಿಕಾಗೆ ಹೋದಮೇಲೆ ಅಲ್ಲಿ ಸುಶಿಕ್ಷಿತ ಯುವಕರ ಮತ್ತು ವಕೀಲರ ಮುತ್ತು ಪೋಣಿಸಿದಂತಿದ್ದ ಸುಂದರ ಬರವಣಿಗೆ ನೋಡಿ ಅವರಿಗೆ ನಾಚಿಕೆಯೂ, ಪಶ್ಚಾತ್ತಾಪವೂ ಆಯಿತು. ಕೆಟ್ಟ ಅಕ್ಷರದ ಬರವಣಿಗೆ ಅಪೂರ್ಣ ಶಿಕ್ಷಣದ ಚಿಹ್ನೆ ಎಂದು ಅರಿತರು. ತನ್ನ ಬರವಣಿಗೆಯನ್ನು ತಿದ್ದಿಕೊಳ್ಳಲು ಪ್ರಯತ್ನಿಸಿದರಾದರೂ, ಸುಟ್ಟ ಮಡಕೆಗೆ ಹಸಿಮಣ್ಣನ್ನು ಮೆತ್ತಲು ಸಾಧ್ಯವಿಲ್ಲದ ಹಾಗೆ ಆ ವೇಳೆಗೆ ಕಾಲಮೀರಿ ಹೋಗಿತ್ತು. ಅವರ ಉದಾಹರಣರೆಯಿಂದ ಒಳ್ಳೆಯ ಬರವಣಿಗೆ ಉತ್ತಮ ಶಿಕ್ಷಣದ ಅವಶ್ಯ ಅಂಶವೆಂಬುದು ಪ್ರತಿಯೊಬ್ಬ ಯುವಕ ಯುವತಿಯರು ತಿಳಿದುಕೊಳ್ಳಲಿ ಎಂದು ಅವರು ಹೇಳಿದ್ದಾರೆ.
೪. ‘ ಅನ್‌ಟು ದಿಸ್ ಲಾಸ್ಟ್ ‘ ಕೃತಿ ಗಾಂಧೀಜಿಯವರ ಮೇಲೆ ಯಾವ ಪರಿಣಾಮ ಬೀರಿತು ?
ಉ : ‘ ಅನ್‌ಟು ದಿಸ್ ಲಾಸ್ಟ್ ‘ ಕೃತಿಯು ಗಾಂಧೀಜಿಯವರ ಮನಸ್ಸು ಸೆರೆ ಹಿಡಿಯಿತು. ಆ ಪುಸ್ತಕದಲ್ಲಿ ಹೇಳಿದ್ದ ಧ್ಯೇಯಗಳಿಗನುಸಾರವಾಗಿ ಅವರ ಜೀವನವನ್ನು ಬದಲಾಯಿಸಿ ಕೊಳ್ಳಬೇಕೆಂದು ಅವರು ನಿರ್ಣಯಿಸಿದರು. ‘ ಅನ್‌ಟು ದಿಸ್ ಲಾಸ್ಟ್ ‘ ಪುಸ್ತಕವನ್ನು ಅವರು ʼಸರ್ವೋದಯʼ ಎಂಬ ಹೆಸರಿನಲ್ಲಿ ಗುಜರಾತಿ ಭಾಷೆಗೆ ಅನುವಾದ ಕೂಡ ಮಾಡಿದರು. ಎಲ್ಲರ ಒಳ್ಳೆಯದರಲ್ಲಿಯೇ ನಮ್ಮ ಒಳ್ಳೆಯದು ಅಡಗಿದೆ. ವಕೀಲನ ಕೆಲಸಕ್ಕೆ ಇರುವ ಬೆಲೆಯೇ ಕ್ಷೌರಿಕನ ಕೆಲಸಕ್ಕೂ ಇದೆ. ತಮ್ಮ ಕೆಲಸದಿಂದ ಜೀವನ ನಡೆಸಲು ಎಲ್ಲರಿಗೂ ಸಮಾನವಾದ ಹಕ್ಕಿದೆ. ಶ್ರಮ ಜೀವಿಯಾದ ಊಳುವವನ ಅಥವಾ ಕೈಕಸಬುಗಾರನ ಜೀವನವೇ ಯೋಗ್ಯ ಜೀವನ ಎಂದು ‘ ಅನ್‌ಟು ದಿಸ್ ಲಾಸ್ಟ್ ‘ ಗ್ರಂಥದ ಧ್ಯೇಯಗಳು ಎಂದು ಅವರು ಅರಿತರು.
೫. ವಿವೇಕಾನಂದರ ದೃಷ್ಟಿಯಲ್ಲಿ ದೇಶದ ಪ್ರಗತಿ ಸ್ಥಿರವಾಗುವುದು ಯಾವಾಗ ?
ಉ : ದೇಶದ ಭಾಷೆಯಲ್ಲಿ ಜನರಿಗೆ ಭಾವನೆಗಳನ್ನು ನೀಡಿದರೆ ಅವರು ವಿಷಯ ಗ್ರಹಣ ಮಾಡಿಕೊಳ್ಳಬಲ್ಲರು. ಆದರೆ ಅವರಿಗೆ ಸಂಸ್ಕೃತಿಯ ಅವಶ್ಯಕತೆ ಇದೆ. ಅವರಿಗೆ ಅದನ್ನು ಕೊಡುವ ತನಕ ಅವರ ಪ್ರಗತಿ ಇರಲಾರದು. ಸಂಸ್ಕೃತಿ ಮಾತ್ರ ಆಘಾತವನ್ನು ಸಹಿಸಬಲ್ಲದು. ಕೇವಲ ಜ್ಞಾನ ರಾಶಿಗೆ ಅದನ್ನು ಎದುರಿಸುವ ಶಕ್ತಿ ಇಲ್ಲ. ಜಗತ್ತಿನ ಜ್ಞಾನರಾಶಿಯನ್ನು ಕೊಟ್ಟರೂ ಅದರಿಂದ ಹೆಚ್ಚು ಪ್ರಯೋಜನವಿಲ್ಲ. ಸಂಸ್ಕೃತಿಯನ್ನು ಹೊಂದಿರುವ ಜನರಿಂದ ದೇಶದ ಪ್ರಗತಿ ಸಾಧ್ಯ ಎಂಬುದು ವಿವೇಕಾನಂದರ ದೃಷ್ಟಿ.
೬. ಬಾಳಿನಲ್ಲಿ ತೃಪ್ತಿ ದೊರಕಬೇಕಾದರೆ ಏನು ಮಾಡಬೇಕೆಂಬುದು ವಿವೇಕಾನಂದರ ಅಭಿಪ್ರಾಯ ?
ಉ : ನಮ್ಮ ದೇಶದ ಮತ್ತು ಜಗತ್ತಿನ ಕಲ್ಯಾಣ ನಮ್ಮ ಮೇಲೆಯೇ ನಿಂತಿದೆ ಎಂದು ಭಾವಿಸಿ ಕಾರ್ಯೋನ್ಮುಖರಾಗಬೇಕು. ವೇದಾಂತ ಸಂದೇಶವನ್ನು ಪ್ರತಿ ಮನೆಗೂ ಸಾರಿ, ಪ್ರತಿಯೊಂದು ಆತ್ಮದಲ್ಲಿ ಇರುವ ಸುಪ್ತ ಪಾವಿತ್ರ್ಯವನ್ನು ಜಾಗೃತಿಗೊಳಿಸಿರಿ. ನಾವು ಸಣ್ಣ ಸಾಧನೆ ಮಾಡಿದರೂ, ಆದರ್ಶ ಬಾಳಿಗಾಗಿ ದುಡಿದು, ಮಡಿದಿದ್ದೇವೆ ಎಂಬ ತೃಪ್ತಿಯಾದರೂ ಇರುತ್ತದೆ ಎಂದು ವಿವೇಕಾನಂದರೂ ಅಭಿಪ್ರಾಯಪಟ್ಟಿದ್ದಾರೆ.