“Uppigintha ruchiyilla thayigintha bhandhuvilla” is a very famous kannada proverb. Proverb is equal to Veda, even if Veda is false, proverb is not false. The proverb is the essence of experience told by elders. There are four main flavors in the meal. Salty, sour, savory and sweet. Salt plays its role in all cooking. Salt is also used to enhance the sweetness. Similarly, the mother’s role in relationships is paramount. When a girl child is born she is reborn. Mother is a gift given by God. Grandfather, grandmother, father, elder brother, elder sister, younger sister, father-in-law, mother-in-law are in the house, all these relations are beyond the mother All other relationships are left behind, mother’s relationship is eternal. So the proverb Uppigintha ruchiyilla thayigintha bhandhuvilla. There is no taste like salt, there is no bond like mother.
ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ.
ಗಾದೆ ವೇದಕ್ಕೆ ಸಮಾನ, ವೇದ ಸುಳ್ಳಾದರೂ, ಗಾದೆ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ಸಾರ.
ಊಟದಲ್ಲಿ ನಾಲ್ಕು ಪ್ರಧಾನ ರುಚಿಗಳಿವೆ. ಉಪ್ಪು, ಹುಳಿ, ಖಾರ ಮತ್ತು ಸಿಹಿ. ಎಲ್ಲಾ ಅಡುಗೆಗಳಲ್ಲಿ ಉಪ್ಪು ತನ್ನ ಪಾತ್ರ ವಹಿಸುತ್ತದೆ. ಸಿಹಿರುಚಿಯನ್ನು ಹೆಚ್ಚಿಸಲು ಕೂಡಾ ಉಪ್ಪನ್ನು ಬಳಸುತ್ತಾರೆ. ಅದೇ ರೀತಿ ಸಂಭಂದಗಳಲ್ಲಿ ತಾಯಿ ಪಾತ್ರ ಪ್ರಧಾನ. ಒಂದು ಹೆಣ್ಣು ಮಗುವಿಗೆ ಜನ್ಮ ಕೊಟ್ಟಾಗ ಅವಳು ತಾಯಿ ಎನಿಸಿ ಪುರ್ನರ ಜನ್ಮ ಪಡೆಯುತ್ತಾಳೆ. ತಾಯಿ ದೇವರು ಕೊಟ್ಟ ವರ. ಮನೆಯಲ್ಲಿ ಅಜ್ಜ, ಅಜ್ಜಿ, ಅಪ್ಪ, ಅಣ್ಣ, ಅಕ್ಕ, ತಂಗಿ, ಮಾವ, ಅತ್ತೆ ಈ ಎಲ್ಲಾ ಸಂಬಂಧಗಳು ತಾಯಿಗಿಂತ ಮಿಗಿಲಾದವು. ಬೇರೆಲ್ಲ ಸಂಭಂದ ಬಿಟ್ಟು ಹೋದರು ತಾಯಿಯ ಸಂಭಂದ ಶಾಶ್ವತ.
ಸುಮನಾ ಶ್ರೀರಾಮ್