Vachangalu kannada poem grade X CBSE syllabus. Vachangalu akkamahadevi poem Kannada grade X CBSE syllabus. Kannada Vachanas are a unique and powerful form of poetic expression that emerged during the 12th century as part of the Bhakti movement in Karnataka. Written in simple, straightforward Kannada, Vachanas are short, thought-provoking verses that convey deep spiritual and philosophical ideas. These compositions aim to connect people directly to God, emphasizing devotion, equality, and moral living over rituals and social hierarchies.

Vachanagalu were pioneered by saints like Basavanna, Akka Mahadevi, Allama Prabhu, and others, who were part of the Lingayat movement. They spoke against caste discrimination and advocated for a society based on love, truth, and justice. Through their verses, these poets questioned meaningless traditions and highlighted inner purity and selfless devotion.

Kannada Vachanas continue to inspire people with their timeless messages of spirituality, social reform, and human values. They remain an integral part of Karnataka’s rich literary and cultural heritage.

ವಚನಗಳು

ಅಕ್ಕಮಹಾದೇವಿ

ಕೃತಿಕಾರರ ಪರಿಚಯ:  ಅಕ್ಕಮಹಾದೇವಿಯ
ಕಾಲ: ಸಾ.ಶಾ ಸುಮಾರು ೧೧೬೦ (೧೨ನೇ ಶತಮಾನ).
ಜನ್ಮಸ್ಥಳ:  ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುತಡಿ.
ಅಂಕಿತ ಹಾಗೂ ಆರಾಧ್ಯ ದೈವ:  ಚೆನ್ನಮಲ್ಲಿಕಾರ್ಜುನ
ಕೃತಿ: ಯೋಗಾಂಗ ತ್ರಿವಿಧಿ, ಸೃಷ್ಟಿವಚನ ಮತ್ತು ಮಂತ್ರಗೋಪ್ಯ
ವಚನಗಳು: ೩೫೪ ಲಭ್ಯವಾಗಿವೆ.
ಅಕ್ಕಮಹಾದೇವಿ ಶಿವಶರಣೆಯಲ್ಲಿ ಪ್ರಮುಖರು. ಈಕೆ ಪ್ರಸಿದ್ಧ ವಚನಕಾರ್ತಿ ಹಾಗೂ ಕವಯಿತ್ರಿ.

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿರಿ.

೧. ಅಕ್ಕಮಹಾದೇವಿಯ ವಚನಗಳ ಅಂಕಿತ ಯಾವುದು?
ಉ: ಅಕ್ಕಮಹಾದೇವಿಯ ವಚನಗಳ ಅಂಕಿತ ಚೆನ್ನಮಲ್ಲಿಕಾರ್ಜುನ.
೨. ಅಕ್ಕಮಹಾದೇವಿಯು ಯಾವುದನ್ನು ಹಾನಿ ಎಂದಿದ್ದಾಳೆ?
ಉ: ತಾನು ಹಿಂದೆ ಮಾಡಿದ ದೋಷವನ್ನು ದೇವ ಚೆನ್ನಮಲ್ಲಿಕಾರ್ಜುನನ ಮುಂದಿಳುಹಲು ಹಾನಿ ಎಂದು ಅಕ್ಕಮಹಾದೇವಿಯು ಎಂದಿದ್ದಾಳೆ.
೩. ಅರಿಯದವರೊಡನೆ ಸಂಗ ಮಾಡಿದರೆ ಆಗುವ ಪರಿಣಾಮವೇನು?
ಉ: ಅರಿಯದವರೊಡನೆ ಸಂಗ ಮಾಡಿದರೆ ಕಲ್ಲಹೊಯ್ದು ಕಿಡಿಯ ತೆಗೆದುಕೊಂಡಂತೆ ಅಗುತ್ತದೆ.
೪. ಭಗವಂತನಲ್ಲಿ ಶರಣಾಗುವ ಭಾವ ಅಕ್ಕಮಹಾದೇವಿಯ ವಚನದಲ್ಲಿ ಹೇಗೆ ವ್ಯಕ್ತಗೊಂಡಿದೆ?
ಉ: ಮೊಸರು ಹಲವಾರು ಪ್ರಕ್ರಿಯೆಗಳನ್ನು ದಾಟಿ ತುಪ್ಪವಾಗುತ್ತದೆ. ಹಾಗೆಯೇ ಶರಣಸಂಗವೆಂಬ ಪ್ರಕ್ರಿಯೆಯಿಂದ ಮನುಷ್ಯನು ತನ್ನೆಲ್ಲ ನ್ಯೂನ್ಯತೆಗಳನ್ನು, ಅಜ್ಞಾನಿಗಳ ಸಂಘವನ್ನು, ಎಲ್ಲಾ ಬಂಧನಗಳನ್ನು ಕಳೆದುಕೊಂಡು, ಸದ್ಭಕ್ತನಾಗಿ ಸಜ್ಜನನಾಗುತ್ತಾನೆ ಎಂಬುದು ಭಗವಂತನಲ್ಲಿ ಶರಣಾಗುವ ಭಾವ ಅಕ್ಕಮಹಾದೇವಿಯ ವಚನದಲ್ಲಿ ವ್ಯಕ್ತಗೊಂಡಿದೆ.
೫. ಜ್ಞಾನಿ ಅಜ್ಞಾನಿಗಳ ಸಂಘದ ಬಗೆಗಿನ ಅಕ್ಕಮಹಾದೇವಿಯ ಅಭಿಪ್ರಾಯವೇನು?
ಉ: ಅಜ್ಞಾನಿಗಳ ಸಂಘ ಮಾಡಿದರೆ ಕಲ್ಲನ್ನು ಹೊಯ್ದು ಕಿಡಿಯನ್ನು ತೆಗೆದುಕೊಂಡಂತೆ. ಹಾಗೆ ಜ್ಞಾನಿಗಳ ಜೊತೆ ಸಂಗವ ಮಾಡಿದರೆ ಮೊಸರನ್ನು ಕಡೆದು ಬೆಣ್ಣೆಯನ್ನು ತೆಗೆದುಕೊಂಡಂತೆ ಎಂಬುದು ಅಕ್ಕಮಹಾದೇವಿಯ ಅಭಿಪ್ರಾಯ.

Click here to download vachanaglu exercises

Leave a Reply

Your email address will not be published. Required fields are marked *