Veeralava kannada poem grade X written by Lakshmisha. Veeralava kannada grade 10th poem is about Lava’s bravery. Lava, the courageous son of Lord Rama and Sita, was being raised in Sage Valmiki’s ashrama, unaware of his royal lineage. One day, the sacred horse released for Lord Rama’s Ashwamedha Yagna wandered near the ashrama. The horse, symbolizing the sovereignty of Ayodhya, bore a declaration of Lord Rama’s dominion. Lava, trained in warfare and dharma under Valmiki’s guidance, saw the horse and decided to challenge its authority, unaware it belonged to his father.
Displaying remarkable valor, Veeralava tied the horse to a tree near the ashrama, signaling his defiance of Ayodhya’s rule. This bold act reflected Veeralava’s sense of justice and responsibility to protect his land and people. His action soon led to a dramatic confrontation with the forces accompanying the horse. Valmiki’s ashrama became the backdrop for this significant event, where Veeralava’s bravery and righteousness shone, embodying the spirit of dharma central to the Ramayana.
ವೀರಲವ
ಕವಿಪರಿಚಯ : ಲಕ್ಷ್ಮೀಶ
ಕವಿ ಲಕ್ಷ್ಮೀಶನು ಕ್ರಿ.ಶ. ಸುಮಾರು ೧೫೫೦ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರಿನಲ್ಲಿ ಜನಿಸಿದರು. ಇವನಿಗೆ ಲಕ್ಷ್ಮೀರಮಣ, ಲಕ್ಷ್ಮೀಪತಿ ಎಂಬ ಹೆಸರುಗಳೂ ಇದ್ದವು. ಇವರು ‘ಜೈಮಿನಿ ಭಾರತʼ ಎಂಬ ಪ್ರಸಿದ್ಧ ಕಾವ್ಯವನ್ನು ರಚಿಸಿದ್ದಾನೆ.ಈತನಿಗೆ ಉಪಮಾಲೋಲ, ಕರ್ಣಾಟಕವಿಚೂತವನ ಚೈತ್ರ ಎಂಬ ಬಿರುದುಗಳನ್ನು ನೀಡಿ
ಗೌರವಿಸಲಾಗಿದೆ.
ಅ. ಒಂದು ವಾಕ್ಯದಲ್ಲಿ ಉತ್ತರಿಸಿ.
೧. ‘ಜೈಮಿನಿ ಭಾರತʼ ಕಾವ್ಯವನ್ನು ಬರೆದ ಕವಿ ಯಾರು?
ಉ: ಜೈಮಿನಿ ಭಾರತ ಕಾವ್ಯವನ್ನು ಬರೆದ ಕವಿ ಲಕ್ಷ್ಮೀಶ.
೨. ಯಜ್ಞಾಶ್ವವನ್ನು ಕಟ್ಟಿದವರು ಯಾರು?
ಉ: ಯಜ್ಞಾಶ್ವವನ್ನು ಕಟ್ಟಿದವರು ಲವ.
೩. ಕುದುರೆಯನ್ನು ಲವನು ಯಾವುದರಿಂದ ಕಟ್ಟಿದನು?
ಉ: ಕುದುರೆಯನ್ನು ಲವನು ತನ್ನ ಉತ್ತರೀಯದಿಂದ ಕಟ್ಟಿದನು.
೪. ಮುನಿಸುತರು ಹೆದರಲು ಕಾರಣವೇನು?
ಉ: ಲವನು ಯಜ್ಞಾಶ್ವವನ್ನು ಕಟ್ಟಿ ಹಾಕಿದ್ದಕ್ಕೆ ಮುನಿಸುತರು ಹೆದರಿದರು .
ಆ. ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
೧. ವಾಲ್ಮೀಕಿ ಆಶ್ರಮಕ್ಕೆ ಯಜ್ಞಾಶ್ವವು ಬಂದ ಬಗೆಯನ್ನು ವಿವರಿಸಿ.
ಉ: ಶ್ರೀರಾಮನು ಮಹರ್ಷಿಗಳ ಆದೇಶದಂತೆ ಅಶ್ವಮೇಧಯಾಗವನ್ನು ಕೈಗೊಂಡನು.ಶತ್ರುಘ್ನನ ಬೆಂಗಾವಲಿನಲ್ಲಿ ಯಜ್ಞಾಶ್ವವನ್ನು ಕಳುಹಿಸಿದನು. ರಾಮನ ಆಜ್ಞೆಯಂತೆ ಹೊರಟ ಯಜ್ಞಾಶ್ವವನ್ನು ಪರಾಕ್ರಮಿ ರಾಜರುಗಳು ತಡೆಯಲು ಹೆದರಿ ನಮಸ್ಕರಿಸಿ ಮುಂದೆ ಹೋಗಲು ಬಿಟ್ಟರು. ಹೀಗೆ ಯಜ್ಞಾಶ್ವವು ಭೂಮಿಯಲ್ಲೆಲ್ಲ ಸಂಚರಿಸುತ್ತ ವಾಲ್ಮೀಕಿಯ ಆಶ್ರಮದ ತೋಟದ ಹಸುರಾದ ಹುಲ್ಲನ್ನು ತಿನ್ನಲು ಒಳಹೊಕ್ಕಿತು.
೨. ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ ಏನೆಂದು ಬರೆಯಲಾಗಿತ್ತು?
ಉ: “ಭೂಮಂಡಲದಲ್ಲಿ ಕೌಸಲ್ಯೆಯ ಮಗನಾದ ರಾಮನು ಒಬ್ಬನೇ ವೀರನು. ಇದು ಅವನ ಯಜ್ಞಕುದುರೆ. ಇದನ್ನು ತಡೆಯುವ ಸಾಮರ್ಥ್ಯವುಳ್ಳವರು ಯಾರೇ ಆದರು ತಡೆಯಲಿ” ಎಂದು ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ ಬರೆಯಲಾಗಿತ್ತು.
೩. ಕುದುರೆಯನ್ನು ಕಟ್ಟುವ ವಿಚಾರದಲ್ಲಿ ಮುನಿಸುತರಿಗೂ ಲವನಿಗೂ ನಡೆದ ಸಂವಾದವನ್ನು ಬರೆಯಿರಿ.
ಉ: ಲವನು ಆಶ್ರಮವನ್ನು ಹೊಕ್ಕ ಯಜ್ಞಾಶ್ವವನ್ನು ತನ್ನ ಉತ್ತರೀಯದಿಂದ ಬಾಳೆಯ ಗಿಡಕ್ಕೆ ಕಟ್ಟಿ ಹಾಕಿದ್ದನು. ಅದನ್ನು ಕಂಡು ಹೆದರಿದ ಮುನಿಸುತರು “ಬೇಡಬೇಡ ಅರಸುಗಳ ಕುದುರೆಯನ್ನು ಬಿಡು, ನಮ್ಮನ್ನು ಹೊಡೆಯುವರು” ಎಂದು ಹೇಳಿದರು. ಆಗ ಅವನು ನಗುತ “ಬ್ರಾಹ್ಮಣರ ಮಕ್ಕಳು ಹೆದರಿದರೆ, ಜಾನಕಿಯ ಮಗನು ಇದಕ್ಕೆ ಹೆದರುವನೇ?, ನೀವು ಹೋಗಿ” ಎಂದು ಶೌರ್ಯದಿಂದ ಹೇಳಿದನು.
ಇ. ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
೧. ಲವನು ಯಜ್ಞಾಶ್ವವನ್ನು ಕಟ್ಟಲು ಕಾರಣವೇನು?
ಉ: ಶ್ರೀರಾಮನು ಮಹರ್ಷಿಗಳ ಆದೇಶದಂತೆ ಅಶ್ವಮೇಧಯಾಗವನ್ನು ಕೈಗೊಂಡನು.ಶತ್ರುಘ್ನನ ಬೆಂಗಾವಲಿನಲ್ಲಿ ಯಜ್ಞಾಶ್ವವನ್ನು ಕಳುಹಿಸಿದನು. ರಾಮನ ಆಜ್ಞೆಯಂತೆ ಹೊರಟ ಯಜ್ಞಾಶ್ವವನ್ನು ಪರಾಕ್ರಮಿ ರಾಜರುಗಳು ತಡೆಯಲು ಹೆದರಿ ನಮಸ್ಕರಿಸಿ ಮುಂದೆ ಹೋಗಲು ಬಿಟ್ಟರು. ಹೀಗೆ ಯಜ್ಞಾಶ್ವವು ಭೂಮಿಯಲ್ಲೆಲ್ಲ ಸಂಚರಿಸುತ್ತ ವಾಲ್ಮೀಕಿಯ ಆಶ್ರಮದ ತೋಟದ ಹಸುರಾದ ಹುಲ್ಲನ್ನು ತಿನ್ನಲು ಒಳಹೊಕ್ಕಿತು. ಆಗ ಇದನ್ನು ಕಂಡ ಲವನು ಇದು ಯಾವ ಕಡೆಯ ಕುದುರೆಯು? ಹೂತೋಟವನ್ನು ಹೊಕ್ಕು ನುಗ್ಗುನುರಿಯಾಗುವಂತೆ ತುಳಿದುದೆ ಎಂದು ಕುದುರೆಯ ಕಡೆಗೆ ನಡೆದು ಬಂದು ನೋಡಿದನು. “ಭೂಮಂಡಲದಲ್ಲಿ ಕೌಸಲ್ಯೆಯ ಮಗನಾದ ರಾಮನು ಒಬ್ಬನೇ ವೀರನು. ಇದು ಅವನ ಯಜ್ಞಕುದುರೆ. ಇದನ್ನು ತಡೆಯುವ ಸಾಮರ್ಥ್ಯವುಳ್ಳವರು ಯಾರೇ ಆದರು ತಡೆಯಲಿ” ಎಂದು ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ ಬರೆಯಲಾಗಿತ್ತು. ಇದನ್ನು ಓದಿದ ಅವನು ಕೋಪಗೊಂಡು ಇವರ ಅಹಂಕಾರವನ್ನು ಬಿಡಿಸದಿದ್ದರೆ ತನ್ನ ತಾಯಿಯನ್ನು ಎಲ್ಲರೂ ಬಂಜೆ ಎನ್ನದಿರುವರೇ? ತನಗಿರುವ ತೋಳುಗಳು ಏತಕೆ? ” ಎಂದು ಪ್ರತಿಜ್ಞೆಯನ್ನು ಕೈಗೊಂಡು, ಯಜ್ಞಾಶ್ವವನ್ನು ತನ್ನ ಉತ್ತರೀಯದಿಂದ ಕಟ್ಟಿಹಾಕಿದನು.
೨. ಲವನ ನಡೆವಳಿಕೆ ಮೆಚ್ಚುಗೆಯಾಯಿತೇ? ಏಕೆ?
ಉ: ಲವನು ಬಾಲಕನಾಗಿದ್ದರು ಸ್ವಾಭಿಮಾನಿ. ಅವನು ಧೀರ. ಆತನ ಮಾತೃಪ್ರೇಮ ಅನನ್ಯ. ವಾಲ್ಮೀಕಿ ಮಹರ್ಷಿಗಳು ಆಶ್ರಮದಿಂದ ಹೊರಗೆ ಹೋಗುವಾಗ ಅವನಿಗೆ ಆಶ್ರಮದ ಜವಾಬ್ದಾರಿಯನ್ನು ವಹಿಸಿರುತ್ತಾರೆ. ಇಂತಹ ಸಮಯದಲ್ಲಿ ರಾಮನ ಯಜ್ಞಾಶ್ವವು ಆಶ್ರಮವನ್ನು ಪ್ರವೇಶಿಸಿ ಹೂದೋಟವನ್ನು ಹಾಳುಮಾಡುತ್ತದೆ. ಇದನ್ನು ಕಂಡ ಅವನು ಕುದುರೆಯ ಬಳಿಬಂದು, ಕುದುರೆಯ ನೆತ್ತಿಯ ಮೇಲೆ ಬರೆದ ಪಟ್ಟದ ಲಿಖಿತವನ್ನು ಓದಿದನು. ರಾಮನೊಬ್ಬನೇ ಜಗತ್ತಿಗೆ ವೀರನೆಂಬ ವಾಕ್ಯವನ್ನು ಕಂಡು ಕೆರಳಿ, ಇವನ ಗರ್ವವನ್ನು ಬಿಡಿಸುತ್ತೇನೆ, ಇಲ್ಲದಿದ್ದಲ್ಲಿ ನನ್ನ ತಾಯಿಯನ್ನು ಎಲ್ಲರೂ ಹೇಡಿಯನ್ನು ಹೆತ್ತವಳೆಂದು ದೂರಿಬಿಡುತ್ತಾರೆ ಎಂದು ಚಿಂತಿಸಿದನು. ತನ್ನ ಪರಾಕ್ರಮವನ್ನು ತೋರಿಸಿಬಿಡುತ್ತೇನೆ ಎಂದು ಕುದುರೆಯನ್ನು ಕಟ್ಟಿಹಾಕುತ್ತಾನೆ. ಋಷಿ ಮುನಿಗಳ ಮಕ್ಕಳು ಹೆದರಿಕೆಯಿಂದ ಬೇಡವೆಂದಾಗ, “ಬ್ರಾಹ್ಮಣರ ಮಕ್ಕಳು ಯುದ್ಧಕ್ಕೆ ಹೆದರಿದರೆ, ಜಾನಕಿಯ ಸುತನು ಹೆದರುವನೇ?” ಎಂದು ವೀರನಂತೆ ನಿಂತನು. ಲವನಿಗೆ ಇರುವ ತಾಯಿಯ ಮೇಲಿನ ಮಮತೆ, ಗೌರವ, ವೀರ ಬಾಲಕನ ಶೌರ್ಯ, ಸಾಹಸ ಎಂತಹವರಿಗೂ ಮೆಚ್ಚುಗೆಯಾಗುತ್ತದೆ.
ಈ. ಸಂದರ್ಭ ಸಹಿತ ಸ್ವಾರಸ್ಯ ತಿಳಿಸಿ.
೧. “ರಘೂದ್ವಹನ ಸೊಲ್ಗೇಳಿ ನಮಿಸಲ್”
ಆಯ್ಕೆ: ಈ ವಾಕ್ಯವನ್ನು ಕವಿ ಲಕ್ಷ್ಮೀಶನು ರಚಿಸಿರುವ ‘ಜೈಮಿನಿ ಭಾರತʼ ಮಹಾ ಕಾವ್ಯದಿಂದ ಆಯ್ದ ʼವೀರಲವʼ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಶ್ರೀರಾಮನ ಅಶ್ವಮೇಧ ಯಾಗದ ಯಜ್ಞಾಶ್ವವು ಸಂಚರಿಸಿದ ಕಡೆಯಲ್ಲೆಲ್ಲ ರಾಜರುಗಳಿಂದ ಅದಕ್ಕೆ ದೊರೆತ ಭವ್ಯ ಸ್ವಾಗತ ಹಾಗೂ ನೀಡಿದ ಗೌರವವನ್ನು ಕುರಿತು ವರ್ಣಿಸುವ ಸಂದರ್ಭದಲ್ಲಿ ಕವಿಯು ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ: ಶ್ರೀರಾಮನ ಹೆಸರನ್ನು ಕೇಳಿಯೇ ಪರಾಕ್ರಮಿಗಳಾದ ರಾಜರುಗಳು ಗೌರವದಿಂದ ನಮಿಸಿ ಶರಣಾಗಿ ಯಜ್ಞಾಶ್ವವು ಮುಂದೆ ಸಂಚರಿಸಲು ಅನುವು ಮಾಡಿಕೊಟ್ಟರು ಎಂದು ಸ್ವಾರಸ್ಯಪೂರ್ಣವಾಗಿ ವರ್ಣಿಸಿಸಲಾಗಿದೆ.
೨. “ತನ್ನ ಮಾತೆಯಂ ಸರ್ವಜನಮುಂ ಬಂಜೆಯೆನ್ನದಿರ್ದಪುದೆ”
ಆಯ್ಕೆ: ಈ ವಾಕ್ಯವನ್ನು ಕವಿ ಲಕ್ಷ್ಮೀಶನು ರಚಿಸಿರುವ ‘ಜೈಮಿನಿ ಭಾರತʼ ಮಹಾ ಕಾವ್ಯದಿಂದ ಆಯ್ದ ʼವೀರಲವʼ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಲವನು ತನ್ನ ಆಶ್ರಮದ ತೋಟವನ್ನು ಧ್ವಂಸ ಮಾಡಿದ ಶ್ರೀರಾಮನ ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯ ಬರಹವನ್ನು ಓದಿ ಅದನ್ನು ಕಟ್ಟಿಹಾಕಲು ನಿರ್ಧರಿಸಿದ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ: ಕ್ಷತ್ರಿಯನಾದ ವೀರಲವನು ಬಾಲಕನಾದರೂ ಹೆದರದೆ ಕುದುರೆಯನ್ನು ಕಟ್ಟಲು ನಿರ್ಧರಿಸಿ, ತನ್ನ ತಾಯಿಯ ಮೇಲಿರುವ ಗೌರವ ಮತ್ತು ಅವನ ಶೌರ್ಯವನ್ನು ಸ್ವಾರಸ್ಯಪೂರ್ಣವಾಗಿ ವರ್ಣಿಸಲಾಗಿದೆ.
೩. “ಅರಸುಗಳ ವಾಜಿಯಂ ಬಿಡು”
ಆಯ್ಕೆ: ಈ ವಾಕ್ಯವನ್ನು ಕವಿ ಲಕ್ಷ್ಮೀಶನು ರಚಿಸಿರುವ ‘ಜೈಮಿನಿ ಭಾರತʼ ಮಹಾ ಕಾವ್ಯದಿಂದ ಆಯ್ದ ʼವೀರಲವʼ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ವೀರಲವನು ತನ್ನ ಉತ್ತರೀಯದಿಂದ ಯಜ್ಞಾಶ್ವವನ್ನು ಬಾಳೆಯಗಿಡಕ್ಕೆ ಕಟ್ಟಿಹಾಕಿದ ಸಂದರ್ಭದಲ್ಲಿ ಮುನಿಪುತರು ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ: ರಾಜನ ಯಜ್ಞಾಶ್ವವನ್ನು ಕಟ್ಟಿಹಾಕುವುದು ಅಪರಾಧ. ಮುಂದೆ ತೊಂದರೆ ಉಂಟಾಗುತ್ತದೆ ಎಂದು ಮುನಿಪುತ್ರರು ಭಯಗೊಳ್ಳುವುದನ್ನು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವರ್ಣಿಸಲಾಗಿದೆ.
೪. “ಜಾನಕಿಯ ಮಗನಿದಕೆ ಬೆದರುವನೆ”
ಆಯ್ಕೆ: ಈ ವಾಕ್ಯವನ್ನು ಕವಿ ಲಕ್ಷ್ಮೀಶನು ರಚಿಸಿರುವ ‘ಜೈಮಿನಿ ಭಾರತʼ ಮಹಾ ಕಾವ್ಯದಿಂದ ಆಯ್ದ ʼವೀರಲವʼ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ವೀರಲವನು ತನ್ನ ಉತ್ತರೀಯದಿಂದ ಯಜ್ಞಾಶ್ವವನ್ನು ಬಾಳೆಯಗಿಡಕ್ಕೆ ಕಟ್ಟಿ ಹಾಕಿದ್ದನ್ನು ಕಂಡು ಮುನಿಪುತ್ರರು ಕುದುರೆಯನ್ನು ಬಿಡು ಎಂದು ಹೇಳಿದ ಸಂದರ್ಭದಲ್ಲಿ ಈ ಮಾತನ್ನು ಲವನು ಹೇಳುತ್ತಾನೆ.
ಸ್ವಾರಸ್ಯ:ಸೀತೆಯ ಮಗನಾದ ಲವನ ಧೈರ್ಯವು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ.
ಉ: ಹೊಂದಿಸಿ ಬರೆಯಿರಿ.
ಅ ಬ
೧. ದೇವನೂರು ರಾಮ ಲಕ್ಷ್ಮೀಶ
೨. ಕೌಸಲ್ಯೆ ಲಕ್ಷ್ಮೀಶ ರಾಮ
೩. ವರುಣ ಅಶ್ವ ಮಳೆ
೪. ವಾಲ್ಮೀಕಿ ಅಭ್ದಿಪ ಮುನಿ
೫. ತುರಂಗ ಮುನಿ ಅಶ್ವ
ಮಳೆ
ಶತ್ರುಘ್ನ
ಭಾಷಾ ಚಟುವಟಿಕೆ
೧. ವಿಗ್ರಹಿಸಿ ಸಮಾಸವನ್ನು ಹೆಸರಿಸಿ.
೧. ಸೊಲ್ಗೇಳಿ – ಸೊಲ್ಲನ್ನು + ಕೇಳಿ = ಕ್ರಿಯಾಸಮಾಸ
೨. ನಲ್ಗುದುರೆ – ನಲ್ಲಿತು + ಕುದುರೆ = ಕರ್ಮಧಾರಯ ಸಮಾಸ
೩. ಬಿಲ್ಗೊಂಡು – ಬಿಲ್ಲನ್ನು + ಕೊಂಡು = ಕ್ರಿಯಾಸಮಾಸ
೪. ಬಿಲ್ಲಿರುವನೇರಿಸಿ – ಬಿಲ್ಲಿನತಿರುವನ್ನು + ಏರಿಸಿ = ಕ್ರಿಯಾಸಮಾಸ
೫. ಪೂದೋಟ – ಪೂವಿನ + ತೋಟ= ತತ್ಪುರುಷಸಮಾಸ
೬. ಲಿಖಿತವನೋದಿ – ಲಿಖಿತವನ್ನು + ಓದ=ಕ್ರಿಯಾಸಮಾಸ
೭. ಯಜ್ಞತುರುಗ – ಯಜ್ಞದ + ತುರುಗ=ತತ್ಪುರುಷಸಮಾಸ
೮. ಕದಳೀದ್ರುಮ – ಕದಳಿಯ + ದ್ರುಮ = ತತ್ಪುರುಷಸಮಾಸ
೯. ಅಭ್ದಿಪ -ಅಭ್ದಿಗೆ ( ಸಮುದ್ರಕ್ಕೆ ) ಪತಿ ( ಒಡೆಯ ) ಯಾರೋ ಆತ ( ವರುಣ ) = ಬಹುವೀಹಿಸಮಾಸ
೨. ತತ್ಸಮ – ತದ್ಭವ ಬರೆಯಿರಿ.
ವೀರ – ಬೀರ, ಯಜ್ಞ – ಜನ್ನ, ಬಂಜೆ – ವಂದ್ಯಾ,
ಕುವರ – ಕುಮಾರ, ಲೋಕ – ಲೋಗ
೩. ವಿಂಗಡಿಸಿ ಸಂಧಿಯ ಹೆಸರು ಬರೆಯಿರಿ.
೧. ಚರಿಸುತದ್ವರದ – ಚರಿಸುತ + ಅದ್ವರದ = ಲೋಪಸಂಧಿ
೨. ನಿಜಾಶ್ರಮ – ನಿಜ + ಆಶ್ರಮ = ಸವರ್ಣದೀರ್ಘಸಂಧಿ
೩. ಲೇಖನವನೋದಿ – ಲೇಖನವನು + ಓದಿ = ಲೋಪಸಂಧಿ
೪. ತೆಗೆದುತ್ತರೀಯಮಂ – ತೆಗೆದು + ಉತ್ತರೀಯಮಂ = ಲೋಪಸಂಧಿ
೫. ಬೇಡಬೇಡರಸುಗಳ – ಬೇಡಬೇಡ + ಅರಸುಗಳ = ಲೋಪಸಂಧಿ
೬. ನಿಂತಿರ್ದನ್ – ನಿಂತು + ಇರ್ದನ್ = ಲೋಪಸಂಧಿ
೭. ಪೂದೋಟ – ಪೂ + ತೋಟ = ಆದೇಶಸಂಧಿ