Yaaru Hechchu means “‘Who is Superior?'” a thought-provoking question: which is more important? Yaaru Hechchu chapter is about water, food, shelter, clothing and education discussing between them. The story is set in Gurupur village, which had a happy and prosperous year because of good rains and a plentiful harvest. This abundance made everyone in the village appreciate the importance of all these things.
When water, food, house and clothing are discussing they are best, the wind said that we are all doing our part, there is a difference in every material being in this world, and we are all equal, to which he said that education does not overwhelm us, and we all should be educated.
ಯಾರು ಹೆಚ್ಚು ಎಂದರೆ “‘ಯಾರು ಶ್ರೇಷ್ಠರು?'” ಒಂದು ಚಿಂತನ-ಪ್ರಚೋದಕ ಪ್ರಶ್ನೆ: ಯಾವುದು ಮುಖ್ಯ? ಈ ಅಧ್ಯಾಯವು ನೀರು, ಆಹಾರ, ವಸತಿ, ಬಟ್ಟೆ ಮತ್ತು ಶಿಕ್ಷಣ ತಮ್ಮ ನಡುವೆ ಯಾರು ಹೆಚ್ಚು ಎಂಬುದನ್ನು ಚರ್ಚಿಸುತ್ತವೆ. ಉತ್ತಮ ಮಳೆ ಮತ್ತು ಸಮೃದ್ಧ ಫಸಲಿನಿಂದಾಗಿ ಸಂತೋಷ ಮತ್ತು ಸಮೃದ್ಧ ವರ್ಷವನ್ನು ಹೊಂದಿದ್ದ ಗುರುಪುರ ಗ್ರಾಮದಲ್ಲಿ ಕಥೆಯನ್ನು ಹೊಂದಿಸಲಾಗಿದೆ. ಈ ಸಮೃದ್ಧಿಯು ಈ ಎಲ್ಲ ವಸ್ತುಗಳ ಪ್ರಾಮುಖ್ಯತೆಯನ್ನು ಗ್ರಾಮದ ಪ್ರತಿಯೊಬ್ಬರೂ ಪ್ರಶಂಸಿಸುವಂತೆ ಮಾಡಿತು.
ನೀರು, ಆಹಾರ, ಮನೆ ಹಾಗೂ ಉಡುಪು ತಾವು ಶ್ರೇಷ್ಠರು ಎಂಬ ಚರ್ಚೆಯಲ್ಲಿ ತೊಡಗಿದ್ದಾಗ ಗಾಳಿಯು ನಾವೆಲ್ಲರೂ, ನಮ್ಮ ನಮ್ಮ ಪಾಲಿನ ಕರ್ತವ್ಯ ಮಾಡುತ್ತಿದ್ದೇವೆ. ಈ ಜಗತ್ತಿನ ಪ್ರತಿಯೊಂದು ವಸ್ತು ಜೀವಿಗಳಲ್ಲಿ ಪರಸ್ಪರ ವ್ಯತ್ಯಾಸವಿದೆ. ನಾವೆಲ್ಲರೂ ಸಮಾನರು ಎಂದು ಹೇಳಿತು. ಅದಕ್ಕೆ ವಿದ್ಯೆಯು ತುಂಬಿದ ಕೊಡ ತುಳುಕುವುದಿಲ್ಲ ಎಂಬ ಮಾತನ್ನು ಹೇಳಿ, ನಾವೆಲ್ಲರೂ ವಿದ್ಯಾವಂತರಾಗಬೇಕು ಎಂದಿತು.
ಯಾರು ಹೆಚ್ಚು?
ಅ. ಬಿಟ್ಟಸ್ಥಳ ತುಂಬಿರಿ (Fill in the blanks)
೧. ಮನೆಗಳನ್ನು ತಳಿರುತೋರಣಗಳಿಂದ ಶೃಂಗಾರ ಮಾಡಿದ್ದರು.
೨. ಜೀವಿಗಳು ನೀರು ಕುಡಿಯದಿದ್ದರೆ ಬದುಕಲು ಸಾಧ್ಯವೇ ಇಲ್ಲ.
೩. ಗೆಳೆಯರೆ, ತುಂಬಿದ ರಕ್ಷಣೆ ತುಳುಕುವುದಿಲ್ಲ.
೪. ಮಳೆ, ಗಾಳಿ, ಕಳ್ಳರು, ಶತ್ರುಗಳಿಂದ ಕೊಡ ನೀಡುತ್ತೇನೆ.
ಆ. ಕನ್ನಡದಲ್ಲಿ ಅರ್ಥ ಬರೆಯಿರಿ (Write Kannada word meaning)
ಸ್ನಾನ = ಜಳಕ, ಗಾಳಿ = ವಾಯು, ಮನೆ = ಗ್ರಹ, ಸ್ನೇಹಿತ = ಗೆಳೆಯ
ಇ. ವಿರುದ್ಧ ಪದ ಬರೆಯಿರಿ (Write opposite words)
ಸಂತೋಷ X ದುಃಖ ಸತ್ಯ X ಅಸತ್ಯ ಸಮಾನ X ಅಸಮಾನ
ಈ. ಸ್ವಂತ ವಾಕ್ಯದಲ್ಲಿ ಬಳಸಿರಿ (Make your own sentence)
ಶುಭಾಶಯ: ರವಿವಾರದ ಶುಭಾಶಯಗಳು.
ಹೊಸಬಟ್ಟೆ: ನನಗೆ ಹೊಸಬಟ್ಟೆ ಬೇಕು.
ಕರ್ತವ್ಯ: ಓದುವದು ನನ್ನ ಕರ್ತವ್ಯ.
ರಕ್ಷಣೆ: ಮನೆ ನಮಗೆ ರಕ್ಷಣೆ ನೀಡುತ್ತದೆ.
ಉ. ಯಾರು ಯಾರಿಗೆ ಹೇಳಿದರು? (Who told whom)
೧) “ಇದಕ್ಕೆ ಕಾರಣ ಯಾರು ಗೊತ್ತೆ?”
ಉ: ಈ ಮಾತನ್ನು ನೀರು ಮನೆಗೆ ಹೇಳಿತು.
೨) “ನಾನಿಲ್ಲದಿದ್ದರೆ ಇಂದಿನ ಹಬ್ಬವೇ ನಡೆಯುವುದಿಲ್ಲ; ಗೊತ್ತಾ?”
ಉ: ಈ ಮಾತನ್ನು ಆಹಾರ ಹೇಳಿತು.
೩) “ಜೀವಗಳಿಗೆ ಅರೆಕ್ಷಣ ಉಸಿರಾಟ ನಿಂತರೆ ಏನಾಗುತ್ತದೆ?”
ಉ: ಈ ಮಾತನ್ನು ಗಾಳಿ ಹೇಳಿತು.
ಊ. ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer in one sentence)
೧. ಊರಿನ ಜನರು ಮನೆಗಳನ್ನು ಹೇಗೆ ಶೃಂಗಾರ ಮಾಡಿದ್ದಾರೆ?
ಉ. ಊರಿನ ಜನರು ಮನೆಗಳನ್ನು ತಳಿರುತೋರಣಗಳಿಂದ ಶೃಂಗಾರ ಮಾಡಿದ್ದಾರೆ.
೨. ಎಲ್ಲವೂ ಎಲ್ಲಿ ಸಭೆ ಸೇರಿದವು?
ಉ. ಎಲ್ಲವೂ ಊರಿನ ಛಾವಡಿಯಲ್ಲಿ ಸಭೆ ಸೇರಿದವು.
೩. ಪುಟ್ಟಮಕ್ಕಳು ಎಲ್ಲಿ ಆಡುತ್ತಿದ್ದವು?
ಉ. ಪುಟ್ಟಮಕ್ಕಳು ಅಂಗಳದಲ್ಲಿ ಆಡುತ್ತಿದ್ದವು.
೪. ಜೀವಿಗಳು ಉಸಿರಾಡಲು ಏನು ಬೇಕು?
ಉ. ಜೀವಿಗಳು ಉಸಿರಾಡಲು ಗಾಳಿ ಬೇಕು.