Negative effects of plastic use
Environmental pollution, soil contamination, marine pollution, air pollution, wildlife endagerment
ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳು
ಪೀಠಿಕೆ :
ಪ್ಲಾಸ್ಟಿಕ್ ಮಾಲಿನ್ಯವು ಜಾಗತಿಕ ಸಮಸ್ಯೆಯಾಗುತ್ತಿದೆ. ಸರ್ಕಾರಗಳು, ಪ್ರತಿಷ್ಠಾನಗಳು ಮತ್ತು ಕೆಲವು ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಈ ವಿಷಯದ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿವೆ. ಪ್ಲಾಸ್ಟಿಕ್ ಸರಕುಗಳನ್ನು ಸಾಮಾನ್ಯವಾಗಿ ಉದ್ಯಮದಲ್ಲಿ ಬಳಸಲಾಗುತ್ತದೆ ಏಕೆಂದರೆ ಅವು ಇತರ ವಸ್ತುಗಳಿಗಿಂತ ಹೆಚ್ಚು ಪರಿಣಾಮಕಾರಿ ಮತ್ತು ಕಡಿಮೆ ವೆಚ್ಚದಲ್ಲಿರುತ್ತವೆ. ಮತ್ತೊಂದೆಡೆ, ಪ್ಲಾಸ್ಟಿಕ್ ಪರಿಸರ ಸಮಸ್ಯೆಗಳನ್ನು ಪ್ರಚೋದಿಸುತ್ತದೆ. ಪ್ಲಾಸ್ಟಿಕ್ ಮಾಲಿನ್ಯವು ನಮ್ಮ ಹವಾಮಾನದ ಮೇಲೆ ಹಲವಾರು ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ, ಆದರೆ ಮೂರು ಪ್ರಮುಖವಾದವುಗಳೆಂದರೆ ಸಾಗರ ಮಾಲಿನ್ಯ, ಭೂ ಮಾಲಿನ್ಯ ಮತ್ತು ಆಹಾರ ಮಾಲಿನ್ಯ. ಪ್ಲಾಸ್ಟಿಕ್ಗಳು ವಿವಿಧ ಆಕಾರಗಳು ಮತ್ತು ಗಾತ್ರಗಳಲ್ಲಿ ಬರುತ್ತವೆ ಮತ್ತು ಅವುಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಇಂದು, ಪ್ಲಾಸ್ಟಿಕ್ನಿಂದ ಮಾಡದ ವಸ್ತುವನ್ನು ಕಂಡುಹಿಡಿಯುವುದು ಕಷ್ಟ.
ಪ್ಲಾಸ್ಟಿಕ್ ಮಾಲಿನ್ಯದ ಪರಿಣಾಮಗಳು : ಪ್ಲಾಸ್ಟಿಕ್ ಸಾಗರವನ್ನು ಕಲುಷಿತಗೊಳಿಸುತ್ತದೆ. ಪ್ಲಾಸ್ಟಿಕ್ ಮಣ್ಣನ್ನು ಕಲುಷಿತಗೊಳಿಸುತ್ತದೆ. ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ.ಪ್ರಾಣಿಗಳ ಮೇಲೆ ಪ್ರಬಾವ ಬೀರುತ್ತದೆ. ಪ್ಲಾಸ್ಟಿಕ್ ಸುಟ್ಟಾಗ ವಿಷಕಾರಿ ರಾಸಾಯನ ಗಾಳಿಯಲ್ಲಿ ಸೇರಿ ಉಸಿರಾಟಕ್ಕೆ ತೊಂದರೆ ಆಗುತ್ತದೆ.
ತೀರ್ಮಾನ:
ವಿವಿಧ ರೀತಿಯ ಪ್ಲಾಸ್ಟಿಕ್ಗಳನ್ನು ಸಹ ಈಗ ಮರುಬಳಕೆ ಮಾಡಬಹುದಾಗಿದೆ, ಆದ್ದರಿಂದ ನಿಮಗೆ ಸಾಧ್ಯವಾದಾಗ ಮರುಬಳಕೆ ಮಾಡಿ ಮತ್ತು ಅವುಗಳನ್ನು ಕಸದ ಬುಟ್ಟಿಗೆ ಎಸೆಯಬೇಡಿ ಅಥವಾ ನಿಮ್ಮ ಸುಂದರ ಗ್ರಹವನ್ನು ಕಸಕ್ಕೆ ಬಿಡಬೇಡಿ. ಪರಿಸರವನ್ನು ನಮಗಾಗಿ ಮತ್ತು ಇತರ ಜೀವಿಗಳಿಗೆ ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಪ್ರಮುಖ ಜವಾಬ್ದಾರಿಗಳಲ್ಲಿ ಒಂದಾಗಿದೆ.
Click to Download plastic baLakeyindaaguva dhushpariNamagaLu
Cleanliness
Clean water, personal hygiene, food hygiene, environmental cleanliness
ಸ್ವಚ್ಛತೆ
ಸ್ವಚ್ಛತೆ ಒಂದು ಅಭ್ಯಾಸ. ಆರೋಗ್ಯ ಮತ್ತು ಜೀವನದ ಮಟ್ಟ ಏರಿಸಲು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ರೀತಿಯೇ ಸ್ವಚ್ಛತೆ. ಇದು ಒಂದು ಜವಾಬ್ದಾರಿಯುತವಾದಂತಹ ಕಾರ್ಯ.
ಸ್ವಚ್ಛತೆಯ ಅಭ್ಯಾಸವನ್ನು ನಮ್ಮ ಜೀವನದಲ್ಲಿ , ನಾವು ಸಾಕುವ ಪ್ರಾಣಿಗಳಲ್ಲಿ, ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ, ಆಫೀಸ್ ಮತ್ತು ಶಾಲೆಗಳಲ್ಲಿ ಪಾಲಿಸಬೇಕು. ಒಂದು ಸ್ವಚ್ಛ ಪರಿಸರ ಮನುಷ್ಯನ ಮಾನಸಿಕ, ದೈಹಿಕ ಮತ್ತು ಭೌದಿಕ ಸ್ಥರವನ್ನು ಆರೋಗ್ಯವಾಗಿಡುತ್ತದೆ.
ಕಸ ವಿಂಗಡಿಸುವುದು, ರಸ್ತೆಯಲ್ಲಿ ಉಗುಳದಿರುವುದು, ಉದ್ಯಾನಗಳನ್ನು ಸ್ವಚ್ಛವಾಗಿಡುವುದು, ಆರೋಗ್ಯ ಕೇಂದ್ರಗಳನ್ನು ಸ್ವಚ್ಛವಾಗಿಡುವುದು, ಜನರಿಗೆ ಶೌಚಾಲಯದ ಮಹತ್ವ ತಿಳಿಸುವುದು ಇವೆಲ್ಲಾ ಸ್ವಚ್ಛತೆಯ ಕಡೆಗೆ ಒಂದು ಹೆಜ್ಜೆ ಆಗಿದೆ. ಹೆಚ್ಚು ಮರ ಬೆಳೆಸುವುದರಿಂದ ನಾವು ಉಸಿರಾಡುವ ಗಾಳಿಯ ಮಟ್ಟವನ್ನು ಹೆಚ್ಚಿಸಬಹುದು. ಮನೆಯೇ ಮೊದಲ ಪಾಠಶಾಲೆ. ಆದ್ದರಿಂದ ಸ್ವಚ್ಛತೆಯ ಮೊದಲ ಪಾಠವನ್ನು ಮನೆಯಿಂದ ಲೇ ಪ್ರಾರಂಭಿಸಬೇಕು. ಎಲ್ಲಾ ತಂದೆ ತಾಯಿಂದಿರು ಮಕ್ಕಳು ಅದನ್ನು ಪಾಲಿಸುವಂತೆ ನೋಡಿಕೊಳ್ಳ ಬೇಕು. ಪ್ರತಿಯೊಬ್ಬರು ಇಟ್ಟ ಒಂದು ಸಣ್ಣ ಹೆಜ್ಜೆ ದೇಶವನ್ನು ಸ್ವಚ್ಛಗೊಳಿಸುವುದರಲ್ಲಿ ಮಹತ್ತರ ಯೋಗದಾನವಾಗಿ ಪರಿಣಮಿಸುತ್ತದೆ.
Environmental pollution
Light pollution, air pollution, water pollution, soil contamination, noise pollution, thermal pollution
Swachh Bharat Abhiyan
Behavioral change, Cleanliness in public places, construction toilets, public awerness
ಪರಿಸರ ಮಾಲಿನ್ಯ
ಪೀಠಿಕೆ
ಪರಿಸರವು ಒಂದು ಜೀವಿಯ ಸುತ್ತಮುತ್ತಲಿನ ಪ್ರದೇಶವಾಗಿದೆ. ಜೀವಿ ವಾಸಿಸುವ ಪರಿಸರವು ಗಾಳಿ, ನೀರು, ಭೂಮಿ ಮುಂತಾದ ವಿವಿಧ ಘಟಕಗಳಿಂದ ಮಾಡಲ್ಪಟ್ಟಿದೆ.
ಈ ಘಟಕಗಳು ಜೀವಿ ವಾಸಿಸಲು ಪರಿಸರದಲ್ಲಿ ಸಾಮರಸ್ಯದ ಸಮತೋಲನವನ್ನು ಸೃಷ್ಟಿಸಲು ಸ್ಥಿರ ಪ್ರಮಾಣದಲ್ಲಿ ಕಂಡುಬರುತ್ತವೆ.ಯಾವುದೇ ರೀತಿಯ ಅನಪೇಕ್ಷಿತ ಮತ್ತು ಅನಗತ್ಯ ಈ ಘಟಕಗಳ ಅನುಪಾತದಲ್ಲಿನ ಬದಲಾವಣೆಯನ್ನು ಮಾಲಿನ್ಯ ಎಂದು ಕರೆಯಬಹುದು.
ವರ್ಷದಿಂದ ವರ್ಷಕ್ಕೆ ಈ ಸಮಸ್ಯೆ ಹೆಚ್ಚಾಗುತ್ತಿದೆ. ಇದು ಆರ್ಥಿಕ, ದೈಹಿಕ ಮತ್ತು ಸಾಮಾಜಿಕ ತೊಂದರೆಗಳನ್ನು ಸೃಷ್ಟಿಸುವ ಸಮಸ್ಯೆಯಾಗಿದೆ.
ಪರಿಸರ ಮಾಲಿನ್ಯದ ಕಾರಣಗಳು
ಕೈಗಾರಿಕೆಗಳ ಬೆಳವಣಿಗೆ ಮತ್ತು ಉದ್ಯೋಗದ ಹುಡುಕಾಟದಲ್ಲಿ ಜನರು ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗುವುದರೊಂದಿಗೆ, ಸರಿಯಾದ ವಸತಿ ಮತ್ತು ಅನೈರ್ಮಲ್ಯ ಜೀವನ ಪರಿಸ್ಥಿತಿಗಳ ಸಮಸ್ಯೆಯು ನಿಯಮಿತವಾಗಿ ಹೆಚ್ಚುತ್ತಿದೆ.
ಈ ಕಾರಣಗಳು ಮಾಲಿನ್ಯವನ್ನು ಉಂಟುಮಾಡುವ ಅಂಶಗಳಿಗೆ ಕಾರಣವಾಗಿವೆ.
ಪರಿಸರ ಮಾಲಿನ್ಯವು ಐದು ಮೂಲಭೂತ ವಿಧಗಳೆಂದರೆ, ಗಾಳಿ, ನೀರು, ಮಣ್ಣು ಮತ್ತು ಶಬ್ದ ಮಾಲಿನ್ಯ.
ಉಪ ಸಂಹಾರ
ಈ ಪರಿಸರ ಮಾಲಿನ್ಯ ಗಳಿಂದ ನಮ್ಮ ಗ್ರಹವನ್ನು ಉಳಿಸುವುದು ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ನಮ್ಮ ಮುಂದಿನ ಪೀಳಿಗೆ ದೊಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಜನಜಾಗೃತಿ ಮೂಡಿಸಲು ಸರ್ಕಾರವೂ ಕ್ರಮ ಕೈಗೊಳ್ಳುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯು ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ನಿಯಂತ್ರಿಸಲು ಸಹಾಯ ಮಾಡುವಲ್ಲಿ ತೊಡಗಿಸಿಕೊಳ್ಳಬೇಕು.
ಸ್ವಚ್ಛ ಭಾರತ ಅಭಿಯಾನ
ಪೀಠಿಕೆ
ಸ್ವಚ್ಛ ಎ೦ದರೆ ನಿರ್ಮಲವಾದದ್ದು, ಪರಿಶುದ್ದವಾದದ್ದು ಎ೦ದರ್ಥ. ಸ್ವಚ್ಛ ಭಾರತ ಎ೦ದರೆ ಭಾರತ ದೇಶದ ಕಲುಷಿತ ಸ್ಥಳಗಳನ್ನು ನಿರ್ಮಲಗೊಳಿಸುವದು. ಸ್ವಚ್ಛ ಭಾರತ ಅಭಿಯಾನವು ಭಾರತ ದೇಶದ ಒ೦ದು ಅತ್ಯುತ್ತಮ ನೈರ್ಮಲ್ಯ ಯೋಜನೆಯಾಗಿದೆ. ಪ್ರಸ್ತುತ ಕೇ೦ದ್ರ ಸರ್ಕಾರದ ಮಹತ್ವಾಕಾ೦ಕ್ಷೆಯಾಗಿದ್ದು ಭಾರತ ದೇಶವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಅತ್ಯ೦ತ ಮಹತ್ವಪೂರ್ಣ ಅಭಿಯಾನವಾಗಿದೆ.
ವಿಷಯ ನಿರೂಪಣೆ
“ಆರೋಗ್ಯವೇ ಮಹಾಭಾಗ್ಯ” ಎಲ್ಲಿದಿಯೋ ಸ್ವಚ್ಛತೆ ಅಲ್ಲಿದೆ ಆರೋಗ್ಯ ಎ೦ಬ ಹಿತನುಡಿಗಳ೦ತೆ ನಮ್ಮ ಸುತ್ತಮುತ್ತಲಿನ ಪ್ರದೇಶಗಳು ಸ್ವಚ್ಛವಾಗಿದ್ದರೆ ಅದು ನಮಗೆ ಆರೋಗ್ಯಭಾಗ್ಯವನ್ನು ತ೦ದುಕೊಡುತ್ತದೆ. ಇಲ್ಲವಾದರೆ ಅನಾರೋಗ್ಯ ಉ೦ಟಾಗಿ ಕಾಯಿಲೆಗಳು ಉಲ್ಬಣಿಸಬಹುದು. ಆದ್ದರಿ೦ದ ನಾವು ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ನೈರ್ಮಲ್ಯದಿ೦ದ ಇರುವ೦ತೆ ನೋಡಿಕೊಳ್ಳಬೇಕು. ಭಾರತ ದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಉದ್ದೇಶದಿ೦ದ ದಿನಾ೦ಕ ೦೨/೧೦/೨೦೧೪ ರ೦ದು ನಮ್ಮ ದೇಶದ ಪ್ರಧಾನ ಮ೦ತ್ರಿಯಾದ ಶ್ರೀ ನರೇ೦ದ್ರ ಮೋದಿಯವರು ಸ್ವತ: ತಾವೇ ಭಾಗವಹಿಸುವದರ ಮೂಲಕ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದರು.
ಮಹಾತ್ಮ ಗಾ೦ಧೀಜಿಯವರ ಹುಟ್ಟಿದ ದಿನದ೦ದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಗಾ೦ಧೀಜಿಯವರ ನಿರ್ಮಲ ಭಾರತ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಅತ್ಯುತ್ತಮ ಅಭಿಯಾನವಾಗಿದೆ. ಕೇ೦ದ್ರ ಹಾಗೂ ರಾಜ್ಯ ಸರ್ಕಾರ ನೌಕರರು, ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ರಾಜಕೀಯ ಮುಖ೦ಡರುಗಳು, ದೇಶದ ಜನತೆಯು ಪ್ರತಿಜ್ಞೆಯ ಮೂಲಕ ಈ ಅಭಿಯಾನಕ್ಕೆ ಕೈಜೋಡಿಸಿದ್ದಾರೆ.
“ಸ್ವಚ್ಛತೆ ಉತ್ತಮ ಆರೋಗ್ಯದ ತಳಹದಿ” ಆದ್ದರಿ೦ದ ಸ್ವಚ್ಛತೆಯಿ೦ದ ಕೂಡಿದ ಸ್ಥಳ ನೋಡಲು ಸು೦ದರವಾಗಿರುವ೦ತೆ ರೋಗಮುಕ್ತವು ಆಗಿರುತ್ತದೆ. ಆದ್ದರಿ೦ದ ನಾವು ಮೊದಲು ನಮ್ಮ ಮನೆ, ಬೀದಿ, ಗ್ರಾಮ, ಶಾಲಾ-ಕಾಲೇಜುಗಳನ್ನು ಸ್ವಚ್ಛವಾಗಿಟ್ಟುಕೊ೦ಡರೆ ಈ ಅಭಿಯಾನಕ್ಕೆ ಪ್ರೋತ್ಸಾಹ ನೀಡಿದ೦ತೆ ಆಗುತ್ತದೆ. ನಾವುಗಳು ಪ್ರತಿನಿತ್ಯ ಸ್ವಲ್ಪ ಸಮಯವಾದರೂ ಸ್ವಚ್ಛತೆಗೆ ಮೀಸಲಿಟ್ಟು , ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆರೋಗ್ಯದಿ೦ದ ಇರೋಣ.
ಉಪಸ೦ಹಾರ – “ ಏಕ್ ಕದ೦ ಸ್ವಚ್ಛತಾ ಕೆ ಓರ್” ಎ೦ಬ ಧ್ಯೇಯ ವಾಕ್ಯವನಿಟ್ಟುಕೊ೦ಡು ನಾವೆಲ್ಲರೂ ನಿರ್ಮಲ ಮನಸ್ಸಿನಿ೦ದ ನಮ್ಮ ದೇಶವನ್ನು ನೈರ್ಮಲ್ಯಗೊಳಿಸಿಕೊಳ್ಳಬೇಕು. ಈ ಅಭಿಯಾನದಲ್ಲಿ ಭಾಗವಹಿಸಿ , ಪ್ರೋತ್ಸಾಹಿಸಿ ಸ್ವಚ್ಛ ಸು೦ದರ ಪರಿಸರದಿ೦ದ ಕೂಡಿದ ಭಾರತವನ್ನು ನಿರ್ಮಿಸಿ , ಗಾ೦ಧೀಜಿಯವರ ಕನಸನ್ನು ನನಸು ಮಾಡೋಣ ಎ೦ಬ ಆಶಯ ನಮ್ಮೆಲ್ಲದಾಗಿರಲಿ.
ಸುಮನಾ ಶ್ರೀರಾಮ್
Environment Day
The natural world of air, water, earth and sky is known as the environment.
The village lifestyle is good for health
The village means Physical activity, cleaner air, connection with nature and community support.
ಪರಿಸರ ದಿನಾಚರಣೆ
ಪರಿಸರವೆಂದರೆ ಸುತ್ತ ಮುತ್ತ ಕಾಣುವ ಗಿಡ,ಮರ, ಬಳ್ಳಿ,ಮನುಷ್ಯ, ಪ್ರಾಣಿ,ಪಕ್ಷಿ ಇವುಗಳಷ್ಟೆ ಅಲ್ಲ ಪರಿಸರವೆಂದರೆ ಪ್ರಕೃತಿಯಲ್ಲಿ ಇರುವುದು. ಭೂಮಿ, ಆಕಾಶ, ಅಗ್ನಿ, ಜಲ, ಗಾಳಿ ಎಂಬ ಐದು ಮೂಲ ವಸ್ತುಗಳು, ಇದುವೇ ಪಂಚತ್ವ, ಪಂಚಭೂತ . ಇವುಗಳನ್ನು ಒಳಗೊಂಡು ಪರಿಸರ ಇವುಗಳಲ್ಲಿ ಯಾವ ಅಂಶವು ಅಸಮತೋಲ ವಾದರೂ ಪರಿಣಾಮ ಪ್ರಕೃತಿಯಲ್ಲಿ ಪರಿಸರದಲ್ಲಿ ಗೋಚರವಾಗುವುದು
ಇಂತಹ ಅಸಮತೋಲನ ಸಹಜವಾದುದಾದರೂ ಪ್ರಕೃತಿ ಅದನ್ನು ತನ್ನಿಂದ ತಾನೇ ಸರಿಪಡಿಸಿಕೊಂಡು ತನ್ನ ಸಹಜ ಸ್ಥಿತಿಯಲ್ಲಿ ಮುಂದುವರೆಯುತ್ತದೆ. ಆದರೆ ತೀರಾ ಸಹಜವಾದ ಅಸಮತೋಲನ ಉಂಟಾದರೆ ಅದರ ಪರಿಣಾಮ ವಿಪರೀತವಾಗಿ ಪ್ರಕೃತಿಯಲ್ಲಿ ಗೋಚರವಾಗಿ ಎಲ್ಲದರ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.
ಈ ರೀತಿ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗುವುದು ಮಾನವನ ದುರ್ಬುದ್ಧಿಯಿಂದ ಜಗತ್ತನ್ನು ತನ್ನ ಅಧೀನದಲ್ಲಿಟು ಕೊಳ್ಳುತ್ತಾನೆ0ಬ ಅಹಂಭಾವದಲ್ಲಿ ಆತ ಪ್ರಕೃತಿಯ ಅಂಶಗಳ ಮೇಲೆ ಪ್ರಹಾರ ಮಾಡತೊಡಗುತ್ತಾನೆ. ಆತನ ಅತಿಯಾದ ದುರಾಸೆಯಿಂದ ದುರ್ಬಲಗೊಂಡ ಪಂಚತತ್ವಗಳು ಸಮತೋಲನ ಗೊಂಡು ಏರುಪೇರುಗಳು ಉಂಟಾಗುತ್ತವೆ.
ವಾಯುಮಾಲಿನ್ಯ, ಜಲ ಮಾಲಿನ್ಯ, ಆಕಾಶದಲ್ಲಿ ಸಂಘರ್ಷ ಭೂಮಿಯ ಮೇಲೆ ದಬ್ಬಾಳಿಕೆ, ಅಗ್ನಿ ಯೋಡನೆ ಮೂರ್ಖತನದ ಸರಸ ಇವುಗಳೆಲ್ಲವೂ ಮಾನವನಿಂದಾಗುವ ಅವಘಡಗಳು.
ಇವೆಲ್ಲವುಗಳ ಸದುಪಯೋಗದಿಂದ ತನ್ನ ವಿಕಾಸವನ್ನು ಮಾಡಿಕೊಳ್ಳುವ ಬದಲು ದುರ್ಬಳಕೆ ಮಾಡಿಕೊಂಡು ಪ್ರಕೃತಿ ಪರಿಸರವನ್ನು ನಾಶ ಮಾಡುವುದರ ಜೊತೆಗೆ ಮನುಕುಲವನ್ನು ನಾಶ ಮಾಡಲು ಹೊರಟಿರುವುದು ಪ್ರಕೃತಿಯ ಶಾಪವೇ ಸರಿ.
ಇದರ ಕುರಿತಾಗಿ ಜಾಗೃತಿ ಮೂಡಿಸಲು ಪರಿಸರ ದಿನಾಚರಣೆ ಆಚರಿಸುತ್ತೇವೆ
ಶ್ರೀ ರಾಮಚಂದ್ರ ಮಾರ್ಕಾಂಡೆ
ಹಳ್ಳಿಯ ಜೀವನ ಶೈಲಿ ಆರೋಗ್ಯಕ್ಕೆ ಹಿತಕಾರಿ
ಪೀಠಿಕೆ:
ಹಳ್ಳಿಯಲ್ಲಿ ಶಾಂತಿಯುತವಾದ ಜೀವನವನ್ನು ನಡೆಸಬಹುದು. ಹಳ್ಳಿಯು ನೈಸರ್ಗಿಕವಾಗಿ ತುಂಬಾ ಸುಂದರವಾಗಿರುತ್ತದೆ.
ಹಳ್ಳಿಯಲ್ಲಿ ತಾಜಾ ಗಾಳಿ ಸಿಗುತ್ತದೆ. ಅಲ್ಲಿಯ ನೀರು ಶುದ್ಧವಾಗಿರುತ್ತದೆ. ಅಲ್ಲಿ ಬೆಳೆಯುವ ಹಸಿರು ತರಕಾರಿಗಳು, ಹೂವು, ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದು. ಗದ್ದೆ, ತೋಟದಲ್ಲಿ ಮಾಡುವ ಕೆಲಸದಿಂದ ದೈಹಿಕ ವ್ಯಾಯಾಮವಾಗುತ್ತದೆ. ಹೆಚ್ಚಾಗಿ ಎಲ್ಲ ಮನೆಗಳಲ್ಲಿ ದನಕರುಗಳನ್ನು, ಕೋಳಿ, ಆಡುಮೇಕೆಗಳನ್ನು ಸಾಕಿರುತ್ತಾರೆ. ಇದರಿಂದ ಅಲ್ಲಿ ಹಾಲು, ಮೊಟ್ಟೆ, ಮಾಂಸಗಳು ಚೆನ್ನಾಗಿ ಸಿಗುತ್ತವೆ. ಇಲ್ಲಿ ಕುಟುಂಬದವರು ಒಟ್ಟಿಗೆ ಒಂದೇ ಮನೆಯಲ್ಲಿ ಬದುಕುತ್ತಾರೆ.
ತೀರ್ಮಾನ: ಒಟ್ಟಾರೆ ಹಳ್ಳಿಯ ಜೀವನ, ಪಟ್ಟಣಕ್ಕೆ ಹೋಲಿಸಿದರೆ ತುಂಬಾ ಹಿತಕಾರಿ. ಇಲ್ಲಿ ವಾಹನಗಳ ಗದ್ದಲ, ಕೆಟ್ಟ ಹೊಗೆ ಇರುವದಿಲ್ಲ. ಹಳ್ಳಿಯ ಜೀವನ ಆರೋಗ್ಯಕ್ಕೆ ಮತ್ತು ಮನಸ್ಸಿಗೆ ಹಿತಕರ.
ಸುಮನಾ ಶ್ರೀರಾಮ್
Click here to download The village lifestyle is good for Health