ರಾಮರಾಜ್ಯ ಪ್ರಶ್ನೆ ಪತ್ರಿಕೆ

ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿ:
೧. ಜನರು ಅರಸನನ್ನು ಹೇಗೆ ತಿರಸ್ಕರಿಸಬಹುದು?
೨. ಕಷ್ಟಕಾಲದಲ್ಲಿ ಸಹಾಯಕ್ಕೆ ನಿಲ್ಲುವವನು ಯಾರು?
೩. ದೇಶಕ್ಕೆ ದೊಡ್ಡ ಗಂಡಾಂತರ ತರಬಲ್ಲವರು ಯಾರು?
೪. ರಾಜನು ಯಾವ ಕಾರ್ಯವನ್ನು ಕೂಡಲೇ ಆಚರಣೆಗೆ ತರಬೇಕು?
೫. ಅಮಾತ್ಯರು ಯಾವ ವಿಷಯದಲ್ಲಿ ನಿಪುಣವಾಗಿರಬೇಕು?
೬. ರಾಜನಿಗೆ ಮಹತ್ತರವಾದ ಶ್ರೇಯಸ್ಸನ್ನು ತಂದುಕೊಡಬಲ್ಲವನು ಯಾರು?
೭. ಯಾರೊಡನೆ ಸಮಾಲೋಚಿಸುವುದು ರಾಜದೋಷ ಎಂದು ರಾಮನು ಹೇಳುತ್ತಾನೆ?

ಆ) ಈ ಕೆಳಗಿನ ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ:
೧) ಯಾವ ಮೂರು ವ್ಯಕ್ತಿಗಳನ್ನು ರಾಜನು ತ್ಯಜಿಸಬೇಕು?
೨) ಖಜಾನೆಯನ್ನು ಹೇಗೆ ನಿಭಾಯಿಸಬೇಕೆಂದು ರಾಮನು ಹೇಳುತ್ತಾನೆ?
೩) ರಾಜ್ಯದ ಅಮಾತ್ಯರಲ್ಲಿ ಯಾವ ಗುಣಗಳಿರಬೇಕು?
೪) ದೂತನು ಹೇಗಿರಬೇಕು?
೫) ಮಂತ್ರಾಲೋಚನೆಯನ್ನು ಹೇಗೆ ನಡೆಸಬೇಕೆಂದು ರಾಮನ ಅಭಿಪ್ರಾಯ?
೬) ಸೇವಕರ ವಿಷಯದಲ್ಲಿ ರಾಜನು ಹೇಗೆ ವರ್ತಿಸಬೇಕು?

ಇ) ಈ ಕೆಳಗಿನ ಪ್ರಶ್ನೆಗಳಿಗೆ ೧೦ ವಾಕ್ಯಗಳಲ್ಲಿ ವಿಸ್ತಾರವಾಗಿ ಉತ್ತರಿಸಿ:
೧) ರಾಜ್ಯಾಡಳಿತದ ವಿಷಯದಲ್ಲಿ ರಾಮನ ಉಪದೇಶವನ್ನು ಸಂಗ್ರಹವಾಗಿ ಬರೆಯಿರಿ.
೨) ರಾಜನಲ್ಲಿ ತಲೆದೋರಬಹುದಾದ ಹದಿನಾಲ್ಕು ದೋಷಗಳ ಬಗ್ಗೆ ವಿವರಿಸಿ.

ಈ) ಈ ಮಾತುಗಳ ಸ್ವಾರಸ್ಯವನ್ನು ವಿಸ್ತರಿಸಿ ಬರೆಯಿರಿ:
೧) ಸಾವಿರ ಮೂರ್ಖರಿಗಿಂತ ಒಬ್ಬ ಪಂಡಿತ ಲೇಸು
೨) ಪೂರ್ವಿಕರ ವ್ಯಕ್ತಿತ್ವದ ಅತ್ಯುತ್ತಮ ಅಂಶಗಳನ್ನು ರಾಜನು ಅಳವಡಿಸಿಕೊಳ್ಳಬೇಕು
೩) ದೂತನು ಕಾರ್ಯಸಮರ್ಥನು ಪ್ರತಿಭಾಶಾಲಿಯೂ ಆಗಿರಬೇಕು

ಭಾಷಾಭ್ಯಾಸ

(ಅ) ಈ ಕೆಳಗಿನ ಪದಗಳ ವಚನ ಬದಲಾಯಿಸಿ ಬರೆಯಿರಿ:
ದೂತ,  ಧನುರ್ಧಾರಿಗಳು,  ಅಮಾತ್ಯ, ಮೌಲ್ಯ, ಪ್ರಶ್ನೆ , ಬಹುಮಾನಗಳು

(ಆ) ಈ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ:
ಏರ್ಪಾಡು:
ಕೃಶ:
ಚಾಪಲ್ಯ:
ನಿದ್ರಾವಶ:
ಜ್ಞಾತಿ :

(ಇ) ಈ ಕೆಳಗಿನ ಪದಗಳನ್ನು ಬಿಡಿಸಿ ಸಂಧಿ ಹೆಸರಿಸಿರಿ:
ನಡೆಯುತ್ತಿದೆಯೆಂಬುದನ್ನು , ದರ್ಶನವನ್ನು, ನಿರ್ಭಯವಾಗಿ, ಜಾವದಲ್ಲೆದ್ದು, ಕಣ್ಣಿಟ್ಟಿರು

Click here to download Raamarajya worksheet