Hallu Tapasane is a poem for 4th graders by H.K. Avati, depicting a dentist‘s visit to a school for children’s dental check-ups. The dentist first inspects the kids’ pockets, finding sweets and chocolates. Then, he examines their mouths, discovering cavities and bleeding gums. Interestingly, the dentist’s teeth are cavity-free and shining brightly. Hallu Tapasane means teeth testing.

“ಹಲ್ಲು ತಪಾಸಣೆ” 4ನೇ ತರಗತಿಯ ಮಕ್ಕಳಿಗೆ ಕವಿತೆ. ಬರೆದವರು ಎಚ್.ಕೆ. ಆವಟಿ. ಮಕ್ಕಳ ದಂತ ತಪಾಸಣೆಗಾಗಿ ಶಾಲೆಗೆ ದಂತ ವೈದ್ಯರ ಭೇಟಿಯನ್ನು ಚಿತ್ರಿಸುತ್ತದೆ. ದಂತವೈದ್ಯರು ಮೊದಲು ಮಕ್ಕಳ ಪಾಕೆಟ್‌ಗಳನ್ನು ಪರಿಶೀಲಿಸುತ್ತಾರೆ. ಸಿಹಿತಿಂಡಿಗಳು ಮತ್ತು ಚಾಕೊಲೇಟ್‌ಗಳನ್ನು ಹುಡುಕುತ್ತಾರೆ. ನಂತರ, ಅವನು ಅವರ ಬಾಯಿಗಳನ್ನು ಪರೀಕ್ಷಿಸುತ್ತಾನೆ, ಹುಳುಕುಗಳು ಮತ್ತು ಒಸಡುಗಳಲ್ಲಿ ರಕ್ತಸ್ರಾವವನ್ನು ಕಂಡುಹಿಡಿಯುತ್ತಾನೆ. ಕುತೂಹಲಕಾರಿಯಾಗಿ, ದಂತವೈದ್ಯರ ಸ್ವಂತ ಹಲ್ಲುಗಳು ಕುಳಿ-ಮುಕ್ತವಾಗಿರುತ್ತವೆ ಮತ್ತು ಹೊಳೆಯುತ್ತವೆ.

ಹಲ್ಲು ತಪಾಸಣೆ (ಪದ್ಯ)

ಅ. ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer in one sentence)

೧. ಮಕ್ಕಳ ಹಲ್ಲು ತಪಾಸಣೆಗಾಗಿ ಶಾಲೆಗೆ ಬಂದಿದ್ದವರು ಯಾರು?
ಉ. ಮಕ್ಕಳ ಹಲ್ಲು ತಪಾಸಣೆಗಾಗಿ ಶಾಲೆಗೆ ವೈದ್ಯರು ಬಂದಿದ್ದರು.
೨. ಏನನ್ನು ತಿಂದ ಹಲ್ಲನ್ನು ವೈದ್ಯರು ತೆರೆದು ನೋಡಿದರು?
ಉ: ತಿಂಡಿ ತಿನಿಸು ತಿಂದ ಹಲ್ಲನ್ನು ವೈದ್ಯರು ತೆರೆದು ನೋಡಿದರು.
೩. ವೈದ್ಯರು ಮಕ್ಕಳ ಒಸಡಿನಲ್ಲಿ ಏನನ್ನು ಕಂಡರು?
ಉ: ವೈದ್ಯರು ಮಕ್ಕಳ ಒಸಡಿನಲ್ಲಿ ರಕ್ತ ಕಂಡರು.
೪. ವೈದ್ಯರ ಹಲ್ಲುಗಳು ಹೇಗೆ ಹೊಳೆಯುತಲಿದ್ದವು?
ಉ: ವೈದ್ಯರ ಹಲ್ಲುಗಳು ಲಕಲಕನೆ ಹೊಳೆಯುತಲಿದ್ದವು

ಆ. ಕನ್ನಡದಲ್ಲಿ ಅರ್ಥ ಬರೆಯಿರಿ. (Write the word meaning)

ಕಡಲೆ = ಹುರಿಗಡಲೆ, ಶೇಂಗಾ = ನಲೆಗಡಲೆ, ವೈದ್ಯ = ಚಿಕಿತ್ಸಕ, ಹುಳುಕು = ಹುಳು ಹತ್ತಿರುವುದು,
ಪುಟಾಣಿ = ಚಿಕ್ಕ

ಇ. ಎರಡು, ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer in 2 to 3 sentences)

೧. ವೈದ್ಯರಿಗೆ ಮಕ್ಕಳ ಜೇಬಿನಿಂದ ಏನೆಲ್ಲ ಸಿಕ್ಕಿದವು?
ಉ: ವೈದ್ಯರಿಗೆ ಮಕ್ಕಳ ಜೇಬಿನಿಂದ ಚಾಕಲೇಟ್‌, ಮಿಠಾಯಿ, ಬೆಂಡು ಬತ್ತಾಸು, ಕಡಲೆ ಶೇಂಗಾ ಸಿಕ್ಕಿದವು.

. ಮಕ್ಕಳ ಹಲ್ಲುಗಳು. ಒಸಡುಗಳು ಹೇಗಿದ್ದವು?
ಉ: ಮಕ್ಕಳ ಹಲ್ಲುಗಳಲ್ಲಿ ಹುಳುಕು, ಒಸಡುಗಳಲ್ಲಿ ರಕ್ತ ಇದ್ದವು.

ಈ. ಪದ್ಯ ಪೂರ್ಣಗೊಳಿಸಿರಿ. (Complete the Poem)

        ವೈದ್ಯರು ಬಂದರು
        ಶಾಲೆಯ ಒಳಗೆ
        ಮಕ್ಕಳ ಹಲ್ಲು ತಪಾಸಣೆಗೆ

ಹಲ್ಲಿಗೆ ಹುಳುಕು
ಒಸಡಿಗೆ ರಕ್ತ
ವಾಸನೆ ಇದ್ದವು ಅವುಗಳಲಿ

ಉ. ವಚನ ಬದಲಿಸಿರಿ. (Write the plural form)

ಶಾಲೆ = ಶಾಲೆಗಳು , ತಿನಿಸು = ತಿನಿಸುಗಳು, ಹಲ್ಲು = ಹಲ್ಲುಗಳು, ಜೇಬು = ಜೇಬುಗಳು, ಮಿಠಾಯಿ = ಮಿಠಾಯಿಗಳು , ಒಸಡು = ಒಸಡುಗಳು, ಚೆಂಡು = ಚೆಂಡುಗಳು

ಊ. ಕೂಡಿಸಿ ಬರೆಯಿರಿ. (Join and make meaningful words)

೧. ಏನು + ಉಂಟು = ಎನುಂಟು  ೨. ಉಂಟು + ಎಂದು = ಉಂಟೊಂದು       
೩. ಮತ್ತೆ + ಒಬ್ಬ = ಮತ್ತೊಬ್ಬ     ೪. ಇನ್ನು + ಒಬ್ಬ = ಇನ್ನೊಬ್ಬ

ಋ. ಕೆಳಗಿನ ಪದಗಳಿಗೆ ಸರಿಯಾದ ರೂಪ ಬರೆಯಿರಿ. (Write the correct word)

೧. ಅಲ್ಲು – ಹಲ್ಲು    ೨. ಹೊಸಡು – ಒಸಡು    ೩. ಹೊಬ್ಬನು – ಒಬ್ಬನು 

೪. ಒಲಗೆ – ಒಳಗೆ 

Click here to download hallu tapasaNe (poem)