ಬೆಡಗಿನ ತಾಣ ಜಯಪುರ ಪ್ರಶ್ನೆ ಪತ್ರಿಕೆ
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ಲೇಖಕರಿಗೆ ಜಯಪುರದ ಮನೆಗಳ ಮೇಲೆ ಮೋಹವೇಕೆ?
೨. ಜಯಪುರದ ಪೂರ್ವದ ರಾಜಧಾನಿ ಯಾವುದು?
೩. ಜಯಪುರದ ಜನರಿಗೆ ಯಾವ ಯಾವ ಬಣ್ಣಗಳು ಇಷ್ಟ?
೪. ಲೇಖಕರಿಗಿದ್ದ ಹಂಬಲವೇನು?
೫. ರೈಗಳ ಮನೆ ಎಂಥ ಪ್ರದೇಶದಲ್ಲಿತ್ತು?
ಆ) ಕೆಳಗಿನ ಪ್ರಶ್ನೆಗಳಿಗೆ ಎರಡು, ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
೧. ಲೇಖಕರ ಮೊದಲ ಅಂಬೇರ ಭೇಟಿಗೂ ಇತ್ತೀಚಿನ ಭೇಟಿಗೂ ಯಾವ
ವ್ಯತ್ಯಾಸವಿತ್ತು?
೨. ಜಯಪುರದ ಬೀದಿ ಹಾಗೂ ಮನೆಗಳ ಸೌಂದರ್ಯವನ್ನು ವರ್ಣಿಸಿ.
೩. ಲೇಖಕರು ನೋಡಿದ ಜನಪದ ನೃತ್ಯದ ಸೊಬಗನ್ನು ಚಿತ್ರಿಸಿ.
೪. ಮೀರಾಬಾಯಿ ದೇವಾಲಯದ ಸೌಂದರ್ಯವನ್ನು ವಿವರಿಸಿ.
ಇ) ಕೆಳಗಿನ ಪ್ರಶ್ನೆಗಳಿಗೆ ಐದು, ಆರು ವಾಕ್ಯಗಳಲ್ಲಿ ಉತ್ತರಿಸಿರಿ.
೧. ಜಂತ್ರ ಮಂತ್ರದ ವಿಶೇಷತೆಯನ್ನು ಪರಿಚಯ ಮಾಡಿಕೊಡಿ.
೨. ಜಯಪುರದ ಜನರಿಗೆ ಬಣ್ಣಗಳ ಬಗೆಗೆ ಇರುವ ಮೋಹವನ್ನು ತಿಳಿಸಿ.
೩. ಅಂಬೇರ ಬೆಟ್ಟದ ಮೂರು ಅಂತಸ್ತಿನ ಅರಮನೆಯ ಒಳಾಂಗಣ ಚೆಲುವನ್ನು
ತಿಳಿಸಿ.
ಈ) ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ.
೧. “ಪ್ರಾಚೀನ ಗುಡಿ ಗೋಪುರಗಳು ಗೂಬೆ ಮನೆಗಳಾಗಿದ್ದವು”
೨. “ಅಲ್ಲಿ ಮಧ್ಯಾಹ್ನ ವೇಳೆ ನೀರು ಕಾಯಿಸುವ ಅಗತ್ಯವಿಲ್ಲ”
೩. “ಚಾವಡಿಗೆ ನಕ್ಷತ್ರಲೋಕದ ಸೊಬಗನ್ನು ಕೊಡುತ್ತೇವೆ”
೪. “ಗಂಡಸರೂ ರಂಗುರಾಯರೇ”
ಉ) ಬಿಟ್ಟ ಜಾಗಗಳನ್ನು ಸೂಕ್ತ ಪದಗಳಿಂದ ತುಂಬಿರಿ.
೧. ಚಿತ್ರಕೊರೆದು ಮಾಡಿದ ……………….. ನೀರ ಕಾಲುವೆಗಳು.
೨. ರಾಜರ ಅಂತಃಪುರದ ಕೆಲವು ಭಾಗಗಳಲ್ಲಿ ……………………… ಶಿಲೆಯ ಸುಂದರ
ಮಂಟಪಗಳಿವೆ.
೩. ಮಿತ್ರ ರೈಗಳ …………………….. ವಂದನೆ ಸಲ್ಲಿಸಿದೆವು.
೪. ಹಿಮ್ಮೇಳಕ್ಕೆ …………………….. ತಮಟೆಗಳಿವೆ.
೫. ಜಯಪುರ ಬಣ್ಣಗಾರರ ……………………………..
ಊ) ಹೊಂದಿಸಿ ಬರೆಯಿರಿ.
ಅ ಬ
೧. ಅಂಬೇರ ಸವರ್ಣದೀರ್ಘಸಂಧಿ
೨. ಲಕ್ಷೋಪಲಕ್ಷ ತತ್ಸಮ
೩. ಬಣ್ಣಬಣ್ಣ ಪೂರ್ವದ ರಾಜಧಾನಿ
೪. ಜಂತ್ರ ಮಂತ್ರ ದ್ವಿರುಕ್ತಿ
೫. ಶೃಂಗಾರ ಖಗೋಳ ವೀಕ್ಷಣಾಲಯ
ಮಂತ್ರವಾದಿ
ಗುಣಸಂಧಿ