Edegundada Dheeraru is a chapter about Malathi Holla and Julio Iglesis. Edegundada Dheeraru explains how not to lose hope in life.
Malathi Holla is an inspiring Indian para-athlete known for her remarkable achievements in wheelchair racing. Despite being affected by polio at a young age, she overcame challenges to win over 400 medals in national and international competitions. Malathi is also a motivational speaker and advocates for disability rights.
Julio Iglesias is a legendary Spanish singer and songwriter, renowned as one of the best-selling Latin music artists of all time. With a career spanning over five decades, he has sold over 100 million records worldwide in 14 languages. Known for his romantic ballads, Iglesias remains an iconic figure in global music.
ಎದೆಗುಂದದ ಧೀರರು ಪ್ರಶ್ನೆ ಪತ್ರಿಕೆ
ಅ. ಪದಗಳ ಅರ್ಥ ಬರೆಯಿರಿ.
ಅನಿವಾರ್ಯ, ಆಲ್ಬಂ, ಕಣ್ಮಣಿ, ಚಿಕಿತ್ಸೆ, ದಾಖಲೆ, ಪರಿಣತಿ, ಭಾಜನ, ಮಿನುಗು, ವ್ಯಾಧಿ, ಸಿದ್ಧಾಂತ, ಸ್ವಾಭಿಮಾನ, ಅದೃಷ್ಟ, ಎದೆಗುಂದು, ತಲ್ಲೀನ, ಗಿಟಾರ, ದಾದಿ,ಪರಿಶ್ರಮ, ಭೀಕರ, ಯಶಸ್ಸು, ವೃತ್ತಿ, ಸ್ಪೂರ್ತಿ, ಸ್ವಾವಲಂಬನೆ
ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
೧. ಬಾಲಕ ಜೂಲಿಯೋ ಇಗ್ಲೇಶಿಯಸ್ ತಾನು ಮುಂದೆ ಏನಾಗಬೇಕೆಂದು ಬಯಸಿದ್ದನು?
೨. ಜೂಲಿಯೋ ಇಗ್ಲೇಶಿಯಸ್ ಯಾವ ದೇಶದವನು?
೩. ಜೂಲಿಯೋ ಇಗ್ಲೇಶಿಯಸ್ ಹೊರತಂದ ಹಾಡುಗಳ ಆಲ್ಬಂ ಯಾವುದು?
೪. ಜೂಲಿಯೋ ಇಗ್ಲೇಶಿಯಸ್ ತನ್ನ ದುಃಖವನ್ನು ಹೇಗೆ ಮರೆತನು?
೫. ಮಾಲತಿ ಅವರಿಗೆ ಬಾಲ್ಯದಲ್ಲೇ ತಗುಲಿದ ರೋಗ ಯಾವುದು?
೬. ಮಾಲತಿ ಅವರು ಚೆನ್ನೈನಲ್ಲಿ ಚಿಕಿತ್ಸೆ ಪಡೆದ ಪುನರ್ವಸತಿ ಕೇಂದ್ರ ಯಾವುದು?
೭. ಮಾಲತಿ ಹೊಳ್ಳ ಗಳಿಸಿದ ಮುಖ್ಯ ಪ್ರಶಸ್ತಿಗಳು ಯಾವುವು?
೮. ಮಾಲತಿ ಹೊಳ್ಳ ಅವರ ತಂದೆ ತಾಯಿಗಳ ಹೆಸರೇನು?
ಇ. ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
೧. ಜೂಲಿಯೋ ಯಾವ ಕನಸು ಹೊಂದಿದ್ದನು? ಅದು ನುಚ್ಚು ನೂರಾದುದು ಹೇಗೆ?
೨. ಮಾಲತಿ ಅವರನ್ನು ಆಕ್ರಮಿಸಿದ ರೋಗದ ಲಕ್ಷಣವೇನು?
೩.ಅಹ್ಮದಾಬಾದ್ ನಲ್ಲಿ ನಡೆದ ಗಾಳಿ ಕುರ್ಚಿಯ ಓಟದ ಸ್ಪರ್ಧೆಯಲ್ಲಿ ಜಯಗಳಿಸುವುದರ ವಿಶೇಷವೇನು?
೪. ಜೂಲಿಯೊ ಇಗ್ಲೇಶಿಯಸ್ ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳೇನು?
೫.ಕ್ರೀಡೆಗಳತ್ತ ಮಾಲತಿಯವರಿಗೆ ಒಲವು ಬೆಳೆಯಲು ಕಾರಣವೇನು?
೬.ಸಾಮಾಜಿಕ ಸೇವೆಯಲ್ಲಿ ಮಾಲತಿ ಹೇಗೆ ಕ್ರಿಯಾಶೀಲರಾಗಿದ್ದಾರೆ?
೭.ಮಾಲತಿ ಹೊಳ್ಳ ಭಾಗವಹಿಸಿದ ಅಂತರಾಷ್ಟ್ರೀಯ ಕ್ರೀಡಾಕೂಟಗಳು ಯಾವುವು?
೮.ಮಾಲತಿ ಹೊಳ್ಳ ಜೀವನದಲ್ಲಿ ಕಂಡುಕೊಂಡ ಸಿದ್ದಾಂತವೇನು?
೯. ಜೂಲಿಯೋ ಇಗ್ಲೇಶಿಯಸ್ ಫುಟ್ಬಾಲ್ ಆಟದಲ್ಲಿ ಯಾವ ರೀತಿ ಯಶಸ್ಸು ಸಾಧಿಸಿದ್ದರು?
ಈ. ಬಿಟ್ಟ ಸ್ಥಳ ತುಂಬಿರಿ.
೧.ಮಾಲತಿ ಹೊಳ್ಳರು ತಂದೆ ತಾಯಿಗಳ ಊರು ………………..ಜಿಲ್ಲೆಯಲ್ಲಿ ಇದೆ.
೨. ಮಾತೃ ಫೌಂಡೇಶನ್ ……………………….ಪ್ರದೇಶದ ಮಕ್ಕಳಿಗಾಗಿ ಸ್ಥಾಪಿಸಿದ ಸೇವಾ ಸಂಸ್ಥೆ.
೩.ಭಾರತ ಸರ್ಕಾರ ಮಾಲತಿ ಅವರಿಗೆ……………………. ಪ್ರಶಸ್ತಿಯನ್ನು ೨೦೦೧ರಲ್ಲಿ ನೀಡಿತು.
೪. ಪೋಲಿಯೋ ಎಂಬುದು ………………………. ಬರುವ ವ್ಯಾದಿ.
೫.ಮಾಲತಿ ಹೊಳ್ಳ ಅವರ ಕಾಲೇಜು ಶಿಕ್ಷಣ ……………………… ನಲ್ಲಿ ನಡೆಯಿತು.
೬.ಜೂಲಿಯೋ ಆಸ್ಪತ್ರೆಯಲ್ಲಿದ್ದಾಗ ದಾದಿ ಒಬ್ಬಳು ………… …….ಒಂದನ್ನು ತಂದು ಕೊಟ್ಟಳು.
೭.ತನ್ನ ಇಪ್ಪತ್ತನೆಯ ವಯಸ್ಸಿಗೆ ಫುಟ್ಬಾಲ್ ಆಟದಲ್ಲಿ ಉತ್ತಮ ……………. ಎಂಬ ಖ್ಯಾತಿ ಪಡೆದನು.
ಭಾಷಾಭ್ಯಾಸ
ಉ. ಕೆಳಗೆ ನೀಡಿರುವ ಪದಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಬಳಸಿರಿ.
೧. ನುಚ್ಚುನೂರಾಗು
೨. ಆತ್ಮ ವಿಶ್ವಾಸ
೩. ಕಣ್ಮಣಿ
೪. ಯಶಸ್ಸು
೫. ಭಾಜನ
೬. ಸ್ಫೂರ್ತಿ
ಊ: ಕೆಳಗಿರುವ ಪದಗಳಿಗೆ ವಿರುದ್ಧಾರ್ಥಕ ಪದ ಬರೆಯಿರಿ.
೧.ಆಸೆ X ……………. ೪. ಕೀರ್ತಿ X ……………………
೨.ವಿಫಲತೆ X ………………… ೩.ಖ್ಯಾತಿ X …………….
೩.ಸ್ವಾವಲಂಬನೆ X ………………. ೬. ಅದೃಷ್ಟ X …………………..
ಋ. ಕೆಳಗಿರುವ ಪದಗಳನ್ನು ಬಿಡಿಸಿ ಬರೆಯಿರಿ.
೧. ವಿಶ್ವಾದ್ಯಂತ =
೨. ಕೋಟ್ಯಂತರ =
೩. ನೂರಾಯಿತು =
೪. ಮುಟ್ಟಿರಲಿಲ್ಲ =
೫. ತಿಂಗಳಿಗೊಮ್ಮೆ =