ಕೊಳಲ ಜೋಗಿ

ಅ. ಪದಗಳ ಅರ್ಥ ಬರೆಯಿರಿ. (Write the word Meaning)

ಅರಿವೆ, ಇನಾಮು, ಕಡಗ, ಚಾವಡಿ, ಜೋಗಿ, ತಟಸ್ಥ, ಅವಾಂತರ, ತಿರುಕ, ತಿರುಪೆ, ನೆಲುವು, ಬಿಲ, ಮಾಡು, ಮೊರೆ, ವ್ಯಸನ, ತೊಗಲು, ಮಂಕು, ಮೊನೆ, ಸರಿಗೆ, ಆಳು, ಎವೆಯಿಕ್ಕದೆ, ಕಾಟ, ಜಗಲಿ

ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer in one sentence)

೧.ಇಲಿಗಳ ಕಾಟ ತಪ್ಪಿಸಲು ಒಪ್ಪಿಕೊಂಡವರು ಯಾರು?
೨.ಇಲಿಗಳು ಹಾಸಿಗೆಯನ್ನು ಯಾವ ರೀತಿ ಹಾಳು ಮಾಡಿದವು?
೩.ಜೋಗಿಯ ಕೊಳಲರಾಗಕ್ಕೆ ಇಲಿಗಳು ಹೇಗೆ ಸಾಲುಗಟ್ಟಿ ಬಂದವು?
೪.ಇಲಿಗಳ ಕಾಟ ತಪ್ಪಿಸಿದ ಜೋಗಿಯು ಊರ ಗೌಡನ ಬಳಿ ಬಂದು ಏನೆಂದು ಕೇಳಿದನು?
೫.ದೇವಸ್ಥಾನದ ಉತ್ಸವಕ್ಕೆ ಹೊರಟವರಿಗೆ ಇಲಿಗಳು ಯಾವ ರೀತಿ ತೊಂದರೆ ಮಾಡಿದವು?
೬.ಪಂಜೆ ಮಂಗೇಶರಾಯರ ಕಾವ್ಯನಾಮ ಯಾವುದು?
೭. ಕೊಳಲ ಜೋಗಿ ಕಥೆಯ ನೀತಿ ಏನು?

ಇ. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer in two to three sentences)

೧.ಇಲಿಗಳನ್ನು ಹಿಡಿಯಲು ಯಾವ ಯಾವ ಪ್ರಯತ್ನಗಳನ್ನು ಮಾಡಿದರು?
೨.ಮನೆಯ ಮಾಡು ಕಿಟಕಿ ಬಾಗಿಲುಗಳು ಹೇಗೆ ಕಾಣುತ್ತಿದ್ದವು?
೩.ಅಡಿಗೆ ಮನೆಯಲ್ಲಿ ಇಲಿಗಳಿಂದ ಯಾವ ತೊಂದರೆಗಳಾಗುತ್ತಿದ್ದವು?
೪.ಇಲಿಗಳ ಕಾಟ ತಪ್ಪಿಸಲು ಊರ ಗೌಡನು ಯಾವ ತೀರ್ಮಾನ ಕೈಗೊಂಡನು? ೫.ಜೋಗಿಯು ಯಾವ ರೀತಿಯ ಜೀವನ ನಡೆಸುತ್ತಿದ್ದನು?
೬.ಜೋಗಿಯ ಕೊಳಲರಾಗಕ್ಕೆ ಇಲಿಗಳು ಯಾವ ಯಾವ ಸ್ಥಳಗಳಿಂದ ಹೊರ ಬಂದವು?
೭. ಜೋಗಿಯ ಉಡುಗೆ ತೊಡುಗೆಗಳು ಹೇಗಿದ್ದವು?
೮. ಜೋಗಿ ಊರ ಜನರಿಂದ ಇನಾಮು ಪಡೆಯದೆ ಏನೆಂದು ಹೇಳಿದನು?
೯.ಊರ ಗೌಡನು ಜೋಗಿಗೆ ಇನಾಮು ಕೊಡದೆ ಏನೆಂದು ತಿರಸ್ಕರಿಸಿದನು?
೧೦. ಜೋಗಿಯ ಯಾವ ಗುಣ ಇಷ್ಟವಾಯಿತು? ಏಕೆ?
೧೧. ಇಲಿಯೂರಿಗೆ ಕೊಳಲೂರು ಎಂಬ ಹೆಸರು ಹೇಗೆ ಬಂತು?

ಈ. ಕೆಳಗಿನ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. (Answer in 8 – 10 sentences)

೧. ಜೋಗಿಯು ಇಲಿಗಳನ್ನು ಯಾವ ರೀತಿ ನಾಶ ಮಾಡಿದನು?
೨. ಜೋಗಿಗೆ ಇನಾಮು ಕೊಡಲು ತಿರಸ್ಕರಿಸಿದ ಊರ ಜನರಿಗೆ ಯಾವ ಗತಿ ಉಂಟಾಯಿತು?
೩. ಇಲಿಯೂರಿನಲ್ಲಿ ಇಲಿಗಳ ಕಾಟ ಯಾವ ಯಾವ ರೀತಿ ಇತ್ತು?

ಉ. ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು ತಿಳಿಸಿರಿ? (Who told whom)
೧.ಒಡೆಯಾ! ನನ್ನ ಕೆಲಸ ತೀರಿತು ನನ್ನ ಇನಾಮು ಕೊಡೋಣಾಗಲಿ.
೨.ನಿನ್ನ ಕೊಳಲು ಸಾಕು ಮಾಡೋ ಮಹಾರಾಯ!
೩.ಇನ್ನಾದರೂ ಆಡಿ ತಪ್ಪಬೇಡಿ.
೪.ನಿನಗೆ ಹೊಟ್ಟೆ ತುಂಬಾ ಒಂದು ಊಟ ಸಿಕ್ಕಿದರೆ ಸಾಲದೆ?
೫.ಸೈ , ಸೈ, ತಿರುಕನಿಗೆ ಅಷ್ಟೇ ಸಾಕು.
ಊ. ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿರಿ. (Make your own sentence)
೧. ಕನಿಕರ:
೨. ಉತ್ಸವ:
೩. ನಿಶ್ಚಯಿಸಿ:
೪. ಆವಾಂತರ:
೫. ಮೊರೆ:
೬. ಇಡು:
ಋ. ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ. (Write the opposite words)

ಆಸೆ X                   ಉಪಾಯ X           ಬೆಳಕುX                 ರಾತ್ರಿ X      
ಕಷ್ಟ X

ಎ. ಕೆಳಗೆ ನೀಡಲಾಗಿರುವ ವಾಕ್ಯಗಳಲ್ಲಿ ಪದಗಳನ್ನು ಅರ್ಥ ಪೂರ್ಣವಾಗಿ ಜೋಡಿಸಿ ಬರೆಯಿರಿ. (Make meaningful sentences)

೧. ತರಿಸಿದರು ಇಲಿಗಳನ್ನು ಬೋನುಗಳನ್ನು ಹಿಡಿಯಬೇಕೆಂದು ಊರಿನವರು
೨. ಕೊಳಲು ಜೋಗಿ ಇತ್ತು ಬಿದುರಿನ ಬಳಿಯಲ್ಲಿ
೩. ಹೊರಗೆ ಜೋಗಿ ಊರಿನ ಕೊಳಲನ್ನು ಹೋದನು ಬಾರಿಸುತ್ತ

click here to download Kolala Jogi worksheet