Vivekananda was born Narendranath Datta (name shortened to Narendra or Naren)on 12 January 1863 during the Makar Sankranti festival. His father, Vishwanath Datta, was an attorney at the Calcutta High Court. His mother, Bhubaneswari Devi, was a devout housewife. Narendra was interested in spirituality from a young age and meditated before the images of deities such as Shiva, Rama, Sita, and Mahavir Hanuman. Narendra was naughty and restless as a child, and his parents often had difficulty controlling him.
Later Narendra was named Swami Vivekananda by his master Shri Ramakrishna Paramahamsa.
Swami Vivekananda is best known in the United States for his groundbreaking speech to the 1893 World’s Parliament of Religions. Here he introduced Hinduism to America and called for religious tolerance and an end to fanaticism.

1863 ರ ಜನವರಿ 12 ರಂದು ಮಕರ ಸಂಕ್ರಾಂತಿ ಹಬ್ಬದ ಸಮಯದಲ್ಲಿ ವಿವೇಕಾನಂದರು ನರೇಂದ್ರನಾಥ ದತ್ತ (ನರೇಂದ್ರ ಅಥವಾ ನರೇನ್ ಎಂದು ಸಂಕ್ಷಿಪ್ತಗೊಳಿಸಲಾಗಿದೆ) ಜನಿಸಿದರು. ಅವರ ತಂದೆ ವಿಶ್ವನಾಥ ದತ್ತ ಅವರು ಕಲ್ಕತ್ತಾ ಹೈಕೋರ್ಟ್‌ನಲ್ಲಿ ವಕೀಲರಾಗಿದ್ದರು. ಅವರ ತಾಯಿ ಭುವನೇಶ್ವರಿ ದೇವಿ ಗೃಹಿಣಿಯಾಗಿದ್ದರು. ನರೇಂದ್ರನು ಚಿಕ್ಕ ವಯಸ್ಸಿನಿಂದಲೂ ಆಧ್ಯಾತ್ಮದಲ್ಲಿ ಆಸಕ್ತಿ ಹೊಂದಿದ್ದನು ಮತ್ತು ಶಿವ, ರಾಮ, ಸೀತೆ ಮತ್ತು ಮಹಾವೀರ ಹನುಮಾನ್ ಮುಂತಾದ ದೇವತೆಗಳ ಚಿತ್ರಗಳ ಮುಂದೆ ಧ್ಯಾನ ಮಾಡುತ್ತಿದ್ದನು. ನರೇಂದ್ರನು ಬಾಲ್ಯದಲ್ಲಿ ಹಠಮಾರಿ ಮತ್ತು ಅವನ ಹೆತ್ತವರು ಅವನನ್ನು ನಿಯಂತ್ರಿಸಲು ಕಷ್ಟಪಡುತ್ತಿದ್ದರು.
ನಂತರ ನರೇಂದ್ರನನ್ನು ಅವರ ಗುರುಗಳಾದ ಶ್ರೀ ರಾಮಕೃಷ್ಣ ಪರಮಹಂಸರು ಸ್ವಾಮಿ ವಿವೇಕಾನಂದ ಎಂದು ಹೆಸರಿಸಿದರು.
ಸ್ವಾಮಿ ವಿವೇಕಾನಂದರು 1893 ರ ವರ್ಲ್ಡ್ಸ್ ಪಾರ್ಲಿಮೆಂಟ್ ಆಫ್ ರಿಲಿಜನ್ಸ್‌ಗೆ ತಮ್ಮ ಅದ್ಭುತ ಭಾಷಣಕ್ಕಾಗಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಇಲ್ಲಿ ಅವರು ಹಿಂದೂ ಧರ್ಮವನ್ನು ಅಮೆರಿಕಕ್ಕೆ ಪರಿಚಯಿಸಿದರು ಮತ್ತು ಧಾರ್ಮಿಕ ಸಹಿಷ್ಣುತೆ ಮತ್ತು ಮತಾಂಧತೆಯನ್ನು ಕೊನೆಗೊಳಿಸಬೇಕೆಂದು ಕರೆ ನೀಡಿದರು.

ಧೀರ ಬಾಲಕ ನರೇಂದ್ರ

ಅ) ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer in one sentence)

೧. ಬಾಲಕ ನರೇಂದ್ರ ಮೇಲೆ ಏನು ಹರಿದು ಹೋಯಿತು?
ಉ: ಬಾಲಕ ನರೇಂದ್ರ ಮೇಲೆ ಹಾವು ಹರಿದು ಹೋಯಿತು?

೨. ನರೇಂದ್ರ ತೋಟದಲ್ಲಿ ಯಾರಿಗಾಗಿ ಕಾದನು?
ಉ: ನರೇಂದ್ರ ತೋಟದಲ್ಲಿ ಭೂತಕ್ಕಾಗಿ ಕಾದನು.

೩.ರಾಮಕ್ರಷ್ಣ ಪರಮಹಂಸರು ನರೇಂದ್ರನನ್ನು ಯಾವ ಹೆಸರಿನಿಂದ ಕರೆದರು?
ಉ: ರಾಮಕ್ರಷ್ಣ ಪರಮಹಂಸರು ನರೇಂದ್ರನನ್ನು ಸ್ವಾಮಿ ವಿವೇಕಾನಂದ ಹೆಸರಿನಿಂದ ಕರೆದರು.

೪. ಸ್ವಾಮಿ ವಿವೇಕಾನಂದರು ಜನರಿಗೆ ಕೊಟ್ಟ ಸಂದೇಶವೇನು?
ಉ: ಸ್ವಾಮಿ ವಿವೇಕಾನಂದರು ಜನರಿಗೆ ಕೊಟ್ಟ ಸಂದೇಶ  ʼಏಳಿ! ಎದ್ದೇಳಿ! ಎಚ್ಚರಗೊಳ್ಳಿರಿ! ಗುರಿ ಮುಟ್ಟುವವರೆಗೆ ನಿಲ್ಲದಿರಿ. ಶಕ್ತಿಯೇ ಜೀವನ ದೌರ್ಬಲ್ಯವೇ ಮರಣʼ.

೫. ಸ್ವಾಮಿ ವಿವೇಕಾನಂದರು ಜನರ ಕಷ್ಟ ಹೇಗೆ ಅರಿತರು?
ಉ: ಸ್ವಾಮಿ ವಿವೇಕಾನಂದರು ಜನರ ಕಷ್ಟ ದೇಶ ಸುತ್ತಿ ಅರಿತರು.

ಆ) ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer in two-three sentences)

೧. ಬಾಲಕ ನರೇಂದ್ರನ ಮೇಲೆ ಹಾವು ಹರಿದ ಪ್ರಸಂಗ ಯಾವುದು?
ಉ: ಬಾಲಕ ನರೇಂದ್ರ ಕಣ್ಮುಚ್ಚಿ ಚಿಂತನೆ ಮಾಡುತ್ತಿದ್ದ ಮೈಮೇಲೆ ಪರಿವಿಲ್ಲದೆ ಅವನ ಮೇಲೆ ಒಂದು ಹಾವು ಹರಿದು ಹೋಯಿತು. ಇದು ಬಾಲಕ ನರೇಂದ್ರನ ಮೇಲೆ ಹಾವು ಹರಿದ ಪ್ರಸಂಗವಾಗಿದೆ.

೨. ತೋಟದ ಮಾಲಿಗೆ ಮಕ್ಕಳಿಂದ ಯಾವ ತೊಂದರೆ ಆಯಿತು?
ಉ: ನರೇಂದ್ರ ಮತ್ತು ಅವನ ಗೆಳೆಯರು ತೋಟದಲ್ಲಿದ್ದ ಮಾವಿನ ಮರವನ್ನು ಹತ್ತುತ್ತಿದ್ದರು. ಕೊಂಬೆಯಿಂದ ಕೊಂಬೆಗೆ ಹಾರುತ್ತಾ ಕೂಗುತ್ತಾ ಆಟವಾಡುತ್ತಿದ್ದರು. ಇದರಿಂದ ತೋಟದ ಮಾಲಿಗೆ ತೊಂದರೆಯಾಗುತ್ತಿತ್ತು.

೩. ತೋಟದ ಮಾಲಿ ಮಕ್ಕಳಿಗೆ ಏನೆಂದು ಹೇಳಿದನು?
ಉ: ತೋಟದ ಮಾಲಿ ಮಕ್ಕಳಿಗೆ ಆ ಮರದಲ್ಲಿ ಭೂತ ಇದೆ. ನೀವು ಈಗಲೇ ಜಾಗ ಬಿಟ್ಟು ಹೋಗಿ ಇಲ್ಲದಿದ್ದರೆ ನಿಮ್ಮನ್ನು ನುಂಗಿ ಬಿಡುತ್ತದೆ ಎಂದು ಹೇಳಿದನು.

೪. ಡಾಯರಸನ್ ನು ಏಕೆ ಬೆರಗಾದನು?
ಉ: ವಿವೇಕಾನಂದರು ಡಾಯರಸನ್ ಅವರ ಮನೆಯಲ್ಲಿ ಪುಸ್ತಕ ಓದುತ್ತಾ ಕುಳಿತಾಗ ಅವರೊಡನೆ ಮಾತನಾಡಲು ಆರಂಭಿಸಿದರು. ಪುಸ್ತಕದ ನೂರಾರು ಸಾಲುಗಳನ್ನು ಅದರಂತೆ ಉದಾಹರಿಸುತ್ತಿದ್ದರು. ಇದನ್ನು ಕಂಡ ಡಾಯರಸನ್ ಬೆರಗಾದರು.

೫. ಸ್ವಾಮಿ ವಿವೇಕಾನಂದರು ಡಾಯರಸನ್ ಗೆ ಏನೆಂದು ಉತ್ತರಿಸಿದರು?
ಉ: ಸ್ವಾಮಿ ವಿವೇಕಾನಂದರು ಡಾಯರಸನ್ ಗೆ ಇದೆಲ್ಲ ಓದುವಾಗಿನ ಏಕಾಗ್ರತೆಯಿಂದ ಸಾಧ್ಯ. ಆ ಸಮಯದಲ್ಲಿ ಉರಿಯುವ ಕೆಂಡವನ್ನು ನನ್ನ ಮೇಲೆ ಇಟ್ಟರೂ ಗೊತ್ತಾಗುವುದಿಲ್ಲ ಎಂದು ಉತ್ತರಿಸಿದರು.

೬. ಪ್ರಾಣಿಗಳ ಬಗ್ಗೆ ನರೇಂದ್ರನ ಅಭಿಪ್ರಾಯವೇನು?
ಉ: ಪ್ರಾಣಿಗಳ ತಂಟೆಗೆ ನಾವು ಹೋಗದಿದ್ದರೆ ಅವು ನಮಗೆ ಏನೂ ಮಾಡುವುದಿಲ್ಲ ಎಂಬುದು ನರೇಂದ್ರನ ಅಭಿಪ್ರಾಯವಾಗಿತ್ತು.

೭. ಭೂತದ ಬಗೆಗೆ ನರೇಂದ್ರನ ವಿಚಾರಗಳೇನು?
ಉ: ಭೂತದ ಬಗೆಗೆ ಇರುವ ಭಯದ ಮಾತುಗಳನ್ನು ನಂಬಬಾರದು ಎಂಬುದು ನರೇಂದ್ರನ ವಿಚಾರವಾಗಿತ್ತು.

೮. ಏಕಾಗ್ರತೆ ಎಂದರೇನು?
ಮನಸ್ಸನ್ನು ಒಂದೇ ವಿಷಯದ ಕಡೆಗೆ ಕೇಂದ್ರೀಕರಿಸುವದನ್ನು ಏಕಾಗ್ರತೆ ಎನ್ನುತ್ತಾರೆ.

ಇ. ಕೆಳಗಿನ ವಾಕ್ಯಗಳನ್ನು ಯಾರು ಯಾರಿಗೆ ಹೇಳಿದರು. (Who told whom)
೧. “ಪ್ರಾಣಿಗಳ ತಂಟೆಗೆ ಹೋಗದಿದ್ದರೆ ಅವು ನಮ್ಮನ್ನು ಏನೂ ಮಾಡುವುದಿಲ್ಲ”.
ಉ: ಈ ಮಾತನ್ನು ನರೇಂದ್ರನು ಹುಡುಗರಿಗೆ ಹೇಳಿದನು.
೨. “ಭಯದ ಮಾತುಗಳನ್ನು ನಂಬಬಾರದು”.
ಉ:ಈ ಮಾತನ್ನು ನರೇಂದ್ರನು ಗೆಳೆಯರಿಗೆ ಹೇಳಿದನು.
೩. “ಇದು ಹೇಗೆ ಸಾಧ್ಯ?”
ಉ: ಈ ಮಾತನ್ನು ಡಾಯರಸನ್ ಸ್ವಾಮಿ ವಿವೇಕಾನಂದರಿಗೆ ಕೇಳಿದರು.
೪.  “ಶಕ್ತಿಯೇ ಜೀವನ; ದೌರ್ಬಲ್ಯವೇ ಮರಣ”.
ಉ: ಇದು ಸ್ವಾಮಿ ವಿವೇಕಾನಂದರು ಜನರಿಗೆ ನೀಡಿದ ಸಂದೇಶ .

ಈ. ಸ್ವಂತ ವಾಕ್ಯಗಳಲ್ಲಿ ಬಳಸಿರಿ. (Make your own sentences)
೧. ಸಿದ್ಧನಾಗು: ಪರೀಕ್ಷೆ ಬರೆಯಲು ಸಿದ್ಧವಾಗುತ್ತಿದ್ದೇನೆ.
೨. ಏಕಾಗ್ರತೆ: ನಾವು ಪುಸ್ತಕವನ್ನು ಏಕಾಗ್ರತೆಯಿಂದ ಓದಬೇಕು.
೩. ಕಣ್ಮುಚ್ಚಿ: ನಾನು ಕಣ್ಮುಚ್ಚಿ ಧ್ಯಾನ ಮಾಡುತ್ತೇನೆ.
೪. ಕುತೂಹಲ: ನನಗೆ ಭೂತದ ಬಗ್ಗೆ ಕುತೂಹಲವಿದೆ.
೫. ಉಪಾಯ: ನನಗೆ ಒಂದು ಉಪಾಯ ಹೊಳೆಯಿತು.

ಉ. ಬಿಟ್ಟ ಸ್ಥಳಗಳನ್ನು ತುಂಬಿರಿ. (Fill in the blanks)
೧. ನರೇಂದ್ರನು ಧ್ಯಾನ ಮಾಡುತ್ತಿದ್ದಾಗ ಮೈಮೇಲೆ ಹಾವು ಹರಿದಾಡಿತು.
೨. ನರೇಂದ್ರನಿಗೆ ಭೂತದ ಬಗೆಗೆ ಕುತೂಹಲ ಇತ್ತು.
೩. ನರೇಂದ್ರನು ನಾನು ಓದುವಾಗ ಉರಿಯುವ ಕೆಂಡವನ್ನು ನನ್ನ ಮೇಲಿಟ್ಟರು ಗೊತ್ತಾಗುವದಿಲ್ಲ ಎಂದನು.
೪. ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ.

ಋ. ವಿರುದ್ಧಾರ್ಥಕ ಪದಗಳನ್ನು ಬರೆಯಿರಿ. (Write opposite words)

ಕಷ್ಟ X ಸುಖ               ಜನನ X ಮರಣ           ಕೀರ್ತಿ X ಅಪಕೀರ್ತಿ
ಆಸೆ X ನಿರಾಸೆ

ಎ. ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.  (Split the words)

ಹಾವೊಂದು = ಹಾವು + ಒಂದು
ನರೇಂದ್ರ = ನರ + ಇಂದ್ರ
ನೂರಾರು = ನೂರು + ಆರು
ಹೀಗೆಂದರು = ಹೀಗೆ + ಎಂದರು

Click here to download Dheera Balaka Narendra