Aikyagana poem is written by Shri G.S.Shivrudrappa. India is geographically diverse and there are different religions, castes, cultures, dresses and languages in India. Even so, we live in unity in India. Poet Sri G S Shivrudrappa wrote in his poem Eikyagana that we all i.e. Indians are one.
ಐಕ್ಯಗಾನ ಎಂಬ ಪದ್ಯವನ್ನು ಶ್ರೀ ಜಿ.ಎಸ್. ಶಿವರುದ್ರಪ್ಪ ಅವರು ಬರೆದಿದ್ದಾರೆ. ಭಾರತ ಭೌಗೋಳಿಕವಾಗಿ ವೈವಿಧ್ಯತೆಯಿಂದ ಕೂಡಿದೆ. ಹಾಗೆಯೇ ಭಾರತದಲ್ಲಿ ಬೇರೆ ಬೇರೆ ಧರ್ಮ, ಜಾತಿ, ಸಂಸ್ಕೃತಿ, ಉಡುಗೆ. ತೊಡುಗೆ, ಭಾಷೆಗಳು ಇವೆ. ಹೀಗಿದ್ದರೂ ಭಾರತದಲ್ಲಿ ನಾವು ಏಕತೆಯಿಂದ ಬದುಕುತ್ತಿದ್ದೇವೆ. ನಾವೆಲ್ಲರೂ ಅಂದರೆ ಭಾರತೀಯರು ಒಂದೇ ಎಂಬುದನ್ನು ಕವಿ
ಶ್ರೀ ಜಿ.ಎಸ್. ಶಿವರುದ್ರಪ್ಪ ಅವರು ತಮ್ಮ ಐಕ್ಯಗಾನ ಪದ್ಯದಲ್ಲಿ ಬರೆದಿದ್ದಾರೆ.
ಐಕ್ಯಗಾನ
ಅ. ಕೆಳಗಿನ ಪದಗಳಿಗೆ ಅರ್ಥ ಬರೆಯಿರಿ. (Write the word meaning)
ಅಗಣಿತ = ಅಸಂಖ್ಯ, ಲೆಕ್ಕವಿಲ್ಲದಷ್ಟು ಇರುಳು = ಕತ್ತಲೆ, ರಾತ್ರಿ
ಗ್ರಹಮಂಡಲ = ಗ್ರಹ ಮತ್ತು ಉಪಗ್ರಹಗಳ ಸಮೂಹ
ಚಿಕ್ಕೆ = ನಕ್ಷತ್ರ, ತಾರೆ ಬುಡ = ಬೇರು, ಮೂಲ, ತಳ
ಚಾಚು = ಹರಡು, ವಿಸ್ತರಿಸು ಆರಾಧನೆ = ಪೂಜೆ, ಧ್ಯಾನ
ಐಕ್ಯ = ಒಂದಾಗು, ಸೇರು ಗಾನ = ಹಾಡು
ನೆಳಲು = ನೆರಳು, ಛಾಯೆ ಸಾಸಿರ = ಸಾವಿರ, ಸಹಸ್ರ
ಆ. ಬಿಟ್ಟ ಸ್ಥಳವನ್ನು ತುಂಬಿರಿ. (Fill in the blanks)
೧. ಸಾವಿರ ನದಿಗಳು ಹೇಗೆ ಹರಿದರೂ ಕೂಡುವ ಕಡಲೊಂದೇ.
೨. ಅಗಣಿತ ಗ್ರಹ ಮಂಡಲಗಳ ಚಲನೆಗೆ ಆಕಾಶವು ಒಂದೇ.
೩. ನೂರು ಬಗೆಯ ಆರಾಧನೆ ಇದ್ದರೂ ದೇವರು ಎಲ್ಲರಿಗೂ ಒಂದೇ.
೪. ನಡೆನುಡಿ ಭೇದಗಳೆಷ್ಟೇ ಇದ್ದರೂ ಬದುಕುವ ಜನ ಒಂದೇ.
ಇ. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)
೧. ಐಕ್ಯಗಾನ ಪದ್ಯದಲ್ಲಿ ಮರದ ಕೊಂಬೆ ಹಾಗೂ ಬುಡ ಏನನ್ನು ಸಂಕೇತಿಸುತ್ತವೆ?
ಉ: ಐಕ್ಯಗಾನ ಪದ್ಯದಲ್ಲಿ ಮರದ ಕೊಂಬೆಗಳು ಚಾಚಿಕೊಂಡರೂ ಬುಡ ಒಂದೇ ಎಂಬುದು ಸಂಕೇತವಾಗಿದೆ.
೨. ಐಕ್ಯಗಾನ ಪದ್ಯದಲ್ಲಿ ಹಸುಗಳ ಬಣ್ಣ ಹಾಗೂ ಹಾಲಿನ ಬೆಳಕು ಏನನ್ನು
ಧ್ವನಿಸುತ್ತವೆ?
ಉ: ಐಕ್ಯಗಾನ ಪದ್ಯದಲ್ಲಿ ಹಸುಗಳ ಬಣ್ಣ ಹಲವು, ಆದರೆ ಹಾಲಿನ ಬಿಳುಪೊಂದೆ ಎಂಬುದು ಧ್ವನಿಸುತ್ತದೆ.
೩.ಹಾರಾಡುವ ಧ್ವಜ ಯಾವುದರ ಸಂಕೇತವಾಗಿದೆ?
ಉ: ಹಾರಾಡುವ ಧ್ವಜ ನೆರಳು ಮತ್ತು ಬೆಳಕುಗಳ ಸಂಕೇತವಾಗಿದೆ.
೪.ಐಕ್ಯಗಾನ ಕವನದ ಆಕರ ಗ್ರಂಥ ಯಾವುದು?
ಉ: ಐಕ್ಯಗಾನ ಕವನದ ಆಕರ ಗ್ರಂಥ “ಪ್ರೀತಿ ಇಲ್ಲದ ಮೇಲೆ”.
ಈ. ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in two – three sentences)
೧. ಅನೇಕತೆಯಲ್ಲಿ ಏಕತೆಯನ್ನು ಮರ ಮತ್ತು ನದಿಗಳು ಹೇಗೆ ತಿಳಿಸುತ್ತವೆ?
ಉ: ಮರದ ಕೊಂಬೆಗಳು ಚಾಚಿಕೊಂಡರೂ ಬುಡ ಒಂದೇ. ಹಾಗೆ ಸಾವಿರ ನದಿಗಳು ಹರಿದರೂ ಅವುಗಳು ಕೂಡುವ ಕಡಲು ಒಂದೇ. ಹೀಗೆ ಅನೇಕತೆಯಲ್ಲಿ ಏಕತೆಯನ್ನು ಮರ ಮತ್ತು ನದಿಗಳು ತಿಳಿಸುತ್ತವೆ.
೨. ಇರುಳಿಗೆ ಸಾಸಿರ ಚಿಕ್ಕೆಗಳಿದ್ದರೂ ಹಗಲಿಗೆ ರವಿ ಒಂದೇ ವ್ಯಕ್ತವಾಗಿರುವ ಕವಿಯ ಭಾವನೆಗಳೇನು?
ಉ: ಇರುಳಿನಲ್ಲಿ ಆಕಾಶದಲ್ಲಿ ಚಿಕ್ಕಗಳು ಸಾವಿರಾರು ಮಿನುಗುತ್ತವೆ. ಆದರೆ ಹಗಲಿಗೆ ರವಿ ಒಬ್ಬನೇ ಬೆಳಕು ನೀಡುತ್ತಾನೆ. ಹಾಗೆ ಹಲವು ಭೇದಗಳಿದ್ದರೂ ಭಾರತದಲ್ಲಿ ನಾವೆಲ್ಲರೂ ಒಂದೇ ಎಂಬುದು ಕವಿಯ ಭಾವನೆಗಳು.
೩. ಭಾರತೀಯರ ಧರ್ಮಚಾರಣೆ ಹಾಗೂ ವೇಷಭೂಷಣಗಳು ಭಿನ್ನವಾಗಿದ್ದರು ಭಾವ ಒಂದೇ ಎಂಬುದಕ್ಕೆ ಕವಿ ಯಾವ ನಿದರ್ಶನಗಳನ್ನು ನೀಡಿದ್ದಾರೆ?
ಉ: ಭಾರತದಲ್ಲಿ ನೂರು ಬಗೆಯ ಆರಾಧನೆಗಳಿದ್ದರೂ ದೇವರು ಒಂದೇ. ಹಾಗೆ ಜಾತಿ ಮತ ಧರ್ಮಗಳು ಬೇರೆ ಬೇರೆ ಆಗಿದ್ದರೂ ದೇವರು ಎಲ್ಲರಿಗೂ ಒಂದೇ. ವೇಷಭೂಷಣಗಳು ಬೇರೆ ಬೇರೆ ಆಗಿದ್ದರೂ ಎಲ್ಲರಲ್ಲೂ ಮೂಡುವ ಭಾವನೆಗಳು ಒಂದೇ ಎಂದು ಕವಿ ನಿದರ್ಶನಗಳನ್ನು ನೀಡಿದ್ದಾರೆ.
ಉ. ಈ ಕೆಳಗಿನ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in eight – ten sentences)
೧. ನಾವೆಲ್ಲರೂ ಒಂದೇ ಭಾರತ ನಮಗೊಂದೇ ಎನ್ನುವುದಕ್ಕೆ ಕವಿ ನೀಡುವ ನಿದರ್ಶನಗಳಾವುವು?
ಉ: ಕವಿ ಜಿ.ಎಸ್. ಶಿವರುದ್ರಪ್ಪನವರು ಹಲವು ಕೊಂಬೆಗಳು ಚಾಚಿಕೊಂಡರೂ ಮರಕ್ಕೆ ಬುಡವು ಒಂದೇ. ಸಾವಿರ ನದಿಗಳು ಹರಿದರೂ ಅವುಗಳು ಕೂಡುವ ಕಡಲು ಒಂದೇ. ಇರುಳಿಗೆ ಸಾವಿರಾರು ಚುಕ್ಕಿಗಳಿದ್ದರೂ ಹಗಲಿನ ರವಿ ಒಂದೇ. ಅಗಣಿತ ಗ್ರಹ ಮಂಡಲಗಳ ಚಲನೆಗೆ ಆಕಾಶವು ಒಂದೇ. ಭಾರತದಲ್ಲಿ ವಿವಿಧ ರೀತಿಯ ಆರಾಧನೆ ಇದ್ದರೂ ದೇವರು ಎಲ್ಲರಿಗೂ ಒಂದೇ. ಹಲವು ಬಣ್ಣಗಳ ಹಸುಗಳಿದ್ದರೂ ಕರೆಯುವ ಹಾಲಿನ ಬಿಳುಪು ಒಂದೇ. ನಡೆ ನುಡಿ ಭೇದಗಳೆಷ್ಟೇ ಇದ್ದರೂ ಭಾರತದಲ್ಲಿ ಬದುಕುವ ಜನ ಒಂದೇ. ನೆಳಲು ಬೆಳಕುಗಳ ರೆಕ್ಕೆಯ ಬೆಚ್ಚುತ ಹಾರಾಡುವ ಧ್ವಜ ಒಂದೇ ಎಂಬ ನಿದರ್ಶನಗಳನ್ನು ನೀಡಿದ್ದಾರೆ.
೨. ಐಕ್ಯಗಾನ ಪದ್ಯದಲ್ಲಿ ಕವಿ ನೀಡಿರುವ ಸಂದೇಶವೇನು?
ಉ: ಭಾರತದಲ್ಲಿ ಜನರ ಉಡುಪು, ಸಂಸ್ಕೃತಿ, ಭಾಷೆ, ಧರ್ಮ, ಕೆಲಸ ಬೇರೆ ಬೇರೆಯಾಗಿದ್ದರು ನಾವು ಭಾರತೀಯರು ಒಂದೇ ಎಂಬ ಭಾವನೆ ಇದೆ. ಭಾರತದಲ್ಲಿ ಜನಿಸಿದ ನಾವು ಜಾತಿ, ಧರ್ಮ, ಪ್ರದೇಶ, ಭಾಷೆ, ನೆಲಜಲಗಳಿಗಾಗಿ ಜಗಳವಾಡದೆ ಪ್ರೀತಿ ವಿಶ್ವಾಸದಿಂದ ನಾವೆಲ್ಲರೂ ಒಂದೇ ಎಂಬ ಮನೋಭಾವದಿಂದ ಇದ್ದೇವೆ. ನಾವು ಭಾರತದ ಮಕ್ಕಳು ಎನ್ನುವ ಏಕತಾಭಾವ ಬಲವಾದರೆ ದೇಶ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಹೀಗಾಗಿ ಕವಿಯು ಪ್ರಕೃತಿಯ ಹಲವು ನಿದರ್ಶನಗಳ ಮೂಲಕ ಭಾವೈಕ್ಯತೆಯ ಸಂದೇಶವನ್ನು ತಿಳಿಸಿದ್ದಾರೆ.
ಊ. ಸಂದರ್ಭದಲ್ಲಿ ವಿವರಿಸಿರಿ. (Write the context to the following)
೧. “ಹಲವು ಕೊಂಬೆಗಳ ಚಾಚಿಕೊಂಡರು ಮರಕ್ಕೆ ಬುಡ ಒಂದೇ”.
ಆಯ್ಕೆ: ಈ ಮಾತನ್ನು ಶ್ರೀ ಜಿ.ಎಸ್.ಶಿವರುದ್ರಪ್ಪರವರು ಬರೆದ “ಪ್ರೀತಿ ಇಲ್ಲದ ಮೇಲೆ” ಎಂಬ ಆಕರ ಗ್ರಂಥದ ಐಕ್ಯಗಾನ ಎಂಬ ಪದ್ಯದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಭಾರತದಲ್ಲಿ ಬೇರೆ ಬೇರೆ ಧರ್ಮ, ಜಾತಿ, ಪಂಗಡಗಳಿದ್ದರೂ ಏಕತೆಯ ಮನೋಭಾವವು ಒಂದೇ. ಅದು ಹೇಗೆಂದರೆ ಮರದ ಕೊಂಬೆಗಳು ಚಾಚಿಕೊಂಡರು ಅದರ ಬುಡ ಒಂದೇ ಎಂಬ ಸಂದರ್ಭದಲ್ಲಿ ಈ ಮಾತನ್ನು ಹೇಳಲಾಗಿದೆ.
೨. ಹಲವು ಬಣ್ಣಗಳ ಹಸುಗಳು ಕರೆಯುವ ಹಾಲಿನ ಬಿಳುಪೊಂದೇ.
ಆಯ್ಕೆ: ಈ ಮಾತನ್ನು ಶ್ರೀ ಜಿ.ಎಸ್.ಶಿವರುದ್ರಪ್ಪರವರು ಬರೆದ “ಪ್ರೀತಿ ಇಲ್ಲದ ಮೇಲೆ” ಎಂಬ ಆಕರ ಗ್ರಂಥದ ಐಕ್ಯಗಾನ ಎಂಬ ಪದ್ಯದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ನಡೆ ನುಡಿ ಭೇದಗಳೆಷ್ಟೇ ಇದ್ದರೂ ಭಾರತದಲ್ಲಿ ಬದುಕುವ ಜನ ಒಂದೇ. ಹಾಗೇ ಹಲವು ಬಣ್ಣಗಳ ಹಸುಗಳಿದ್ದರೂ ಕರೆಯುವ ಹಾಲಿನ ಬಿಳುಪು ಒಂದೇ ಎಂಬ ಸಂದರ್ಭದಲ್ಲಿ ಈ ಮಾತನ್ನು ಹೇಳಲಾಗಿದೆ.
೩. ನೆಳಲು ಬೆಳಕುಗಳ ರೆಕ್ಕೆಯ ಬಿಚ್ಚುತ ಹಾರಾಡುವ ಧ್ವಜ ಒಂದೇ.
ಆಯ್ಕೆ: ಈ ಮಾತನ್ನು ಶ್ರೀ ಜಿ.ಎಸ್.ಶಿವರುದ್ರಪ್ಪರವರು ಬರೆದ “ಪ್ರೀತಿ ಇಲ್ಲದ ಮೇಲೆ” ಎಂಬ ಆಕರ ಗ್ರಂಥದ ಐಕ್ಯಗಾನ ಎಂಬ ಪದ್ಯದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಭಾರತದಲ್ಲಿ ಜನಿಸಿದ ನಾವು ಜಾತಿ, ಧರ್ಮ, ಪ್ರದೇಶ, ಭಾಷೆ, ನೆಲಜಲಗಳಿಗಾಗಿ ಜಗಳವಾಡದೆ ಪ್ರೀತಿ ವಿಶ್ವಾಸದಿಂದ ನಾವೆಲ್ಲರೂ ಒಂದೇ ಎಂಬ ಮನೋಭಾವದಿಂದ ಇದ್ದೇವೆ. ಹಾಗೇ ನೆಳಲು ಬೆಳಕುಗಳ ರೆಕ್ಕೆಯ ಬಿಚ್ಚುತ ಹಾರಾಡುವ ಧ್ವಜ ಒಂದೇ ಎಂಬ ಸಂದರ್ಭದಲ್ಲಿ ಈ ಮಾತನ್ನು ಹೇಳಲಾಗಿದೆ.
ಋ. ಕೆಳಗಿನ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ. (Write the synonyms for the following)
ಮರ = ವೃಕ್ಷ , ತರು
ನಕ್ಷತ್ರ = ತಾರೆ, ಚಿಕ್ಕೆ
ರವಿ = ಸೂರ್ಯ, ಭಾನು
ಕಡಲೂ = ಸಮುದ್ರ, ಸಾಗರ
ಇರುಳು = ಕತ್ತಲೆ, ರಾತ್ರಿ
ಎ. ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ. (Write the opposite words)
ಹಗಲು X ಇರುಳು ಭೇದ X ಅಭೇದ
ನೆಳಲು X ಬೆಳಕು ಹಲವು X ಕೆಲವು
ಏ. ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ. (Make your own sentences)
ನಾವೆಲ್ಲರೂ: ನಾವೆಲ್ಲರೂ ಸೇರಿ ಮೈಸೂರಿಗೆ ಹೋಗುತ್ತಿದ್ದೇವೆ.
ಅಗಣಿತ : ಆಕಾಶದಲ್ಲಿ ನಕ್ಷತ್ರಗಳು ಅಗಣಿತವಾಗಿವೆ.
ನಡೆನುಡಿ: ನಮ್ಮ ನಡೆನುಡಿ ಸರಿಯಾಗಿರಬೇಕು.
ಆರಾಧನೆ: ಯಾವಾಗಲೂ ದೇವರ ಆರಾಧನೆ ಮಾಡಬೇಕು.
ಐ. ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ. (Split the following words)
ದೇಶದೊಳೆಲ್ಲಿದ್ದರೂ = ದೇಶದೊಳಲಿ + ಇದ್ದರೂ
ನಮಗೊಂದೇ = ನಮಗೆ + ಒಂದೇ
ಕಡಲೊಂದೆ = ಕಡಲು + ಒಂದೆ
ಚಿಕ್ಕೆಗಳಿದ್ದರು = ಚಿಕ್ಕೆಗಳು + ಇದ್ದರು
ಬಿಳುಪೊಂದೆ = ಬಿಳುಪು + ಒಂದೆ
ನಾವೆಲ್ಲರು = ನಾವು + ಎಲ್ಲರು