My school building is very spacious and beautiful. My school has a huge playground where I can play various outdoor games. I have many friends at my school where we study and play together. My school teachers are very kind and caring towards everyone.
ನನ್ನ ಶಾಲೆಯ ಕಟ್ಟಡವು ತುಂಬಾ ವಿಶಾಲವಾಗಿದೆ ಮತ್ತು ಸುಂದರವಾಗಿದೆ. ನನ್ನ ಶಾಲೆಯಲ್ಲಿ ನಾನು ವಿವಿಧ ಹೊರಾಂಗಣ ಆಟಗಳನ್ನು ಆಡಬಹುದಾದ ದೊಡ್ಡ ಆಟದ ಮೈದಾನವಿದೆ. ನನ್ನ ಶಾಲೆಯಲ್ಲಿ ನಾನು ಅನೇಕ ಸ್ನೇಹಿತರನ್ನು ಹೊಂದಿದ್ದೇವೆ, ಅಲ್ಲಿ ನಾವು ಒಟ್ಟಿಗೆ ಓದುತ್ತೇವೆ ಮತ್ತು ಒಟ್ಟಿಗೆ ಆಡುತ್ತೇವೆ. ನನ್ನ ಶಾಲೆಯ ಶಿಕ್ಷಕರು ಎಲ್ಲರ ಬಗ್ಗೆ ತುಂಬಾ ದಯೆ ಮತ್ತು ಕಾಳಜಿಯುಳ್ಳವರು.
ನಾವು ಮತ್ತು ನಮ್ಮ ಶಾಲೆ
ಅ. ಬಿಟ್ಟ ಸ್ಥಳ ತುಂಬಿರಿ (Fill in the blanks).
೧. ಬೇಬಿ ಬೇಬಿ ಮಕ್ಕಳ ಬರಹ ಇರಬೇಕಮ್ಮ ಹೇಗೆ.
೨. ಬೆಳಗುವ ದೀಪದ ಸಾಲಿನ ಹಾಗೆ.
೩. ಬಣ್ಣದ ಕಾಮನಬಿಲ್ಲಿನ ಹಾಗೆ.
೪. ಬೇಬಿ ಬೇಬಿ ಗ್ರಂಥಾಲಯವು ಇರಬೇಕಮ್ಮ ಹೇಗೆ.
ಆ. ಹೊಂದಿಸಿ ಬರೆಯಿರಿ (Match the following)
೧. ಅರಳಿದ ಅ)ಆಂಟಿ ಹೂವು
೨. ಕಾಮನ ಆ)ಅಚ್ಚು ಬಿಲ್ಲು
೩. ಬೆಳಗುವ ಇ)ಬಿಲ್ಲು ದೀಪ
೪. ಸಕ್ಕರೆ ಈ)ದೀಪ ಅಚ್ಚು
೫. ಅಂಕಲ್ ಉ)ಹೂವು ಆಂಟಿ
ಇ) ವಾಕ್ಯವನ್ನು ಸರಿಪಡಿಸಿ ಬರೆಯಿರಿ. (Correct the sentence)
೧. ಉರಿಯುವ ದೀಪದ ಸಾಲಿನ ಹಾಗೆ.
ಉ: ಬೆಳಗುವ ದೀಪದ ಸಾಲಿನ ಹಾಗೆ.
೨. ಬಣ್ಣದ ಚಾಟರ ಬಿಲ್ಲಿನ ಹಾಗೆ.
ಉ: ಬಣ್ಣದ ಕಾಮನಬಿಲ್ಲಿನ ಹಾಗೆ.
೩. ಸಕ್ಕರೆ ಗೊಂಬೆಯ ಜೋಡಣೆ ಹಾಗೆ.
ಉ: ಸಕ್ಕರೆ ಅಚ್ಚಿನ ಜೋಡಣೆ ಹಾಗೆ.
೪. ಸಿಟ್ಟಿನ ಅಂಕಲ್ ಆಂಟಿ ಹಾಗೆ.
ಉ: ಪ್ರೀತಿಯ ಅಂಕಲ್ ಆಂಟಿ ಹಾಗೆ.
ಈ) ಒಂದು ವಾಕ್ಯದಲ್ಲಿ ಉತ್ತರಿಸಿರಿ (Answer in one sentence)
೧. ಓದುವ ಶಾಲೆ ಹೇಗಿರಬೇಕು?
ಉ: ಓದುವ ಶಾಲೆ ಅರಳಿದ ತೋಟದ ಹಾಗೆ ಇರಬೇಕು.
೨. ಯಾವುದು ಬೆಳಗುವ ದೀಪದ ಸಾಲಿನ ಹಾಗಿರಬೇಕು?
ಉ: ಮಕ್ಕಳ ಬರಹ ಬೆಳಗುವ ದೀಪದ ಸಾಲಿನ ಹಾಗಿರಬೇಕು.
೩. ಶಾಲೆಯ ಚೀಲ ಹೇಗಿರಬೇಕು?
ಉ: ಶಾಲೆಯ ಚೀಲ ಬಣ್ಣದ ಕಾಮನಬಿಲ್ಲಿನ ಹಾಗಿರಬೇಕು.
೪. ಯಾವುದು ಸಕ್ಕರೆ ಅಚ್ಚಿನ ಜೋಡಣೆ ಹಾಗೆ ಇರಬೇಕು?
ಉ: ಗ್ರಂಥಾಲಯವು ಸಕ್ಕರೆ ಅಚ್ಚಿನ ಜೋಡಣೆ ಹಾಗೆ ಇರಬೇಕು.
೫. ಪ್ರೀತಿಯ ಟೀಚರ್ ಹೇಗಿರಬೇಕು?
ಉ: ಪ್ರೀತಿಯ ಟೀಚರ್ ಮುದ್ದಿನ ಅಂಕಲ್, ಆಂಟಿ ಹಾಗಿರಬೇಕು.
ಉ) ಸಮಾನಾರ್ಥಕ ಪದಗಳನ್ನು ಬರೆಯಿರಿ. (Write the Synonyms)
ದೀಪ – ಜ್ಯೋತಿ ಚೀಲ – ಜೋಳಿಗೆ ಹೂವು – ಪುಷ್ಪ
ಊ) ಈ ಪದಗಳನ್ನು ಸ್ವಂತ ವಾಕ್ಯದಲ್ಲಿ ಉಪಯೋಗಿಸಿ. (Make your own sentence)
ತೋಟ : ನಮ್ಮ ಶಾಲೆಯಲ್ಲಿ ತೋಟ ಇದೆ.
ಬರಹ: ನನ್ನ ಬರಹ ಚೆನ್ನಾಗಿದೆ.
ಕಾಮನಬಿಲ್ಲು: ಕಾಮನಬಿಲ್ಲು ನೋಡಲು ಚಂದ.
ಟೀಚರ್:ನನ್ನ ಟೀಚರ್ ಒಳ್ಳೆಯವರು.
ಋ) ಬಿಡಿಸಿ ಬರೆಯಿರಿ. (Split the word)
ನಮ್ಮೂರು = ನಮ್ಮ + ಊರು
ಮಳೆಗಾಲ = ಮಳೆ + ಕಾಲ
ಇರಬೇಕಮ್ಮ = ಇರಬೇಕು + ಅಮ್ಮ
ಗ್ರಂಥಾಲಯ =ಗ್ರಂಥ + ಆಲಯ