Medumaatu tells the story of a merchant, speaking rudely and loudly, asking a young man to help lift his vehicle. The young man declines, observing the merchant’s wrong attitude. A teacher intervenes, highlighting the advantages of being gentle in speech. The merchant comprehends and adopts a softer tone, calming himself down. Medumaatu is a moral story to understand and follow by all of us.

ಮೆದುಮಾತು ವ್ಯಾಪಾರಿಯೊಬ್ಬನ ಕಥೆಯನ್ನು ಹೇಳುತ್ತದೆ. ಕಟುವಾಗಿ ಮತ್ತು ಜೋರಾಗಿ ಮಾತನಾಡುತ್ತಾ, ತನ್ನ ಸಿಲುಕಿಕೊಂಡ ವಾಹನದ ಚಕ್ರವನ್ನು ಎತ್ತಲು ಸಹಾಯ ಮಾಡಲು ಯುವಕನನ್ನು ಕೇಳುತ್ತಾನೆ. ವ್ಯಾಪಾರಿಯ ತಪ್ಪು ವರ್ತನೆಯನ್ನು ಗಮನಿಸಿ ಯುವಕ ನಿರಾಕರಿಸುತ್ತಾನೆ. ಒಬ್ಬ ಶಿಕ್ಷಕನು ಮಧ್ಯಪ್ರವೇಶಿಸುತ್ತಾನೆ. ಮಾತಿನಲ್ಲಿ ಸೌಮ್ಯವಾಗಿರುವುದರ ಪ್ರಯೋಜನಗಳನ್ನು ಎತ್ತಿ ಹೇಳುತ್ತಾನೆ. ವ್ಯಾಪಾರಿಯು ಮೃದುವಾದ ಮಾತನ್ನು ಗ್ರಹಿಸುತ್ತಾನೆ ಮತ್ತು ಅಳವಡಿಸಿಕೊಳ್ಳುತ್ತಾನೆ. ತನ್ನನ್ನು ತಾನು ಶಾಂತಗೊಳಿಸಿಕೊಳ್ಳುತ್ತಾನೆ.
ಮೆದುಮಾತು ನಾವೆಲ್ಲರೂ ಅರ್ಥಮಾಡಿಕೊಳ್ಳಲು ಮತ್ತು ಅನುಸರಿಸಲು ಒಂದು ನೀತಿ ಕಥೆಯಾಗಿದೆ.


ಅ. ಬಿಟ್ಟಿರುವ ಸ್ಥಳಗಳನ್ನು ತುಂಬಿರಿ. (Fill in the blanks)

೧. ಮಳೆ ಬಂದು ………………….ಬಲು ಕೆಟ್ಟು ಹೋಗಿತ್ತು.
೨. ಮಾಸ್ತರರಿಗೆ …………………. ಹೇಳಿದರು.
೩. ಇವರಿಗೆ ಸ್ವಲ್ಪ …………… ಮಾಡೋಣ.
೪. ದೂರದಲ್ಲಿ ಒಬ್ಬ ……………… ಹೋಗುತ್ತಿದ್ದ.

ಆ. ಈ ಮಾತನ್ನು ಯಾರು ಹೇಳಿದರು ಯಾರಿಗೆ ಹೇಳಿದರು? (Who told whom)
೧. “ಅವನನ್ನು ಪ್ರೀತಿಯಿಂದ ಮಾತನಾಡಿಸಿರಿ”
     ಯಾರು ಹೇಳಿದರು?
     ಯಾರಿಗೆ ಹೇಳಿದರು?
೨. ನೀನೇ ಎತ್ತಿಕೋ, ನಾನೇಕೆ ಎತ್ತಲಿ ?
     ಯಾರು ಹೇಳಿದರು?
     ಯಾರಿಗೆ ಹೇಳಿದರು?

೩. ಚಕ್ರ ಹೂತು ಹೋಗಿರೋದು ಕಾಣಿಸುವುದಿಲ್ಲವೇ?
     ಯಾರು ಹೇಳಿದರು? 
     ಯಾರಿಗೆ ಹೇಳಿದರು?

ಇ. ಕೂಡಿಸಿ ಬರೆಯಿರಿ. (Join the letters)
೧. ಚ್‌ + ಆ =
೨. ಟ್‌ + ಆ =
೩. ತ್‌ + ಆ =
೪. ಪ್‌ + ಆ =

ಈ. ಮಾದರಿಯಂತೆ ಬರೆಯಿರಿ. (Refer the model and write)

ಮಾದರಿ: ಮಾಡ್ತೇನೆ ಮಾಡುತ್ತೇನೆ

೧. ಕರೆಯೋದು – ……………………..
೨. ನೋಡ್ತೀಯಾ – ………………………
೩. ಹೋಗ್ತೇನೆ – ………………………
೪. ಬರ್ತೇನೆ – …………………………

ಉ. ಒಂದು ವಾಕ್ಯದಲ್ಲಿ ಉತ್ತರಿಸಿರಿ. (Write answer in one sentence)

೧. ಮಾಸ್ತರರ ಮಾತಿನಲ್ಲಿದ್ದ ಆತ್ಮೀಯತೆ ಏನನ್ನು ಗೆದ್ದಿತು?
೨. ಯುವಕನು ಸಿಟ್ಟಿನಿಂದ ವ್ಯಾಪಾರಿಗೆ ಏನೆಂದು ಹೇಳಿದನು?
೩. ವ್ಯಾಪಾರಿಯು ಯುವಕನನ್ನು ಏನೆಂದು ಕೂಗಿದನು?
೪. ವ್ಯಾಪಾರಿಯು ಎಲ್ಲಿಗೆ ಹೊರಟಿದ್ದನು?

Click to download medumatu worksheet