Mangananyaya story called “Monkey Justice” about two cats fighting over butter. A monkey sees the fight and tries to “help.” It brings a pretend scale and keeps adding bits of butter to each side, then gobbles it up in the name of making them equal. In the end, the monkey eats all the butter, leaving the tricked cats hungry and realizing they should have shared.

Mangananyaya ಮಂಗನನ್ಯಾಯ ಕಥೆ ಎರಡು ಬೆಕ್ಕುಗಳು ಬೆಣ್ಣೆಗೆ ಜಗಳವಾಡುವ ಕಥೆ. ಒಂದು ಕೋತಿ ಬೆಕ್ಕುಗಳ ಜಗಳವನ್ನು ನೋಡುತ್ತದೆ ಮತ್ತು "ಸಹಾಯ" ಮಾಡಲು ಪ್ರಯತ್ನಿಸುತ್ತದೆ. ಇದು ತೂಕದ ಯಂತ್ರ ತರುತ್ತದೆ ಮತ್ತು ಪ್ರತಿ ಬದಿಯಲ್ಲಿ ಸ್ವಲ್ಪ ಬೆಣ್ಣೆಯನ್ನು ಸೇರಿಸುತ್ತದೆ. ನಂತರ ಅವುಗಳನ್ನು ಸಮಾನವಾಗಿ ಮಾಡುವ ಹೆಸರಿನಲ್ಲಿ ಅದನ್ನು ತಿನ್ನುತ್ತದೆ. ಕೊನೆಯಲ್ಲಿ, ಕೋತಿ ಎಲ್ಲಾ ಬೆಣ್ಣೆಯನ್ನು ತಿನ್ನುತ್ತದೆ, ಮೋಸಗೊಳಿಸಿ ಬೆಕ್ಕುಗಳನ್ನು ಹಸಿವಿನಿಂದ ಬಿಡುತ್ತದೆ. ಬೆಕ್ಕುಗಳು ಹಂಚಿಕೊಳ್ಳಬೇಕೆಂದು ಅರಿತುಕೊಳ್ಳುತ್ತವೆ.

ಅ. ಪ್ರಾಸ ಪದಗಳನ್ನು ಬರೆಯಿರಿ. Write the Ryming words.

೧. ಬಂದಿತು – ಎಂದಿತು
೨. ನೋಡಿತು –
ನುಂಗಿತು
೩. ತೇಗಿತು –
ಹಾರಿತು

ಆ . ಪದಗಳ ಅರ್ಥ ಬರೆಯಿರಿ. Write word meaning.

ಗಡಿಗೆ = ಮಣ್ಣಿನ ಪಾತ್ರೆ, ಪರಡಿ = ತಕ್ಕಡಿ, ಕುಟಿಲ = ವಂಚನೆ, ಜಗಳ = ಕಲಹ

ಇ. ಪದ್ಯ ಪೂರ್ತಿ ಮಾಡಿರಿ. Complete the poem.

ಜೋಡಿಬೆಕ್ಕು ಕೂಡಿಕೊಂಡು

ಬೆಣ್ಣೆ ಗಡಿಗೆ ತಂದವು

ನನಗೆ ಹೆಚ್ಚು ತನಗೆ ಹೆಚ್ಚು

ಎನುತ ಜಗಳ ಕಾದವು

ಈ. ಬಿಟ್ಟಸ್ಥಳ ತುಂಬಿರಿ. (Fill in the blanks)

೧. ಹೊಂಚು ಹಾಕಿ ಕುಟಿಲ ಮಂಗ  ನ್ಯಾಯ ಹೇಳ ಬಂದಿತು

೨. ಪರಡಿ ಚೆಲ್ಲಿ ಮಂಗ ಮೇಲೆ ಹಾರಿತು.

೩. ನಮ್ಮ ಜಗಳದಿಂದ ಬೆಣ್ಣೆ ಪರರ ಸೊತ್ತಾಯಿತು.

ಉ. ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)

೧. ಜೋಡಿಬೆಕ್ಕುಗಳು ಏನನ್ನು ತಂದವು?
ಉ: ಜೋಡಿಬೆಕ್ಕುಗಳು ಬೆಣ್ಣೆ ತಂದವು.

೨. ಜಗಳದಿಂದ ಬೆಣ್ಣೆ ಯಾರ ಸೊತ್ತಾಯಿತು?
ಉ: ಜಗಳದಿಂದ ಬೆಣ್ಣೆ ಮಂಗನ ಸೊತ್ತಾಯಿತು.

೩. ಜೋಡಿಬೆಕ್ಕು ಯಾವುದು ಸಲ್ಲ ಎನ್ನುತ್ತ ನಡೆದವು?
ಉ: ಜೋಡಿಬೆಕ್ಕು ಜಗಳ ಸಲ್ಲ ಎನ್ನುತ್ತ ನಡೆದವು.

Click here to download Mangananyaya Exercise