The poem “Kokkareya Prarthane” is written by H. Dundiraj. It’s about a bird called a “kokkare,” which can be a stork or a pelican. The poem tells us we can visit places like Ranganathittu, Bellur, and Mandagadde to hear the beautiful chirping of birds.
The poet then describes a specific kokkare. This bird is beautiful, even without makeup (cream and powder). The poem asks what the kokkare is doing by the water and suggests it might be praying to God: “Oh God, please grant me a good fish to eat!”
“ಕೊಕ್ಕರೆಯ ಪ್ರಾರ್ಥನೆ” ಕವನವನ್ನು ಎಚ್.ಡುಂಡಿರಾಜ್ ಬರೆದಿದ್ದಾರೆ. ಇದು “ಕೊಕ್ಕರೆ” ಎಂಬ ಹಕ್ಕಿಯ ಬಗ್ಗೆ. ರಂಗನತಿಟ್ಟು, ಬೆಳ್ಳೂರು, ಮಂಡಗದ್ದೆ ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ಪಕ್ಷಿಗಳ ಸುಂದರ ಚಿಲಿಪಿಲಿಯನ್ನು ಕೇಳಬಹುದು ಎಂದು ಕವಿತೆ ಹೇಳುತ್ತದೆ.
ನಂತರ ಕವಿಯು ಕೊಕ್ಕರೆಯನ್ನು ವಿವರಿಸುತ್ತಾರೆ. ಕ್ರೀಮ್ ಮತ್ತು ಪೌಡರ್ ಇಲ್ಲದೆಯೂ ಈ ಹಕ್ಕಿ ಸುಂದರವಾಗಿದೆ. ಕೊಕ್ಕರೆ ನೀರಿನ ಹತ್ತಿರ ಏನು ಮಾಡುತ್ತಿದೆ ಎಂದು ಕವಿ ಕೇಳುತ್ತಾರೆ ಮತ್ತು ಅದು ದೇವರನ್ನು “ಓ ದೇವರೇ, ದಯವಿಟ್ಟು ನನಗೆ ತಿನ್ನಲು ಒಳ್ಳೆಯ ಮೀನನ್ನು ಕೊಡು!” ಎಂದು ಪ್ರಾರ್ಥಿಸುತ್ತದೆ.
ಕೊಕ್ಕರೆಯ ಪ್ರಾರ್ಥನೆ
ಅ) ಪದ್ಯ ಪೂರ್ಣಗೊಳಿಸಿರಿ. (Complete the poem)
ಯಾವುದೋ ದೇಶದ ಕೊಕ್ಕರೆ
ಹಾರಿ ಬರುವುದು ಇಲ್ಲಿಗೆ
ಕ್ರೀಮು ಪೌಡರ್ ಹಚ್ಚೋದಿಲ್ಲ
ಆದರೂ ಬೆಳ್ಳಗೆ ಬೆಳ್ಳಗೆ
ಆ) ಹೊಂದಿಸಿ ಬರೆಯಿರಿ. (Match the following)
ಅ) ಪಾರಿವಾಳ ೧)ಕ್ಕೊಕ್ಕೊಕ್ಕೊ ೪)ಗುಟರ್ ಗುಟರ್
ಆ) ಕೋಗಿಲೆ ೨)ಚೀ೦ವ್.. ಚೀ೦ವ್.. ೫)ಕುಹೂ … ಕುಹೂ …
ಇ) ಗುಬ್ಬಿ ೩)ಕಾ… ಕಾ… ೨)ಚೀ೦ವ್.. ಚೀ೦ವ್..
ಈ) ಕಾಗೆ ೪)ಗುಟರ್ ಗುಟರ್ ೩)ಕಾ… ಕಾ…
ಉ) ಕೋಳಿ ೫)ಕುಹೂ … ಕುಹೂ … ೧)ಕ್ಕೊಕ್ಕೊಕ್ಕೊ
ಇ) ಕೊಟ್ಟಿರುವ ವಾಕ್ಯಗಳಲ್ಲಿ ಗೆರೆ ಎಳೆದ ಅಕ್ಷರಗಳನ್ನು ಸರಿಪಡಿಸಿ ಬರೆಯಿರಿ. (Correct the underlined words)
೧. ಅಕ್ಕಿಗಳ ಚಿಲಿಪಿಲಿ ಕೇಲೋಣ.
ಉ. ಹಕ್ಕಿಗಳ ಚಿಲಿಪಿಲಿ ಕೇಳೋಣ.
೨. ನೀರಿನ ಅತ್ತಿರ ನಿಂತು ಹೇನು ಮಾಡುತ್ತಿರುವೆ?
ಉ. ನೀರಿನ ಹತ್ತಿರ ನಿಂತು ಏನು ಮಾಡುತ್ತಿರುವೆ?
೩. ಯಾವುದೋ ದೇಸದ ಕೊಕ್ಕರೆ
ಉ. ಯಾವುದೋ ದೇಶದ ಕೊಕ್ಕರೆ.
೪. ಕರುಣಿಸು ಒಲೆಯ ಮೀನು.
ಉ. ಕರುಣಿಸು ಒಳ್ಳೆಯ ಮೀನು.
ಈ) ಬಿಟ್ಟಸ್ಥಳ ತುಂಬಿರಿ (Fill in the blanks)
೧. ಇಂಪಾಗಿ ಹಾಡುವ ಪಕ್ಷಿ ಕೋಗಿಲೆ
೨. ರಾತ್ರಿಯಲ್ಲಿ ಕೂಗುವ ಪಕ್ಷಿ ಗೂಬೆ
೩. ನ್ರತ್ಯ ಮಾಡುವ ಹಕ್ಕಿ ನವಿಲು
೪. ಸುಂದರವಾಗಿ ಗೂಡು ಹೆಣೆಯುವ ಪಕ್ಷಿ ಗೀಜಗ
ಉ) ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following)
೧. ಪಕ್ಷಿಗಳು ಹೇಗೆ ಶಬ್ದ ಮಾಡುತ್ತವೆ?
ಉ. ಪಕ್ಷಿಗಳು ಚಿಲಿಪಿಲಿ ಎಂದು ಶಬ್ದ ಮಾಡುತ್ತವೆ.
೨. ಕೊಕ್ಕರೆ ದೇವರನ್ನು ಏನೆಂದು ಬೇಡುತ್ತದೆ?
ಉ. ಕೊಕ್ಕರೆ ದೇವರನ್ನು ಕರುಣಿಸು ಒಳ್ಳೆಯ ಮೀನು ಎಂದು ಬೇಡುತ್ತದೆ.
೩. ಪಕ್ಷಿಗಳನ್ನು ನೋಡಲು ಎಲ್ಲಿ ಹೋಗೋಣ ಎಂದು ಕವಿ ಹೇಳುತ್ತಾರೆ?
ಉ. ಪಕ್ಷಿಗಳನ್ನು ನೋಡಲು ರಂಗನತಿಟ್ಟು, ಬೆಳ್ಳೂರು, ಮಂಡಗದ್ದೆಗೆ ಹೋಗೋಣ ಎಂದು ಕವಿ ಹೇಳುತ್ತಾರೆ.