” Uuta ballavanige rogavilla, mathu ballavanige jagalavilla” means the one who knows to eat will never have any diseases. And the one who knows to speak will never have any fights. Proverb is equivalent to Veda. It is the Upanishad of rural people.

Health-conscious people should also be conscious about food. This proverb means health is a fortune. Eating the right food at the right time, in the right amount can lead to a healthy and strong body. The food we eat should be healthy and clean. Similarly, speech should be moderate. There will be no quarrels, resentments, or anger when you speak with quickness, intelligence, and timely, conversational behavior. so basically, “Uuta ballavanige rogavilla, mathu ballavanige jagalavilla” means eat well and speak nicely do that there is no fight.

“Uta” means meal, “balava” means one who knows. “roga” means disease,” illa” means no. “Mathu” means speaking or words, “jagaLa” means fight and “illa” means no.

ಗಾದೆ ವೇದಕ್ಕೆ ಸಮಾನ. ಇದು ಗ್ರಾಮೀಣ ಜನರ ಉಪನಿಷತ್ತು. ಇವು ಸಾಮಾನ್ಯವಾಗಿ ಲೋಕೋಕ್ತಿ, ಸುಭಾಷಿತ,ಕವಿ ಸೂಕ್ತಿಗಳಂತೆ ಅಡಕವಾದ ಮಾತುಗಳಲ್ಲಿ ಇರುತ್ತವೆ.

ಆರೋಗ್ಯದ ಬಗೆಗೆ ಎಚ್ಚರ ವಹಿಸುವವರು, ಆಹಾರದ ಬಗೆಗೂ ಜಾಗೃತರಾಗಿರಬೇಕು. ಈ ಗಾದೆಯ ಅರ್ಥ ಆರೋಗ್ಯವೇ ಭಾಗ್ಯ. ಸರಿಯಾದ ಸಮಯಕ್ಕೆ, ಸರಿಯಾದ ಪ್ರಮಾಣದಲ್ಲಿ ಸರಿಯಾದ ಆಹಾರ ಸೇವಿಸುವುದರಿಂದ ಆರೋಗ್ಯ ಮತ್ತು ಸದೃಢ ದೇಹ ಪಡೆಯಬಹುದು. ನಾವು ಸೇವಿಸುವ ಆಹಾರ ಹಿತ ಮಿತ ಮತ್ತು ಶುದ್ಧವಾಗಿರಬೇಕು. ಅದೇ ರೀತಿ ಮಾತು ಮಿತವಾಗಿರಬೇಕು. ಮಾತಿನಲ್ಲಿ ಚುರುಕುತನ,  ಜಾಣತನ, ಸಮಯೋಚಿತ , ಸಂದಭೋ೯ಚಿತವಾದ ನಡತೆಯೊಂದಿಗೆ ಮಾತು ಆಡಿದಾಗ ಜಗಳಕ್ಕಾಗಲಿ, ಮನಸ್ತಾಪಕ್ಕಾಗಲಿ, ಆಸ್ಪದ ಇರುವುದಿಲ್ಲ.

ಸುಮನಾ ಶ್ರೀರಾಮ್