“Gidavaagi baggaddu maravagi baggite” is a kannada famous proverb. Proverb is equivalent to Veda. It is the Upanishad of rural people.
Gidavaagi baggaddu maravagi baggite means feed the plant properly when it is young. It grows into a good tree only if nurtured. Similarly, children should be taught the right and wrongs of life at the right age. When children are given more freedom, its importance should be conveyed. Avoid bad habits. We should cultivate respect for our culture, manners and policies. The message of this proverb is that children should be guided at an early age. So at least once in a lifetime, gidhavaagi bagadu maravaagi baggithe? proverb is used in every kannadigas house.

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ?

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ? ಎಂಬುದು ಕನ್ನಡ ಗಾದೆ. ಗಾದೆ ವೇದಕ್ಕೆ ಸಮಾನ. ಇದು ಗ್ರಾಮೀಣ ಜನರ ಉಪನಿಷತ್ತು. ಇವು ಸಾಮಾನ್ಯವಾಗಿ ಲೋ ಕೋಕ್ತಿ, ಸುಭಾಷಿತ ,ಕವಿ ಸೂಕ್ತಿಗಳಂತೆ ಅಡಕವಾದ ಮಾತುಗಳಲ್ಲಿ ಇರುತ್ತವೆ. ಗಾದೆಗಳು ಅರ್ಥದಲ್ಲಿ ತ್ರಿವಿಕ್ರಮನಿದ್ದಂತೆ. 
ಗಿಡ ಸಸಿಯಾಗಿರುವಾಗ ಅದನ್ನು ಸರಿಯಾಗಿ ಪೋಷಿಸಿ . ಬಗ್ಗಿಸಿ ಬೆಳೆಸಿದರೆ ಮಾತ್ರ ಅದು ಒಂದು ಉತ್ತಮ ಮರವಾಗಿ ಬೆಳೆಯುತ್ತದೆ. ಅದೇ ರೀತಿ ಮಕ್ಕಳಿಗೆ ಜೀವನದ ಸರಿತಪ್ಪುಗಳನ್ನು ಸರಿಯಾದ ವಯಸ್ಸಿನಲ್ಲಿ ಹೇಳಿಕೊಡಬೇಕು ಮಕ್ಕಳಿಗೆ ಹೆಚ್ಚಿನ ಸ್ವಾತಂತ್ರ್ಯ ಕೊಟ್ಟಾಗ, ಅದರ ಮಹತ್ವವನ್ನು ತಿಳಿಸಬೇಕು. ಕೆಟ್ಟ ಚಟಗಳಿಗೆ ಒಳಗಾಗದಂತೆ ನೋಡಿಕೊಳ್ಳಬೇಕು. ನಮ್ಮ ಸಂಸ್ಕೃತಿ, ರೀತಿ ನೀತಿಗಳ ಮೇಲೆ ಅಭಿಮಾನ ಬೆಳಸಬೇಕು. ಎಳೆ ವಯಸ್ಸಿನಲ್ಲಿಯೇ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕೆಂಬುದೇ ಈ ಗಾದೆಯ ಸಂದೇಶ. ಜೀವಮಾನದಲ್ಲಿ ಒಮ್ಮೆಯಾದರೂ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ? ಎಂಬ ಗಾದೆ ಪ್ರತಿ ಕನ್ನಡಿಗನ ಮನೆಯಲ್ಲೂ ಬಳಕೆಯಾಗುತ್ತದೆ.

ಸುಮನಾ ಶ್ರೀರಾಮ್