Edhegundhinda deeraru is a chapter about Malathi Holla and Julio Iglesis. Edhegundhinda deeraru explains how not to lose hope in life.

Julio Iglesias is a legendary Spanish singer and songwriter, celebrated as one of the top-selling Latin music artists in history. Over his five-decade career, he has sold more than 100 million records across 14 languages. Famous for his romantic ballads, Iglesias continues to be an iconic figure in the global music scene.

Malathi Holla is an inspiring Indian para-athlete renowned for her exceptional accomplishments in wheelchair racing. Stricken by polio at a young age, she triumphed over adversity to earn more than 400 medals in both national and international events. Malathi is also a motivational speaker and a strong advocate for disability rights.

ಎದೆಗುಂದಿದ ಧೀರರು, ಮಾಲತಿ ಹೊಳ್ಳ ಮತ್ತು ಜೂಲಿಯೊ ಇಗ್ಲೇಶಿಯಸ್ ಕುರಿತ ಒಂದು ಅಧ್ಯಾಯ. ಜೀವನದಲ್ಲಿ ಭರವಸೆ ಕಳೆದುಕೊಳ್ಳಬಾರದು ಎಂಬುದನ್ನು ಎದೆಗುಂದಿದ ಧೀರರು ವಿವರಿಸಿದ್ದಾರೆ.

ಜೂಲಿಯೊ ಇಗ್ಲೇಶಿಯಸ್ ಒಬ್ಬ ಸ್ಪ್ಯಾನಿಷ್ ಗಾಯಕ ಮತ್ತು ಗೀತರಚನೆಕಾರ. ಇತಿಹಾಸದಲ್ಲಿ ಹೆಚ್ಚು ಮಾರಾಟವಾದ ಲ್ಯಾಟಿನ್ ಸಂಗೀತ ಕಲಾವಿದರಲ್ಲಿ ಒಬ್ಬರು. ಅವರ ಐದು ದಶಕಗಳ ವೃತ್ತಿಜೀವನದಲ್ಲಿ, ಅವರು 14 ಭಾಷೆಗಳಲ್ಲಿ 100 ಮಿಲಿಯನ್‌ಗಿಂತಲೂ ಹೆಚ್ಚು ದಾಖಲೆಗಳನ್ನು ಮಾರಾಟ ಮಾಡಿದ್ದಾರೆ. ಅವರ ಪ್ರಣಯ ಲಾವಣಿಗಳಿಗೆ ಹೆಸರುವಾಸಿಯಾದ ಇಗ್ಲೇಶಿಯಸ್ ಜಾಗತಿಕ ಸಂಗೀತ ರಂಗದಲ್ಲಿ ಅಪ್ರತಿಮ ವ್ಯಕ್ತಿಯಾಗಿದ್ದರು.

ಮಾಲತಿ ಹೊಳ್ಳ ಅವರು ಸ್ಪೂರ್ತಿದಾಯಕ ಭಾರತೀಯ ಪ್ಯಾರಾ-ಅಥ್ಲೀಟ್ ಆಗಿದ್ದು, ಗಾಲಿಕುರ್ಚಿ ರೇಸಿಂಗ್‌ನಲ್ಲಿ ಅಸಾಧಾರಣ ಸಾಧನೆಗಳಿಗಾಗಿ ಹೆಸರುವಾಸಿಯಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಪೋಲಿಯೊದಿಂದ ಬಳಲುತ್ತಿದ್ದ ಅವರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ 400 ಕ್ಕೂ ಹೆಚ್ಚು ಪದಕಗಳನ್ನು ಗಳಿಸಲು ಪ್ರತಿಕೂಲತೆಯನ್ನು ಗೆದ್ದರು. ಮಾಲತಿ ಅವರು ಪ್ರೇರಕ ಭಾಷಣಕಾರರಾಗಿದ್ದಾರೆ ಮತ್ತು ಅಂಗವೈಕಲ್ಯ ಹಕ್ಕುಗಳ ಪ್ರಬಲ ವಕೀಲರಾಗಿದ್ದಾರೆ.‌

ಎದೆಗುಂದದ ಧೀರರು

ಅ. ಪದಗಳ ಅರ್ಥ ಬರೆಯಿರಿ. (Write the word meaning)

ಅನಿವಾರ್ಯ = ತಪ್ಪಿಸಲಾಗದ                  ಅದೃಷ್ಟ = ಭಾಗ್ಯ
ಆಲ್ಬಂ = ಹಾಡುಗಳ ಧ್ವನಿ ಸುರುಳಿ              ಎದೆಗುಂದು = ಭಯಪಡು
ಕಣ್ಮಣಿ = ಅಚ್ಚುಮೆಚ್ಚಾದ                       ತಲ್ಲೀನ = ಮಗ್ನವಾಗು
ಚಿಕಿತ್ಸೆ = ವೈದ್ಯೋಪಚಾರ                      ಗಿಟಾರ = ಸಂಗೀತದ ಒಂದು ತಂತಿ ವಾದ್ಯ
ದಾಖಲೆ =  ಯಾರು ಮಾಡಲಾಗದು            ದಾದಿ = ಸೇವಕಿ
ಪರಿಣತಿ = ಕುಶಲತೆ                            ಪರಿಶ್ರಮ = ವಿಶೇಷ ಶ್ರಮ
ಭಾಜನ = ಪಾತ್ರ                               ಭೀಕರ = ಭಯಂಕರ
ಮಿನುಗು = ಹೊಳೆಯುವುದು                    ಯಶಸ್ಸು = ಗೆಲುವು
ವ್ಯಾಧಿ = ರೋಗ                                ವೃತ್ತಿ = ಉದ್ಯೋಗ
ಸಿದ್ಧಾಂತ = ತತ್ವ                              ಸ್ಪೂರ್ತಿ = ಪ್ರೇರಣೆ
ಸ್ವಾಭಿಮಾನ = ಆತ್ಮ ಗೌರವ                  ಸ್ವಾವಲಂಬನೆ = ಇನ್ನೊಬ್ಬರನ್ನು  ಆಶ್ರಯಿಸದಿರು  

ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. (Answer the following one sentence)

೧. ಜೂಲಿಯೋ ಇಗ್ಲೇಶಿಯಸ್ ಯಾವ ದೇಶದವನು?
ಉ: ಜೂಲಿಯೋ ಇಗ್ಲೇಶಿಯಸ್ ಸ್ಪೇನ್ ದೇಶದವನು.
೨. ಬಾಲಕ ಜೂಲಿಯೋ ಇಗ್ಲೇಶಿಯಸ್ ತಾನು ಮುಂದೆ ಏನಾಗಬೇಕೆಂದು ಬಯಸಿದ್ದನು?
ಉ: ಬಾಲಕ ಜೂಲಿಯೋ ಇಗ್ಲೇಶಿಯಸ್ ತಾನು ಫುಟ್ಬಾಲ್ ನಲ್ಲಿ ಗೋಲ್ ಕೀಪರ್ ನಾಗಬೇಕೆಂದು ಬಯಸಿದ್ದನು.
೩. ಜೂಲಿಯೋ ಇಗ್ಲೇಶಿಯಸ್ ತನ್ನ ದುಃಖವನ್ನು ಹೇಗೆ ಮರೆತನು?
ಉ:ಜೂಲಿಯೋ ಇಗ್ಲೇಶಿಯಸ್ ತನ್ನ ದುಃಖವನ್ನು ತಾನೇ ಹಾಡನ್ನು ಬರೆದು ಹಾಡಿ ಮರೆತನು.
೪. ಜೂಲಿಯೋ ಇಗ್ಲೇಶಿಯಸ್ ಹೊರತಂದ ಹಾಡುಗಳ ಆಲ್ಬಂ ಯಾವುದು?
ಉ:ಜೂಲಿಯೋ ಇಗ್ಲೇಶಿಯಸ್ ಹೊರತಂದ ಹಾಡುಗಳ ಆಲ್ಬಂ ಹೆಸರು ಜೀವನ ಹೀಗೆ ಸಾಗುತ್ತಿದೆ.
೫. ಮಾಲತಿ ಹೊಳ್ಳ ಅವರ ತಂದೆ ತಾಯಿಗಳ ಹೆಸರೇನು?
ಉ: ಮಾಲತಿ ಹೊಳ್ಳ ಅವರ ತಂದೆಯ ಹೆಸರು ಕೃಷ್ಣಮೂರ್ತಿ ಹೊಳ್ಳ ತಾಯಿಯ ಹೆಸರು ಪದ್ಮಾವತಿ.
೬. ಮಾಲತಿ ಅವರಿಗೆ ಬಾಲ್ಯದಲ್ಲೇ ತಗುಲಿದ ರೋಗ ಯಾವುದು?
ಉ:ಮಾಲತಿ ಅವರಿಗೆ ಬಾಲ್ಯದಲ್ಲೇ ತಗುಲಿದ ರೋಗ ಪೋಲಿಯೋ.
೭. ಮಾಲತಿ ಅವರು ಚೆನ್ನೈನಲ್ಲಿ ಚಿಕಿತ್ಸೆ ಪಡೆದ ಪುನರ್ವಸತಿ ಕೇಂದ್ರ ಯಾವುದು?
ಉ:ಮಾಲತಿ ಅವರು ಚೆನ್ನೈನಲ್ಲಿ ಚಿಕಿತ್ಸೆ ಪಡೆದ ಪುನರ್ವಸತಿ ಕೇಂದ್ರ ದತ್ತಾತ್ರೇಯ ಮೆಡಿಕಲ್‌ ಸೆಂಟರ್.
೮. ಮಾಲತಿ ಹೊಳ್ಳ ಗಳಿಸಿದ ಮುಖ್ಯ ಪ್ರಶಸ್ತಿಗಳು ಯಾವುವು?
ಉ:ಮಾಲತಿ ಹೊಳ್ಳ ಗಳಿಸಿದ ಮುಖ್ಯ ಪ್ರಶಸ್ತಿಗಳು ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಮತ್ತು ಕೆ.ಕೆ. ಬಿರ್ಲಾ ಪ್ರಶಸ್ತಿ.

ಇ. ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in two-three sentences)

೧. ಜೂಲಿಯೋ ಇಗ್ಲೇಶಿಯಸ್ ಫುಟ್ಬಾಲ್ ಆಟದಲ್ಲಿ ಯಾವ ರೀತಿ ಯಶಸ್ಸು ಸಾಧಿಸಿದ್ದರು?
ಉ:ಜೂಲಿಯೋ ಇಗ್ಲೇಶಿಯಸ್ ಫುಟ್ಬಾಲ್ ಆಟದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಿ ಉತ್ತಮ ಗೋಲ್ ಕೀಪರ್ ಆಗಿ ಯಶಸ್ಸು ಸಾಧಿಸಿದ್ದರು.
೨. ಜೂಲಿಯೋ ಯಾವ ಕನಸು ಹೊಂದಿದ್ದನು? ಅದು ನುಚ್ಚು ನೂರಾದುದು ಹೇಗೆ?
ಉ: ಜೂಲಿಯೋ ಇಗ್ಲೇಶಿಯಸ್ ಫುಟ್ಬಾಲ್ ಆಟದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಗೋಲ್ ಕೀಪರ್ ಆಗಬೇಕೆಂಬ ಆಸೆ ಇಟ್ಟುಕೊಂಡಿದ್ದರು. ೧೯೬೩ರಲ್ಲಿ ಭೀಕರ ಅಪಘಾತಕ್ಕೆ ಸಿಲುಕಿ ಸೊಂಟದ ಕೆಳಗೆ ಸಂಪೂರ್ಣ ಶಕ್ತಿ ಕಳೆದುಕೊಂಡರು. ಹೀಗೆ ಅವರ ಕನಸು ನುಚ್ಚು ನೂರಾಯಿತು.
೩. ಜೂಲಿಯೊ ಇಗ್ಲೇಶಿಯಸ್ ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳೇನು?
ಉ:ಜೂಲಿಯೊ ಇಗ್ಲೇಶಿಯಸ್ ಜೀವನ ಹೀಗೆ ಸಾಗುತ್ತಿದೆ ಎಂಬ ಹೆಸರಿನ ಹಾಡುಗಳ ಆಲ್ಬಮ್ ಗಳನ್ನು ಹೊರತಂದರು. ಅದು ವಿಶ್ವದ್ಯಂತ ೩00 ಮಿಲಿಯನ್ ಮಾರಾಟವಾದವು. ವಿಶ್ವದ ೧0 ಗಾಯಕರಲ್ಲಿ ಪ್ರಮುಖರಾದರು.
೪. ಮಾಲತಿ ಅವರನ್ನು ಆಕ್ರಮಿಸಿದ ರೋಗದ ಲಕ್ಷಣವೇನು?
ಉ:ಮಾಲತಿ ಅವರನ್ನು ಆಕ್ರಮಿಸಿದ ರೋಗ ಪೋಲಿಯೋ. ದೇಹದ ನರಗಳೆಲ್ಲ ಚೆಂಡಿನಂತೆ ಒಂದುಗೂಡುವುದು ಇದರ ಲಕ್ಷಣ.
೫.ಅಹ್ಮದಾಬಾದ್ ನಲ್ಲಿ ನಡೆದ ಗಾಳಿ ಕುರ್ಚಿಯ ಓಟದ ಸ್ಪರ್ಧೆಯಲ್ಲಿ ಜಯಗಳಿಸುವುದರ ವಿಶೇಷವೇನು?
ಉ:ಅಹ್ಮದಾಬಾದ್ ನಲ್ಲಿ ನಡೆದ ಗಾಳಿ ಕುರ್ಚಿಯ ಓಟದ ಸ್ಪರ್ಧೆಯಲ್ಲಿ ಪುರುಷ ಸ್ಪರ್ಧಿಗಳೊಂದಿಗೆ ಸ್ಪರ್ಧಿಸಿ ಮಾಲತಿ ಹೊಳ್ಳ ಜಯಗಳಿಸಿರುವುದು ವಿಶೇಷ.
೬.ಕ್ರೀಡೆಗಳತ್ತ ಮಾಲತಿಯವರಿಗೆ ಒಲವು ಬೆಳೆಯಲು ಕಾರಣವೇನು?
ಉ:ಮಾಲತಿ ಹೊಳ್ಳ ರಾಷ್ಟ್ರೀಯ ಅಂಗವಿಕಲರ ಕ್ರೀಡಾಕೂಟದಲ್ಲಿ ಭಾಗವಹಿಸಿ ಎರಡು ಚಿನ್ನದ ಪದಕ ಎರಡು ಬೆಳ್ಳಿಯ ಪದಕಗಳನ್ನು ಗಳಿಸಿ ಸಾಧನೆ ಮಾಡಿದರು. ಈ ಯಶಸ್ಸು ಕ್ರೀಡೆಗಳತ್ತ ಒಲವು ಬೆಳೆಯಲು ಕಾರಣವಾಯಿತು.
೭.ಮಾಲತಿ ಹೊಳ್ಳ ಭಾಗವಹಿಸಿದ ಅಂತರಾಷ್ಟ್ರೀಯ ಕ್ರೀಡಾಕೂಟಗಳು ಯಾವುವು?
ಉ: ಮಾಲತಿ ಹೊಳ್ಳ ಭಾಗವಹಿಸಿದ ಅಂತರಾಷ್ಟ್ರೀಯ ಕ್ರೀಡಾಕೂಟಗಳು ಕೋರಿಯಾ, ಡೆನ್ಮಾರ್ಕ್, ಬೀಜಿಂಗ್, ಬೆಲ್ಜಿಯಂ, ಬ್ಯಾಂಕಾಕ್ ಮತ್ತು ಮ್ಯಾಂಚೆಸ್ಟರ್.
೮.ಸಾಮಾಜಿಕ ಸೇವೆಯಲ್ಲಿ ಮಾಲತಿ ಹೇಗೆ ಕ್ರಿಯಾಶೀಲರಾಗಿದ್ದಾರೆ?
ಉ:ಮಾಲತಿ ಹೊಳ್ಳ ಗ್ರಾಮಾಂತರ ವಿಕಲಚೇತನ ಮಕ್ಕಳಿಗೆ ಆಶ್ರಯ, ಶಿಕ್ಷಣ, ವೈದ್ಯಕೀಯ ನೆರವು ನೀಡಲು ಮಾತ್ರ ಫೌಂಡೇಶನ್ ಸೇವಾ ಸಂಸ್ಥೆಯನ್ನು ಪ್ರಾರಂಭಿಸಿದರು.
೯.ಮಾಲತಿ ಹೊಳ್ಳ ಜೀವನದಲ್ಲಿ ಕಂಡುಕೊಂಡ ಸಿದ್ದಾಂತವೇನು?
ಉ:ಕೀಳರಿಮೆಗಿಂತ ಮಿಗಿಲಾದ ಅಂಗ ವೈಕಲ್ಯವಿಲ್ಲ. ನಾವು ನಗುತ್ತಲೇ ಜೀವನವನ್ನು ಎದುರಿಸಬೇಕು ಎನ್ನುವದು ಮಾಲತಿ ಹೊಳ್ಳರವರ ಸಿದ್ಧಾಂತ.

ಈ. ಬಿಟ್ಟ ಸ್ಥಳ ತುಂಬಿರಿ. (Fill in the blanks)

೧. ಪೋಲಿಯೋ ಎಂಬುದು ಮಕ್ಕಳಿಗೆ ಬರುವ ವ್ಯಾದಿ.
೨. ಮಾತೃ ಫೌಂಡೇಶನ್ ಗ್ರಾಮಾಂತರ ಪ್ರದೇಶದ ಮಕ್ಕಳಿಗಾಗಿ ಸ್ಥಾಪಿಸಿದ ಸೇವಾ ಸಂಸ್ಥೆ.
೩.ಭಾರತ ಸರ್ಕಾರ ಮಾಲತಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ೨೦೦೧ರಲ್ಲಿ ನೀಡಿತು.
೪.ಮಾಲತಿ ಹೊಳ್ಳ ಅವರ ಕಾಲೇಜು ಶಿಕ್ಷಣ ಬೆಂಗಳೂರಿ ನಲ್ಲಿ ನಡೆಯಿತು.
೫.ಮಾಲತಿ ಹೊಳ್ಳರು ತಂದೆ ತಾಯಿಗಳ ಊರು ಉಡುಪಿ ಜಿಲ್ಲೆಯಲ್ಲಿ ಇದೆ.
೬.ಜೂಲಿಯೋ ಆಸ್ಪತ್ರೆಯಲ್ಲಿದ್ದಾಗ ದಾದಿ ಒಬ್ಬಳು ಗಿಟಾರ್‌ ಒಂದನ್ನು ತಂದು ಕೊಟ್ಟಳು.
೭.ತನ್ನ ಇಪ್ಪತ್ತನೆಯ ವಯಸ್ಸಿಗೆ ಫುಟ್ಬಾಲ್ ಆಟದಲ್ಲಿ ಉತ್ತಮ ಗೋಲ್ ಕೀಪರ್ ಎಂಬ ‌ಖ್ಯಾತಿ ಪಡೆದನು.

ಭಾಷಾಭ್ಯಾಸ

ಉ. ಕೆಳಗೆ ನೀಡಿರುವ ಪದಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಬಳಸಿರಿ. (Make your own sentences)

೧. ನುಚ್ಚುನೂರಾಗು – ಜೂಲಿಯೊ ಇಗ್ಲೇಶಿಯಸ್ ಕನಸು ನುಚ್ಚುನೂರಾಯಿತು.
೨. ಆತ್ಮ ವಿಶ್ವಾಸ – ಕನ್ನಡ ಪರೀಕ್ಷೆಯನ್ನು ಚೆನ್ನಾಗಿ ಮಾಡುತ್ತೇನೆ ಎಂಬ ಆತ್ಮ ವಿಶ್ವಾಸವಿದೆ.
೩. ಕಣ್ಮಣಿ  – ನಾನು ನನ್ನ ತಾಯಿಯ ಕಣ್ಮಣಿ .
೪. ಯಶಸ್ಸು – ಜೂಲಿಯೊ ಇಗ್ಲೇಶಿಯಸ್ ಜೀವನದಲ್ಲಿ ಯಶಸ್ಸು ಕಂಡನು.
೫. ಭಾಜನ – ಮಾಲತಿ ಹೊಳ್ಳರವರು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
೬. ಸ್ಫೂರ್ತಿ – ನನ್ನ ತಾಯಿ ನನ್ನ ಸ್ಫೂರ್ತಿ.

ಊ: ಕೆಳಗಿರುವ ಪದಗಳಿಗೆ ವಿರುದ್ಧಾರ್ಥಕ ಪದ ಬರೆಯಿರಿ. (Write the opposite words)

೧.ಆಸೆ X ನಿರಾಸೆ                       ೪. ಕೀರ್ತಿ X ಅಪಕೀರ್ತಿ
೨.ಖ್ಯಾತಿ X ಅಪಖ್ಯಾತಿ                  ೫. ವಿಫಲತೆ X ಸಫಲತೆ
೩.ಸ್ವಾವಲಂಬನೆ X ಅಸ್ವಾವಲಂಬನೆ    ೬. ಅದೃಷ್ಟ X ದುರಾದೃಷ್ಟ

ಋ. ಕೆಳಗಿರುವ ಪದಗಳನ್ನು ಬಿಡಿಸಿ ಬರೆಯಿರಿ.  (Split the words)

೧. ವಿಶ್ವಾದ್ಯಂತ = ವಿಶ್ವದ + ಆತ್ಯಂತ
೨. ಕೋಟ್ಯಂತರ = ಕೋಟಿ + ಅಂತರ
೩. ನೂರಾಯಿತು = ನೂರು + ಆಯಿತು
೪. ಮುಟ್ಟಿರಲಿಲ್ಲ = ಮುಟ್ಟು + ಇರಲಿಲ್ಲ
೫. ತಿಂಗಳಿಗೊಮ್ಮೆ = ತಿಂಗಳಿಗೆ + ಒಮ್ಮೆ

Click here to download Edhegundhinda deeraru exercises