“Hittalagida maddalla” means the medicine in the backyard is not a medicine. If the Vedas are false, the proverb will not be false. Proverbs are equal to Vedas. These are words of experience of our elders. This is one of those words of experience. We do not always recognize and respect the good qualities, arts and talents in our home and neighbors. We only understand when someone else says it.
Also, many plants in our backyard have Ayurvedic properties. It is a cure for many diseases. We do not use it and we use drugs that are available elsewhere. We feel that the plant in the backyard of our house is not medicine. When someone else says it, it’s worth it. So let’s respect our family and those around us. Hence our ancestars said Hittalagida maddalla.

ಹಿತ್ತಲಗಿಡ ಮದ್ದಲ್ಲ

ವೇದ ಸುಳ್ಳಾದರು ಗಾದೆ ಸುಳ್ಳಾಗದು. ಗಾದೆಗಳು ವೇದಗಳಿಗೆ ಸಮ. ಇವು ನಮ್ಮ ಹಿರಿಯರ ಅನುಭವದ ಮಾತುಗಳು. ಅಂತಹ ಅನುಭವದ ಮಾತುಗಳಲ್ಲಿ ಇದೂ ಒಂದು. ನಮ್ಮ ಮನೆಯಲ್ಲಿರುವ, ಅಕ್ಕಪಕ್ಕದಲ್ಲಿರುವ ಒಳ್ಳೆಯ ಗುಣ, ಕಲೆ, ಪ್ರತಿಭೆಗಳನ್ನು ನಾವು ಯಾವಾಗಲೂ ಗುರುತಿಸುವದಿಲ್ಲ, ಅವರನ್ನು ಗೌರವಿಸುವುದಿಲ್ಲ. ಯಾರೋ ಬೇರೆಯವರು ಹೇಳಿದಾಗಲೇ ನಮಗೆ ಅರ್ಥವಾಗುತ್ತದೆ.

ಹಾಗೇ ನಮ್ಮ ಮನೆಯ ಹಿತ್ತಲಲ್ಲಿ ಇರುವ ಎಷ್ಟೋ ಗಿಡಗಳು ಆಯುರ್ವೇದದ ಗುಣಗಳನ್ನು ಹೊಂದಿದೆ. ಅದು ಎಷ್ಟೋ ರೋಗಗಳಿಗೆ ಮದ್ದು. ನಾವು ಅದನ್ನು ಉಪಯೋಗಿಸದೇ ಬೇರೆ ಕಡೆ ಸಿಗುವ ಔಷಧಗಳನ್ನು ಉಪಯೋಗಿಸುತ್ತೇವೆ. ನಮ್ಮ ಮನೆಯ ಹಿತ್ತಲಲ್ಲಿಯ ಗಿಡ ಮದ್ದಲ್ಲ ಎಂಬುದು ನಮ್ಮ ಅನಿಸಿಕೆ. ಯಾರಾದರೂ ಬೇರೆಯವರು ಹೇಳಿದಾಗ ಅದರ ಬೆಲೆ ಅರ್ಥವಾಗುತ್ತದೆ. ಹಾಗಾಗಿ ನಮ್ಮ ಮನೆಯವರನ್ನು ಸುತ್ತಮುತ್ತಲು ಇರುವವರನ್ನು ಗೌರವಿಸೋಣ.

Click here to download hittalagida maddhalla