Karnataka’s Mysuru Dasara, Ugadi, and Karaga reflect vibrant culture through grand processions and rituals. Karnataka celebrates many more festivals. Uttarakhand celebrates Kumbh Mela and Nanda Devi Raj Jat with sacred pilgrimages and river rituals. Both states showcase diverse traditions, rich heritage, and community spirit through these festive celebrations.
ಕರ್ನಾಟಕದ ಹಬ್ಬಗಳು
ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿ ವರ್ಷ ನವೆಂಬರ್ ೧ರಂದು ಸಡಗರದಿಂದ ಆಚರಿಸಲಾಗುತ್ತದೆ. ೧೯೫೬ರಲ್ಲಿ ಕರ್ನಾಟಕ ರಾಜ್ಯವು ಪ್ರತಿಷ್ಠಿತಗೊಂಡಿತು. ಈ ದಿನದಂದು ರಾಜ್ಯಾದ್ಯಾಂತ ಕನ್ನಡ ಸಂಸ್ಕೃತಿಯ ಮಹತ್ವವನ್ನು ಮತ್ತು ಗೌರವವನ್ನು ತೋರಿಸುವ ಆಚರಣೆಗಳು ನಡೆಯುತ್ತವೆ. ಶಾಲಾ-ಕಾಲೇಜುಗಳಲ್ಲಿ ಕರ್ನಾಟಕದ ಧ್ವಜ ಹಾರಿಸಿ, ನಾಡಗೀತೆ ಹಾಡುತ್ತಾರೆ.
ಯುಗಾದಿಯನ್ನು ಕರ್ನಾಟಕದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬವು ಹೊಸ ವರ್ಷದ ಪ್ರಾರಂಭವನ್ನು ಸೂಚಿಸುತ್ತದೆ. ಇದು ಚಂದ್ರಮಾನ ಯುಗಾದಿ. ಮನೆಯನ್ನು ಸ್ವಚ್ಛಗೊಳಿಸಿ, ಹೊಸ ಬಟ್ಟೆ ಧರಿಸಿ, ದೇವರ ಪೂಜೆ ಮಾಡುತ್ತಾರೆ. ಹೋಳಿಗೆ, ಪಾಯಸ ಮಾಡುತ್ತಾರೆ. ಆನಂದದಲ್ಲಿ ಇಡೀ ಕುಟುಂಬ ಸಂಭ್ರಮಿಸುತ್ತದೆ,
ಮೈಸೂರು ದಸರಾ ಕರ್ನಾಟಕದ ಪ್ರತಿಷ್ಠಿತ ಹಬ್ಬವಾಗಿದೆ. ಈ ಹಬ್ಬವನ್ನು ನವರಾತ್ರಿ ಸಮಯದಲ್ಲಿ ಹತ್ತು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸುತ್ತಾರೆ. ಪ್ರಸಿದ್ಧ ಜಂಬೂಸವಾರಿ ಮೆರವಣಿಗೆ, ಬೆಳಕಿನ ದೀಪಾಲಂಕಾರ ಮತ್ತು ಹಲವೆಡೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷ ಆಕರ್ಷಣೆಗಳು.
ಉತ್ತರಾಖಂಡದ ಹಬ್ಬಗಳು
ಉತ್ತರಾಖಂಡದ ಕುಂಭಮೇಳ ಪವಿತ್ರ ಗಂಗಾ ನದಿಯ ದಡ ಹರಿದ್ವಾರದಲ್ಲಿ ನಡೆಸಲಾಗುತ್ತದೆ. ಇದು ವಿಶ್ವದ ಅತಿದೊಡ್ಡ ಶಾಂತಿಯುತ ಸಭೆ ಎಂದು ಪರಿಗಣಿಸಲಾಗಿದೆ. ಪೂರ್ವನಿರ್ಧರಿತ ಸಮಯ ಮತ್ತು ಸ್ಥಳದಲ್ಲಿ ಧಾರ್ಮಿಕ ಸ್ನಾನವು ಹಬ್ಬದ ಪ್ರಮುಖ ಘಟನೆಯಾಗಿದೆ, ಇದನ್ನು ಶಾಹಿ ಸ್ನಾನ ಎಂದು ಕರೆಯಲಾಗುತ್ತದೆ.
ಉತ್ತರಾಖಂಡದ ಬಸಂತ್ ಪಂಚಮಿಯನ್ನು ಕೆಲವು ಪ್ರದೇಶಗಳಲ್ಲಿ ವಸಂತ ಪಂಚಮಿ ಎಂದೂ ಕರೆಯಲಾಗುತ್ತದೆ. ಈ ಭವ್ಯವಾದ ಹಬ್ಬವನ್ನು ಬಸಂತ್ ಋತು ಅಥವಾ ವಸಂತ ಋತುವಿನ ಆಗಮನವನ್ನು ಆಚರಿಸುವುದು.
ಮಕರ ಸಂಕ್ರಾಂತಿಯು ಉತ್ತರಾಖಂಡದಲ್ಲಿ ಋತುಗಳ ಬದಲಾವಣೆಯನ್ನು ಸೂಚಿಸುವ ಹಬ್ಬವಾಗಿದೆ. ಇದನ್ನು ವಿವಿಧ ಚಟುವಟಿಕೆಗಳೊಂದಿಗೆ ಆಚರಿಸಲಾಗುತ್ತದೆ, ಅವುಗಳೆಂದರೆ: ಸೂರ್ಯೋದಯದಲ್ಲಿ ಸೂರ್ಯನನ್ನು ಆರಾಧಿಸುವುದು, ನದಿಗಳಲ್ಲಿ ಸ್ನಾನ ಮಾಡುವುದು, ಕಿಚಡಿ ಮತ್ತು ಎಳ್ಳಿನ ಉಂಡೆ ತಯಾರಿಸುವುದು.