The Make in India Kannada essay explains how it all happened. Campaign is a golden opportunity given by the Government of India to invest in industries and develop industry.
In this, the government has provided basic infrastructure to entrepreneurs, ensured that the goods are manufactured in India and allowed to be sold in any country of the world.
On September 25, 2014, our Prime Minister Shri Narendra Modi launched the campaign to boost the industry in the presence of industrialists Mukesh Ambani, Kumar Mangalam Birla, Cyrus Mistry and Azim Premji at Vigyan Bhawan in Delhi. The aim of this campaign was to strengthen India economically. His wish was to increase employment opportunities, eradicate poverty and reduce social ills. This is a good opportunity for our young generation and Indians.
Prime Minister Narendra Modi’s desire was to make India economically recognizable in the world. Companies started under Make in India should provide more employment opportunities and have a service attitude. This campaign aims to create over 10 lakh jobs by 2022. There are over 25 sectors where investment can be made. For example, automobiles, aviation, auto parts manufacturing, biotechnology, chemicals, building and road construction, defense manufacturing, etc.
The Make in India campaign is based on four pillars. New thinking, new industries, new infrastructure and new ways. This is a huge step in taking the country on the path of progress.
ಮೇಕ್ ಇನ್ ಇಂಡಿಯಾ
ಮೇಕ್ ಇನ್ ಇಂಡಿಯಾ ಅಭಿಯಾನವು ಭಾರತ ಸರ್ಕಾರದಿಂದ ಕೈಗಾರಿಕೋದ್ಯಮಗಳಿಗೆ ಬಂಡವಾಳ ಹೂಡಲು ಮತ್ತು ಕೈಗಾರಿಕೆಯನ್ನು ಅಭಿವೃದ್ಧಿಗೊಳಿಸಲು ಕೊಟ್ಟಂತಹ ಒಂದು ಸುವರ್ಣ ಅವಕಾಶ. ಇದರಲ್ಲಿ ಸರ್ಕಾರವು ಉದ್ಯಮಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಿ ಕೊಟ್ಟು, ವಸ್ತುಗಳ ಉತ್ಪಾದನೆ ಭಾರತದಲ್ಲಿ ಆಗುವಂತೆ ನೋಡಿಕೊಂಡು, ಮಾರಾಟ ಪ್ರಪಂಚದ ಯಾವ ದೇಶದಲ್ಲಾದರೂ ಮಾಡುವ ಅವಕಾಶ ಕೊಟ್ಟಿದೆ.
ಸೆಪ್ಟೆಂಬರ್ ೨೫, ೨೦೧೪ ರಂದು ನಮ್ಮ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದೆಹಲಿಯ ವಿಜ್ಞಾನ ಭವನದಲ್ಲಿ ಉದ್ಯಮಿಗಳಾದ ಮುಕೇಶ ಅಂಬಾನಿ, ಕುಮಾರ ಮಂಗಳಂ ಬಿರ್ಲಾ, ಸೈರಸ್ ಮಿಸ್ತ್ರಿ ಮತ್ತು ಅಜೀಂ ಪ್ರೇಮಜೀಯವರ ಸಮುಖದಲ್ಲಿ ಕೈಗಾರಿಕೋದ್ಯಮವನ್ನು ಹುರಿದುಂಬಿಸಲು ಚಾಲನೆ ತಂದ ಅಭಿಯಾನ. ಭಾರತವನ್ನು ಆರ್ಥಿಕವಾಗಿ ಬಲಗೊಳಿಸುವುದೇ ಈ ಅಭಿಯಾನದ ಗುರಿ ಆಗಿತ್ತು. ಉದ್ಯೋಗಾವಕಾಶವನ್ನು ಹೆಚ್ಚಿಸುವುದರೊಂದಿಗೆ ಬಡತನ ನಿಮೂ೯ಲನೆ ಮತ್ತು ಸಾಮಾಜಿಕ ಪಿಡುಗುಗಳನ್ನು ಕಡಿಮೆ ಮಾಡುವುದೇ ಇವರ ಆಶಯವಾಗಿತ್ತು. ನಮ್ಮ ಯುವ ಪೀಳಿಗೆಗೆ ಮತ್ತು ಭಾರತೀಯರಿಗೆ ಇದು ಒಳ್ಳೆಯ ಅವಕಾಶ.
ಭಾರತವನ್ನು ಆರ್ಥಿಕವಾಗಿ ಪ್ರಪಂಚದಲ್ಲಿ ಗುರುತಿಸುವಂತೆ ಮಾಡುವುದೇ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಯವರ ಆಸೆಯಾಗಿತ್ತು. ಮೇಕ್ ಇನ್ ಇಂಡಿಯಾದಡಿ ಶುರುವಾದ ಕಂಪನಿಗಳು ಹೆಚ್ಚು ಉದ್ಯೋಗಾವಕಾಶವನ್ನು ಒದಗಿಸಿ ಸೇವಾ ಮನೋಭಾವವನ್ನು ಹೊಂದಿರಬೇಕು. ಈ ಅಭಿಯಾನವು ೨೦೨೨ ರ ಲ್ಲಿ ೧೦ ಲಕ್ಷಕ್ಕಿಂತಲೂ ಹೆಚ್ಚು ಉದ್ಯೋಗಾವಕಾಶವನ್ನು ಒದಗಿಸುವ ಆಶಯ ಹೊಂದಿದೆ. ಇಲ್ಲಿ ೨೫ಕ್ಕಿಂತಲೂ ಹೆಚ್ಚು ಭಾಗಗಳಲ್ಲಿ ಬಂಡವಾಳ ಹೂಡಬಹುದಾಗಿದೆ. ಉದಾಹರಣೆಗೆ, ಆಟೋಮೊಬೈಲ್, ವಿಮಾನಯಾನ, ವಾಹನ ಭಾಗಗಳ ತಯಾರಿಕೆ, ಬಾಯೋಟೆಕ್ನಾಲಜಿ, ಕೆಮಿಕಲ್ಸ್, ಕಟ್ಟಡ ಮತ್ತು ರಸ್ತೆ ನಿರ್ಮಾಣ, ರಕ್ಷಣಾ ಉತ್ಪಾದನೆ ಇತ್ಯಾದಿ.
ಮೇಕ್ ಇನ್ ಇಂಡಿಯಾ ಅಭಿಯಾನವು ನಾಲ್ಕು ಕಂಬಗಳ ಮೇಲೆ ಆಧಾರಿತವಾಗಿದೆ. ಹೊಸ ಆಲೋಚನೆ, ಹೊಸ ಕೈಗಾರಿಕಾ ವಿಭಾಗಗಳು, ಹೊಸ ಮೂಲ ಸೌಕರ್ಯಗಳು ಮತ್ತು ಹೊಸ ರೀತಿಗಳು. ದೇಶವನ್ನು ಪ್ರಗತಿಯ ಪಥದಲ್ಲಿ ಸಾಗಿಸುವಲ್ಲಿ ಇದು ಬಂದು ಬಹು ದೊಡ್ಡ ಹೆಜ್ಜೆ ಆಗಿದೆ.