Tugi tugi maragale kannada poem written by Dr. Lakshminarayana Bhatta. Tugi tugi maragale kannada poem is about trees.

Dr. Lakshminarayana Bhatt writes that Trees are the hands of love that work without speaking. They provide a home for the lost birds and become a channel of life in the form of a green garland. They are the poems written by nature, singing the motto of love. The saplings break through the depths of the soil and emerge. They capture the excitement of a full-bodied shoot and they stretch out a branch and call out, “Come.” They generously bear flowers and fruits. Trees provide shelter to the flocks of birds that have come to them in defeat. They have the same mind as sages. Trees give us flowers and fruits in the form of generosity. Even when they are cut down, they show mercy and are a symbol of truth, sacrifice, and non-violence.

ತೂಗಿ ತೂಗಿ ಮರಗಳೇ

ಅಭ್ಯಾಸ

ಪದಗಳ ಅರ್ಥ (Word Meaning)

ಇಳೆ =  ಭೂಮಿ, ಪೃಥ್ವಿ, ಧರೆ
ಋಷಿ = ತಪಸ್ವಿ, ಮುನಿ
ಓಲೆ = ಪತ್ರ
ಕರ  = ಕೈ, ಹಸ್ತ
ಗಾನ = ಹಾಡು, ಸಂಗೀತ
ತಳೆ = ಧರಿಸು
ನಾಲೆ = ಕಾಲುವೆ, ತೋಡು
ಮಧುರ  = ಇಂಪಾದ
ಇಳಿ = ಕೆಳಕ್ಕೆ ಬರು, ಬೀಳು
ಒಡಲು = ಶರೀರ, ಹೊಟ್ಟೆ
ಔದಾರ್ಯತೆ = ಧಾರಾಳ ಗುಣ,
ಕರುಣೆ = ದಯೆ
ತಮ = ಕತ್ತಲು
ತುಡಿ = ಮಿಡಿ, ಸ್ಪಂದಿಸು
ನೆಲೆ = ಆಶ್ರಯ
ವರ = ಅನುಗ್ರಹ

ಪ್ರಶ್ನೆಗಳು

ಅ) ಕೆಳಗೆ ನೀಡಿರುವ ಅ ಪಟ್ಟಿಯನ್ನು ಬ ಪಟ್ಟಿಯೊಂದಿಗೆ ಹೊಂದಿಸಿ ಬರೆಯಿರಿ. (Match the following)

ಅ ಪಟ್ಟಿ                        ಬ ಪಟ್ಟಿ             
ಮರ                              ಗೂಡು                ಹಸಿರು
ಹಕ್ಕಿ                              ಹಸಿರು                ಗೂಡು
ಗಾನ                              ಪ್ರೀತಿ                   ಸ್ವರ
                                        ಸ್ವರ

ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)

೧. ಕವಿ ಯಾವುದನ್ನು ಇಳೆಗೆ ಇಳಿದ ವರಗಳೆಂದು ಕರೆದಿದ್ದಾರೆ?
ಉ: ಕವಿ ನೆಲದ ಮಧುರ ಗಾನದಲ್ಲಿ ಸ್ವರಗಳು ಇಳೆಗೆ ಇಳಿದ ವರಗಳೆಂದು ಕರೆದಿದ್ದಾರೆ.

೨. ಮರಗಳು ಯಾರಿಗೆ ನೆಲೆ ನೀಡಿವೆ?
ಉ: ಮರಗಳು ಸೋತು ಬಂದ ಹಕ್ಕಿ ಹಿಂಡುಗಳಿಗೆ ನೆಲೆ ನೀಡಿವೆ.

೩. ಕವಿ ಮರಗಳಿಗೆ ಎಂತಹ ಮನಸ್ಸಿದೆ ಎಂದಿದ್ದಾರೆ?
ಉ: ಕವಿ ಮರಗಳಿಗೆ ಋಷಿ ಸಮಾನ ಮನಸ್ಸಿದೆ ಎಂದಿದ್ದಾರೆ.

೪. ಮರಗಳು ಔದಾರ್ಯದ ರೂಪದಲ್ಲಿ ನಮಗೇನು ನೀಡುತ್ತವೆ?
ಉ: ಮರಗಳು ಔದಾರ್ಯದ ರೂಪದಲ್ಲಿ ನಮಗೆ ಹೂವು, ಹಣ್ಣು ನೀಡುತ್ತವೆ.

೫. ಮರ ಯಾವ ಮೌಲ್ಯಗಳನ್ನು ಸಂಕೇತಿಸುತ್ತದೆ?
ಉ: ಮರ ಸತ್ಯ, ತ್ಯಾಗ, ಅಹಿಂಸೆಯ ಮೌಲ್ಯಗಳನ್ನು ಸಂಕೇತಿಸುತ್ತದೆ.

ಇ) ಕೆಳಗಿನ ಪ್ರಶ್ನೆಗಳಿಗೆ ಮೂರು- ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in three – four sentences)

೧. ಮರಗಳು ಪ್ರಕೃತಿ ಬರೆದ ಓಲೆ ಎಂಬುದನ್ನು ಕವಿ ಹೇಗೆ ವರ್ಣಿಸಿದ್ದಾರೆ.
ಉ: ಮರಗಳು ಮಾತಾಡದೆ ದುಡಿಯುವ ಪ್ರೀತಿಯ ಕೈಗಳು. ಸೋತು ಬಂದ ಹಕ್ಕಿಗಳಿಗೆ ನೆಲೆ ನೀಡಿ, ಹಸಿರು ಮಾಲೆಯ ರೂಪದಲ್ಲಿ ಜೀವರಸದ ನಾಲೆ ಆಗಿರುವವು. ಪ್ರೀತಿ ಎಂಬ ನೀತಿ ಹಾಡಿ ಪ್ರಕೃತಿಯು ಬರೆದಿರುವ ಓಲೆಗಳಾಗಿವೆ.

೨. ಸಸಿ ಒಂದು ಮರವಾಗಿ ಬೆಳೆಯುವ ರೀತಿಯನ್ನು ಕವಿ ಹೇಗೆ ವರ್ಣಿಸಿದ್ದಾರೆ?
ಉ: ಸಸಿಗಳು ಮಣ್ಣಿನ ಆಳವನ್ನು ಸೀಳಿ ಮೇಲೆ ಬರುತ್ತವೆ. ಮೈತುಂಬ ಚಿಗುರಿನ ರೋಮಾಂಚನವನ್ನು ತಳೆಯುತ್ತವೆ. ಕೊಂಬೆಯನ್ನು ಚಾಚಿ, ಬನ್ನಿ ಎಂದು ಕರೆಯುತ್ತವೆ. ಔದಾರ್ಯದಿಂದ ಹೂವು, ಹಣ್ಣು ಕೊಡುತ್ತದೆ.

೩. ಮರಗಳು ಸತ್ಯ, ತ್ಯಾಗ, ಅಹಿಂಸೆಯ ಪ್ರತೀಕವಾಗಿವೆ ಹೇಗೆ?
ಉ: ಮರಗಳು ಸೋತು ಬಂದ ಹಕ್ಕಿ ಹಿಂಡುಗಳಿಗೆ ನೆಲೆ ನೀಡುತ್ತೇವೆ. ಮರಗಳಿಗೆ ಋಷಿ ಸಮಾನ ಮನಸ್ಸಿದೆ. ಮರಗಳು ಔದಾರ್ಯದ ರೂಪದಲ್ಲಿ ನಮಗೆ ಹೂವು, ಹಣ್ಣು ನೀಡುತ್ತವೆ. ಕಡಿದರೂ ಕರುಣೆ ತೋರಿ ಸತ್ಯ, ತ್ಯಾಗ, ಅಹಿಂಸೆಯ ಪ್ರತೀಕವಾಗಿವೆ.

ಈ) ಕೆಳಗಿನ ಪ್ರಶ್ನೆಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in eight – ten sentences)

೧. ಪ್ರಕೃತಿಯಲ್ಲಿ ಮರಗಳು ನೀಡುವ ಸಂದೇಶವನ್ನು ಕವಿ ಯಾವ ರೀತಿ ವರ್ಣಿಸಿದ್ದಾರೆ?
ಉ: ಮರಗಳು ಮಾತಾಡದೆ ದುಡಿಯುವ ಪ್ರೀತಿಯ ಕೈಗಳು. ಸೋತು ಬಂದ ಹಕ್ಕಿಗಳಿಗೆ ನೆಲೆ ನೀಡಿ, ಹಸಿರು ಮಾಲೆಯ ರೂಪದಲ್ಲಿ ಜೀವರಸದ ನಾಲೆ ಆಗಿರುವವು. ಪ್ರೀತಿ ಎಂಬ ನೀತಿ ಹಾಡಿ ಪ್ರಕೃತಿಯು ಬರೆದಿರುವ ಓಲೆಗಳಾಗಿವೆ. ಸಸಿಗಳು ಮಣ್ಣಿನ ಆಳವನ್ನು ಸೀಳಿ ಮೇಲೆ ಬರುತ್ತವೆ. ಮೈತುಂಬ ಚಿಗುರಿನ ರೋಮಾಂಚನವನ್ನು ತಳೆಯುತ್ತವೆ. ಕೊಂಬೆಯನ್ನು ಚಾಚಿ, ಬನ್ನಿ ಎಂದು ಕರೆಯುತ್ತವೆ. ಔದಾರ್ಯದಿಂದ ಹೂವು, ಹಣ್ಣು ಕೊಡುತ್ತದೆ. ಮರಗಳಿಗೆ ಋಷಿ ಸಮಾನ ಮನಸ್ಸಿದೆ. ಕಡಿದರೂ ಕರುಣೆ ತೋರಿ ಸತ್ಯ, ತ್ಯಾಗ, ಅಹಿಂಸೆಯ ಪ್ರತೀಕವಾಗಿವೆ ಎಂದು ಕವಿ ವರ್ಣಿಸಿದ್ದಾರೆ.

ಉ) ಸಂದರ್ಭದಲ್ಲಿ ವಿವರಿಸಿರಿ. (Explain the context)

೧. “ಪ್ರಕೃತಿ ಬರೆದ ಓಲೆಯೇ”
ಆಯ್ಕೆ: ಈ ವಾಕ್ಯವನ್ನು ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರು ಬರೆದಿರುವ “ಸಮಗ್ರ ಕಾವ್ಯ ಸಂಪುಟ ೨” ಕೃತಿಯಿಂದ ಆಯ್ದು “ತೂಗಿ ತೂಗಿ ಮರಗಳೇ” ಎಂಬ ಪದ್ಯದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಕವಿ ಹೇಳಿದ್ದಾರೆ. ಮರಗಳು ಮಾತಾಡದೆ ದುಡಿಯುವ ಪ್ರೀತಿಯ ಕೈಗಳು. ಸೋತು ಬಂದ ಹಕ್ಕಿಗಳಿಗೆ ನೆಲೆ ನೀಡಿ, ಹಸಿರು ಮಾಲೆಯ ರೂಪದಲ್ಲಿ ಜೀವರಸದ ನಾಲೆ ಆಗಿರುವವು. ಪ್ರೀತಿ ಎಂಬ ನೀತಿ ಹಾಡಿ ಪ್ರಕೃತಿಯು ಬರೆದಿರುವ ಓಲೆಗಳು ಎಂದಿದ್ದಾರೆ.

೨. “ಹೂವು ಹಣ್ಣು ಸುರಿವಿರಿ”
ಆಯ್ಕೆ: ಈ ವಾಕ್ಯವನ್ನು ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರು ಬರೆದಿರುವ “ಸಮಗ್ರ ಕಾವ್ಯ ಸಂಪುಟ ೨” ಕೃತಿಯಿಂದ ಆಯ್ದು “ತೂಗಿ ತೂಗಿ ಮರಗಳೇ” ಎಂಬ ಪದ್ಯದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಸಸಿಗಳು ಮಣ್ಣಿನ ಆಳವನ್ನು ಸೀಳಿ ಮೇಲೆ ಬರುತ್ತವೆ. ಮೈತುಂಬ ಚಿಗುರಿನ ರೋಮಾಂಚನವನ್ನು ತಳೆಯುತ್ತವೆ. ಕೊಂಬೆಯನ್ನು ಚಾಚಿ, ಬನ್ನಿ ಎಂದು ಕರೆಯುತ್ತಾ ಔದಾರ್ಯದಿಂದ ಹೂವು, ಹಣ್ಣು ಕೊಡುತ್ತದೆ ಎಂದು ಕವಿ ಹೇಳಿದ್ದಾರೆ.

೩. “ ಸತ್ಯ ತ್ಯಾಗ ಅಹಿಂಸೆಯೇ ನಿತ್ಯವಾದ ನಿಲುವು!”
ಆಯ್ಕೆ: ಈ ವಾಕ್ಯವನ್ನು ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರು ಬರೆದಿರುವ “ಸಮಗ್ರ ಕಾವ್ಯ ಸಂಪುಟ ೨” ಕೃತಿಯಿಂದ ಆಯ್ದು “ತೂಗಿ ತೂಗಿ ಮರಗಳೇ” ಎಂಬ ಪದ್ಯದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಮರಗಳು ಸೋತು ಬಂದ ಹಕ್ಕಿ ಹಿಂಡುಗಳಿಗೆ ನೆಲೆ ನೀಡುತ್ತೇವೆ. ಮರಗಳಿಗೆ ಋಷಿ ಸಮಾನ ಮನಸ್ಸಿದೆ. ಮರಗಳು ಔದಾರ್ಯದ ರೂಪದಲ್ಲಿ ನಮಗೆ ಹೂವು, ಹಣ್ಣು ನೀಡುತ್ತವೆ. ಕಡಿದರೂ ಕರುಣೆ ತೋರಿ ಸತ್ಯ, ತ್ಯಾಗ, ಅಹಿಂಸೆಯ ಪ್ರತೀಕವಾಗಿವೆ ಎಂದು ಹೇಳಿದ್ದಾರೆ.

ಭಾಷಾಭ್ಯಾಸ

ಅ) ಮೊದಲೆರಡು ಪದಗಳಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ. (Write a word related to the third word in the same way as the first two words)

೧. ಇಳೆ  : ಭೂಮಿ :: ಓಲೆ : ಪತ್ರ
೨. ಸತ್ಯ : ಅಸತ್ಯ :: ಹಿಂಸೆ : ಅಹಿಂಸೆ
೩. ಸ್ವರ :  ಸರ :: ಹಕ್ಕಿ : ಪಕ್ಕಿ
೪. ಮರ : ಮರಗಳು :: ಸ್ವರಗಳು : ಸ್ವರ

ಆ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ. (Write the following words in your own sentences)

ಮಧುರ: ಸೀತಾಳ ಹಾಡು ಮಧುರವಾಗಿತ್ತು.
ನೆಲೆ: ಹಕ್ಕಿಗಳ ನೆಲೆ ಮರಗಳ ಗೂಡು.
ರೋಮಾಂಚನ: ಕಾಂತಾರ ನೋಡಿ ರೋಮಾಂಚನವಾಯಿತು.
ಔದಾರ್ಯ: ಎಲ್ಲರ ಜೊತೆ ಔದಾರ್ಯದಿಂದ ಇರಬೇಕು.
ಅಹಿಂಸೆ: ಯಾವಾಗಲೂ ಅಹಿಂಸೆಯಿಂದ ಇರಬೇಕು.

ಇ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕಗಳನ್ನು ಬರೆಯಿರಿ. (Write antonyms for the following words)

ವರ X ಶಾಪ                       ಸ್ವರ X ಅಪಸ್ವರ                
ಅಹಿಂಸೆ X ಹಿಂಸೆ               ಪ್ರೀತಿ X ದ್ವೇಷ

ಈ) ಕೆಳಗಿನ ಪದಗಳಿಗೆ ತತ್ಸಮ ತದ್ಭವಗಳನ್ನು ಬರೆಯಿರಿ. (Write the equivalents for the following words)

ಋಷಿ = ರಿಸಿ
ಆಕಾಶ = ಆಗಸ
ನಿತ್ಯ = ನಿಚ್ಚ
ಪಕ್ಷಿ = ಹಕ್ಕಿ
ಸ್ವರ = ಸರ

ಉ) ಕೆಳಗೆ ನೀಡಿರುವ ಪದಗಳ ಉಚ್ಚಾರಣೆ ಹಾಗೂ ಅರ್ಥ ವ್ಯತ್ಯಾಸಗಳನ್ನು ಕೇಳಿ ತಿಳಿಯಿರಿ. (Write the meaning)

ಮರ = ವೃಕ್ಷ,  ವರ = ದೇವರ ದಾನ
ನಾಲೆ = ಕಾಲುವೆ       ನೆಲೆ = ಜಾಗ
ಕರ = ಕೈ           ಕರೆ =  ಕೂಗು
ಇಳೆ = ಭೂಮಿ           ಇಳಿ = ಕೆಳಕ್ಕೆ ಬರು

Click here to download toogi toogi maragalle notes