Sarvepalli Radhakrishnan was an Indian politician, philosopher and statesman who served as the second president of India from 1962 to 1967. He previously served as the first vice president of India from 1952 to 1962. He was the second ambassador of India to the Soviet Union from 1949 to 1952. He was also the fourth vice-chancellor of Banaras Hindu University from 1939 to 1948 and the second vice-chancellor of Andhra University from 1931 to 1936.
Radhakrishnan was born on September 05, 1888, to Veeraswami and Sithamma. His family hails from Sarvepalli village in Nellore district of Andhra Pradesh. Radhakrishnan was awarded scholarships throughout his academic life. He joined Voorhees College in Vellore for his high school education. he joined the Madras Christian College at the age of 16. He graduated in 1907 and finished his Master’s from the same college.
Radhakrishnan was married to Sivakamu. The couple had five daughters named Padmavati, Rukmini, Sushila, Sundari and Shakuntala. They also had a son named Gopal.
Every year September 5th is celebrated as Teacher’s Day.
ಸರ್ವೇಪಲ್ಲಿ ರಾಧಾಕೃಷ್ಣನ್ ಒಬ್ಬ ಭಾರತೀಯ ರಾಜಕಾರಣಿ, ತತ್ವಜ್ಞಾನಿ ಮತ್ತು ರಾಜಕಾರಣಿಯಾಗಿದ್ದು, ಅವರು 1962 ರಿಂದ 1967 ರವರೆಗೆ ಭಾರತದ ಎರಡನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ಅವರು ಈ ಹಿಂದೆ ೧೯೫೨ ರಿಂದ ೧೯೬೨ ರವರೆಗೆ ಭಾರತದ ಮೊದಲ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅವರು ಸೋವಿಯತ್ ಒಕ್ಕೂಟಕ್ಕೆ೧೯೪೯ ರಿಂದ ೧೯೫೨ ಭಾರತದ ಎರಡನೇ ರಾಯಭಾರಿಯಾಗಿದ್ದರು. ಅವರು ೧೯೩೯ ರಿಂದ ೧೯೪೮ ರವರೆಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ನಾಲ್ಕನೇ ಉಪಕುಲಪತಿ ಮತ್ತು ೧೯೩೧ ರಿಂದ ೧೯೩೬ ರವರೆಗೆ ಆಂಧ್ರ ವಿಶ್ವವಿದ್ಯಾಲಯದ ಎರಡನೇ ಉಪಕುಲಪತಿಯಾಗಿದ್ದರು.
ರಾಧಾಕೃಷ್ಣನ್ ಅವರು ಸೆಪ್ಟೆಂಬರ್ ೦೫, ೧೮೮೮ರಂದು ವೀರಸ್ವಾಮಿ ಮತ್ತು ಸೀತಮ್ಮ ದಂಪತಿಗೆ ಜನಿಸಿದರು. ಅವರ ಕುಟುಂಬವು ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಸರ್ವೇಪಲ್ಲಿ ಗ್ರಾಮದಿಂದ ಬಂದಿದೆ. ರಾಧಾಕೃಷ್ಣನ್ ಅವರ ಶೈಕ್ಷಣಿಕ ಜೀವನದುದ್ದಕ್ಕೂ ವಿದ್ಯಾರ್ಥಿವೇತನವನ್ನು ನೀಡಲಾಯಿತು. ಪ್ರೌಢಶಾಲಾ ಶಿಕ್ಷಣಕ್ಕಾಗಿ ವೆಲ್ಲೂರಿನ ವೂರ್ಹೀಸ್ ಕಾಲೇಜಿಗೆ ಸೇರಿದರು. ಅವರು ೧೬ನೇ ವಯಸ್ಸಿನಲ್ಲಿ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿಗೆ ಸೇರಿದರು. ಅವರು ೧೯೦೭ರಲ್ಲಿ ಅಲ್ಲಿಂದ ಪದವಿ ಪಡೆದರು ಮತ್ತು ಅದೇ ಕಾಲೇಜಿನಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪಡೆದರು.
ರಾಧಾಕೃಷ್ಣನ್ ಅವರು ಶಿವಕಾಮು ಅವರನ್ನು ವಿವಾಹವಾದರು. ದಂಪತಿಗೆ ಪದ್ಮಾವತಿ, ರುಕ್ಮಿಣಿ, ಸುಶೀಲಾ, ಸುಂದರಿ ಮತ್ತು ಶಕುಂತಲಾ ಎಂಬ ಐದು ಹೆಣ್ಣು ಮಕ್ಕಳಿದ್ದರು. ಅವರಿಗೆ ಗೋಪಾಲ್ ಎಂಬ ಮಗನೂ ಇದ್ದನು.
ಪ್ರತಿ ವರ್ಷ ಸೆಪ್ಟೆಂಬರ್ ೫ ರಂದು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ.
ಆದರ್ಶಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್
ಅ) ಪದಗಳ ಅರ್ಥ ಬರೆಯಿರಿ. (Write Word Meaning)
ಗೃಹಣ ಶಕ್ತಿ = ವಿಷಯವನ್ನು ತಿಳಿಯುವ ಸಾಮರ್ಥ್ಯ ವ್ಯಾಪಕ = ವಿಸ್ತಾರವಾದ
ಅಮರ = ಶಾಶ್ವತ, ಬುನಾದಿ = ತಳಹದಿ, ಅಡಿಪಾಯ
ಬೆರಗು = ಆಶ್ಚರ್ಯ ಭಾವೋದ್ರೇಕ = ಭಾವನಾ ಪರವಶತೆ,
ಮೊಳಗು = ಧ್ವನಿ ಮಾಡು ಅನುಪಮ = ಎಣೆಯಿಲ್ಲದ
ಬೇಗೆ = ಸಂಕಟ ಮಂತ್ರಮುಗ್ಧ = ಮೌನ ಆಶ್ಚರ್ಯ ಚಕಿತ
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. (Answer in one sentence)
೧. ರಾಧಾಕೃಷ್ಣನ್ ಅವರ ತಂದೆತಾಯಿಯರ ಹೆಸರೇನು?
ಉ: ರಾಧಾಕೃಷ್ಣನ್ ಅವರ ತಂದೆಯ ಹೆಸರು ವೀರಸ್ವಾಮಿ ತಾಯಿಯ ಹೆಸರು ಸೀತಮ್ಮ.
೨. ರಾಧಾಕೃಷ್ಣನ್ ಅವರ ತಂದೆಯ ಅಪೇಕ್ಷೆ ಏನಾಗಿತ್ತು?
ಉ: ರಾಧಾಕೃಷ್ಣನ್ ಅವರ ತಂದೆಯ ವೀರ ಸ್ವಾಮಿಯವರಿಗೆ ತಮ್ಮ ಮಗ ಆಂಗ್ಲಭಾಷೆ ಕಲಿಯದೆ ದೇಶಿ ಭಾಷೆಯಾಗಿದ್ದ ಸಂಸ್ಕೃತವನ್ನು ಕಲಿಯಲಿ ಎಂಬ ಅಪೇಕ್ಷೆ ಇತ್ತು.
೩. ರಾಷ್ಟ್ರಪತಿಗಳಾಗಿ ಪಡೆಯುತ್ತಿದ್ದ ವೇತನವನ್ನು ರಾಧಾಕೃಷ್ಣನ್ ಅವರು ಹೇಗೆ ಸದುಪಯೋಗಪಡಿಸಕೊಂಡರು?
ಉ: ರಾಧಾಕೃಷ್ಣನ್ ಅವರು ರಾಷ್ಟ್ರಪತಿಯಾಗಿ ಬರುತ್ತಿದ್ದ ಹತ್ತು ಸಾವಿರ ರೂಪಾಯಿಗಳ ವೇತನದಲ್ಲಿ ಎರಡು ಸಾವಿರದ ಐನೂರು ರೂಪಾಯಿಗಳನ್ನು ಮಾತ್ರ ಪಡೆದು ಉಳಿದ ಹಣವನ್ನು ಪ್ರಧಾನಿ ಮಂತ್ರಿಗಳ ಪರಿಹಾರ ನಿಧಿಗೆ ನೀಡುತ್ತಿದ್ದರು.
೪. ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಯಾವ ಹೆಸರಿನಿಂದ ಆಚರಿಸಲಾಗುತ್ತದೆ?
ಉ: ರಾಧಾಕೃಷ್ಣನ್ ಅವರ ಜನ್ಮ ದಿನವನ್ನು “ರಾಷ್ಟ್ರೀಯ ಶಿಕ್ಷಕರ ದಿನ” ಎಂದು ಆಚರಿಸಲಾಗುತ್ತದೆ.
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ. (Write answer in 3-4 sentences)
೧. ಸ್ಟಾಲಿನ್ ಅವರು ರಾಧಾಕೃಷ್ಣನ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಏನು ಹೇಳಿದರು?
ಉ:ಸ್ಟಾಲಿನ್ ಅವರು ರಾಧಾಕೃಷ್ಣನ್ ಅವರ ಬಿಳ್ಕೊಡುಗೆ ಸಮಾರಂಭದಲ್ಲಿ ಹೀಗೆ ಹೇಳಿದರು, ‘ನೀವೊಬ್ಬರೇ ನನ್ನನ್ನು ಒಬ್ಬ ಮನುಷ್ಯನಂತೆ ಕಂಡಿರಿ. ನೀವು ನಮ್ಮನ್ನು ಬಿಟ್ಟು ಹೋಗುತ್ತಿರುವಿರಿ. ನನಗೆ ಇದು ದುಃಖ ನೀಡಿದೆ. ನೀವು ಹೆಚ್ಚು ಕಾಲ ಬಾಳ ಬೇಕೆಂಬುದೇ ನನ್ನಾಸೆ. ನಾನು ಹೆಚ್ಚು ಕಾಲ ಬಾಳುವುದಿಲ್ಲ.
೨. ರಾಧಾಕೃಷ್ಣನ್ ಅವರ ವಿದ್ಯಾಭ್ಯಾಸ ಎಲ್ಲೆಲ್ಲಿ ನಡೆಯಿತು?
ಉ:ರಾಧಾಕೃಷ್ಣನ್ ರವರು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಹರ್ಮನ್ಸ್ ಬರ್ಗ್ ಮಿಷನರಿ ಶಾಲೆಯಲ್ಲಿ ಮುಗಿಸಿದರು. ಅವರು ಬಿಎ ಪೂರ್ವದ ಎರಡು ವರ್ಷಗಳನ್ನು ವೆಲ್ಲೂರಿನ ವೂರ್ಸ ಕಾಲೇಜಿನಲ್ಲಿ ಓದಿದರು. ಬಿ.ಎ ಹಾಗೂ ಎಂ.ಎ ತತ್ವಶಾಸ್ತ್ರದ ಪದವಿಯನ್ನು ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಓದಿದರು.
೩. ರಾಧಾಕೃಷ್ಣನ್ ಅವರ ವೇಷಭೂಷಣಗಳ ಬಗ್ಗೆ ಬರೆಯಿರಿ.
ಉ:ರಾಧಾಕೃಷ್ಣನ್ ಅವರ ಬಾಹ್ಯರೂಪ ಎತ್ತರವಾದ ನಿಲುವು. ಬಿಸ್ಕಿಟ್ ಬಣ್ಣದ ರೇಷ್ಮೆಯ ನಿಲುವಂಗಿ, ಬಿಳಿಯ ಪಂಚೆ ಮತ್ತು ರುಮಾಲು ಧರಿಸುತ್ತಿದ್ದರು. ಪ್ರಪಂಚದ ಫ್ಯಾಷನ್ ಎಷ್ಟೇ ಬದಲಾದರೂ ರಾಧಾಕೃಷ್ಣನ್ ತಮ್ಮ ವೇಷಭೂಷಣಗಳನ್ನು ಕೊನೆಯವರೆಗೂ ಬದಲಿಸಲಿಲ್ಲ.
೪. ಶಿಕ್ಷಣದ ಮಹತ್ವವನ್ನು ಕುರಿತು ರಾಧಾಕೃಷ್ಣನ್ ಅವರು ಏನು ಹೇಳಿದ್ದಾರೆ?
ಉ:ರಾಧಾಕೃಷ್ಣನ್ ಅವರು ಶಿಕ್ಷಣದ ಮಹತ್ವದ ಕುರಿತು ‘ಶಿಕ್ಷಣವು ಜೀವನದ ಅವಿಭಾಜ್ಯ ಅಂಗ. ಅದು ಮಾನವನನ್ನು ಪರಿಪೂರ್ಣ ಪರಿಪೂರ್ಣತೆ ಹಾಗೂ ಸುಸಂಸ್ಕೃತಿಯತ್ತ ಒಯ್ಯುವ ಸಾಧನ ಮಾರ್ಗ’ ಎಂದು ಹೇಳಿದ್ದಾರೆ.
೫. ರಾಧಾಕೃಷ್ಣನ್ ಅವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳು ಯಾವುವು?
ಉ:ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ಭಾರತರತ್ನವನ್ನು ರಾಧಾಕೃಷ್ಣನ್ ಅವರಿಗೆ ನೀಡಿ ಗೌರವಿಸಲಾಯಿತು. ಬ್ರೆಸೆಲ್ಸ್ ನ ಫ್ರೀ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿತು. ಭಾರತೀಯ ವಿದ್ಯಾ ಭವನದ “ಬ್ರಹ್ಮವಿದ್ಯಾ ಭಾಸ್ಕರ” ಬಿರುದಿಗೂ ಪಾತ್ರರಾದರು. ಹೀಗೆ ಇವರಿಗೆ ದೇಶವಿದೇಶಗಳ ಹಲವಾರು ಗೌರವ ಪದವಿಗಳು ದೊರಕಿದವು.
ಈ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ. (Write answer in 8 – 10 sentences)
೧. ರಾಧಾಕೃಷ್ಣನ್ ಅವರು ಅಧ್ಯಾಪಕರಾಗಿ ಸಲ್ಲಿಸಿದ ಸೇವೆಯನ್ನು ಕುರಿತು ವಿವರಿಸಿ.
ಉ:ರಾಧಾಕೃಷ್ಣನ್ ರವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರದ ಉಪರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ಅವರು ಕೊಲ್ಕೊತ್ತಾದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ರಾಧಾಕೃಷ್ಣನ್ ರವರು ಆಂಧ್ರ, ದೆಹಲಿ, ಬನಾರಸ್ ವಿಶ್ವವಿದ್ಯಾನಿಲಯಗಳಲ್ಲಿ ಕುಲಪತಿಯಾಗಿ ಸೇವೆ ಸಲ್ಲಿಸಿದರು. ಅವುಗಳ ಅಭಿವೃದ್ಧಿಗೆ ಶ್ರಮಿಸಿದರು. ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲೂ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ಅವರ ಬೋಧನಾ ಶೈಲಿ, ನಿರರ್ಗಳತೆ ವಿಷಯದ ಮೇಲಿನ ಹಿಡಿತ ವಿದ್ಯಾರ್ಥಿಗಳನ್ನು ಆಕರ್ಷಿಸಿತು. ತಮ್ಮ ಪ್ರಾಧ್ಯಾಪಕತ್ವವನ್ನು ಯಾವಾಗಲೆಂದರೆ ಆವಾಗ ಕಳಚಿ ಯುವಕರಂತೆ ಹಾಸ್ಯ ವಿನೋದಗಳಲ್ಲಿ ತೊಡಗುತ್ತಿದ್ದರು.
೨. ರಾಧಾಕೃಷ್ಣನ್ ಅವರಿಗೆ ಮೈಸೂರಿನಲ್ಲಿ ನೀಡಿದ ಬೀಳ್ಕೊಡುಗೆಯ ವಿಶೇಷತೆಯನ್ನು ಕುರಿತು ವಿವರಿಸಿ.
ಉ:ರಾಧಾಕೃಷ್ಣನ್ ಅವರು ಕೊಲ್ಕತ್ತಾ ವಿಶ್ವವಿದ್ಯಾಲಯದ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಕೆಲಸ ಮಾಡಲು ಹೊರಟಾಗ ಮೈಸೂರಿನಲ್ಲಿ ಅವರಿಗೆ ವೈಭವದ ಬೀಳ್ಕೊಡುಗೆ ಕೊಡಲಾಯಿತು. ರಾಧಾಕೃಷ್ಣನ್ ಅವರನ್ನು ಮಹಾರಾಜ ಕಾಲೇಜಿನಿಂದ ರೈಲು ನಿಲ್ದಾಣಕ್ಕೆ ಕರೆದೊಯ್ಯುವಾಗ ಸಾರೋಟಿಗೆ ಕುದುರೆಯನ್ನು ಕಟ್ಟಲಿಲ್ಲ. ಸ್ವತಃ ವಿದ್ಯಾರ್ಥಿಗಳೇ ಎಳೆದೊಯ್ದರು. ರಾಧಾಕೃಷ್ಣನ್ ರವರಿಗಾಗಿ ಕಾದಿರಿಸಿದ್ದ ಕಂಪಾರ್ಟ್ಮೆಂಟಿನ ಮಲಗುವಸೀಟಿಗೆ ಒರಗುದಿಂಬು ಹಾಗೂ ರತ್ನಗಂಬಳಿಯನ್ನು ಹಾಸಿದ್ದರು. ಮಲಗುವಸೀಟ್ ನ್ನು, ನೆಲವನ್ನು ಹೂವಿನ ಸುಪ್ಪತ್ತಿಗೆಯಂತೆ ಮಾಡಿ ದೇವರ ಮಂದಿರವನ್ನು ಅಲಂಕರಿಸುವಂತೆ ಅಲಂಕರಿಸಿದ್ದರು. ʼರಾಧಾಕೃಷ್ಣನ್ ಅವರಿಗೆ ಜಯವಾಗಲಿʼ ಎಂದು ಕೂಗುತ್ತಿದ್ದರು. ಅಂದು ಎಷ್ಟೋ ಜನ ಭಾವೋದ್ರೇಕರಾಗಿ ಅತ್ತರು. ವಿದ್ಯಾರ್ಥಿಗಳು ತೋರಿದ ವಿಶ್ವಾಸಕ್ಕೆ ಅವರ ಕಣ್ಣಲ್ಲೂ ನೀರು ಬಂತು.
೩. ಹಿಂದೂ ಧರ್ಮ ಮತ್ತು ತತ್ವಶಾಸ್ತ್ರದ ಬಗ್ಗೆ ರಾಧಾಕೃಷ್ಣನ್ ಅಭಿಪ್ರಾಯವೇನು ವಿವರಿಸಿ.
ಉ:ರಾಧಾಕೃಷ್ಣನ್ ಅವರು ಹಿಂದೂ ಧರ್ಮದ ತತ್ವಶಾಸ್ತ್ರ ಮತ್ತು ಸಾಹಿತ್ಯವನ್ನು ಅಧ್ಯಯನ ಮಾಡಿದ್ದರು. ಸ್ವಾಮಿ ವಿವೇಕಾನಂದರ ವಿಚಾರಧಾರೆ ಅವರನ್ನು ಆಕರ್ಷಿಸಿತು. ಅವರು ಹಿಂದೂ ಧರ್ಮ ಒಂದು ವೈಚಾರಿಕ ಜೀವನ ಮಾರ್ಗವೆಂದು ನೈತಿಕ ಗುಣಾತ್ಮಕ ವಿಷಯಗಳಿಂದ ಕೂಡಿದ್ದು ಎಂದು ಹೇಳಿದರು. ಮಾನವನ ಅಂತರಿಕ ಜೀವನದ ಬಗ್ಗೆ ಪ್ರಾಮುಖ್ಯತೆಯುಳ್ಳದ್ದಾಗಿದೆ ಎಂದರು. ಹಿಂದೂ ಧರ್ಮವಾಗಲಿ, ವೇದಾಂತವಾಗಲಿ ಅಸತ್ಯವನ್ನು ಹೇಳುವದಿಲ್ಲ. ಭಾರತೀಯರ ಚಿಂತನೆಗಳು ಯಾವುದೇ ವಿಚಿತ್ರ ಮತ್ತು ನಿಗೂಢ ಪರಿಕಲ್ಪನೆಗಳಲ್ಲ. ಇದು ಜೀವನದ ನಾಡಿಮಿಡಿತಗಳ, ಮನಸ್ಸಿನ ಚಿಂತನೆಗಳನ್ನು ತಿಳಿಸುತ್ತದೆ ಎಂದು ಸರಳವಾಗಿ ಹೇಳಿದರು.
ಉ)ಕೊಟ್ಟಿರುವ ವಾಕ್ಯಗಳ ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ. (Explain the context)
೧. “ನೀವೊಬ್ಬರೇ ನನ್ನನ್ನು ಒಬ್ಬ ಮನುಷ್ಯನಂತೆ ಕಂಡು ವರ್ತಿಸಿದವರು”.
ಆಯ್ಕೆ: ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿರುವ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ರಷ್ಯಾದ ಅಧ್ಯಕ್ಷರಾದ ಸ್ಟಾಲಿನ್ ಅವರು ರಾಧಾಕೃಷ್ಣನ್ ಅವರನ್ನು ಬೀಳ್ಕೊಡುವ ಸಂದರ್ಭದಲ್ಲಿ ಹೇಳಿದರು. ಭಾರತದ ರಾಯಭಾರಿಯಾಗಿದ್ದ ರಾಧಾಕೃಷ್ಣನ್ ಅವರು ಸ್ಟಾಲಿನ್ ಅವರೊಡನೆ ನಡೆದುಕೊಂಡ ರೀತಿಯನ್ನು ನೆನಪಿಸುತ್ತ ಈ ರೀತಿ ಹೇಳಿದ್ದಾರೆ.
ಸ್ವಾರಸ್ಯ: ಸ್ಟಾಲಿನ್ ಅವರ ಈ ಮಾತಿನಲ್ಲಿ ರಾಧಾಕೃಷ್ಣನ್ ಅವರ ಸ್ನೇಹ ಮತ್ತು ಸನ್ನಡತೆಗಳು ಸ್ವಾರಸ್ಯ ಪೂರ್ಣವಾಗಿ ವ್ಯಕ್ತವಾಗಿದೆ.
೨. “ಆರ್ಥಿಕ ಪರಿಸ್ಥಿತಿ ನಮ್ಮ ಸಾಧನೆಯಲ್ಲಿ ನಿವಾರಿಸಲಾಗದ ತೊಡಕೆಂದು ಭಾವಿಸಲಿಲ್ಲ”.
ಆಯ್ಕೆ: ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿರುವ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ರಾಧಾಕೃಷ್ಣನ್ ಅವರು ವಿದ್ಯಾಭ್ಯಾಸ ಮಾಡುತ್ತಿದ್ದಾಗ ಹಣಕಾಸಿನ ತೊಂದರೆ ಇತ್ತು. ಆದರೂ ಅವರ ಸಾಧನೆಗೆ ಅದು ಅಡ್ಡ ಬರಲಿಲ್ಲ. ಮನೆಯ ಜವಾಬ್ದಾರಿ ಹೊತ್ತ ಅವರು ಕಿರಿಯ ಸಹಪಾಠಿಗಳಿಗೆ ಮನೆ ಪಾಠ ಹೇಳಿ ಹಣಗಳಿಸುತ್ತಿದ್ದರು. ತತ್ವಶಾಸ್ತ್ರದಲ್ಲಿ ಎಂ.ಎ ಪದವಿಯನ್ನು ಪಡೆದರು.
ಸ್ವಾರಸ್ಯ: ಮನಸ್ಸು ಮಾಡಿದರೆ ಯಾವ ತೊಂದರೆಯನ್ನಾದರೂ ಎದುರಿಸಿ ಸಾಧನೆ ಮಾಡಬಹುದು ಎಂಬುದು ಇಲ್ಲಿಯ ಸ್ವಾರಸ್ಯವಾಗಿದೆ.
೩. “ಏರು ಜಮ್ಮನದ ಯುವಕರಂತೆ ಹಾಸ್ಯ ವಿನೋದಗಳಲ್ಲಿ ತೊಡಗುತ್ತಿದ್ದರು”.
ಆಯ್ಕೆ: ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿರುವ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:ರಾಧಾಕೃಷ್ಣನ್ ಅವರ ಬೋಧನಾ ಶೈಲಿ, ನಿರರ್ಗಳತೆ ವಿಷಯದ ಮೇಲಿನ ಹಿಡಿತ ವಿದ್ಯಾರ್ಥಿಗಳನ್ನು ಆಕರ್ಷಿಸಿತು. ತಮ್ಮ ಪ್ರಾಧ್ಯಾಪಕತ್ವವನ್ನು ಯಾವಾಗಲೆಂದರೆ ಆವಾಗ ಕಳಚಿ ಯುವಕರಂತೆ ಹಾಸ್ಯ ವಿನೋದಗಳಲ್ಲಿ ತೊಡಗುತ್ತಿದ್ದರು.
ಸ್ವಾರಸ್ಯ: ವಿದ್ಯಾರ್ಥಿಗಳೊಂದಿಗೆ ರಾಧಾಕೃಷ್ಣನ್ ಅವರ ಸ್ನೇಹದ ಬಾಂಧವ್ಯ , ನಿರಹಂಕಾರ ಮನೋಭಾವ ಇಲ್ಲಿ ಸ್ವಾರಸ್ಯ ಪೂರ್ಣವಾಗಿದೆ.
೪. “ಅಶೋಕನು ಕಳಿಂಗ ಯುದ್ಧದ ನಂತರ ಶ್ರೇಷ್ಠ ಮನುಷ್ಯನಾದಂತೆ ನೀವು ಆಗುವಿರಿ”.
ಆಯ್ಕೆ: ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿರುವ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ರಷ್ಯಾ ದೇಶದ ಅಧ್ಯಕ್ಷ ಸ್ಟಾಲಿನ್ ಅವರಿಗೆ ರಾಧಾಕೃಷ್ಣನ್ ಅವರು ಮಾಸ್ಕೋದ ಬೀಳ್ಕೊಡುಗೆ ಸಮಾರಂಭದಲ್ಲಿ, ಈ ಮೇಲಿನ ಮಾತನ್ನು ಹೇಳಿದರು. ಇದನ್ನು ಸ್ಟಾಲಿನ್ರವರು ತಮ್ಮ ಪ್ರಥಮ ಭೇಟಿಯಲ್ಲಿ ರಾಧಾಕೃಷ್ಣನ್ ಅವರು ಹೇಳಿದ ಮಾತುಗಳೆಂದು ಸ್ಮರಿಸಿಕೊಂಡರು.
ಸ್ವಾರಸ್ಯ: ರಾಧಾಕೃಷ್ಣನ್ ಅವರ ಪ್ರಥಮ ಭೇಟಿಯ ಮಾತುಗಳಲ್ಲಿ ಸ್ಟಾಲಿನ್ ಅವರ ಮನ ಗೆದ್ದಿರುವದು ಇಲ್ಲಿ ಸ್ವಾರಸ್ಯ ಪೂರ್ಣವಾಗಿದೆ,
೫. “ಮಾನವತೆಯೇ ವಿಶ್ವ ಅನುಸರಿಸಬೇಕಾದ ಮಾರ್ಗ”.
ಆಯ್ಕೆ: ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿರುವ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ರಾಧಾಕೃಷ್ಣನ್ ಅವರು ಕೆನಡಾದ ರೇಡಿಯೋ ಭಾಷಣದ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ. ಇಡೀ ವಿಶ್ವದಲ್ಲಿ ಶಾಂತಿ ನೆಲೆಸಬೇಕಾದರೆ ವಿಶ್ವದ ಪ್ರತಿಯೊಬ್ಬರು ಮಾನವತೆಯನ್ನು ಅನುಸರಿಸಬೇಕೆಂದು ಅವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಸ್ವಾರಸ್ಯ: ವಿಶ್ವದ ಎಲ್ಲಾ ಸಮಸ್ಯೆಗಳಿಗೂ ಮಾನವೀಯತೆ ಇಲ್ಲದಿರುವುದೇ ಕಾರಣ. ಆದ್ದರಿಂದ ಮಾನವೀಯತೆ ಇರಬೇಕು ಎಂಬುದು ಇಲ್ಲಿ ಸ್ವಾರಸ್ಯ ಪೂರ್ಣವಾಗಿದೆ.
ಊ) ಬಿಟ್ಟ ಸ್ಥಳ ತುಂಬಿರಿ. (Fill in the blanks)
೧. ರಾಧಾಕೃಷ್ಣನ್ ಅವರ ಸಾಧನೆಯಲ್ಲಿ ವಿಶೇಷ ಸಹಕಾರ ನೀಡಿದವರು ಪತ್ನಿ.
೨. ಮದ್ರಾಸಿನ ಕ್ರಿಶ್ಚಿಯನ್ ಶಾಲೆಯಲ್ಲಿ ರಾಧಾಕೃಷ್ಣನ್ ಅವರು ಉತ್ತಮ ವಿದ್ಯಾರ್ಥಿ ಎಂದು ಪರಿಗಣಿಸಲ್ಪಟ್ಟ ವಿಷಯ ತತ್ವಶಾಸ್ತ್ರ.
೩. ರಾಧಾಕೃಷ್ಣನ್ ಅವರು ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ ವಿಶ್ವವಿದ್ಯಾನಿಲಯ ಆಕ್ಸ್ ಫರ್ಡ್.
೪. “ಮಾನವತೆಯೇ ವಿಶ್ವ ಅನುಸರಿಸಬೇಕಾದ ಮಾರ್ಗ” ಎಂದು ರಾಧಾಕೃಷ್ಣನ್ ಅವರು ರೇಡಿಯೋ ಪ್ರಸಾರ ಭಾಷಣ ಮಾಡಿದ ದೇಶ ಕೆನಡಾ.
೫. ಭಾರತ ಮತ್ತು ರಷ್ಯಾದ ಬಾಂಧವ್ಯವನ್ನು ವೃದ್ಧಿಗೊಳಿಸಿದ ರಾಧಾಕೃಷ್ಣನ್ ಅವರನ್ನು ಪ್ರಶಂಶಿಸಿದವರು ಸ್ಟಾಲಿನ್.
ಋ) ಹೊಂದಿಸಿ ಬರೆಯಿರಿ (Match the following)
ಅ ಬ
೧. ಸ್ಟಾಲಿನ್ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಮಾಸ್ಕೊ
೨. ಹರ್ಮನ್ಸ್ ಬರ್ಗ್ ಮಿಷನರಿ ಶಾಲೆ ಮಿಷನರಿ ಶಾಲೆ
೩. ಭಾರತೀಯ ವಿದ್ಯಾಭವನ ಮಾಸ್ಕೊ ಬ್ರಹ್ಮವಿದ್ಯಾಭಾಸ್ಕರ
೪. ಆಕ್ಸ ಫರ್ಡ್ ವಿಶ್ವವಿದ್ಯಾನಿಲಯ ವಿಶ್ವವಿದ್ಯಾನಿಲಯ
೫. ಸೆಪ್ಟೆಂಬರ್‌೦೫ ಬ್ರಹ್ಮವಿದ್ಯಾಭಾಸ್ಕರ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ
ಸ್ವಾತಂತ್ರ್ಯ ದಿನಾಚರಣೆ
Click here to download Adarsha Shikshaka Sarvepalli Radhakrishnan
One Response