Ajjiya totadali ondu dina kannada lesson grade IV is about children visiting friend’s grand mother farm in malnanad. Ajjiya totadali ondu dina introduces children to the farm.
ಅಜ್ಜಿಯ ತೋಟದಲ್ಲಿ ಒಂದು ದಿನ
ಅ) ಪದಗಳ ಅರ್ಥ ಬರೆಯಿರಿ. (Word Meaning)
ಧನ್ಯವಾದ, ವಿಧಾನ, ಹೆಕ್ಕು, ಬಹುಶಃ, ಚರ್ಚಿಸು, ವಿಶಾಲ, ಪ್ರಕೃತಿ, ಹಬ್ಬು, ತೋಡು
ಆ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ. (Answer the following questions in one sentence)
೧. ಸಾಮಾನ್ಯವಾಗಿ ಹೊಲವನ್ನು ಯಾವುದರಿಂದ ಉಳುತ್ತಾರೆ?
೨. ಮಕ್ಕಳು ಎಲ್ಲಿಗೆ ಹೊರ ಸಂಚಾರ ಹೊರಟರು?
೩. ಎರೆಗೊಬ್ಬರವನ್ನು ಯಾವುದರಿಂದ ತಯಾರಿಸುತ್ತಾರೆ?
೪. ತೋಟದಲ್ಲಿ ಹೆಚ್ಚಾಗಿ ಯಾವ ಗೊಬ್ಬರವನ್ನು ಬಳಸುತ್ತಿದ್ದರು?
೫. ಶೀಲಾ ಅಜ್ಜಿಯ ಮನೆಯ ಅಂಗಳದಲ್ಲಿ ಯಾವ ಯಂತ್ರವನ್ನು ನೋಡಿದಳು ?
ಇ) ಎರಡು – ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
೧. ಉಳುಮೆಯ ಬಗ್ಗೆ ಗುರುಗಳು ನೀಡಿದ ವಿವರಣೆ ಏನು?
೨. ಅಜ್ಜಿಯ ತೋಟದಲ್ಲಿ ಯಾವ ಯಾವ ಗಿಡಗಳಿದ್ದವು?
೩. ಇಂಗುಗುಂಡಿಯ ಪ್ರಯೋಜನಗಳೇನು?
ಈ) ವಾಕ್ಯದಲ್ಲಿ ಬಿಟ್ಟಿರುವ ಸ್ಥಳಕ್ಕೆ ಸರಿಯಾದ ಪದ ತುಂಬಿ. (Fill in the blanks)
೧. ಕಿಶೋರನ ಅಜ್ಜಿಯ ಮನೆ ………. ತಪ್ಪಲಿನಲ್ಲಿದೆ.
೨. ಅಜ್ಜಿ ಎಲ್ಲರಿಗೂ ……… ಹಂಚಿದರು.
೩. ಮಳೆಯ ನೀರನ್ನು ……………… ಮೂಲಕ ಇಂಗಿಸುತೇವೆ.
೪. ಮನೆಯ ಹಿಂದಿನ ಗುಡ್ಡದಲ್ಲಿ ………………. ತೋಟಗಳಿವೆ.
ಉ) ಹೊಂದಿಸಿ ಬರೆ. (Match of the following)
ಅ ಆ
೧. ಎರೆಹುಳ ಹಿರೇಕಾಯಿ___________
೨. ಕೊಕೊ ಭತ್ತ __________
೩. ತೆನೆ ಚಾಕಲೇಟು _______
೪ ಮಳೆಕೊಯ್ಲು ರೈತನಮಿತ್ರ_____
೫. ಹಟ್ಟಿಗೊಬ್ಬರ ಅಂತರ್ಜಲ______
ಸಾವಯವ ಗೊಬ್ಬರ ______________________
ಊ) ಕೊಟ್ಟಿರುವ ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿ. (Make your own sentence)
೧. ಕಿರುಚು =
೨. ಹೊರ ಸಂಚಾರ =
೩. ಹಾರೈಕೆ =
೪. ಹುಲುಸಾಗಿ =
ಋ) ಗುಂಪಿಗೆ ಸೇರದ ಪದ ಆರಿಸಿ ಬರೆಯಿರಿ. (Write the odd one out)
೧. ತೆಂಗು, ಅಡಿಕೆ, ಬಾಳೆ, ಭತ್ತ
೨. ಮೊಲ, ಹಂದಿ, ಮುಂಗುಸಿ, ಚಿಟ್ಟೆ
೩. ಸೀಬೆಕಾಯಿ, ಸಪೋಟ, ಅನಾನಸು, ಕೊಕೊ
ಎ) ಕೆಳಗಿನವುಗಳನ್ನು ಕೂಡಿಸಿ ಬರೆಯಿರಿ. (Join the words)
ಒಂದು + ಆದ =
ಹದ + ಆಗಿತ್ತು =
ಇಲ್ಲಿ + ಒಂದು =
ಹೇರಳ + ಆಗಿ =
ಏ) ನಿಮ್ಮ ಶಾಲಾ ಕೈತೋಟದಲ್ಲಿ ಏನೇನು ಬೆಳೆಯಬೇಕು? ಹೇಗೆ ಬೆಳೆಸಬೇಕು? ಎಂದು ತರಗತಿಯಲ್ಲಿ ಚರ್ಚಿಸಿ ನಿಮ್ಮ ತೀರ್ಮಾನವನ್ನು ಕೆಳಗೆ ಬರೆಯಿರಿ.
ಐ) ನಿಮ್ಮ ಶಾಲೆಯಲ್ಲಿ ರೈತನೊಬ್ಬನನ್ನು ಸನ್ಮಾನಿಸುವ ಸಮಾರಂಭದ ಮುಖ್ಯ ಅತಿಥಿಯಾಗಿ ನೀನು ಮಾಡುವ ಭಾಷಣವನ್ನು ಇಲ್ಲಿ ಬರೆ. ನಂತರ ತರಗತಿಯಲ್ಲಿ ಶಿಕ್ಷಕರೆದುರು ಭಾಷಣ ಮಾಡು.
ಒ) ನಿನ್ನ ಶಾಲೆಗೆ ಜಮೀನು ಕೊಟ್ಟರೆ ನೀನೇನು ಮಾಡುವೆ?
ಓ) ರೈತರು ಕೈ ಕೆಸರಾಗುತ್ತದೆ ಎಂದು ಸುಮ್ಮನೆ ಕುಳಿತರೆ ಏನಾಗಬಹುದು?
Click here to download ajiya totadali ondu dina grade IV worksheet